ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026-27: ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡಿದೆ.

ಪ್ರೊ.ಜವಹರ್‌ ದೊರೆಸ್ವಾಮಿ,

ಕುಲಪತಿ, ಪಿಇಎಸ್‌ ವಿಶ್ವವಿದ್ಯಾಲಯ

ಪಿಇಎಸ್ ಸಂಸ್ಥಾಪಕರು, ನನ್ನ ತಂದೆ ದಿ.ಎಂ.ಆರ್.ದೊರೆಸ್ವಾಮಿ ಅವರು ಶಿಕ್ಷಣ ಕೇವಲ ‘ಪಠ್ಯ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ’ ಎಂದು ಹೇಳುತ್ತಿದ್ದರು. ಈ ಮಾತು 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಅವರ ಮಾತಿನಂತೆ ಈ ಬಾರಿಯ ಬಜೆಟ್ ‘ಶಿಕ್ಷಣ-ಉದ್ಯೋಗ-ಉದ್ಯಮ’ವನ್ನು ಒಗ್ಗೂಡಿಸುವ ನಿಟ್ಟಿನಲ್ಲಿದೆ.

ಬಜೆಟ್‌ನಲ್ಲಿ ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮದೊಂದಿಗೆ ಜೋಡಿಸುವ ಸ್ಪಷ್ಟ ದೃಷ್ಟಿ ಕೋನವು ಅತ್ಯಂತ ಮಹತ್ವದ ಮತ್ತು ಭವಿಷ್ಯ ಮುಖಿ ಹೆಜ್ಜೆಯಾಗಿದೆ. ಈ ಆಶಯವು 1972ರಲ್ಲಿ ಸ್ಥಾಪನೆಯಾದ ಪಿಇಎಸ್ ಸಂಸ್ಥೆಯ ಮೂಲ ತತ್ವಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆ ಯಾಗುತ್ತದೆ.

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿ ಕೊಂಡಿದೆ.

ಇದನ್ನೂ ಓದಿ: Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಮೊದಲ ಮೂರು ದಶಕಗಳಲ್ಲಿ ಪಠ್ಯಕ್ರಮ ವಿನ್ಯಾಸ, ಬೋಧನಾ ವಿಧಾನ, ಅಧ್ಯಯನ ಪ್ರಕ್ರಿಯೆಗಳು ಮತ್ತು ಮೌಲ್ಯಮಾಪನ ವ್ಯವಸ್ಥೆಗಳನ್ನು ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಾಣಿಕೆ ಗೊಳಿಸುವುದರ ಮೇಲೆ ಪ್ರಧಾನವಾಗಿ ಗಮನಹರಿಸಿತು. ಇದೀಗ ನಮ್ಮ ಆಲೋಚನೆಗೆ ತಕ್ಕಂತೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಕಾರ್ಯಯೋಜನೆ ರೂಪಿಸಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ.

‘ಶಿಕ್ಷಣ-ಉದ್ಯೋಗ-ಉದ್ಯಮ’ ತತ್ವಗಳು ರಾಷ್ಟ್ರೀಯ ನೀತಿಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿರು ವುದು ಸಂತಸದ ಸಂಗತಿಯಾಗಿದೆ. ಪಿಇಎಸ್ ಸಂಸ್ಥೆ ತನ್ನ ಆರಂಭದಿಂದಲೂ ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮ ದೊಂದಿಗೆ ಸಂಯೋಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಮುಂದಿನ ಒಂದು ದಶಕದಲ್ಲಿ, ಪಿಇಎಸ್ ತನ್ನ ಗಮನವನ್ನು ಉದ್ಯಮಶೀಲತೆಯನ್ನು ಉತ್ತೇಜಿಸುವ ದಿಕ್ಕಿನಲ್ಲಿ ವಿಸ್ತರಿಸಿತು.

ಇದರ ಭಾಗವಾಗಿ ನವೋದ್ಯಮ ಮತ್ತು ಉದ್ಯಮಶೀಲತೆ ಕೇಂದ್ರ ಮತ್ತು ಪಿಇಎಸ್ ವೆಂಚರ್ ಲ್ಯಾಬ್‌ ಗಳನ್ನು ಸ್ಥಾಪಿಸಲಾಯಿತು. ಇವು ವಿದ್ಯಾರ್ಥಿ ಗಳಿಗೆ ತಮ್ಮ ಆಲೋಚನೆಗಳನ್ನು ಯಶಸ್ವಿ ಉದ್ಯಮ ಗಳಾಗಿ ರೂಪಿಸುವ ವೇದಿಕೆಯನ್ನು ಒದಗಿಸಿವೆ.

ಇದನ್ನೂ ಓದಿ:Union Budget 2026: ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಉತ್ತೇಜನ; ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌, 3 ಹೊಸ ಆಯುರ್ವೇದ ಏಮ್ಸ್‌ ಸ್ಥಾಪನೆ

2026-27ರ ಬಜೆಟ್‌ನ ಪ್ರಮುಖ ಅಂಶವೆಂದರೆ ಕೇವಲ ಅನುದಾನ ಹಂಚಿಕೆಗೆ ಸೀಮಿತವಾಗದೆ. ಫಲಿತಾಂಶ ಆಧಾರಿತ ವ್ಯವಸ್ಥೆಯತ್ತ ನಡೆದಿರುವ ಬದಲಾವಣೆ. ಶಿಕ್ಷಣವನ್ನು ನೇರವಾಗಿ ಉದ್ಯೋಗ ಮತ್ತು ಉದ್ಯಮ ಸೃಷ್ಟಿಯೊಂದಿಗೆ ಸಂಪರ್ಕಿಸುವ ಈ ಕ್ರಮವು ಭವಿಷ್ಯಸಿದ್ಧ, ಪ್ರಾಯೋಗಿಕ ಮತ್ತು ಬೆಳವಣಿಗೆ ಮುಖಿ ಶಿಕ್ಷಣ ವ್ಯವಸ್ಥೆಯತ್ತ ಸಾಗುವ ಸಂಕೇತವಾಗಿದೆ.

ಈ ಬಜೆಟ್, ಶಿಕ್ಷಣವನ್ನು ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಸ್ತಂಭ ವೆಂದು ಪುನರುಚ್ಚರಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಸಮಾವೇಶ ಮತ್ತು ಭವಿಷ್ಯಮುಖಿ ಕೌಶಲ್ಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪಿಇಎಸ್ ಸಂಸ್ಥೆ ಕಳೆದ ಐದು ದಶಕಗಳಿಂದಲೇ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಹೆಮ್ಮೆಯಿಂದ ಉಲ್ಲೇಖಿಸಬಹುದು.

ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮದೊಂದಿಗೆ ಅರ್ಥಪೂರ್ಣವಾಗಿ ಜೋಡಿಸಿದಾಗ ಅದು ರಾಷ್ಟ್ರದ ಪ್ರಗತಿಗೆ ಅತ್ಯಂತ ಶಕ್ತಿಶಾಲಿ ಚಾಲಕ ಶಕ್ತಿಯಾಗುತ್ತದೆ ಎಂಬ ನಂಬಿಕೆಯನ್ನು ಕೇಂದ್ರ ಬಜೆಟ್ 2026-27 ಮತ್ತಷ್ಟು ದೃಢಪಡಿಸಿದೆ.