ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaji Column: ಸರಳತೆ ನ್ಯಾಯ...ಅಭಿವೃದ್ದಿ !

ಹೊಸ ಪದ್ಧತಿ ಇದೇ ಸೆಪ್ಟಂಬರ್ ತಿಂಗಳ 22ರಿಂದ ಜಾರಿಗೆ ಬರಲಿದೆ. ಅದರ ಪ್ರಕಾರ ಇನ್ನು ಮುಂದೆ ಮುಖ್ಯವಾಗಿ ಕೇವಲ ಎರಡೇ ಸ್ತರದ ಶೇ 5, ಮತ್ತು 18 ರ ವ್ಯಾಪ್ತಿಯಲ್ಲಿ ಹೆಚ್ಚಿನ ವ್ಯಾಪಾರಗಳು ಬರಲಿವೆ. ಇನ್ನೊಂದು ಶೇ 40 ರ ವ್ಯಾಪ್ತಿಯಲ್ಲಿ ಪಾಪಪೂರಿತ (ಸಿನ್ ಅಂಡ್ ಲಕ್ಷುರಿ ಗೂಡ್ಸ್) ಮತ್ತು ಐಶಾರಾಮಿ ವಸ್ತುಗಳು ಬರಲಿವೆ. ರಾಜ್ಯಗಳಿಗೆ ಇದು ತನಕ ಇದ್ದ ಪರಿಹಾರದ ಸುಂಕ ಇನ್ನು ಮುಂದೆ ಇರುವುದಿಲ್ಲ. ವಿಶೇಷವಾಗಿ ಯಾವುದೇ ವಿಮಾ ಪಾಲಿಸಿಗೆ ಇನ್ನು ಮುಂದೆ ಕರಗಳಿರುವುದಿಲ್ಲ. ಈ ತನಕ ಅವುಗಳು ಶೇ.18 ವ್ಯಾಪ್ತಿಯಲ್ಲಿದ್ದವು

ಹೊಸ ಜಿಎಸ್‌ ಟಿ ಈ ವಾರದಿಂದ ಜಾರಿ !

-

Ashok Nayak Ashok Nayak Sep 21, 2025 10:37 AM

ಹೊಸ ಜಿಎಸ್‌ಟಿ ಪದ್ಧತಿ ಇದೇ ಸೆಪ್ಟಂಬರ್ ತಿಂಗಳ 22ರಿಂದ ಜಾರಿಗೆ ಬರಲಿದೆ. ಅದರ ಪ್ರಕಾರ ಇನ್ನು ಮುಂದೆ ಮುಖ್ಯವಾಗಿ ಕೇವಲ ಎರಡೇ ಸ್ತರದ ಶೇ.5 ಮತ್ತು ಶೇ.18ರ ವ್ಯಾಪ್ತಿಯಲ್ಲಿ ಹೆಚ್ಚಿನ ವ್ಯಾಪಾರಗಳು ನಡೆಯಲಿವೆ. ಇನ್ನೊಂದು ಶೇ. 40ರ ವ್ಯಾಪ್ತಿಯಲ್ಲಿ ಪಾಪಪೂರಿತ (ಸಿನ್ ಅಂಡ್ ಲಕ್ಷುರಿ ಗೂಡ್ಸ್) ಮತ್ತು ಐಶಾರಾಮಿ ವಸ್ತುಗಳು ಬರಲಿವೆ. ವಿಶೇಷವಾಗಿ ಯಾವುದೇ ವಿಮಾ ಪಾಲಿಸಿಗೆ ಇನ್ನು ಮುಂದೆ ಕರಗಳಿರುವುದಿಲ್ಲ. ಹೊಸ ಜಿಎಸ್‌ಟಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಉಳಿತಾಯವಾಗಲಿದ್ದು, ಈ ವರ್ಷದ ದೀಪಾವಳಿಯ ಕೊಡುಗೆಯಂತೆ ಇದು ದೊರಕಿದೆ. ಜತೆಯಲ್ಲೇ, ರಾಜ್ಯಗಳ ಆದಾಯ ತುಸು ಕಡಿಮೆಯಾಗುವುದೂ ನಿಜ.

ರಾಜ್ಯಗಳಿಗೆ ಇದು ತನಕ ಇದ್ದ ಪರಿಹಾರದ ಸುಂಕ ಇನ್ನು ಮುಂದೆ ಇರುವುದಿಲ್ಲ. ಸ್ವಾತಂತ್ರೋತ್ಸವ ದಿವಸದಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆಯಿಂದ ರಾಷ್ಟ್ರವನ್ನು ದ್ಧೇಶಿಸಿ ಭಾಷಣ ಮಾಡುವಾಗ ಈ ವರ್ಷ ದೀಪಾವಳಿ ಉಡುಗೊರೆಯಾಗಿ ಮುಂದಿನ ಪೀಳಿಗೆಯ ಜಿಎಸ್‌ಟಿ ಯನ್ನು ದೇಶದ ಜನತೆಗೆ ನೀಡುವುದಾಗಿ ಘೋಷಿಸಿದ್ದರು.

ಅದರಂತೆ ತಾ. 03/09/2025, ಬುಧವಾರ ಭಾರತದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಹೊಸ ಜಿಎಸ್‌ಟಿ ಪದ್ಧತಿಯನ್ನು ನವರಾತ್ರಿಗೆ ಮುನ್ನವೇ ಘೋಷಿಸಿ ದೇಶದ ಕರ ಸಂಗ್ರಹದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ವಿರೋಧಿಗಳಿಂದ ‘ಗಬ್ಬರ್ ಸಿಂಗ್ ಕರ’ ವೆಂದು ಟೀಕಿಸಲ್ಪಟ್ಟ ಕರ ಸಮುಚ್ಛಯ ಇದೀಗ ತನ್ನ ಟೀಕಾಕಾರರ ಬಾಯಿಯನ್ನು ಮುಚ್ಚಿಸಿತ ಲ್ಲದೇ ‘ಇದು ತಮ್ಮದೇ ಸಲಹೆ!’ ಎನ್ನುವ ಮಟ್ಟಕ್ಕೆ ಪ್ರಶಂಸೆಗೆ ಪಾತ್ರವಾಯಿತು.

ಯಾರು ಏನೇ ಹೇಳಲಿ, ಭಾರತದ ಅರ್ಥವ್ಯವಸ್ಥೆಗೆ ಜಿಎಸ್‌ಟಿ ಹಣಕಾಸಿನ ನೆರವನ್ನು ಮತ್ತು ಹೆಚ್ಚಿನ ಪ್ರಮಾಣದಲ್ಲಿ ವಹಿವಾಟುಗಳು ಪಾರದರ್ಶಕವಾಗಿರುವಂತೆ ನೋಡಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Narayanaa Yaji Column: ಲೋಕವನ್ನು ಹರುಷಗೊಳಿಸಿದ ಸುಂದರಕಾಂಡದ ಸುಂದರ

2017ರಲ್ಲಿ “ಒಂದು ದೇಶ ಒಂದು ಕರ" ಎನ್ನುವ ಘೋಷ ವಾಕ್ಯದೊಂದಿಗೆ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆ ಮೂಲತಃ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಕೂಸು. ಬಂಗಾಳದ ಆಗಿನ ಹಣಕಾಸು ಮಂತ್ರಿ ಸಿಪಿಎಮ್ ಪಕ್ಷದ ಅಸಿಮ್ ದಾಸ್ ಗುಪ್ತಾ ಅವರ ನೇತೃತ್ವದಲ್ಲಿ ಸಮಿತಿ ಯೊಂದನ್ನು ರಚಿಸಿದ್ದರು. ಆ ಸಮಿತಿ ಕೆನಡಾ, ಆಸ್ಟ್ರೇಲಿಯಾ, ಮಲೇಶಿಯಾ, ಸಿಂಗಾಪುರ್ ಮೊದ ಲಾದ ದೇಶದ ಕರವ್ಯವಸ್ಥೆಯನ್ನು ಅಧ್ಯಯನ ಮಾಡಿ ಅವುಗಳಲ್ಲಿ ಸಿಂಗಾಪುರದ ಮಾದರಿಯನ್ನು ಭಾರತಕ್ಕೆ ಅನುಕೂಲವಾಗುವಂತೆ ರಚಿಸಿಕೊಟ್ಟಿತು. ಅದನ್ನು ಜಾರಿಗೆ ತರುವಷ್ಟರಲ್ಲಿ ವಾಜಪೇಯಿ ಯವರ ಸರಕಾರ ಹೋಗಿ ಡಾ.ಮನಮೋಹನ್ ಸಿಂಗ್ ಅವರ ಸರಕಾರ ಅಸ್ತಿತ್ವಕ್ಕೆ ಬಂತು.

ಅವರಿಗೆ ಇದರ ಕುರಿತು ತುಂಬಾ ಅಸಕ್ತಿ ಇತ್ತು. 2006ರ ಬಜೆಟಿನಲ್ಲಿ ಅಂದಿನ ಹಣಕಾಸು ಮಂತ್ರಿ ಪಿ ಚಿದಂಬರಮ್ 2010ರಲ್ಲಿ ಇದನ್ನು ಜಾರಿಗೆ ತರುವದಾಗಿ ಘೋಷಣೆಯನ್ನೂ ಮಾಡಿದ್ದರು. ಆದರೆ ಯುಪಿಎ ಪಕ್ಷದ ಇತರ ಪಕ್ಷಗಳ ವಿರೋಧದಿಂದಾಗಿ ಜಾರಿಗೆ ಬರಲಿಲ್ಲ. ಕಮ್ಯುನಿಸ್ಟ್, ಕಾಂಗ್ರೆಸ್ ಪಕ್ಷದವರೇ ಆರಂಭದಲ್ಲಿ ಶಿ-ರಸು ಮಾಡಿದ ಜಿಎಸ್‌ಟಿ ವ್ಯವಸ್ಥೆಯನ್ನು, ಅವರ ಪಕ್ಷದವರೇ ವಿರೋಧಿಸಿರುವುದು ಭಾರತದ ರಾಜಕೀಯದ ವ್ಯಂಗ್ಯಗಳಲ್ಲೊಂದು.

2017ರಲ್ಲಿ ನರೇಂದ್ರ ಮೋದಿಯವರು ಸಂವಿಧಾನದ 101ನೆಯ ತಿದ್ದುಪಡಿಯ ಮೂಲಕ ಇದನ್ನು ಜಾರಿಗೆ ತಂದಿದ್ದಲ್ಲದೇ ಅದರ ನಂತರ ಭಾರತದ ಆರ್ಥಿಕ ಅಭಿ ವೃದ್ಧಿಗೆ ಜಿಎಸ್‌ಟಿ ವ್ಯವಸ್ಥೆ ಹೊಸ ರೂಪವನ್ನೇ ಕೊಟ್ಟಿದೆ. ಇದೀಗ ಹೊಸ ಜಿಎಸ್‌ಟಿಯ ವ್ಯವಸ್ಥೆಯಿಂದಾಗಿ ದೇಶದ ಆರ್ಥಿಕತೆಗೆ ಇನ್ನಷ್ಟು ರೆಕ್ಕೆ ಬರುವ ನಿರೀಕ್ಷೆಯಿದೆ.

ಹಳೆಯ ಜಿಎಸ್‌ಟಿ ಕರಗಳ ಭಾರ

ಜಿಎಸ್‌ಟಿ ಬರುವ ಮೊದಲು ಭಾರತದಲ್ಲಿ ಸುಮಾರು ಹದಿನೈದು ಬಗೆಯ ಕರಗಳಿದ್ದವು. ಪ್ರತಿಯೊಂದೂ ರಾಜ್ಯವೂ ತನ್ನದೇ ಆದ ನೀತಿಯನ್ನು ಹೊಂದಿತ್ತು. ಅದಾಗ್ಯೂ ದೇಶದ ಖಜಾನೆಗೆ ಕರದ ಹಣ ಬಂದಿದ್ದು ಕೇವಲ 11.38 ಲಕ್ಷ ಕೋಟಿ ರುಪಾಯಿಗಳಾದರೆ, ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಒಂದರಿಂದಲೇ 10.61 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ.

ಒಟ್ಟೂ ಬಜೆಟ್ಟಿನ ಆದಾಯದಲ್ಲಿ 27% ಜಿಎಸ್‌ಟಿ ಒಂದರಿಂದಲೇ ಬರುತ್ತಿದೆ. ಜಿಎಸ್‌ಟಿಯಿಂದ ಆದ ಲಾಭವೆಂದರೆ ಸಮಗ್ರವಾಗಿ ಒಂದೇ ಕರವನ್ನು ದೇಶದಾದ್ಯಂತ ಜಾರಿಗೆ ತಂದಿರುವುದು. ಮೊದಲಿದ್ದ ಹದಿನೈದು ವಿಧಗಳ ಕರಗಳನ್ನು ಕ್ರೋಢೀಕರಿಸಿ ಶೇ ೫,೧೨,೧೮,೨೮ ಹೀಗೆ ನಾಲ್ಕು ವಿಧದ ಕರಗಳ ವ್ಯವಸ್ಥೆಗಳನ್ನು ಜಾರಿಗೊಳಿಸಲಾಯಿತು. ಆದರೂ ಅನೇಕ ಜನೋಪಯೋಗಿ ವಸ್ತುಗಳು ಉದಾಹರಣೆಗೆ ಕೃಷಿ ಉಪಕರಣ, ಟ್ಯಾಕ್ಟರ್, ವಿಮಾ ಕಂತು ಮೊದಲಾದವುಗಳು 18% ಕರದ ವ್ಯಾಪ್ತಿಯಲ್ಲಿದವು. ಇಷ್ಟಿದ್ದರೂ ರಾಜ್ಯಗಳು ಕೆಲವೊಂದಿಷ್ಟು ವಸ್ತುಗಳ ಮೇಲೆ 28% ರಷ್ಟಿರುವ ಐಷಾರಾಮಿ ವಸ್ತುಗಳ ಮೇಲೆ ವಿಧಿಸುವ ಅಧಿಕಾರವನ್ನು ಹೊಂದಿದ್ದವು.

ಹೊಸ ಜಿಎಸ್‌ಟಿ ಕರದ ವ್ಯವಸ್ಥೆ

ಹೊಸ ಪದ್ಧತಿ ಇದೇ ಸೆಪ್ಟಂಬರ್ ತಿಂಗಳ 22ರಿಂದ ಜಾರಿಗೆ ಬರಲಿದೆ. ಅದರ ಪ್ರಕಾರ ಇನ್ನು ಮುಂದೆ ಮುಖ್ಯವಾಗಿ ಕೇವಲ ಎರಡೇ ಸ್ತರದ ಶೇ 5, ಮತ್ತು 18 ರ ವ್ಯಾಪ್ತಿಯಲ್ಲಿ ಹೆಚ್ಚಿನ ವ್ಯಾಪಾರಗಳು ಬರಲಿವೆ. ಇನ್ನೊಂದು ಶೇ 40 ರ ವ್ಯಾಪ್ತಿಯಲ್ಲಿ ಪಾಪಪೂರಿತ (ಸಿನ್ ಅಂಡ್ ಲಕ್ಷುರಿ ಗೂಡ್ಸ್) ಮತ್ತು ಐಶಾರಾಮಿ ವಸ್ತುಗಳು ಬರಲಿವೆ. ರಾಜ್ಯಗಳಿಗೆ ಇದು ತನಕ ಇದ್ದ ಪರಿಹಾರದ ಸುಂಕ ಇನ್ನು ಮುಂದೆ ಇರುವುದಿಲ್ಲ. ವಿಶೇಷವಾಗಿ ಯಾವುದೇ ವಿಮಾ ಪಾಲಿಸಿಗೆ ಇನ್ನು ಮುಂದೆ ಕರಗಳಿರುವುದಿಲ್ಲ. ಈ ತನಕ ಅವುಗಳು ಶೇ.18 ವ್ಯಾಪ್ತಿಯಲ್ಲಿದ್ದವು. ವಾರ್ಷಿಕವಾಗಿ 50000 ರೂಪಾಯಿ ವಿಮಾ ಪಾವತಿ ಮಾಡುವವ ಸುಮಾರು 9000 ರೂಪಾಯಿಗಳಷ್ಟನ್ನು ಜಿಎಸ್‌ಟಿ ಕರಗಳನ್ನಾಗಿ ತುಂಬಬೇಕಾಗಿತ್ತು.

ಅದು ಇದೀಗ ಸೊನ್ನೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇನ್ನೊಂದು ಕ್ರಾಂತಿಕಾರಕ ಹೆಜ್ಜೆಯೆಂದರೆ ಅಲ್ಟ್ರಾ-ಪಾಶ್ಚೀಕರಿಸಿದ ಹಾಲು, ಪನೀರ್, ಬ್ರೆಡ್ ಎಲ್ಲಕ್ಕಿಂತ ಮಿಗಿಲಾಗಿ ಜೀವರಕ್ಷಕ ಔಷಧಿಗಳು ಮತ್ತು ಕ್ಯಾನ್ಸರ್ ರೋಗಿಗಳಿಗೆ ಇದುತನಕ ವಿಧಿಸುತ್ತಿದ್ದ ೧೨% ವ್ಯಾಪ್ತಿಯ ಜಿಎಸ್‌ಟಿಇನ್ನು ಮುಂದೆ ಸೊನ್ನೆ ಕರದ ವ್ಯಾಪ್ತಿಯಲ್ಲಿ ಬರಲಿದೆ. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಸಾಕಷ್ಟು ಉಳಿತಾಯ ವಾಗಲಿದೆ.

ಕೃಷಿ ಉಪಕರಣಗಳು ಟ್ರಾಕ್ಟರ್ ಸೇರಿ ಮೊದಲು ವಿಧಿಸುತ್ತಿದ್ದ ಶೇ.12 ಇದೀಗ ಶೇ. 5 ರ ವ್ಯಾಪ್ತಿಯಲ್ಲಿ ಬರಲಿದೆ. ಇದರಿಂದ ಕೃಷಿಗೆ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ. ಟ್ರಾಕ್ಟರ್ ಖರೀದಿಯಲ್ಲಿ ಸುಮಾರು 120000/- ರೂಪಾಯಿಯಷ್ಟು ಜಿಎಸ್‌ಟಿಯಲ್ಲಿ ಉಳಿತಾಯವಾಗಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸುಮಾರು ಶೇ 70-80ರಷ್ಟು ಉತ್ಪನ್ನಗಳು ಒಂದೋ ಸೊನ್ನೆ ಯಿಂದ ಶೇ.5ರ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ಇದು ಜನಸಾಮಾನ್ಯರಿಗೆ ಸಿಹಿಸುದ್ದಿ. ಇನ್ನು ಸಣ್ಣ ಮತ್ತು ಮಧ್ಯಮ ಕಾರುಗಳು (1200 ಸಿಸಿ), ಟಿವಿ, ಮೊಬೈಲ್ ಫೋನುಗಳು, ರೆಫ್ರಿಜರೇಟರ್, ಸ್ಕೂಟರ್ ಮುಂತಾದವುಗಳು ಮೊದಲಿನ 28% ಪ್ರತಿಶತದಿಂದ 18% ವ್ಯಾಪ್ತಿಯಲ್ಲಿ ಬರುವುದರಿಂದ, ಗ್ರಾಹಕರಿಗೆ ಲಾಭವಾಗಲಿದೆ.

ಪೆಪ್ಸಿಗೆ ಶೇ.40!

ಈ ಸಲದ ಜಿಎಸ್‌ಟಿ ಸುಂಕದ ವಿಶೇಷವೆಂದರೆ ಪಾಪಪೂರಿತ ಮತ್ತು ಐಷಾರಾಮಿ ವಸ್ತುಗಳ ಪಟ್ಟಿಯಲ್ಲಿ ದೊಡ್ಡ ಕಾರು ಮತ್ತು ತಂಪು ಪಾನೀಯಗಳನ್ನು ಸೇರಿಸಿರುವುದು. ತಂಪು ಪಾನೀಯ ಗಳಾದ ಕೋಕೋ, ಪೆಪ್ಸಿ ಮೊದಲಾದವು ಶೇ 40 ಸುಂಕದ ವ್ಯಾಪ್ತಿಗೆ ಬರುತ್ತವೆ. ಅಮೆರಿಕದ ವಸ್ತುವನ್ನು ಬಾಯ್ಕಾಟ್ ಮಾಡಿ ಎಂದು ಹೊಸತಾಗಿ ಕೂಗಬೇಕಿಲ್ಲ! ಇದು ಜಾರಿಗೆ ಬರುವ ದಿನಾಂಕವನ್ನು ಇನ್ನೂ ತಿಳಿಸಿಲ್ಲವಾದುದರಿಂದ ಅದುತನಕ ಶೇ. ೨೮ರ ವ್ಯಾಪ್ತಿಯಲ್ಲಿಯೇ ಸದ್ಯ ಮುಂದುವರಿಯಲಿದೆ.

ಹೊಸ ಜಿಎಸ್‌ಟಿ ವ್ಯವಸ್ಥೆಯಿಂದಾಗಿ, ವಿಶೇಷವಾಗಿ ಕರ್ನಾಟಕ ಮತ್ತು ಬಂಗಾಳ ರಾಜ್ಯಗಳು ಇದರಿಂದ ತಮಗೆ ಆದಾಯದ ಕೊರತೆಯಾಗುವುದೆಂದು ಕೂಗು ಹಾಕಿವೆ. ಕರ್ನಾಟಕಕ್ಕೆ ವಾರ್ಷಿಕವಾಗಿ ಸುಮಾರು 15000 ಕೋಟಿ ರೂಪಾಯಿಗಳಷ್ಟು ಕರ ಸಂಗ್ರಹದ ಕೊರತೆ ಉಂಟಾ ಗುವುದರಿಂದ ಅದನ್ನು ತುಂಬಿ ಕೊಡುವಂತೆ ಒತ್ತಾಯಿಸಲಾಗುತ್ತಿದೆ.

ಭಾರತ ಸರಕಾರಕ್ಕೆ ಪ್ರತೀವರ್ಷ ಸುಮಾರು 48000 ಕೋಟಿರುಪಾಯಿಗಳಷ್ಟು ಕರದ ಕೊರತೆ ಉಂಟಾಗುವ ನಿರೀಕ್ಷೆಯಿದೆ. ಆ ಕುರಿತು ಕೇಳಲಾದ ಪ್ರಶ್ನೆಗೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉಪಭೋಗ ವಸ್ತುಗಳು ದೊರೆಯುವುದರಿಂದ ಈ ಕೊರತೆಯನ್ನು ಇನ್ನೊಂದಾರು ತಿಂಗಲಲ್ಲಿ ತುಂಬಿಕೊಳ್ಳುವದಾಗಿ ಜಿಎಸ್‌ಟಿ ಮಂಡಳಿ ಹೇಳಿದೆ. ರಾಜ್ಯ ಸರಕಾರಗಳ ಕುರಿತು ಕೇಳಿದ ಪ್ರಶ್ನೆಗೆ ನಷ್ಟವನ್ನು ತುಂಬಿಕೊಡುವ ಮಾತನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ರಾಜ್ಯಗಳು ತಮ್ಮಲ್ಲಿನ ಸಂಪನ್ಮೂಲಗಳನ್ನು ಇನ್ನಷ್ಟು ದಕ್ಷತೆಯಿಂದ ನಿರ್ವಹಿಸಿದರೆ ಮತ್ತು ಕರವಸೂಲಿಯನ್ನು ಶಿಸ್ತಿನಿಂದ ಪಾಲಿಸಿದರೆ ಕೊರತೆಯನ್ನು ತುಂಬಿಕೊಳ್ಳಬಹುದಾಗಿ ಅಭಿಪ್ರಾಯಪಟ್ಟಿದೆ.

ರಾಜ್ಯಗಳಿಗೆ ಲುಕ್ಸಾನು ಆಗುವುದು ಹೌದಾದರೂ ಗ್ರಾಹಕರ ಹೊರೆಯನ್ನು ಇದು ಇಳಿಸುವುದರಿಂದ ಒಪ್ಪದೇ ವಿಧಿಯಿಲ್ಲ. ಆದರೆ ಹೆಚ್ಚಿನ ತುಷ್ಟೀಕರಣದ ಯೋಜನೆಗಳನ್ನು ರಾಜ್ಯಗಳು ಜಾರಿ ಮಾಡಿವಾಗ ಆಲೋಚಿಸಬೇಕೆಂದು ಪರೋಕ್ಷವಾಗಿ ಕೇಂದ್ರ ಸರಕಾರ ಸೂಚಿಸಿದೆ.

ಮುಗಿಸುವ ಮುನ್ನ

ಅಮೆರಿಕವು ಭಾರತದ ಮೇಲೆ ಸುಂಕಾಸದ ಸವಾರಿ ಮಾಡುತ್ತಿರುವಾಗ ಜಾರಿಗೊಳಿಸಲುದ್ದೇಶಿಸಿದ ಹೊಸ ಜಿಎಸ್‌ಟಿಯ ಲಾಭವು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಹಕ ಜಾಗ್ರತ ಸಮಿತಿ ಇನ್ನಷ್ಟು ಚುರುಕಾಗಿ ಈ ವಿಷಯಗಳನ್ನು ಜನರಿಗೆ ತಲುಪಿಸಿ ಜಾಗ್ರತಗೊಳಿಸಬೇಕು. ಐಎಂಎ- ವರದಿಯ ಪ್ರಕಾರ ಇಂದು ಭಾರತದ ಖರೀದಿ ಸಾಮರ್ಥ್ಯ 17 ಟ್ರಿಲಿಯನ್ ಡಾಲರ್. ಇದು ಜಗತ್ತಿನಲ್ಲಿ ಮೂರನೆಯ ಸ್ಥಾನವನ್ನು ಪಡೆದಿದೆ. ಜಾಗತಿಕವಾಗಿ ಯಾವ ದೇಶವೂ ಭಾರದ ಮಾರುಕಟ್ಟೆಯನ್ನು ಬಿಟ್ಟು ಇರಲು ಸಾಧ್ಯವಾಗದು. ಇನ್ನು ಮುಂದಿನ ಆರ್ಥಿಕ ಸುಧಾರಣೆ ಆದಾಯಕರದಲ್ಲಿ ಆಗಬೇಕಾಗಿದೆ. ಆದಷ್ಟು ಶೀಘ್ರ ಅದೂ ಆಗಲಿ.

ಜಾರಿಯಲ್ಲಿ ಸವಾಲುಗಳು

ಹೊಸ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸುವ ಹೊಣೆ ರಾಜ್ಯ ಸರಕಾದ್ದಾಗಿರುವುದರಿಂದ ರಾಜ್ಯಸರಕಾರದ ಅಧೀನದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ವಿಭಾಗವು ಇದನ್ನು ಅನುಷ್ಠಾನ ಗೊಳಿಸಬೇಕಾಗಿದೆ. ಇನ್ನೊಂದು ಸಮಸ್ಯೆಯೆಂದರೆ ಒಂದು ವೇಳೆ ಈಗಾಗಲೇ ವ್ಯಾಪಾರಿಗಳು ಕೆಲವೊಂದು ಸಾಮಾನುಗಳನ್ನು ಉದಾಹರಣೆಗೆ ಟ್ರಾಕ್ಟರನ್ನು 18% ವ್ಯಾಪ್ತಿಯಲ್ಲಿ ಖರೀದಿ ಮಾಡಿಬಿಟ್ಟಿವೆ, ಅವುಗಳ ವಿಲೇವಾರಿ ಹೇಗೆ ಎನ್ನುವ ಪ್ರಶ್ನೆಗೆ ಪರಿಹಾರವಿದೆ. ಸೆಪ್ಟೆಂಬರ್ 22ರ ನಂತರ ಒಂದು ವೇಳೆ ಹೆಚ್ಚಿನ ಜಿಎಸ್‌ಟಿ ವ್ಯಾಪ್ತಿಯಲ್ಲಿ ಖರೀದಿಸಿದ ವಸ್ತುಗಳನ್ನು ಮಾರಾಟ ಮಾಡ ಬೇಕಾದರೆ ಹೊಸ ದರದಲ್ಲಿ ಮಾರಾಟ ಮಾಡಿ, ಅದರ ವ್ಯತ್ಯಾಸವನ್ನು ಜಿಎಸ್‌ಟಿ ಮಂಡಳಿಯಿಂದ ವಾಪಾಸು ಪಡೆಯಬಹುದು. ಅದಲ್ಲದೇ ಒಂದುವೇಳೆ ಯಾರಾದರೂ ಹೊಸ ಕರದ ವ್ಯವಸ್ಥೆಯನ್ನು ಉಲ್ಲಂಸಿದಲ್ಲಿ ಗ್ರಾಹಕರು ನೇರವಾಗಿ ದೂರನ್ನು ಸಲ್ಲಿಸಬಹುದು. ಇದು ಭಾರತ ಸ್ಪರ್ಧಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಇದರ ಜೊತೆಗೆ ರಾಜ್ಯಸರಕಾರದ ಅಧೀನದಲ್ಲಿರುವ ಜಿಎಸ್‌ಟಿ ಅನುಷ್ಠಾನ ವಿಭಾಗದವರಿಗೂ ದೂರನ್ನು ನೀಡಬಹುದಾಗಿದೆ.

ಮೊಸರಿನ ಬೆಲೆ ಇಳಿಕೆ!

ನಿಜ, ಇದೇ ತಿಂಗಳ 22ರಿಂದ ಜಾರಿಗೊಳ್ಳಲಿರುವ ಹೊಸ ಜಿಎಸ್‌ಟಿ ಪದ್ಧತಿಯಿಂದಾಗಿ, ಮೊಸರಿನ ಬೆಲೆ ಕಡಿಮೆಯಾಗಲಿದೆ! ಇದರಿಂದ ಜನರಿಗೆ ತುಸು ನೆಮ್ಮದು, ಖುಷಿ! ಇದಲ್ಲದೇ ಕೆಲವು ಔಷಧಗಳು ಸಹ ಕಡಿಮೆ ಬೆಲೆಯಲ್ಲಿ ದೊರಕಲಿವೆ. ಸಣ್ಣ ಕಾರುಗಳು, ಟ್ರ್ಯಾಕ್ಟರ್, ಸ್ಕೂಟರುಗಳು, ಮೊಬೈಲ್ ಫೋನು ಗಳು ಮೊದಲಾದ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗುವುದರಿಂದ, ಅದರ ನೇರ ಲಾಭವು ಜನಸಾಮಾನ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಟ್ರ್ಯಾಕ್ಟರ್ ಬೆಲೆ ಕಡಿಮೆಯಾಗುವುದರಿಂದ, ಕೃಷಿ ಚಟುವಟಿಕೆಗಳಿಗೂ ಪೂರಕ ಎನಿಸಿದೆ.