ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಚ್ಚಿ ಬೀಳಿಸುವ ದೃಶ್ಯ: ರೈಲಿನ ಮೇಲ್ಛಾವಣಿ ಮೇಲೆ ನಿಂತು ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು!

Viral Video: ಯುವಕನೊಬ್ಬ ಸರಕು ಸಾಗಣಿಕ ರೈಲಿನ ಮೇಲೆ ಹತ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆವೊಂದು ನಡೆದಿದೆ. ಬಿಹಾರದ ದರ್ಭಾಂಗದಲ್ಲಿ ಈ ಘಟನೆ ನಡೆದಿದ್ದು ಯುವಕನ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ವಿದ್ಯುತ್ ಆಘಾತದಿಂದಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೈ-ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಬಿಹಾರ,ಏ.24: ಇತ್ತೀಚೆಗೆ ವಿದ್ಯುತ್ ಅಪಘಾತ ಉಂಟಾಗಿ ಪ್ರಾಣ ಕಳೆದುಕೊಂಡಿರುವ ಅನೇಕ ಅಪಾಯಕಾರಿ ಘಟನೆ ನಡೆದಿದೆ.‌ಈ ನಡುವೆ ಯುವಕನೊಬ್ಬ ಸರಕು ಸಾಗಣಿಕ ರೈಲಿನ ಮೇಲೆ ಹತ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆವೊಂದು ನಡೆದಿದೆ. ಬಿಹಾರದ ದರ್ಭಾಂಗದಲ್ಲಿ ಈ ಘಟನೆ ನಡೆದಿದ್ದು ಯುವಕನ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ವಿದ್ಯುತ್ ಆಘಾತದಿಂದಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಬಿಹಾರದಲ್ಲಿ ಈ ಘಟನೆ ಸಂಭವಿಸಿದ್ದು, ಅಪರಿಚಿತ ಯುವಕ ಸರಕು ರೈಲಿನ ಕೋಚ್ ಮೇಲೆ ನಿಂತಿರುವುದನ್ನು ಗಮನಿಸಿ ಪಕ್ಕದಲ್ಲಿದ್ದವರು ಅವನನ್ನು ಕೆಳಗಿಳಿಯುವಂತೆ ಸಲಹೆ ನೀಡಿದ್ದಾರೆ. ಆತನಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿ, ಅವನು ಕೋಚ್‌ನ ಛಾವಣಿಯ ಮೇಲೆಯೇ ನಡೆದಾಡಿದ್ದಾನೆ. ಬಳಿಕ ತನ್ನ ಕೈಯನ್ನು ಓವರ್‌ಹೆಡ್ ವಿದ್ಯುತ್ ತಂತಿ ಮೇಲೆ ಇಟ್ಟಿದ್ದು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಯುವಕ ರೈಲಿನ ಕೋಚ್ ಮೇಲೆ ಹತ್ತುವುದನ್ನು ಗಮನಿಸಬಹುದು. ಈ ಸಂದರ್ಭದಲ್ಲಿ ಅಲ್ಲಿದ್ದ ಜನರ ಕೆಳಗೆ ಇಳಿಯುವಂತೆ ಜೋರಾಗಿ ಕಿರುಚುತ್ತಾ ಎಚ್ಚರಿಕೆ ನೀಡಿ ದರೂ ಆತ ಅಲ್ಲೇ ಓಡಾಡಿದ್ದಾನೆ. ಯುವಕ ಬೋಗಿಯ ಮೇಲೆ ನಡೆಯುತ್ತಾ ತನ್ನ ಕೈಯನ್ನು ವಿದ್ಯುತ್ ತಂತಿಯ ಸಮೀಪಕ್ಕೆ ಇಟ್ಟಿದ್ದಾನೆ.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಹೈ-ವೋಲ್ಟೇಜ್ ತಂತಿಯನ್ನು ಮುಟ್ಟಿದ ಪರಿಣಾಮ, ಇದರಿಂದಾಗಿ ಬೃಹತ್ ಪ್ರಮಾಣದ ಕಿಡಿ ಮತ್ತು ಸ್ಫೋಟ ಉಂಟಾಗಿದೆ. ವಿದ್ಯುತ್ ಸೋರಿಕೆಯ ನಂತರ ಯುವಕ ರೈಲಿನಲ್ಲಿ ತಕ್ಷಣವೇ ಕುಸಿದು ಬಿದ್ದಿದ್ದು ಪ್ರಾಣ ಕಳೆದು ಕೊಂಡಿದ್ದಾನೆ‌.ಈ ಭಯಾನಕ ದೃಶ್ಯವು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಬಳಕೆದಾರರಿಂದ ಹಲವು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವರು ಯುವಕ ಮಾನಸಿಕವಾಗಿ ನೊಂದಿರಬಹುದು ಎಂದು ಊಹಿಸಿದ್ದಾರೆ. ಘಟನೆಯ ನಂತರ ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಮೃತ ಯುವಕನ ಗುರುತು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ.