ಉಕ್ಕಿದರೆ ಕಾಳಿ, ಸೊಕ್ಕಿದರೆ ಲಕ್ಷ್ಮಿ, ದಕ್ಕಿದರೆ ಸರಸ್ವತಿ

ಉಕ್ಕಿದರೆ ಕಾಳಿ, ಸೊಕ್ಕಿದರೆ ಲಕ್ಷ್ಮಿ, ದಕ್ಕಿದರೆ ಸರಸ್ವತಿ

image-c100eac3-cb73-4d1a-a5bc-e281ff77d9cd.jpg
Profile Vishwavani News September 29, 2022
image-53b82669-8e39-4899-8d55-547b39b118ec.jpg image-34d9a216-78c0-4aff-b6a0-9160760a49fe.jpg ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೊಳಗಿದ ವಿಶಿಷ್ಟ ದೇವಿಸ್ತುತಿ ಗಾನಯಾನ ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ದೇವಿಸ್ತುತಿ ಗಾನಯಾನ ಕಾರ್ಯಕ್ರಮದಲ್ಲಿ ಗಾಯಕಿರಾದ ಜಯಶ್ರೀ ಮತ್ತು ಸುಜಯ ಕೊಣ್ಣೂರ್ ಗಾನಸುಧೆ ಹರಿಸಿದರು. ಪಾಡ್ಯದಿಂದ ಪ್ರಾರಂಭವಾಗಿ ವಿಜಯದಶಮಿಯ ಪಟ್ಟಾಭಿಷೇಕದವರೆಗೆ ೯ ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ನಾಡಿಗೆ ನಾಡೇ ಸಂಭ್ರಮಿಸುತ್ತದೆ. ನವರಾತ್ರಿ ಎಂಬ ಶಬ್ದವನ್ನು ಕೇಳುವುದೇ ಒಂದು ಸೊಗಸು. ನಳ ನಳಿಸುವ ಪ್ರಕೃತಿ ಕಣ್ಣಿಗೆ ಆನಂದ. ಮನಕ್ಕೆ ಆಹ್ಲಾದ ಎಂದು ಗಾಯಕಿರಾದ ಜಯಶ್ರೀ ತಿಳಿಸಿದರು. ಎಲ್ಲರೂ ಶ್ರದ್ದಾಭಕ್ತಿಯಿಂದ ದೇವಿಪಾರಾಯಣ, ರಾಮಾಯಣ, ಭಾಗವತ, ಸ್ತೋತ್ರ ಪಠಣ, ಸರಸ್ವತಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆ ಬನ್ನಿಮಂಟಪ ಪೂಜೆ ಹೀಗೆ ಎಲ್ಲಾ ರೀತಿಯಿಂದ ಆಚರಿಸಿ ಗೊಂಬೆಗಳನ್ನು ಇರಿಸಿ ಮಕ್ಕಳನ್ನು ಕರೆಸಿ ಹೊಸ ಉಡುಗೆಗಳನ್ನು ತೊಡಿಸಿ ಸಿಹಿ ತಿಂಡಿಗಳನ್ನು ತಿನ್ನಿಸಿ, ಮನೆಮನೆಗೆ ಕಳಿಸಿ ಜಾತ್ಯತೀತವಾಗಿ ಆಚರಿಸುವ ಹಬ್ಬ ಈ ಶರನ್ನವರಾತ್ರಿ. ಪ್ರಕೃತಿಯು ಕಾಲ ಕಾಲಕ್ಕೆ ನಮಗೆ ಸಂದೇಶ ನೀಡಿ ಕಣ್ಣಿಗೆ ಮುದ ನೀಡುವುದು. ಈಗ ವಸುಂಧರೆ ನವೋಲ್ಲಾಸದಿಂದ ಕಂಗೊಳಿಸುತ್ತಿದ್ದಾಳೆ. ಈ ಪ್ರಕೃತಿಯನ್ನು ಉಪಾಸನೆ ಮೂಲಕ ಸಂರಕ್ಷಿಸಬೇಕು ಎಂದರು. ಸೊಕ್ಕಿದರೆ ಲಕ್ಷ್ಮಿ, ದಕ್ಕಿದರೆ ಸರಸ್ವತಿ: ಮೂರು ಲೋಕಗಳಲ್ಲಿಯೂ ನೆಲೆಗೊಂಡಿರುವ ಜಗಜ್ಜನನಿಯ ಮೂರು ಸ್ವರೂಪಗಳನ್ನು ಗಣಪತಿ ಮುನಿಗಳು ಹೀಗೆ ವರ್ಣಿಸಿದ್ದಾರೆ, ಉಕ್ಕಿದರೆ ಕಾಳಿ, ನಕ್ಕಿದರೆ ಲಲಿತೆ, ಸೊಕ್ಕಿದರೆ ಲಕ್ಷ್ಮಿ, ದಕ್ಕಿದರೆ ಸರಸ್ವತಿ. ಮಳೆ ಬಂದು ಕಡಲುಕ್ಕಿ ಹರಿಯುತಿರೆ ಕಾಳಿ, ಪರಬ್ರಹ್ಮನಲ್ಲಿ ಮೂಲ ಮಾಯೆಯಾಗಿ ಭೋಗಲೀಕಗಳಲ್ಲಿ ಜಾಲುಮಾಯೆಯಾಗಿ, ಕಾಲರೂಪನಲ್ಲಿ ಆದಿತ್ಯ ಮಾಯೆಯಾಗಿ, ಸಂಸಾರಾಸಕ್ತರಲ್ಲಿ ಪಾಶ ಮಾಯೆಯಾಗಿ ತನ್ನ ಲೀಲಾವಿಲಾಸವನ್ನು ಮೆರೆಸುತ್ತಿರುವ ಈ ಪ್ರಕೃತಿ ದೇವಿಯನ್ನು ಆರಾಧಿಸುವುದು ಈ ನವರಾತ್ರಿಯ ಉದ್ದೇಶ. ಪ್ರಕೃತಿಯ ಉಪಾಸನೆ ಮಾಡಿ ಅವಳಿಗೆ ಗೌರವ ಸಲ್ಲಿಸಬೇಕು. ಈ ಮಹಾಮಾತೆಯನ್ನು ನಾವು ನಾಲ್ಕು ವಿಧಗಳಿಂದ ಅರ್ಚಿಸುತ್ತೇವೆ. ಪುಷ್ಪ ಚಂದನಗಳಿಂದ ಅರ್ಚಿಸುವಾಗ ತಾಯಿಯು ದಿವ್ಯ ರೂಪದಲ್ಲಿ ಅವಳನ್ನು ಸ್ತುತಿಸುವಾಗ ಅರ್ಥ ಸೌಂದರ್ಯಗಳಲ್ಲಿ ಹೃದಯಾಂತರಾಳದಿಂದ ಚಿಂತನೆ ಮಾಡುವಾಗ ಪ್ರಾಣ ರೂಪ ದಲ್ಲಿ, ತತ್ವ ವಿಚಾರ ಬಂದಾಗ ಸ್ವರೂಪವೂ ಅವಳೆ ಸ್ತುತಿಯೂ ಅವಳೆ ಸ್ತುತಿಯಲ್ಲಿನ ಅರ್ಥವೂ ಅವಳೆ. ಜಗವನ್ನಾಳುವ ಮಾತೆಯನ್ನು, ಸಾಧಕರು ಹತ್ತು ಸ್ವರೂಪಗಳಲ್ಲಿ ಕಂಡಿದ್ದಾರೆ. ಅದನ್ನು ದಶಮಹಾವಿದ್ಯಾ ಎಂದು ಕರೆಯಲಾಗಿದೆ ಎಂದು ಗಾಯನಗಳನ್ನು ಅರ್ಥಪೂರ್ಣವಾಗಿ ಗಾಯಕಿರಾದ ಜಯಶ್ರೀ ಮತ್ತು ಸುಜಯ ಕೊಣ್ಣೂರ್ ವಿವರಿಸಿದರು. ಭಕ್ತಿಭಾವದ ದುರ್ಗಾಮಾತೆ ಗೀತೆ ಬಾರಮ್ಮ ತಾಯೇ ನವದುರ್ಗೆ ಮೂಕಾಂಬೆ ಶರನ್ನವರಾತ್ರಿಯಲ್ಲಿ ಸಿಂಹವಾಹಿನಿ ಅಂಬೆ ಬಾರಮ್ಮ ತಾಯೇ ನವದುರ್ಗೆ ಮೂಕಾಂಬೆ ಕೆಂಪುಪೀತಾಂಬರ ಉಟ್ಟು ಮಲ್ಲಿಗೆಯ ಮುಡಿದು ಅಷ್ಟ ಭುಜ ದುರ್ಗೆ, ಅಷ್ಟಾಯುಧವ ಪಿಡಿದು ಸ್ವರ್ಣರಥದಲ್ಲಿಕುಳಿತು ದಿಗ್ವಿಜಯಗೈದೇ ಭಕ್ತವೃಂದಕೇ ನೀ ಅನುಗ್ರಹಿಸುತಿರುವೇ... ಜಗನ್ಮಾತೆಯ ಹತ್ತು ಅವತಾರಗಳ ವರ್ಣನೆ ಕಾಳಿ : ಕಾಲಸ್ವರೂಪಿಣಿ ತಾರಾ : ಪ್ರಣವ ಸ್ವರೂಪಿಣಿ ( ಶಬ್ಧ ಸಂಚಾಲಕಿ) ತ್ರಿಪುರ ಸುಂದರಿ : ಸೌಂದರ್ಯದ ಅಧಿದೇವತೆ ಭುವನೇಶ್ವರಿ : ಲೋಕಸಾಮ್ರಾಜ್ಞಿ ಭೈರವಿ : ತೇಜೋಸ್ವರೂಪಿಣಿ ಚಿನ್ನಮಸ್ತ : ಅಸುರೀ ಶಕ್ತಿಯನ್ನು ದಮನ ಮಾಡುವವಳು ಭೂಮಮತಿ : ಮನುಷ್ಯನ ಅಹಂಕಾರ ತರಯುವವಳು ಬಕುಲಾಮುಖಿ : ದೈವಶಕ್ತಿಗೆ ಮಾರಕವಾಗುವುದನ್ನು ಸ್ತಂಭನಗೊಳಿಸುವವಳು. ಮಾತಂಗಿ : ವಾಕ್‌ಶಕ್ತಿ ಪ್ರದಾಯಿನಿ ಸಂಪತ್ ಸ್ವರೂಪಿಣಿ: ಸಂಪತ್ತು ನೀಡುವವಳು
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ