ನವದೆಹಲಿ: 60 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಮಹಿಳೆಯೊಬ್ಬಳು ತನ್ನ 82 ನೇ ವಯಸ್ಸಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಅವಳನ್ನು ನೋಡಿ ಕುಟುಂಬದವರು ಫುಲ್ ಶಾಕ್ ಆಗಿದ್ದಾರೆ. 1962 ರಲ್ಲಿ ಕಣ್ಮರೆಯಾಗಿದ್ದ ಆಡ್ರೆ ಬ್ಯಾಕ್ಬರ್ಗ್ ಈಗ ಪತ್ತೆಯಾಗಿದ್ದಾಳಂತೆ.ಅದು ಅಲ್ಲದೇ, ತಾನು ಸ್ವ ಇಚ್ಛೆಯಿಂದ ಮನೆಯನ್ನು ತೊರೆದಿದ್ದು, ಈ ಬಗ್ಗೆ ತನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾಳೆ. ಆಕೆಯ ಕಣ್ಮರೆಯಾದಾಗ ಆಕೆಯ ಕುಟುಂಬ ಮತ್ತು ಸ್ಥಳೀಯ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರಂತೆ. ಕೊನೆಗೆ ಈ ಪ್ರಕರಣಕ್ಕೆ ಸುಳಿವುಗಳು ಸಿಗದ ಕಾರಣ ಅದನ್ನು ಕೋಲ್ಡ್ ಕೇಸ್ ಎಂದು ನಿರ್ಧರಿಸಿದ್ದಾರಂತೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.
2024 ರ ಶುರುವಿನಲ್ಲಿ, ಸೌಕ್ ಕೌಂಟಿ ಶೆರಿಫ್ ಕಚೇರಿಯ ಡಿಟೆಕ್ಟಿವ್ ಐಸಾಕ್ ಹ್ಯಾನ್ಸನ್ ತನಿಖೆಯನ್ನು ಮತ್ತೆ ಶುರುಮಾಡಿದಾಗ ಆಡ್ರೆಯ ಬಗ್ಗೆ ತಿಳಿದುಬಂದಿದೆಯಂತೆ. ಕಣ್ಮರೆಯಾಗಿದ್ದ ಆಡ್ರೆ ಮತ್ತೆ ಅವಳ ಕುಟುಂಬಕ್ಕೆ ಸಿಕ್ಕಿದ್ದಾಳೆ. ಆದರೆ ಆಡ್ರೆ ಮಾತ್ರ ತಾನು ಸ್ವಇಚ್ಛೆಯಿಂದ ಮನೆಯನ್ನು ತೊರೆದಿದ್ದೇನೆ ಮತ್ತು ಈಗ ಸಂತೃಪ್ತಿಯಿಂದ ಬದುಕುತ್ತಿದ್ದೇನೆ ಎಂದು ಹೇಳಿದ್ದಾಳಂತೆ.
ಈ ಸುದ್ದಿಯನ್ನೂ ಓದಿ:Viral Video: ಭಾರತದಲ್ಲಿ ರೈಲು ಪ್ರಯಾಣ ನಂತರ ಅಮೆರಿಕ ಪ್ರವಾಸಿಗನಿಗೆ ಆಗಿದ್ದೇನು? ಈತ ಬದುಕುಳಿದ್ದಿದ್ದೇ ಪವಾಡ ಅಂತೆ!
ಆಡ್ರೆ ಸುಮಾರು 15 ವರ್ಷ ವಯಸ್ಸಿನಲ್ಲಿ ರೊನಾಲ್ಡ್ ಬ್ಯಾಕ್ಬರ್ಗ್ ಜೊತೆ ವಿವಾಹವಾದಳಂತೆ. ಕೌಟುಂಬಿಕ ಹಿಂಸೆ ಮತ್ತು ಮಾನಸಿಕ ಕಿರಿಕಿರಿಯನ್ನು ಎದುರಿಸುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಮದುವೆಯಲ್ಲಿನ ಅವಳ ಅತೃಪ್ತಿ ಕುಟುಂಬವನ್ನು ತೊರೆಯಲು ಕಾರಣವಾಯಿತಂತೆ.ಆಡ್ರೆ ತನ್ನ ಇಚ್ಛೆಯಿಂದಲೇ ಕಣ್ಮರೆಯಾಗಿದ್ದಾಳೆ. ಇದರಲ್ಲಿ ಯಾವುದೇ ಅಪರಾಧದ ಕೈವಾಡವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.