Siddaramaiah Record: ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಂಡ ಮಾಸ್ ಲೀಡರ್
ಕರ್ನಾಟಕ ಮಾತ್ರವೇ ಅಲ್ಲ, ಭಾರತದ ಇತಿಹಾಸದಲ್ಲಿಯೇ 16 ಬಜೆಟ್ ಮೂಲಕ ರಾಜ್ಯ ವೊಂದರ ಬಜೆಟ್‌ನ್ನು ಅತ್ಯಧಿಕ ಸಲ ಮಂಡಿಸಿದ ಹಿರಿಮೆಯನ್ನು ಸಿದ್ದರಾಮಯ್ಯ ಹೊಂದಿ ದ್ದಾರೆ ಎಂಬುದು ಹೆಗ್ಗಳಿಕೆ. ಸಿದ್ದರಾಮಯ್ಯ ಅವರೊಳಗಿನ ಆರ್ಥಿಕ ಚಿಂತನೆಯ ಫಲವಾಗಿಯೇ ಇಷ್ಟೊಂದು ಸಲ ಮುಂಗಡ ಪತ್ರ ಮಂಡಿಸಲು ಸಾಧ್ಯವಾಯಿತು.
-
ಎಂ.ಸಿ.ನಾಣಯ್ಯ ಹಿರಿಯ ರಾಜಕಾರಣಿ,
ಮಾಜಿ ಕಾನೂನು ಸಚಿವರು
ಕರ್ನಾಟಕ ಮಾತ್ರವೇ ಅಲ್ಲ, ಭಾರತದ ಇತಿಹಾಸದಲ್ಲಿಯೇ 16 ಬಜೆಟ್ ಮೂಲಕ ರಾಜ್ಯವೊಂದರ ಬಜೆಟ್‌ನ್ನು ಅತ್ಯಧಿಕ ಸಲ ಮಂಡಿಸಿದ ಹಿರಿಮೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಎಂಬುದು ಹೆಗ್ಗಳಿಕೆ. ಯಾವ ರಾಜ್ಯದಲ್ಲಿಯೂ ಹಣಕಾಸು ಸಚಿವರೊಬ್ಬರು 16 ಬಾರಿ ಬಜೆಟ್ ಮಂಡಿಸಿದ ದಾಖಲೆ ಇಲ್ಲ. ಇದು ಸಿದ್ದರಾಮಯ್ಯ ಗೆ ರಾಜ್ಯದ ಆರ್ಥಿಕ ಪ್ರಗತಿ ಬಗ್ಗೆ ಇರುವ ದೂರದೃಷ್ಟಿ ತೋರಿಸು ತ್ತದೆ.
ಕರ್ನಾಟಕ ರಾಜ್ಯ ಕಂಡ ಧೀಮಂತ ರಾಜಕಾರಣಿಗಳಲ್ಲಿ ದೇವರಾಜ ಅರಸು ಮತ್ತು ಸಿದ್ದರಾ ಮಯ್ಯ ಮುಂಚೂಣಿಯಲ್ಲಿರುತ್ತಾರೆ. ಈ ಬಗ್ಗೆ ಯಾರಲ್ಲೂ ಸಂಶಯವಿಲ್ಲ. ಸಿದ್ದರಾಮಯ್ಯ ಕ್ರಾಂತಿಕಾರಿ ರಾಜಕಾರಣಿಯಷ್ಟೇ ಅಲ್ಲ, ಕರ್ನಾಟಕ ರಾಜಕಾರಣದ ಮಾಸ್ ಲೀಡರ್ ಎಂಬುದೂ ಸ್ಪಷ್ಟ. 1983ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದ ಸಿದ್ದರಾಮಯ್ಯ, 1978ರಿಂದ ರಾಜಕೀಯದಲ್ಲಿದ್ದ ನನಗೆ ಆತ್ಮೀಯರಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಸಿದ್ದರಾಮಯ್ಯ ಅವರ ನೇರ ನಡೆ, ನುಡಿ ನನಗೆ ಅತ್ಯಂತ ಇಷ್ಟವಾದದ್ದು ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಬಂಧ ಹೊಂದಲು ಪ್ರಮುಖ ಕಾರಣವಾಯಿತು.
ಕನ್ನಡ ಕಾವಲು ಸಮಿತಿಯ ರಾಜ್ಯಾಧ್ಯಕ್ಷರಾಗಿ ಹೋರಾಟದ ಕಣಕ್ಕಿಳಿದ ಸಿದ್ದರಾಮಯ್ಯ, ಅಂದಿನಿಂದಲೇ ಜನನಾಯಕನ ಗುಣ ಲಕ್ಷಣಗಳನ್ನು ಹೊಂದಿದ್ದರು.
1983ರಲ್ಲಿ ವಿಧಾನಪರಿಷತ್‌ಗೆ ನಾನು ನಾಮಕರಣಗೊಂಡಾಗ ಸಿದ್ದರಾಮಯ್ಯ ಅತ್ಯಂತ ಸಂತೋಷಪಟ್ಟಿದ್ದರು. ಮುಂದಿನ ದಿನಗಳಲ್ಲಿಯೂ ನನ್ನ ಬಗ್ಗೆ ಅತೀವ ವಿಶ್ವಾಸ, ಪ್ರೀತಿ ಯನ್ನು ಇರಿಸಿಕೊಂಡು ನನ್ನ ರಾಜಕೀಯ ಸಾಧನೆಗಳನ್ನು ಶ್ಲಾಘಿಸುತ್ತಾ ಬಂದ ಹೃದಯ ವಂತರು.
ಇದನ್ನೂ ಓದಿ: Siddaramaiah Record: ಟೀಕೆಗಳನ್ನು ಮೀರಿ ಗೆದ್ದ ಪಂಚ ಗ್ಯಾರಂಟಿ
ಕರ್ನಾಟಕ ಮಾತ್ರವೇ ಅಲ್ಲ, ಭಾರತದ ಇತಿಹಾಸದಲ್ಲಿಯೇ 16 ಬಜೆಟ್ ಮೂಲಕ ರಾಜ್ಯ ವೊಂದರ ಬಜೆಟ್‌ನ್ನು ಅತ್ಯಧಿಕ ಸಲ ಮಂಡಿಸಿದ ಹಿರಿಮೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಎಂಬುದು ಹೆಗ್ಗಳಿಕೆ. ಸಿದ್ದರಾಮಯ್ಯ ಅವರೊಳಗಿನ ಆರ್ಥಿಕ ಚಿಂತನೆಯ ಫಲವಾಗಿಯೇ ಇಷ್ಟೊಂದು ಸಲ ಮುಂಗಡ ಪತ್ರ ಮಂಡಿಸಲು ಸಾಧ್ಯವಾಯಿತು. ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಹಣಕಾಸು ಸಚಿವರೊಬ್ಬರು 16 ಬಾರಿ ಬಜೆಟ್ ಮಂಡಿಸಿದ ದಾಖಲೆ ಇರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ನಾಡಿನ ಆರ್ಥಿಕ ಪ್ರಗತಿಯ ದೂರದಷ್ಟಿ ಇದೆ, ಅಭ್ಯುದಯದ ಚಿಂತನೆ ಸ್ಪಷ್ಟವಾಗಿದೆ.
ಗುರಿ ಮುಟ್ಟಿಸುವ ಛಲದಂಕಮಲ್ಲ
ಸಿದ್ದರಾಮಯ್ಯ ಬಹಳ ಕಟ್ಟುನಿಟ್ಟಿನ ಮನುಷ್ಯ. ತಾನು ಏನು ಅಂದುಕೊಂಡಿದ್ದನ್ನು ಗುರಿ ಮುಟ್ಟಿಸುವ ಛಲದಂಕಮಲ್ಲ. ಅಧಿಕಾರ ಹೋದಾಗಲೂ ಮೂಲೆಗೆ ಸರಿಯದೆ ಜನಪರ ಚಿಂತನೆಯೊಂದಿಗೆ ಅಧಿಕಾರಕ್ಕೆ ತರಲು ಬೇಕಾದ ತಂತ್ರಗಾರಿಕೆ ಎಣೆದು ಮತ್ತೆ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದರು. ದೇವೇಗೌಡರ ಅಧಿಕಾರಾವಧಿಯಲ್ಲಿಯೇ ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಶ್ರೇಯೋಭಿವೃದ್ಧಿಗೆ ದೇಶದಲ್ಲಿಯೇ ವಿನೂತನವಾದ ಅಹಿಂದ ಎಂಬ ಸಂಘಟನೆಯನ್ನು ರಾಜಕೀಯವನ್ನೂ ಮೀರಿ ಸಾಮಾಜಿಕ ತತ್ವದಡಿಯಲ್ಲಿ ಹುಟ್ಟು ಹಾಕಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಶೋಷಿತ ಸಮುದಾಯದ ಜನತೆಯಲ್ಲಿ ವಿಶ್ವಾಸ ಮೂಡಿಸಿದ ಕೀರ್ತಿಯೂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.
ಕರ್ನಾಟಕದಲ್ಲಿ ಬೇರೆಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರು ಮಾಡಿರುವ ಜನಪರ ಯೋಜನೆಗಳನ್ನು ಬೇರೆ ಯಾವ ರಾಜ್ಯದ ಮುಖ್ಯಮಂತ್ರಿಗಳೂ ಮಾಡಲಿಲ್ಲ.
ಪಾರದರ್ಶಕ ಆಡಳಿತ ಮಾತ್ರವಲ್ಲ, ಅಧಿಕಾರದಲ್ಲಿದ್ದಾಗಲೇ ಕೈ, ಬಾಯಿ ಶುದ್ಧವಾಗಿರಿಸಿ ಕೊಂಡು ಯಾವುದೇ ವಿವಾದಗಳಿಗೆ ಆಸ್ಪದ ಕೊಡದೇ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ದವರು ಸಿದ್ದರಾಮಯ್ಯ ಎಂಬುದರಲ್ಲಿ ಸಂಶಯ ಬೇಡ. ಡಿ.ದೇವರಾಜ ಅರಸು ಹೇಗೆ ಹಿಂದುಳಿದ ವರ್ಗದ ಹರಿಕಾರ, ಕ್ರಾಂತಿಕಾರಿ ರಾಜಕಾರಣಿ ಎನಿಸಿಕೊಂಡರೋ, ಅದೇ ರೀತಿ ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗದ ಜನತೆಯ ಪಾಲಿಗೆ ಆಶಾಕಿರಣವಾಗಿ ಕಂಗೊಳಿಸಿದ್ದಾರೆ. ಕ್ರಾಂತಿಕಾರಿಯಾಗಿ ಕಾರ್ಯಯೋಜನೆಗಳನ್ನು ಜಾರಿಗೆ ತಂದು ಜನಹಿತ ಮೆರೆದಿದ್ದಾರೆ.
ಹೀಗಿದ್ದರೂ ಡಿ.ದೇವರಾಜ ಅರಸು ಕಾಲದ ಆಡಳಿತ ಮತ್ತು ಸಿದ್ದರಾಮಯ್ಯ ಕಾಲದ ಆಡಳಿತವನ್ನು ಹೋಲಿಕೆ ಮಾಡುವುದು ವೈಯಕ್ತಿಕವಾಗಿ ನನಗಿಷ್ಟವಿಲ್ಲ. ಅರಸು ಕಾಲ ದಲ್ಲಿದ್ದ ರಾಜಕೀಯವೇ ಬೇರೆ, ಈಗಿನ ಕಾಲದ ರಾಜಕೀಯವೇ ಬೇರೆ. ಈಗ ಹಣಬಲ, ಜಾತಿ ಬಲದ ರಾಜಕೀಯವನ್ನು ನಾವು ಎಲ್ಲಾ ಪಕ್ಷಗಳಲ್ಲಿಯೂ ಕಾಣುತ್ತಿದ್ದೇವೆ.
ಜಾತಿಯೇ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರಧಾನವಾಗಿರುವುದು ವಿಷಾದನೀಯ. ಮೊದಲಿನ ಕಾಲದಲ್ಲಿ ಪಕ್ಷವೊಂದರ ಆದೇಶವನ್ನು ಆ ಪಕ್ಷದ ಎಲ್ಲ ಶಾಸಕರು, ಮುಖಂಡ ರೂ ಪಾಲಿಸಬೇಕಾಗಿತ್ತು. ಆದರೆ ಈಗ ಪಕ್ಷವೊಂದು ಮುಖ್ಯಮಂತ್ರಿಯೊಬ್ಬರನ್ನು ನೇಮಿಸಿದ ಮೇಲೆ ಆ ಮುಖ್ಯಮಂತ್ರಿ ಹುದ್ದೆಗೆ ಇನ್ನು ಹತ್ತಾರು ಆಕಾಂಕ್ಷಿಗಳು ಇರುವುದನ್ನು ಕಾಣುತ್ತಿದ್ದೇವೆ. ಪಕ್ಷದ ಆದೇಶ ಕೂಡ ಮೂಲೆಗುಂಪಾಗುವಂತೆ ವರ್ತಿಸುವ ರಾಜಕಾರಣಿ ಗಳು ಹೆಚ್ಚಾಗುತ್ತಿದ್ದಾರೆ.
ಪಂಚ ಗ್ಯಾರಂಟಿಯ ಹರಿಕಾರ
ಸಿದ್ದರಾಮಯ್ಯ ಈ ಸಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿ ದೇಶವೇ ತನ್ನತ್ತ ಆಶ್ಚರ್ಯದಿಂದ ಗಮನಿಸುವಂತೆ ಮಾಡಿದರು. ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಬಂದಿದ್ದ ಪ್ರತಿಪಕ್ಷ ಬಿಜೆಪಿ ಕೂಡ ಇತ್ತೀಚಿನ ಚುನಾವಣೆಗಳಲ್ಲಿ ಮೋದಿ ಸಾರಥ್ಯದಲ್ಲಿಯೇ ಅನೇಕ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆ ಜಾರಿಗೊಳಿಸಿತ್ತು, ಅರ್ಥಾತ್ ಸಿದ್ದರಾಮಯ್ಯ ಅವರ ಚಿಂತನೆಯ ಗ್ಯಾರಂಟಿ ಯೋಜನೆಗಳನ್ನು ಮೋದಿ ಮತ್ತು ಬಿಜೆಪಿಯವರೇ ಒಪ್ಪಿ ಕೊಂಡಂತಾಯಿತು.
ಇದು ಸಿದ್ದರಾಮಯ್ಯ ಅವರ ಕನಸಿನ ಯೋಜನೆಗೆ ಸಂದ ಗೆಲುವು ಎಂದೇ ಭಾವಿಸುತ್ತೇನೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು, ದಿ.ದೇವರಾಜ ಅರಸು ಅವರಿಗಿಂತ ಒಂದು ಹೆಜ್ಜೆ ಮುಂದೆಯೇ ಸಾಗಿದ್ದಾರೆ ಎಂದು ಮನಪೂರ್ವಕವಾಗಿ ಅಭಿನಂದಿಸುತ್ತೇನೆ.
ಮತ್ತೊಂದು ಗಮನಾರ್ಹ ಅಂಶ ಎಂದರೆ, ಕರ್ನಾಟಕದಲ್ಲಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಗಮನಿಸಿದಾಗ ಸಿದ್ದರಾಮಯ್ಯ ಅವರಂತೆ ಮಾಸ್ ಲೀಡರ್ ಯಾವುದೇ ಪಕ್ಷದಲ್ಲಿಯೂ ಇಲ್ಲ. ಸಿದ್ದರಾಮಯ್ಯ ಕೇವಲ ಕೆಲವೇ ಜಿಲ್ಲೆಗಳು ಮಾತ್ರವೇ ಅಲ್ಲ. ಅವರಿಗೆ ಕರ್ನಾಟಕದಾದ್ಯಂತ ಜನಬೆಂಬಲ ಇದೆ. ಈ ರೀತಿ ಅತ್ಯಧಿಕ ಪ್ರಮಾಣದಲ್ಲಿ ಜನಬೆಂಬಲ ಇರುವ ಮತ್ತೊಬ್ಬ ರಾಜಕಾರಣಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ವಾಸ್ತವ.
ದೇವರಾಜ ಅರಸು ಅವರ ಸುದೀರ್ಘ ಅಧಿಕಾರದ ದಾಖಲೆಯನ್ನು ಮೀರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರುವ ಆತ್ಮೀಯ ಮಿತ್ರ ಸಿದ್ದರಾಮಯ್ಯ ಅವರಿಗೆ ನನ್ನ ಮನದಾಳದ ಹಾರ್ದಿಕ ಅಭಿನಂದನೆ, ಶುಭಾಷಯಗಳು.