Viral Video: ರಿಲ್ಯಾಕ್ಸ್ ಆಗೋಕೆ ಟೀ ಕುಡಿಯೋಣ ಅಂದ್ರೆ ಈಕೆ ಚಹಾ ಮಾಡೋ ರೀತಿ ಕಂಡ್ರೆ ಟೆನ್ಷನ್ ಆಗುತ್ತೆ! ವಿಡಿಯೊ ನೋಡಿ
ಮಹಿಳೆಯೊಬ್ಬಳು ಚಹಾ ತಯಾರಿಸಲು ತನ್ನ ಕೈಯನ್ನು ಬಳಸಿದ ತಮಾಷೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ಮಹಿಳೆಯ ಕೈಯಿಂದ ತಯಾರಿಸಿದ ಚಹಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು 43.2 ಮಿಲಿಯನ್ ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಕೂಡ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.


ಎಷ್ಟೇ ಟೆನ್ಷನ್ ಇದ್ದರೂ ಒಂದು ಕಪ್ ಚಹಾ ಕುಡಿದಾಗ ಸಿಗುವ ಆನಂದ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಬೆಳಗ್ಗಿನ ನಿದ್ರೆಯ ಮಂಪರಿನಿಂದ ಮೂಡ್ ರಿಪ್ರೇಶ್ ಮಾಡಲು ಖಡಕ್ ಚಹಾ ತುಟಿಗೆ ಸೋಕಿದರೆ ಸಾಕು ಮತ್ತೇನೋ ಬೇಡ ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲರೂ ಚಹಾ ತಯಾರಿಸುವಾಗ ಪಾತ್ರೆಗೆ ಹಾಲು, ನೀರು, ಸಕ್ಕರೆ, ಟೀ ಪುಡಿ ಹಾಕುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ವಿಭಿನ್ನವಾಗಿ ಟೀ ತಯಾರಿಸಿದ್ದಾಳೆ! ಅರೆ... ಇದರಲ್ಲೇನು ವಿಶೇಷ ಅಂದುಕೊಳ್ಳುತ್ತಿದ್ದೀರಾ...? ಹೌದು ಈಕೆ ಚಹಾ ತಯಾರಿಸುವಾಗ ತನ್ನ ಕೈಯನ್ನೇ ಪಾತ್ರೆಯೊಳಗೆ ಹಾಕಿ ಚಹಾ ತಯಾರಿಸಿದ್ದಾಳೆ! ಈ ಹಾಸ್ಯಮಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಅವಳು ಒಂದು ಪ್ಯಾನ್ ತೆಗೆದುಕೊಂಡು, ಅದಕ್ಕೆ ತನ್ನ ಕೈ ಅದ್ದಿ ಅದರ ಮೇಲೆ ನೀರು, ಹಾಲು, ಸಕ್ಕರೆ, ಟೀ ಪೌಡರ್ ಹಾಕಿ ತನ್ನ ಕೈಯಿಂದ ಎಲ್ಲವನ್ನೂ ಮಿಕ್ಸ್ ಮಾಡಿ ಒಲೆ ಹಚ್ಚಿ ನಿಟ್ಟುಸಿರು ಬಿಟ್ಟಿದ್ದಾಳೆ.
ತಮಾಷೆಯ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿಯವರೆಗೆ ಈ ವಿಡಿಯೊ 43.2 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಇದಕ್ಕೆ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬರು "ವಾಹ್. ಇದು ನಿಜವಾಗಿಯೂ ಕೈಯಿಂದ ಮಾಡಿದ ಚಹಾ" ಎಂದು ಬರೆದಿದ್ದಾರೆ. “ಚಹಾ ಈ ರೀತಿ ವೇಸ್ಟ್ ಆಗುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ" ಎಂದು ಚಹಾ ಪ್ರಿಯರೊಬ್ಬರು ಕಾಮೆಂಟ್ ಮಾಡಿದ್ದಾರೆ " ಡಾಲಿ ಚಾಯ್ ವಾಲಾ ಆದರೆ ಈಕೆ ಹಾತ್ ಚಾಯ್ ವಾಲಿ" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಂದೇ ಭಾರತ್ ರೈಲಿನಲ್ಲಿ ಈ ದಂಪತಿ ಮಾಡಿದ ಕೆಲ್ಸಕ್ಕೆ ನೆಟ್ಟಿಗರು ಫುಲ್ ಗರಂ-ವಿಡಿಯೊ ಫುಲ್ ವೈರಲ್
ಈ ರೀತಿ ವಿಲಕ್ಷಣವಾಗಿ ಚಹಾ ತಯಾರಿಸುವ ಸುದ್ದಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆಯೊಬ್ಬಳು ಎಳನೀರಿನಿಂದ ಚಹಾವನ್ನು ತಯಾರಿಸಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆರಗಾಗಿಸಿತ್ತು. ಇಲ್ಲಿ ಅವಳು ಚಹಾ ತಯಾರಿಸಲು ನೀರಿನ ಬದಲು ಎಳನೀರನ್ನು ಬಳಸಿದ್ದಾಳೆ. ವೈರಲ್ ವಿಡಿಯೊದಲ್ಲಿ ಮಹಿಳೆ ಗ್ಯಾಸ್ ಒಲೆ ಮೇಲೆ ಸೀಯಾಳವನ್ನಿಟ್ಟು ಅದಕ್ಕೆ ಎಳನೀರು, ಚಹಾಪುಡಿ, ಸಕ್ಕರೆ, ಹಾಲು ಸೇರಿಸಿ ಬಿಸಿ ಬಿಸಿ ಚಹಾ ತಯಾರಿಸುವುದು ಕಂಡುಬಂದಿದೆ. ಈ ವಿಡಿಯೊ 2.5 ಲಕ್ಷ ವ್ಯೂವ್ಸ್ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿತ್ತು.