ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಪ್ರಣೀತ್, ಕೇವಲ ನಾಲ್ಕು ದಿನಗಳ ಅಲ್ಪಾವಧಿ ಯಲ್ಲಿ ಮೂರು ಅಡಿ ಎತ್ತರದ ಈ ರಥವನ್ನು ನಿರ್ಮಿಸಿದ್ದಾರೆ. ಇದಕ್ಕೆ ‘ಶ್ರೀಮನ್ ಮಹಾ ಸ್ಯಂದನ ರಥ’ ಎಂದು ನಾಮಕರಣ ಮಾಡಲಾಗಿದ್ದು, ಇದು ಅಸಲಿ ಮಹಾರಥದ ಪ್ರತಿರೂಪದಂತೆಯೇ ಕಂಗೊಳಿಸುತ್ತಿದೆ.

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

-

Ashok Nayak
Ashok Nayak Mar 23, 2026 2:24 PM

ಶ್ರೀ ಮಧುಕೇಶ್ವರ ದೇವರ ಮೂರು ಅಡಿ ಎತ್ತರದ ರಥದ ಮಾದರಿ

ಬನವಾಸಿ ಪ್ರತಿಭೆ

ಬನವಾಸಿ: ಕಲೆ ಶ್ರೀಮಂತಿಕೆಯ ಸೊತ್ತಲ್ಲ, ಅದು ಅಂತರಾಳದ ಪ್ರತಿಭೆ ಎಂಬುದನ್ನು ಬನವಾಸಿಯ ಜನತಾ ಕಾಲೋನಿಯ ಯುವಕ ಪ್ರಣೀತ್ ಕುಮಾರ್ ಸಾಬೀತುಪಡಿಸಿದ್ದಾರೆ. ಐತಿಹಾಸಿಕ ಬನವಾಸಿಯ ಸುಪ್ರಸಿದ್ಧ ಶ್ರೀ ಉಮಾ ಮಧುಕೇಶ್ವರ ದೇವಸ್ಥಾನದ ಮಹಾರಥ ವನ್ನು ಹೋಲುವ ಅತ್ಯಂತ ಸುಂದರ ಹಾಗೂ ನಿಖರವಾದ ರಥದ ಮಾದರಿಯನ್ನು ಸಿದ್ಧ ಪಡಿಸುವ ಮೂಲಕ ಈ ಯುವಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಪ್ರಣೀತ್, ಕೇವಲ ನಾಲ್ಕು ದಿನಗಳ ಅಲ್ಪಾವಧಿ ಯಲ್ಲಿ ಮೂರು ಅಡಿ ಎತ್ತರದ ಈ ರಥವನ್ನು ನಿರ್ಮಿಸಿದ್ದಾರೆ. ಇದಕ್ಕೆ ‘ಶ್ರೀಮನ್ ಮಹಾ ಸ್ಯಂದನ ರಥ’ ಎಂದು ನಾಮಕರಣ ಮಾಡಲಾಗಿದ್ದು, ಇದು ಅಸಲಿ ಮಹಾರಥದ ಪ್ರತಿರೂಪದಂತೆಯೇ ಕಂಗೊಳಿಸುತ್ತಿದೆ.

ratha

ರಥದ ಮೇಲ್ಭಾಗದ ಕಳಸ, ಕೇಸರಿ ಮತ್ತು ನೀಲಿ ಬಣ್ಣದ ಪತಾಕೆಗಳು, ರಥಗಡ್ಡೆಯ ಸುತ್ತಲಿರುವ ದೇವರ ಚಿತ್ರಗಳ ಬ್ಯಾನರ್ ಹಾಗೂ ಒಳಭಾಗದಲ್ಲಿರುವ ದೇವರ ಪೀಠ? ಹೀಗೆ ಪ್ರತಿಯೊಂದು ಸೂಕ್ಷ್ಮ ಕೆತ್ತನೆಗಳೂ ನೈಜ ರಥವನ್ನು ನೆನಪಿಸುತ್ತವೆ. ರಥದ ಜತೆಗೆ ಶ್ರೀ ಮಧುಕೇಶ್ವರ ದೇವಸ್ಥಾನದ ಮಾದರಿಯನ್ನೂ ಇವರು ಕಲಾತ್ಮಕವಾಗಿ ರಚಿಸಿದ್ದಾರೆ.

ಇದನ್ನೂ ಓದಿ: Ratha Saptami: ಎಂ ಎಸ್‌ ಉಮೇಶ್‌ ನಟಿಸಿದ್ದ ಕೊನೇ ಸೀರಿಯಲ್‌ ಡಿ.8ರಿಂದ ಆರಂಭ; ಯಾರೆಲ್ಲಾ ಅಭಿನಯಿಸಿದ್ದಾರೆ? ಎಲ್ಲಿ ಪ್ರಸಾರ?

ಬಡತನದ ನಡುವೆಯೂ ಅರಳಿದ ಪ್ರತಿಭೆ: ಪ್ರಣೀತ್ ಕುಮಾರ್ ಅವರು ಬನವಾಸಿ ದೇವಸ್ಥಾನ ಸಮಿತಿ ನಿಕಟಪೂರ್ವ ಸದಸ್ಯ ನಾಗರಾಜ್ ವಾಲ್ಮೀಕಿ ಮತ್ತು ಅನಸೂಯಾ ದಂಪತಿಗಳ ದ್ವಿತೀಯ ಪುತ್ರ. ತೀವ್ರ ಬಡತನದ ನಡುವೆಯೂ ಕಲೆಯ ಮೇಲಿನ ಆಸಕ್ತಿ ಯಿಂದ ಈ ಸಾಧನೆ ಮಾಡಿದ್ದಾರೆ. ದೊಡ್ಡ ಕಲಾವಿದನಾಗುವ ಹಂಬಲದ ಜತೆಗೆ, ಉತ್ತಮ ನೌಕರಿ ಪಡೆದು ಕಷ್ಟದಲ್ಲಿರುವ ತಂದೆ-ತಾಯಿಯನ್ನು ಸುಖವಾಗಿ ನೋಡಿಕೊಳ್ಳಬೇಕು ಎಂಬುದು ಈ ಯುವಕನ ಉದಾತ್ತ ಆಶಯವಾಗಿದೆ. ಕಳೆದ ವರ್ಷವೂ ಇಂತಹ ಪ್ರಯತ್ನ ಮಾಡಿದ್ದ ಪ್ರಣೀತ್, ಈ ಬಾರಿ ಹೆಚ್ಚು ಪರಿಷ್ಕೃತ ಮತ್ತು ಅದ್ಭುತವಾದ ಮಾದರಿಯನ್ನು ರೂಪಿಸಿದ್ದಾರೆ.

ದೇವಸ್ಥಾನಕ್ಕೆ ಸಮರ್ಪಣೆ: ತಮ್ಮ ಶ್ರಮ ಮತ್ತು ಭಕ್ತಿಯ ಸಂಕೇತವಾಗಿ ಸಿದ್ಧಪಡಿಸಿರುವ ಈ ರಥದ ಮಾದರಿಯನ್ನು ಮಾರ್ಚ್ 30ರಂದು ನಡೆಯಲಿರುವ ಐತಿಹಾಸಿಕ ಬನವಾಸಿ ಜಾತ್ರೆಯ ದಿನ ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲು ಪ್ರಣೀತ್ ನಿರ್ಧರಿಸಿದ್ದಾರೆ.

ಅಪ್ರತಿಮ ಪ್ರತಿಭೆಯುಳ್ಳ ಈ ಗ್ರಾಮೀಣ ಯುವಕನಿಗೆ ಸೂಕ್ತ ಪ್ರೋತ್ಸಾಹ ಮತ್ತು ಆಶೀರ್ವಾದ ದೊರೆತಲ್ಲಿ ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯರು ಆಶಿಸಿದ್ದಾರೆ.