ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಟೀಕೆಗಳನ್ನು ಮೀರಿ ಗೆದ್ದ ಪಂಚ ಗ್ಯಾರಂಟಿ

ಪಂಚಗ್ಯಾರಂಟಿ ಯೋಜನೆಯ ಒಂದು ರುಪಾಯಿ ಸಹ ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ‘ಡಿಬಿಟಿ’ ಮಾಡಿದ್ದು ಅವರ ದೂರಾಲೋಚನೆಗೆ ಸಾಕ್ಷಿ ಎಂದರೆ ತಪ್ಪಾಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಎರಡುವರೆ ವರ್ಷದೊಳಗೆ ಗ್ಯಾರಂಟಿಗೆ ಲಕ್ಷ ಕೋಟಿ ರು. ಗೂ ಅಧಿಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಡೀ ಬಜೆಟ್ ನ್ನು ಕೇವಲ ಗ್ಯಾರಂಟಿಗೆ ಮೀಸಲಿಡದೇ, ಅಭಿವೃದ್ಧಿ ಕಾರ್ಯಗಳಿಗೂ ಹೆಚ್ಚಿನ ಒತ್ತು ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ.

Siddaramaiah Record: ಟೀಕೆಗಳನ್ನು ಮೀರಿ ಗೆದ್ದ ಪಂಚ ಗ್ಯಾರಂಟಿ

-

Ashok Nayak
Ashok Nayak Jan 6, 2026 7:21 AM

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ್ದ ಪಂಚಗ್ಯಾರಂಟಿ ಯೋಜನೆ ಜಾರಿಗೆ ಸಾಧ್ಯವೇ ಇಲ್ಲ ಎಂದು ಮುಗುಮುರಿದವರೇ ಮುಂದೆ ಈ ಯೋಜನೆ ಗಳನ್ನು ‘ನಕಲು’ ಮಾಡುವಂತೆ ಮಾಡಿದ್ದು ಕರ್ನಾಟಕದ ಕಾಂಗ್ರೆಸ್ ಸರಕಾರದ ಕಳೆದ ಎರಡುವರೆ ವರ್ಷದ ಬಹುದೊಡ್ಡ ಸಾಧನೆ. ಬಜೆಟ್‌ನ ಬಹುದೊಡ್ಡ ಭಾಗವೇ ಈ ಯೋಜನೆಗಳಿಗೆ ಮೀಸಲಿಡಬೇಕಾದ ಅನಿವಾರ್ಯತೆಯ ಹೊರತಾಗಿಯೂ ಅಧಿಕಾರಕ್ಕೆ ಬಂದ ಆರೇ ತಿಂಗಳಿನೊಳಗೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು ಇತಿಹಾಸ.

ಈ ಇತಿಹಾಸ ಸೃಷ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಮುತ್ಸದಿತನ, ಜನಪರ ಕಾಳಜಿಯ ಜತೆಜತೆಗೆ ಆಡಳಿತ ಹಾಗೂ ಆರ್ಥಿಕ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ಹಿಡಿತ ಪ್ರಮುಖ ಪಾತ್ರವಹಿಸಿತ್ತು. ಪ್ರಮಾಣ ವಚನ ಸ್ವೀಕರಿಸಿದ ದಿನವೇ ಐದು ಯೋಜನೆಗಳನ್ನು ಜಾರಿಗೊಳಿಸುವ ತಾತ್ವಿಕ ಒಪ್ಪಿಗೆ ಪಡೆದ ಅವರು, ಮುಂದಿನ ಆರು ತಿಂಗಳಿನೊಳಗೆ ಎಲ್ಲ ಯೋಜನೆಗಳು ಜನರ ಮನೆ-ಮನ ತಲುಪುವಂತೆ ನೋಡಿಕೊಂಡರು.

ಪಂಚಗ್ಯಾರಂಟಿ ಯೋಜನೆಯ ಒಂದು ರುಪಾಯಿ ಸಹ ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ‘ಡಿಬಿಟಿ’ ಮಾಡಿದ್ದು ಅವರ ದೂರಾಲೋಚನೆಗೆ ಸಾಕ್ಷಿ ಎಂದರೆ ತಪ್ಪಾಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಎರಡುವರೆ ವರ್ಷ ದೊಳಗೆ ಗ್ಯಾರಂಟಿಗೆ ಲಕ್ಷ ಕೋಟಿ ರು. ಗೂ ಅಧಿಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಆದರೆ ಇಡೀ ಬಜೆಟ್ ನ್ನು ಕೇವಲ ಗ್ಯಾರಂಟಿಗೆ ಮೀಸಲಿಡದೇ, ಅಭಿವೃದ್ಧಿ ಕಾರ್ಯಗಳಿಗೂ ಹೆಚ್ಚಿನ ಒತ್ತು ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ.

ಇದರೊಂದಿಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಬ್ಬು ದರ ನಿಗದಿ, ಮೆಕ್ಕೆಜೋಳ ದರ ನಿಗದಿ ಸಂಬಂಧ ಕೇಂದ್ರದ ಮೇಲೆ ನಿರಂತರ ಹೋರಾಟ ನಡೆಸುವ ಮೂಲಕ ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ.

ಇದನ್ನೂ ಓದಿ: Guarantee Scheme: ಗ್ಯಾರಂಟಿಗಳನ್ನು ಶೇ.100ರಷ್ಟು ಅರ್ಹರಿಗೆ ತಲುಪಿಸಲು ಬದ್ದ: ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್

ನೀರಾವರಿಗೆ ಭರ್ಜರಿ ಯೋಜನೆ: ರಾಜ್ಯ ಸರಕಾರ ಕರ್ನಾಟಕದಲ್ಲಿ ನೀರಾವರಿ ಯೋಜನೆ ಗಳನ್ನು ಶೀಘ್ರ ಪೂರೈಸಲು ಹಲವು ಕ್ರಮವಹಿಸಿದೆ. ಕೇಂದ್ರ ಸರಕಾರದ ಅಸಹಕಾರದ ಹೊರತಾಗಿಯೂ ಹಲವು ಯೋಜನೆಗಳನ್ನು ರೂಪಿಸಿ, 56000 ಕೋಟಿ ರು.ಗಳನ್ನು ನೀರಾ ವರಿಗೆ ವೆಚ್ಚ ಮಾಡಲಾಗಿದೆ. ಈಗಾಗಲೇ ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಪರಿಸರ ತೀರುವಳಿ ಸಿಕ್ಕಿಲ್ಲ.

ಇನ್ನು ಮಹದಾಯಿ ಯೋಜನೆಗೆ ಡಿಪಿಆರ್ ಅನ್ನು ಸರಕಾರ ಸಿದ್ಧಪಡಿಸಿದ್ದರೂ, ಕೇಂದ್ರದ ಅನುಮತಿ ದೊರೆತಿಲ್ಲ. ಇದಿಷ್ಟೇ ಅಲ್ಲದೇ ಕೇಂದ್ರ ಸರಕಾರದಿಂದ ಬರಬೇಕಿರುವ ಅನುದಾನ ಬಾಕಿಯಿದ್ದರೂ, ರಾಜ್ಯ ಸರಕಾರ ತನ್ನದೇ ಸಂಪನ್ಮೂಲವನ್ನು ಬಳಸಿಕೊಂಡು ಜನಪರ ಸೇವೆಯನ್ನು ಮಾಡಿಕೊಂಡು ಬಂದಿದೆ.

ದೇಶಕ್ಕೆ ಮಾದರಿಯಾದ ಕರ್ನಾಟಕ ಮಾಡೆಲ್: ಆರಂಭದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೊಂಡ ಸಮಯದಲ್ಲಿ ಬಹುತೇಕರು ಈ ಯೋಜನೆಗಳನ್ನು ಯಶಸ್ವಿಯಾಗುವುದಿಲ್ಲ ಎಂದಿದ್ದರು. ಆದರೆ ಕರ್ನಾಟಕ ಸರಕಾರ ಯಶಸ್ವಿಯಾಗಿ ಜಾರಿಗೊಳಿಸಿದ ಬಳಿಕ ಕಾಂಗ್ರೆಸ್ ಮಾತ್ರವಲ್ಲದೇ, ಇತರೆ ಪಕ್ಷಗಳು ಕಾಂಗ್ರೆಸ್ ಹಾದಿಯನ್ನು ತುಳಿದಿವೆ. ಸ್ವತಃ ಬಿಜೆಪಿ ಲೋಕ ಸಭಾ ಹಾಗೂ ವಿಧಾನ ಸಭಾ ಚುನಾವಣೆಗಳಲ್ಲಿ ಕರ್ನಾಟಕದ ಮಾದರಿಯನ್ನು ನಕಲು ಮಾಡುವ ಮೂಲಕ ಕರ್ನಾಟಕ ಮಾಡೆಲ್ ಅನ್ನು ಒಪ್ಪಿಕೊಂಡಿದೆ.

*

ಆರ್ಥಿಕ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗದೇ, ಅಸಮಾನತೆ ಹೋಗಲಾಡಿಸದೆ, ಗುಲಾಮಗಿರಿ ವ್ಯವಸ್ಥೆಯನ್ನು ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ, ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಇನ್ನೂ ಗುಲಾಮಗಿರಿ ವ್ಯವಸ್ಥೆ ಬದಲಾಗಿಲ್ಲ. ಪ್ರಬಲ ಸಮುದಾಯದ ವ್ಯಕ್ತಿ ಎದುರಾದಾಗ ಸ್ವಾಮಿ ಎನ್ನುವ, ದಲಿತ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತರಾದರೂ ಅವರನ್ನು ಏಕವಚನದಲ್ಲಿ ಮಾತನಾಡಿಸುವ ವ್ಯವಸ್ಥೆ ಈಗಲೂ ಇದೆ. ಇದೇ ಗುಲಾಮಗಿರಿಯ ಸಂಕೇತ. ಇದನ್ನು ಕಿತ್ತೆಸೆಯದೇ ಸ್ವಾಭಿಮಾನ ಮೂಡಿಸಲು ಸಾಧ್ಯವಿಲ್ಲ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

*

ಕಳೆದ ಬಜೆಟ್‌ನಲ್ಲಿ ಘೋಷಿಸಿದ ಅಭಿವೃದ್ಧಿಪರ ಘೋಷಣೆ

ರಾಜ್ಯಾದ್ಯಂತ 3 ಲಕ್ಷ ಮನೆಗಳ ನಿರ್ಮಾಣದ ಗುರಿ. ರಾಜ್ಯದಲ್ಲಿ ವಸತಿ ರಹಿತರ ಸಂಖ್ಯೆ ಯನ್ನು ಗುರುತಿಸಲು ಸಮೀಕ್ಷೆ.

80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ‘ಅನ್ನ ಸುವಿಧಾ’ ಹೋಮ್ ಡೆಲೆವರಿ ಆಪ್

ಸಿರಿಧಾನ್ಯಗಳ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ‘ನಮ್ಮ ಮಿಲೆಟ್ ಯೋಜನೆ’

ಕಂದಾಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳ ಗಣಕೀಕರಣಕ್ಕಾಗಿ ‘ಭೂ ಸುರಕ್ಷಾ ಯೋಜನೆ’ ಜಾರಿ.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ. ಅಂಗನವಾಡಿ ಚಟುವಟಿಕೆಗಳಿಗೆ 90 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರಿಗೆ 75938 ಸ್ಮಾರ್ಟ್ ಫೋನ್.

ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ 20 ಕೋಟಿ ರು. ವೆಚ್ಚದಲ್ಲಿ ಪ್ರತಿಜಿಯಲ್ಲಿಯೂ ಡೇ-ಕೇರ್ ಕಿಮೋಥೆರಪಿ ಕೇಂದ್ರ

ರಾಜ್ಯದ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗಾಗಿ 10 ಕೋಟಿ ರು. ಸುಳ್ಳು ಸುದ್ದಿ ತಡೆಗೆ ಸತ್ಯ ಶೋಧನಾ ತಂಡ, ವಿಶೇಷ ಕೋಶ ರಚನೆ.

ಡೀಪ್ ಫೇಕ್ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಠಾಣೆ.

ಎಲ್ಲ ಸರಕಾರಿ ಶಾಲೆಗಳು, ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆ.

7.50 ಕೋಟಿ ರು. ವೆಚ್ಚದಲ್ಲಿ ರಾಜ್ಯಾದ್ಯಂತ ಕೆಫೆ; ಸಂಜೀವಿನಿ ಹೆಸರಿನ 50 ಮಹಿಳಾ ಕೆಫೆಗಳ ಆರಂಭ.

ರೈತಪರ ನಾನಾ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿ ಉತ್ತೇಜಿಸುವ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ ಜಾರಿ.

ಮಹಿಳೆಯರಿಗೆ ಸರಕಾರದಿಂದಲೇ ಶೇ.6ರಷ್ಟು ಬಡ್ಡಿಯಲ್ಲಿ ಸಾಲ.

ಬೆಂಗಳೂರು ಸುರಂಗ ಮಾರ್ಗ, ಮೆಟ್ರೋ ಸೇವೆ, ಬಿಎಂಟಿಸಿ ಬಸ್ ಸೇರಿ ಹತ್ತು ಹಲವು ಕೊಡುಗೆಗಳನ್ನು ನೀಡುವ ಮೂಲಕ ಬ್ರಾಂಡ್ ಬೆಂಗಳೂರಿನ ಅಭಿವೃದ್ಧಿಗೆ ಒತ್ತು.

ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ್ದು, 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ.

ಕೇಂದ್ರ, ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್.

ಧಾರವಾಡ ಸಮೀಪ 6 ಸಾವಿರ ಎಕರೆಯಲ್ಲಿ ‘ಕೈಗಾರಿಕಾ ನೋಡ್’ ಸ್ಥಾಪನೆ.