Keshava Prasad B Column: ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !
ಭವಿಷ್ಯದಲ್ಲಿ ನೂರು ಪುಸ್ತಕಗಳನ್ನು ಬರೆಯುವ ಮಹತ್ತ್ವಾಕಾಂಕ್ಷೆ’ಯನ್ನು ಸಣ್ಣ ಆಸೆ ಎಂದು ಹೇಳಿಕೊಳ್ಳುವ ವಿನಮ್ರತೆ ಇದೆ. ಪೋಷಕರ ಮೂಲ ಕೇರಳವಾದರೂ, ಮಂಡ್ಯ ದಲ್ಲಿ ಹುಟ್ಟಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಿ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉತ್ಸಾಹಿ ಪತ್ರಕರ್ತ.


ಕೇಶವ ಪ್ರಸಾದ್ ಬಿ
ತಮ್ಮ ಸುತ್ತಮುತ್ತಲೂ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿ, ಲೇಖನರೂಪದಲ್ಲಿ ಕಂಡರಿಸಿದ್ದನ್ನು ಈ ಪುಸ್ತಕದ ಬರಹಗಳಲ್ಲಿ ಕಾಣಬಹುದು.
ತಮ್ಮ ಸುತ್ತಮುತ್ತಲೂ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿ, ಲೇಖನರೂಪದಲ್ಲಿ ಕಂಡ ರಿಸಿದ್ದನ್ನು ಈ ಪುಸ್ತಕದ ಬರಹಗಳಲ್ಲಿ ಕಾಣಬಹುದು. ದೀಕ್ಷಿತ್ ನಾಯರ್ ಎಂದರೆ ಕೇರಳ ದವರಿರಬೇಕು ಎಂದು ಭಾವಿಸಿದರೆ ಆಶ್ಚರ್ಯವಿಲ್ಲ; ಆದರೆ ಇವರಿಗೆ ಕನ್ನಡದಲ್ಲಿ ಬರೆಯು ವುದು, ಕನ್ನಡವನ್ನು ಓದುವುದು ಎಂದರೆ ಬಹಳ ಇಷ್ಟ. ಇವರಿಗೆ ಈಗ ಕೇವಲ ಇಪ್ಪತ್ತ ಮೂರು ವರ್ಷ ವಯಸ್ಸು. ನೋಡಲು ಸರಳ, ಸಪೂರ. ಆದರೆ ಅಂತಃಕರಣ, ಜೀವನೋ ತ್ಸಾಹ, ಸೃಜನಶೀಲ ಸಾಹಸ ಪ್ರವೃತ್ತಿ, ಲೇಖಕನಿಗೆ ಇರಬೇ ಕಾದ ತಾಳ್ಮೆ, ಒಳನೋಟ, ಸಮಷ್ಟಿ ಪ್ರಜ್ಞೆ ಎಲ್ಲವೂ ಮೇಳೈಸಿದೆ. ಈ ಎಳೆಯ ಹರೆಯದಲ್ಲೇ ಮೂರು ಪುಸ್ತಕಗಳನ್ನು ಬರೆದಿರುವ ಯುವ ಸಾಹಿತಿ.
ಇದನ್ನೂ ಓದಿ: Keshav Prasad B Column: ಯುವ ಉದ್ಯಮಿಗಳು ಮಸ್ಕ್ʼರಿಂದ ಕಲಿಯಬೇಕಾದ ಪಾಠ
‘ಭವಿಷ್ಯದಲ್ಲಿ ನೂರು ಪುಸ್ತಕಗಳನ್ನು ಬರೆಯುವ ಮಹತ್ತ್ವಾಕಾಂಕ್ಷೆ’ಯನ್ನು ಸಣ್ಣ ಆಸೆ ಎಂದು ಹೇಳಿಕೊಳ್ಳುವ ವಿನಮ್ರತೆ ಇದೆ. ಪೋಷಕರ ಮೂಲ ಕೇರಳವಾದರೂ, ಮಂಡ್ಯ ದಲ್ಲಿ ಹುಟ್ಟಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಿ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉತ್ಸಾಹಿ ಪತ್ರಕರ್ತ.
ಕಲ್ಲನ್ನು ಬೇಕಾದರೂ ಮಾತನಾಡಿಸಬಲ್ಲ ಕಲೆಗಾರಿಕೆ. ಬರವಣಿಗೆಯಲ್ಲೂ ಸೃಜನಶೀಲತೆ. ದೀಕ್ಷಿತ್ ನಾಯರ್ ಅವರ ನೂತನ ಕೃತಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಒಂದು ಅಂಕಣ ಬರಹಗಳ ಸಂಕಲನ. ಆದರೂ ಸಾಹಿತ್ಯಿಕ ಮೌಲ್ಯಗಳನ್ನು ಹೊಂದಿರುವ ಉತ್ತಮ ಕೃತಿ. ಚಿಕ್ಕಮಗಳೂರಿನ ಕನಸುಗಳ ಇನಿನಿಟಿಯ ಪೃಥ್ವಿ ಸೂರಿ ಅವರು ಈ ಪುಸ್ತಕದ ಪ್ರಕಾಶಕರು. ದೀಕ್ಷಿತ್ ನಾಯರ್ ಸೂಕ್ಷ್ಮ ಪ್ರಜ್ಞೆಯ ಹುಡುಗ. ಆದ್ದರಿಂದ ತಮ್ಮ ಸುತ್ತಲಿನ ಸಮಾಜವನ್ನು, ಜನಜೀವನವನ್ನು, ಜನರನ್ನು, ಆಪ್ತ ಮನಸ್ಸುಗಳನ್ನು ಗ್ರಹಿಸಿದ್ದಾರೆ, ಅದಕ್ಕೆ ಅಕ್ಷರ ರೂಪ ನೀಡಿದ್ದಾರೆ.
ಮಂಡ್ಯದ ಐದು ರುಪಾಯಿ ಡಾಕ್ಟರ್ ಶಂಕರೇಗೌಡರು, ಮೈಸೂರಿನ ಮರ್ಯಾದೆ ಉಳಿಸಿದ್ದ ದನ ಕಾಯುವ ಹುಡುಗ, ಪೈಲ್ವಾನ ಬಸವಯ್ಯನವರ ಕಥೆ, ಮೈಸೂರಿನ ಪುಸ್ತಕ ಸಂತ ಸೈಯದ್ ಇಸಾಖ್, ಸ್ಮಶಾನ ಭೂಮಿ ಕಾಯುವ ಗಟ್ಟಿಗಿತ್ತಿ ನೀಲಮ್ಮನ ಜೀವನ,
ಶವಾಗಾರದ ಸಿದ್ದಯೋಗಿ ರಾಮಚಂದ್ರಪ್ಪನವರ ಬದುಕು-ಬವಣೆ ಎಲ್ಲವೂ ಹೃದಯ ಸ್ಪರ್ಶಿ ಲೇಖನಗಳಾಗಿ ಹೊರಹೊಮ್ಮಿವೆ. ಇದಕ್ಕೆ ಕಾರಣ ಸ್ವತಃ ಅವರೆಲ್ಲರನ್ನೂ ಸಂದ ರ್ಶಿಸಿ, ಸಾಧಕರ ಜೀವನಾನುಭವಗಳನ್ನು ಕೇಳಿ, ಮನನ ಮಾಡಿಕೊಂಡು ಬಳಿಕ ಬರೆದಿರು ವುದು.
ದೀಕ್ಷಿತ್ ಅವರ ತಾತನವರು ಮಂಡ್ಯದಲ್ಲಿ ಕನ್ನಡ ಬರದೆ ಅವಮಾನಿತರಾದ ಬಳಿಕ, ಜಿದ್ದಿಗೆ ಬಿದ್ದು ಕನ್ನಡ ಪತ್ರಿಕೆ ಓದಲು ಕಲಿತದ್ದು, ಅಷ್ಟಕ್ಕೇ ಸೀಮಿತರಾಗದೆ ಕನ್ನಡ ಸಾಹಿತ್ಯದ ಓದನ್ನು ಮುಂದುವರಿಸಿದ್ದು ಆಸಕ್ತಿಕರವಾಗಿದೆ. ತಾತ ಅಪ್ಪಟ ಕನ್ನಡಿಗನಾದರೆ, ಮೊಮ್ಮಗ ಅಪ್ಪಟ ಕನ್ನಡದ ಲೇಖಕನಾಗಿ ಭರವಸೆ ಮೂಡಿಸಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ, ಔದ್ಯಮಿಕ ಸೇರಿದಂತೆ ನಾನಾ ಕ್ಷೇತ್ರದ ಸಾಧಕರ ವ್ಯಕ್ತಿತ್ವ ಪರಿಚಯದ ಜತೆಗೆ, ಜನ ಸಾಮಾನ್ಯರ ಬದುಕು, ಬವಣೆ, ಮಧ್ಯಮ ವರ್ಗದ ಜನರ ತೊಳ ಲಾಟ, ಕನಸು ಹೀಗೆ ಹಲವಾರು ಆಯಾಮಗಳ ಲೇಖನಗಳ ಓದು ನಿಮ್ಮದಾಗುತ್ತದೆ.