ಗಾಂಧಿನಗರ, ಜ. 23: ಸ್ವಚ್ಛತೆ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಮನವಿ ಮಾಡಿದರೂ, ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಜನರು ಕ್ಯಾರೇ ಎನ್ನದೇ ದುರ್ವವರ್ತನೆ ತೋರುತ್ತಿದ್ದಾರೆ. ಅದರಲ್ಲೂ ಎಲ್ಲೆಂದರಲ್ಲಿ ಕಸ ಬಿಸಾಕು ವುದು ಕಾನೂನುಬಾಹಿರವಾಗಿದ್ದು ಪರಿಸರಕ್ಕೂ ಮಾರಕವಾಗುತ್ತಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದಿದ್ದರೂ ಜನ ನಿಯಮ ಪಾಲನೆ ಮಾಡುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನ ಕಚ್‌ನಲ್ಲಿರುವ ಪ್ರಸಿದ್ಧ 'ರೋಡ್ ಟು ಹೆವನ್'ನಲ್ಲಿ ನಡೆದ ಘಟನೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಬಳಸಿದ ಡೈಪರ್ ಅನ್ನು ರಸ್ತೆಗೆ ಎಸೆದಿದ್ದಾಳೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ. ಇಲ್ಲಿಗೆ ಆಗಮಿಸಿದ್ದ ಪ್ರವಾಸಿಗರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.
ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಜನರು ನೆಲೆಸಿದ್ದಾರೆ. ಆದರೆ ಇಂತಹ ಜನಗಳೇ ಇಂತಹ ಕೃತ್ಯ ಎಸಗಿರುವ ಬಗ್ಗೆ ಪ್ರವಾಸಿಗರೊಬ್ಬರು ವಿಡಿಯೊದಲ್ಲಿ ಮಾತನಾಡಿದ್ದಾರೆ. ಕಿಯಾ ಸೆಲ್ಟೋಸ್ (Kia Seltos) ಕಾರಿನಲ್ಲಿ ಬಂದ ಮಹಿಳೆ ಡೈಪರ್ ಅನ್ನು ರಸ್ತೆಗೆ ಎಸೆದಿದ್ದಾಳೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಪ್ರಾವಾಸಿಯೊಬ್ಬರು, “ನಾನು ಈಗ ಸ್ವರ್ಗಕ್ಕೆ ಹೋಗುವ ರಸ್ತೆಯಲ್ಲಿದ್ದೇನೆ ('Road To Heaven'). ಈ ರಸ್ತೆ ತುಂಬಾ ಸುಂದರವಾಗಿದೆ ಮತ್ತು ಪ್ಲಾಸ್ಟಿಕ್ ಮುಕ್ತ ವಲಯವಾಗಿದೆ. ಸುತ್ತಲೂ ಫ್ಲೆಮಿಂಗೊ ಹಕ್ಕಿಗಳು ಹಾರಾಡುತ್ತಿವೆ. ಇಂತಹ ಸುಂದರ ಜಾಗದಲ್ಲಿ ಶಿಕ್ಷಣವಂತರೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಓರ್ವ ಮಹಿಳೆ ಕಾರಿನಿಂದ ಡೈಪರ್ ರಸ್ತೆಯಲ್ಲೇ ಎಸೆದು ಹೋಗಿದ್ದಾಳೆ. ನೀವು ರಸ್ತೆಯನ್ನು ಕಸದ ಬುಟ್ಟಿಯಂತೆ ಪರಿಗಣಿಸುತ್ತೀರಿ ಮತ್ತು ನಂತರ ದೇಶವು ಕೊಳಕಾಗಿ ಕಂಡಾಗ ಸರ್ಕಾರವನ್ನು ದೂಷಿಸುತ್ತೀರಿʼʼ ಅವರು ಎಂದು ವಿಡಿಯೊದಲ್ಲಿ ಕಿಡಿಕಾರಿದ್ದಾರೆ.
ಅರುಣಾಚಲ ನಮ್ಮದು ಎಂದ ಭಾರತೀಯ ಮಹಿಳೆಗೆ ಚೀನಾದಲ್ಲಿ ಕಿರುಕುಳ? ಏನಿದು ವಿವಾದ?
ʼʼಭಾರತವನ್ನು ಎಂದಿಗೂ ಸುಧಾರಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಾರೆ. ಇಲ್ಲಿ ಹಾದು ಹೋಗುವ ಎಲ್ಲ ವಾಹನಗಳು ದೊಡ್ಡ ಕಾರುಗಳು. ಇವರು ವಿದ್ಯಾವಂತ ಜನರೇ ಆಗಿದ್ದಾರೆ. ಅದರ ನಂತರವೂ ಅವರು ಹೀಗೆ ವರ್ತಿಸುತ್ತಾರೆ. ಈ ಅಭ್ಯಾಸವು ಎಂದಿಗೂ ಯಾವಾಗ ಬದಲಾಗುತ್ತದೆ ಎಂದು ನನಗೆ ನಿಜವಾಗಿಯೂ ತಿಳಿದಿಲ್ಲʼʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಡಿಯೊ ಶೇರ್ ಆದ ಬೆನ್ನಲ್ಲೇ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ʼʼಶ್ರಿಮಂತಿಕೆ ಇದ್ದರೆ ಏನು? ತಲೆಯಲ್ಲಿ ಬುದ್ದಿಯೇ ಇಲ್ಲʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು ʼʼಹಣದಿಂದ ಕಾರು ಖರೀದಿಸಬಹುದು, ಆದರೆ ಸಂಸ್ಕಾರವನ್ನು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ʼʼವಿದ್ಯಾವಂತರೇ ಹೀಗೆ ಮಾಡುವುದು ನಾಚಿಕೆಗೇಡಿನ ವಿಚಾರʼʼ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.