Muniraju M Arikere Column: ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ
ಈಶಾ ಆದಿಯೋಗಿ ಧ್ಯಾನಕೇಂದ್ರ ಪ್ರಾರಂಭವಾದ ಬಳಿಕ ಚಿಕ್ಕಬಳ್ಳಾಪುರ ಪ್ರವಾಸಿ ತಾಣವಾಗಿ ಬದಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಹೋಟೆಲ್ ಉದ್ಯಮ ಚೇತರಿಸಿ ಕೊಂಡಿದೆ. ಸಾರಿಗೆ ಸಂಚಾರದ ಆದಾಯವೂ ದುಪ್ಪಟ್ಪಾಗಿದೆ. ರಸ್ತೆ ಸಂಪರ್ಕ ಸುಧಾರಿಸಿದೆ. ಸ್ಥಳೀಯ ಸಂಸ್ಥೆಗಳ ಹೊಣೆ ಹೆಚ್ಚಿದೆ. ಭೂಮಿಯ ಬೆಲೆ ಗನನಕ್ಕೇರಿದೆ! ಹೀಗೆ ಆದಿಯೋಗಿಯ ದಿವ್ಯದರ್ಶನ, ಧ್ಯಾನ, ಭಕ್ತಿ, ಮುಕ್ತಿಗೆ ಮಾತ್ರ ಸೀಮಿತವಾಗದೆ ಸ್ಥಳೀಯರ ಬದುಕಿಗೆ ಅದು ಶಕ್ತಿಯನ್ನು ಧಾರೆಯೆರೆದಿದ್ದಾರೆ.


ಈಶಾ ಆದಿಯೋಗಿ ಧ್ಯಾನಕೇಂದ್ರ ಪ್ರಾರಂಭವಾದ ಬಳಿಕ ಚಿಕ್ಕಬಳ್ಳಾಪುರ ಪ್ರವಾಸಿ ತಾಣವಾಗಿ ಬದಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಹೋಟೆಲ್ ಉದ್ಯಮ ಚೇತರಿಸಿ ಕೊಂಡಿದೆ. ಸಾರಿಗೆ ಸಂಚಾರದ ಆದಾಯವೂ ದುಪ್ಪಟ್ಪಾಗಿದೆ. ರಸ್ತೆ ಸಂಪರ್ಕ ಸುಧಾರಿಸಿದೆ. ಸ್ಥಳೀಯ ಸಂಸ್ಥೆಗಳ ಹೊಣೆ ಹೆಚ್ಚಿದೆ. ಭೂಮಿಯ ಬೆಲೆ ಗನನಕ್ಕೇರಿದೆ! ಹೀಗೆ ಆದಿಯೋಗಿಯ ದಿವ್ಯದರ್ಶನ, ಧ್ಯಾನ, ಭಕ್ತಿ, ಮುಕ್ತಿಗೆ ಮಾತ್ರ ಸೀಮಿತವಾಗದೆ ಸ್ಥಳೀಯರ ಬದುಕಿಗೆ ಅದು ಶಕ್ತಿಯನ್ನು ಧಾರೆಯೆರೆದಿದ್ದಾರೆ.
ಈಶಾ ಧ್ಯಾನ ಕೇಂದ್ರಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ
ಸ್ಥಳೀಯರಿಗೆ ಉದ್ಯೋಗಾವ ಕಾಶ, ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ
ತಾಲೂಕಿನ ಆವಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಕೌರನಹಳ್ಳಿ-ಲಿಂಗಶೆಟ್ಟಿಪುರ ಮಾರ್ಗದಲ್ಲಿರುವ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಈಶಾ ಧ್ಯಾನ ಕೇಂದ್ರದಿಂದ ಬೃಹತ್ ಆದಿಯೋಗಿ ಪ್ರತಿಮೆ ಸ್ಥಾಪನೆಗೊಳ್ಳುತ್ತಿದ್ದಂತೆ ಜಿಲ್ಲೆಗೆ ಭೇಟಿ ನೀಡುವ ರಾಜ್ಯದ, ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೋಟೆಲ್ ಉದ್ಯಮಗಳು ಬೆಳೆದಿವೆ, ಸಾರಿಗೆ ಸಂಚಾರದ ಆದಾಯ ದುಪ್ಪಟ್ಟಾಗಿದೆ. ಆ ಬೆನ್ನಲ್ಲೇ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ರಿಯಲ್ ಎಸ್ಟೇಟ್ ಉದ್ಯಮ ಏರುಗತಿಯಲ್ಲಿದೆ.
ಇದನ್ನೂ ಓದಿ: Lokesh Kaayarga Column: ಮತ್ತದೇ ಬೊಫೋರ್ಸ್ ಫಿರಂಗಿ ಸದ್ದು !
ಭೂಮಿ ಮೇಲೆ ಹಣಹೂಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಸದ್ಗುರು ಜಗ್ಗಿ ವಾಸುದೇವ್ ಅವರ ಪರಿಕಲ್ಪನೆಯಲ್ಲಿ, 112 ಅಡಿ ಎತ್ತರ, 147 ಅಡಿ ಉದ್ದ, 82 ಅಡಿ ಅಗಲದ ಬೃಹತ್ ಶಿಲಾಲೋಹದ ಶಿವನ ಪ್ರತಿಮೆ ಮತ್ತು ನಾಗಮಂಟಪವುಳ್ಳ ಧ್ಯಾನಕೇಂದ್ರವನ್ನು ಅಂದು ಸಚಿವರಾ ಗಿದ್ದ ಡಾ.ಕೆ. ಸುಧಾಕರ್ ಅಪೇಕ್ಷೆ ಮೇರೆಗೆ, 2022ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿದ್ದರು.
ಅಂದಿನಿಂದ ಇಂದಿನವರೆಗೆ ಹತ್ತು ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿರುವ ಈಶಾ ಸನ್ನಿಧಿಯು ಕೇವಲ ಭಕ್ತಿ, ಪೂಜೆ, ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ವಿಶ್ವವಿಖ್ಯಾತ ಎಂಜಿ ನಿಯರ್ ವಿಶ್ವೇಶ್ವರಯ್ಯ ಅವರ ನಂತರ ಚಿಕ್ಕಬಳ್ಳಾಪುರ ಎಂಬ ಬಯಲುಸೀಮೆಗೆ, ಪಂಚಗಿರಿಗಳ ನಾಡಿಗೆ ಪ್ರವಾಸಿ ಕ್ಷೇತ್ರವಾಗಿ ಜಾಗತಿಕ ಮನ್ನಣೆ ತಂದುಕೊಟ್ಟ ಕೀರ್ತಿಗೆ ಅದು ಪಾತ್ರವಾಗಿದೆ.
ಬೆಟ್ಟಸಾಲುಗಳ ರಮ್ಯ ತಾಣದಲ್ಲಿರುವ ಆದಿಯೋಗಿ ಶಿವನ ಪ್ರತಿಮೆ ಜತೆಗೆ ನಂದಿಮೂರ್ತಿ, ಮಹಾ ಶೂಲದ ಜತೆಗೆ ಶಕ್ತಿಶಾಲಿ ನಾಗಮಂಟಪದ ದರ್ಶನ ಮಾಡಬಹುದಾಗಿದೆ. ನಿತ್ಯ ಸಂಜೆ ವೇಳೆ ಇಲ್ಲಿ ನಡೆಯುವ ಲೇಸರ್ ಶೋನ ಕೌತುಕ ನೋಡಗರನ್ನು ಒಮ್ಮಿಂದೊಮ್ಮೆಲೇ ಲೌಕಿಕದಿಂದ ಅಲೌಕಿಕದ ಕಡೆ ಕರೆದೊಯ್ಯುತ್ತದೆ.
ಪ್ರತಿವರ್ಷ ಮಕರ ಸಂಕ್ರಾಂತಿ ದಿನ ಆದಿಯೋಗಿ ಸನ್ನಿಧಿಯಲ್ಲಿ ನಡೆಯುವ ಆದಿಯೋಗಿಯ ದಿವ್ಯ ದರ್ಶನ, ಸುಗ್ಗಿ ಹಬ್ಬದ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಲಕ್ಷಾಂತರ ಮಂದಿ ಕಾತರದಿಂದ ಕಾಯತ್ತಾರೆ. ಸಂಜೆ 6 ರಿಂದ ರಾತ್ರಿ 8 ರತನಕ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಸದ್ಗುರು ಜಗ್ಗಿ ವಾಸುದೇವ್ ಉಪಸ್ಥಿತರಿರುವುದು ವಿಶೇಷ. ಇವರನ್ನು ಕಾಣಲು ಮಂತ್ರಿಗಳು, ಸಿನಿತಾರೆಯರು, ನ್ಯಾಯಾಧೀಶರು ಸೇರಿ ಅತಿ ಗಣ್ಯರು ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ಈಶಾ ರೈತ ಕೇಂದ್ರ: ಈಶಾ ಫೌಂಡೇಷನ್‌ನಿಂದಲೇ ಚಿಕ್ಕಬಳ್ಳಾಪುರವೂ ಸೇರಿದಂತೆ ದೇಶದ ನಾನಾ ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ಆ ಮೂಲಕ ರೈತರಿಗೆ ಮಾಹಿತಿ, ಕೃಷಿ ಸಂಬಂಧಿ ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದ್ದು, ಸುಮಾರು ಹತ್ತು ಸಾವಿರ ರೈತರಿಗೆ ಮಾರ್ಗದರ್ಶನ ನೀಡುತ್ತಿರುವುದು ಸದ್ಗುರುಗಳ ಜನಮುಖಿ ಆಶಯಕ್ಕೆ ಸಾಕ್ಷಿ.
ಗ್ರಾಮೋತ್ಸವದ ವಿಶೇಷ: ಸದ್ಗುರುಗಳು ಚಿಕ್ಕಬಳ್ಳಾಪುರ ಈಶಾ ಕೇಂದ್ರವೂ ಸೇರಿ ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಗ್ರಾಮೋತ್ಸವ ನಡೆಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ಮದ್ಯವ್ಯಸನಿಗಳಾಗು ತ್ತಿದ್ದಾರೆ. ಬೆಳಗಿನಿಂದ ಕೃಷಿ ಕಾಯಕ ಮಾಡಿ ಸಂಜೆ ವೇಳೆಗೆ ಮದ್ಯ ಸೇವನೆ ಮಾಡಿ ಮಲಗಿ ಕೊಳ್ಳು ತ್ತಿದ್ದಾರೆ. ಇದನ್ನು ತಪ್ಪಿಸಿ ಅವರ ಜೀವನದಲ್ಲಿ ಉತ್ಸಾಹ, ಚೈತನ್ಯ ತುಂಬಲು ಗ್ರಾಮೋ ತ್ಸವದ ಹೆಸರಿನಲ್ಲಿ ಕ್ರೀಡಾಕೂಟ ನಡೆಸಿ ವ್ಯಸನದಿಂದ ದೂರವಾಗುವಂತೆ ಮಾಡುತ್ತಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು, ಪ್ರಗತಿಪರ ರೈತರನ್ನು ಸನ್ಮಾನಿಸುವ ಕೆಲಸವೂ ಸಾಗಿದೆ.
ಶಿವರಾತ್ರಿ ಜಾಗರಣೆ: ಈಶಾ ಕೇಂದ್ರ ಪ್ರತಿವರ್ಷ ಮಹಾಶಿವರಾತ್ರಿ ಜಾಗರಣೆಗೆ ವಿಶೇಷ ಒತ್ತು ನೀಡಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆದಿಯೋಗಿ ಕೇಂದ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಚಿಕ್ಕಬಳ್ಳಾಪುರದ ಆದಿಯೋಗಿ ಸನ್ನಿಧಿಯಲ್ಲಿ ಬೃಹತ್ ಪರದೆಗಳ ಮೂಲಕ ಪ್ರದರ್ಶನ ಮಾಡಿಸುತ್ತಾರೆ. ಸದ್ಗುರುಗಳು ಅಲ್ಲಿ ನಡೆಸಿಕೊಡುವ ಧಾರ್ಮಿಕ ಆಚರಣೆ ಗಳಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಆ ದಿನ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.
ಪ್ರತಿರೋಧ ಸ್ಥಗಿತ: ಈಶಾ ಕೇಂದ್ರವು ಇಲ್ಲಿ ಪ್ರಾರಂಭವಾಗುವಾಗ ಸ್ಥಳೀಯರಿಂದ ಎದುರಾದ ಪ್ರತಿರೋಧ ಈಗ ಇಲ್ಲ. ಇಲ್ಲಿನ ಜನರು ಧ್ಯಾನ ಕೇಂದ್ರದ ಸಮಾಜಮುಖಿ ಕಾರ್ಯಕ್ರಮಗಳನ್ನು ಕಣ್ಣಾರೆ ಕಾಣುತ್ತಾ ತಮ್ಮೊಳಗಿದ್ದ ಮುನಿಸನ್ನು ಮಂಜಿನಂತೆ ಕರಗಿಸಿ ಬಿಟ್ಟಿದ್ದಾರೆ.
ಹೋಟೆಲ್ ಉದಮ ಚೇತರಿಕೆ
ಈಶಾ ಪ್ರಾರಂಭವಾದ ನಂತರದಲ್ಲಿ ಚಿಕ್ಕಬಳ್ಳಾಪುರ ನಗರದಂಚಿನ ರಾಷ್ಟ್ರೀಯ ಹೆದ್ದಾರಿ ಯುದ್ದ ಕ್ಕೂ ಹೋಟೆಲ್ ಉದ್ಯಮ ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತಿದೆ. ನಗರದ ಎಲ್ಲ ಹೋಟೆಲ್‌ಗಳಲ್ಲಿ ವಾರಾಂತ್ಯದಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಇದು ಸಾವಿರಾರು ಮಂದಿಯ ಬದುಕಿಗೆ ಆಸರೆ ಯಾಗಿದೆ.
ಸಾರಿಗೆ ನಿಗಮಕ್ಕೆ ಲಾಭ
ಚಿಕ್ಕಬಳ್ಳಾಪುರದಲ್ಲಿ ಈಶಾ ಧ್ಯಾನಕೇಂದ್ರ ತಲೆಯೆತ್ತಿದ ಮೇಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್‌ಗಳ ಓಡಾಟವೂ ನಿರಂತರವಾಗಿದೆ. ಬಿಎಂ ಟಿಸಿ ಬೆಂಗಳೂರು ಘಟಕ ವಾರಾಂತ್ಯದ ಟ್ರಿಪ್‌ಗಳನ್ನು ಆಯೋಜಿಸಿದೆ.