ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಿಠಾಯಿ ಮಾರುವ ಈ ಅಜ್ಜನ ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಿ! ವಿಡಿಯೊ ನೋಡಿ

ಕಂಟೆಂಟ್ ಕ್ರಿಯೇಟರ್ ಮೊಹಮ್ಮದ್ ಆಶಿಕ್ ಸೋಶಿಯಲ್ ಮೀಡಿಯಾದಲ್ಲಿ 120 ವರ್ಷದ ವ್ಯಕ್ತಿಯ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಈ ವೃದ್ಧ ಜೀವನ ನಡೆಸಲು ಮಿಠಾಯಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದಾನಂತೆ. ಈ ವಿಡಿಯೊ ಈಗಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಶತಾಯುಷಿ ಅಜ್ಜನ ‌ʼಮಿಠಾಯಿʼ ಬ್ಯುಸಿನೆಸ್‌; ವಿಡಿಯೊ ಫುಲ್‌ ವೈರಲ್!

Profile pavithra Apr 21, 2025 3:49 PM

ಚೆನ್ನೈ: ಜನರು ಜೀವನ ನಡೆಸಲು ಎಲ್ಲರಿಗೂ ಹಣ ಬೇಕೆ ಬೇಕು. ಈ ಹಣವನ್ನು ಸಂಪಾದಿಸಲು ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ 120 ವರ್ಷದ ವೃದ್ಧನೊಬ್ಬ ಜೀವನ ನಡೆಸಲು ಮಿಠಾಯಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದಾನಂತೆ. ಕಂಟೆಂಟ್ ಕ್ರಿಯೇಟರ್ ಮೊಹಮ್ಮದ್ ಆಶಿಕ್ ಸೋಶಿಯಲ್ ಮೀಡಿಯಾದಲ್ಲಿ 120 ವರ್ಷದ ವ್ಯಕ್ತಿಯ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಮತ್ತು ಆತನ ಹೆಸರು ಮೊಹಮ್ಮದ್ ಅಬು ಸಲೀಮ್ ಎಂಬುದಾಗಿ ತನ್ನ ಫಾಲೋವರ್ಸ್‍ಗೆ ಪರಿಚಯಿಸಿದ್ದಾನೆ. ಮೂಲತಃ ಬರ್ಮಾದವರಾದ ಈ ವೃದ್ಧ ವ್ಯಕ್ತಿ ಕಳೆದ 50 ವರ್ಷಗಳಿಂದ ಮಿಠಾಯಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನಂತೆ. ಆ ವೃದ್ಧ ವ್ಯಕ್ತಿ ತನ್ನ ಬಗ್ಗೆ ಮಾತನಾಡಿದ ವಿಡಿಯೊ ಈಗ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಅಬು ಸಲೀಂ "ಮಿಠಾಯಿ ಮಿಠಾಯಿ “ ಎಂದು ಹೇಳುವುದು ಸೆರೆಯಾಗಿದೆ. ತನಗೆ 120 ವರ್ಷ ವಯಸ್ಸಾಗಿದ್ದು, ತಾನು ತೆಂಗಿನಕಾಯಿ ಮಿಠಾಯಿ, ಶುಂಠಿ ಮಿಠಾಯಿ ಮತ್ತು ಗ್ಲುಕೋಸ್ ಮಿಠಾಯಿಯನ್ನು ಸಹ ತಯಾರಿಸಿ ಮಾರಾಟ ಮಾಡುವುದಾಗಿ ಹೇಳಿದ್ದಾನೆ. ಹಾಗೂ ಅವನು ಕಳೆದ 50 ವರ್ಷಗಳಿಂದ ಈ ಮಿಠಾಯಿ ವ್ಯಾಪಾರ ಮಾಡುತ್ತಿದ್ದಾನಂತೆ.

ವೃದ್ಧ ಮಿಠಾಯಿ ತಯಾರಿಸುವ ವಿಡಿಯೊ ಇಲ್ಲಿದೆ ನೋಡಿ...

ವಿಡಿಯೊದಲ್ಲಿ ಅಬು ಸಲೀಂ ತಾನು ಬರ್ಮಾ ಮೂಲದವನಾಗಿದ್ದು, ಅಪಘಾತದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ನಂತರ ಭಾರತಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ನಂತರ ಅವನು ಜೀವನೋಪಾಯಕ್ಕಾಗಿ ಮಿಠಾಯಿಗಳನ್ನು ತಯಾರಿಸಲು ಶುರುಮಾಡಿ ಅದನ್ನು ಅವನು ಇಂದಿಗೂ ಮಾಡುತ್ತಿದ್ದಾನೆ ಎಂಬುದಾಗಿ ಹೇಳಿದ್ದಾನೆ.ಈ ಮಿಠಾಯಿಗಳನ್ನು ಆತ ಕಡಲೂರು, ವಿಲ್ಲುಪುರಂ, ತಿಂಡಿವನಂ, ಮಾಯಾವರಂ, ಕುಂಬಕೋಣಂ ಮತ್ತು ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾನಂತೆ. ಈ ವಿಡಿಯೊ ಸೋಶಿಯ್ ಮೀಡಿಯಾದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ:Viral Video: ಸ್ನೇಹಿತರು ಕೊಟ್ಟ ಉಡುಗೊರೆ ಕಂಡು ವರನಿಗೆ ಫುಲ್‌ ಶಾಕ್‌! ಅಷ್ಟಕ್ಕೂ ಗಿಫ್ಟ್ ಏನು ಗೊತ್ತೆ?..

ಇತ್ತೀಚೆಗೆ ಶತಾಯುಷಿ ಅಜ್ಜಿಯೊಬ್ಬಳು ಮಕ್ಕಳಂತೆ ರಚ್ಚೆ ಹಿಡಿದು ಮ್ಯಾಗಿ ನೂಡಲ್ಸ್‌ ತಿಂದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಕುಟುಂಬದ ಸದಸ್ಯರೊಬ್ಬರು ಅಜ್ಜಿಯು ಮ್ಯಾಗಿ ತಿನ್ನುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಜ್ಜಿ ಚಿಕ್ಕಮಕ್ಕಳಂತೆ ಖುಷಿಯಿಂದ ಮ್ಯಾಗಿ ಸವಿಯುತ್ತಿರುವ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.ಶತಾಯುಷಿ ಆಗಿದ್ದರೂ ಅಜ್ಜಿಯ ಮ್ಯಾಗಿ ಕ್ರೇಜ್‌ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.