Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯ ನಗರಸಭೆಗಳ ಮೇಲ್ದರ್ಜೆ, ಏಮ್ಸ್‌ಗೆ ಬೇಡಿಕೆ ಬೀದರ್ ಮತ್ತು ರಾಯಚೂರು ನಗರಸಭೆ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
-
ದೇವೇಂದ್ರ ಜಾಡಿ
ಕಲಬುರಗಿ ಜಿಲ್ಲಾ ವರದಿಗಾರ
ಬಸವಣ್ಣನವರ ಇವ ನಮ್ಮವ ಎಂಬ ತತ್ವವನ್ನು ಆಡಳಿತದಲ್ಲಿ ಅಳವಡಿಸಿ ಕೊಂಡಿರುವ ಸಿದ್ದರಾಮಯ್ಯ ಅವರು, ಕಲ್ಯಾಣ ಕರ್ನಾಟಕ ಭಾಗದ ಜನರ ದಶಕಗಳ ನೋವಿಗೆ 371 (ಜೆ) ವಿಶೇಷ ಸ್ಥಾನಮಾನದ ಸಾಂವಿಧಾನಿಕ ಮದ್ದು ನೀಡುವ ಮೂಲಕ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕಂಕಣಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಕಾಗದ ಹುಲಿ ಆಗಿದ್ದ 371(ಜೆ) ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಈ ಭಾಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಒಂದು ಕಾಲಕ್ಕೆ ‘ಹೈದರಾಬಾದ್ ಕರ್ನಾಟಕ’ ಎಂದು ಕರೆಯಲ್ಪಡುತ್ತಿದ್ದ ಈ ಭಾಗ, ಇಂದು ‘ಕಲ್ಯಾಣ ಕರ್ನಾಟಕ’ವಾಗಿ ಮರು ನಾಮಕರಣ ಗೊಂಡು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿದೆ. ಈ ಪರಿವರ್ತನೆಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢ ಸಂಕಲ್ಪ ಮತ್ತು ಸಾಮಾಜಿಕ ನ್ಯಾಯದ ಹಂಬಲ ಎದ್ದು ಕಾಣುತ್ತಿದೆ. ಬಸವಣ್ಣನವರ ‘ಇವ ನಮ್ಮವ’ ಎಂಬ ತತ್ವವನ್ನು ಆಡಳಿತ ದಲ್ಲಿ ಅಳವಡಿಸಿಕೊಂಡಿರುವ ಸಿದ್ದರಾಮಯ್ಯ ಅವರು, ಈ ಭಾಗದ ಜನರ ದಶಕಗಳ ನೋವಿಗೆ ಸಾಂವಿಧಾನಿಕ ಮದ್ದು ನೀಡುವ ಮೂಲಕ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕಂಕಣಬದ್ಧರಾಗಿದ್ದಾರೆ.
371 (ಜೆ) ಎಂಬ ಸಾಂವಿಧಾನಿಕ ಬಲ
ಕಲ್ಯಾಣ ಕರ್ನಾಟಕದ ಪಾಲಿಗೆ ಸಿದ್ದರಾಮಯ್ಯ ಎಂದರೆ ಮೊದಲು ನೆನಪಾಗು ವುದು ಸಂವಿಧಾನದ 371 (ಜೆ) ವಿಧಿ. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿಯನ್ನು ಜಾರಿಗೆ ತರುವಲ್ಲಿ ಅವರು ತೋರಿದ ರಾಜಕೀಯ ಇಚ್ಛಾಶಕ್ತಿ ಅಪ್ರತಿಮ. ಇದರ ಫಲವಾಗಿ ಇಂದು ಈ ಭಾಗದ ಸಾವಿರಾರು ಯುವಕ, ಯುವತಿಯರು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪಡೆದಿದ್ದಾರೆ. ಈ ಕಾಯ್ದೆಯಡಿ ಸ್ಥಳೀಯ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗುತ್ತಿರುವ ಸಿಂಹಪಾಲು ಮೀಸಲಾತಿಯು, ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಪರಿಸ್ಥಿತಿಯನ್ನೇ ಬದಲಿಸಿದೆ. ಕೇವಲ ಕಾಗದದ ಮೇಲಿದ್ದ ಈ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದು, ಅದರ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದು ಸಿದ್ದರಾಮಯ್ಯ ಅವರ ಮೊದಲ ಅವಧಿಯ ದೊಡ್ಡ ಸಾಧನೆ.
ಇದನ್ನೂ ಓದಿ: Siddaramaiah Record: ಮಣ್ಣಿನ ಸಂವೇದನೆ, ಅಹಿಂದ ಆಶಯದ ಸಂಕೇತ
2 ಬಾರಿ ಕ್ಯಾಬಿನೆಟ್ ಸಭೆ
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯ ನಗರಸಭೆಗಳ ಮೇಲ್ದರ್ಜೆ, ಏಮ್ಸ್‌ಗೆ ಬೇಡಿಕೆ ಬೀದರ್ ಮತ್ತು ರಾಯಚೂರು ನಗರಸಭೆ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಮೊದಲ ಬಾರಿಗೆ 2014ರ ನವೆಂಬರ್ 28ರಂದು ಹಾಗೂ ಎರಡನೇ ಬಾರಿಗೆ 2024ರ ಸೆಪ್ಟೆಂಬರ್ 17ರಂದು ಸಭೆ ನಡೆಸಿ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
ಪ್ರತ್ಯೇಕ ಸಚಿವಾಲಯ, ಹೊಸ ವೇಗ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕೇವಲ ಬೆಂಗಳೂರಿನ ವಿಧಾನಸೌಧದ ಒಂದು ಸಣ್ಣ ಕೋಣೆಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ, ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಐತಿಹಾಸಿಕ ನಿರ್ಧಾರವನ್ನು ಸಿದ್ದರಾಮಯ್ಯ ಕೈಗೊಂಡರು. ಇದು ಕೇವಲ ಸಾಂಕೇತಿಕ ನಿರ್ಧಾರವಲ್ಲ. ಬದಲಿಗೆ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ನೀಡಿದ ಬಲ. ಸಚಿವಾಲಯದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬು ರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಮಸ್ಯೆ ಗಳನ್ನು ಸ್ಥಳೀಯವಾಗಿಯೇ ಆಲಿಸಿ, ಯೋಜನೆಗಳಿಗೆ ವೇಗ ನೀಡಲು ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಜನರ ದಶಕಗಳ ಬೇಡಿಕೆ ಈಡೇರಿಸುವ ಮೂಲಕ ಸಿದ್ದರಾಮಯ್ಯ ‘ನುಡಿದಂತೆ ನಡೆದಿದ್ದಾರೆ’.
ಕೆಕೆಆರ್‌ಡಿಬಿಗೆ 5000 ಕೋಟಿ ರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಈ ಭಾಗದ ಪ್ರಗತಿಯ ಇಂಜಿನ್ ಇದ್ದಂತೆ. ಈ ಹಿಂದೆ ಅತ್ಯಲ್ಪ ಅನುದಾನದೊಂದಿಗೆ ಕುಂಟುತ್ತಿದ್ದ ಈ ಮಂಡಳಿಗೆ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನಲ್ಲಿ 5000 ಕೋಟಿ ರುಪಾಯಿಗಳ ಬೃಹತ್ ಅನುದಾನ ಘೋಷಿಸಿದ್ದಾರೆ. ಈ ಮೊತ್ತವು ಈ ಭಾಗದ ಗ್ರಾಮೀಣ ರಸ್ತೆಗಳು, ಶಾಲಾ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಅಂಗನವಾಡಿಗಳ ಸುಧಾರಣೆಗೆ ಬಳಕೆಯಾಗುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರುಪಾಯಿಗಳ ಅನುದಾನದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ.
ಅನುಭವ ಮಂಟಪ ಪುನರುತ್ಥಾನ
ಜಗತ್ತಿನ ಮೊದಲ ಸಂಸತ್ತು ಎಂದೇ ಖ್ಯಾತಿಯಾದ ಬೀದರ್ ಜಿಲ್ಲೆಯ ಬಸವ ಕಲ್ಯಾಣ ದಲ್ಲಿರುವ 12ನೇ ಶತಮಾನದ ಅನುಭವ ಮಂಟಪವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಮಾಡಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಪಣ ತೊಟ್ಟಿದೆ. ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ 600 ಕೋಟಿಗೂ ಅಧಿಕ ಅನುದಾನ ಕೊಟ್ಟಿದೆ.
12ನೇ ಶತಮಾನದ ಶರಣರ ಕ್ರಾಂತಿಯ ಸ್ಮರಣಾರ್ಥವಾಗಿ ಬೃಹತ್ ಮತ್ತು ಸುಸಜ್ಜಿತ ಸಂಕೀರ್ಣ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಿರುವುದು, ಈ ಭಾಗದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ. ಇದು ಕೇವಲ ಕಟ್ಟಡವಲ್ಲ, ಸಮಾನತೆಯ ಸಂದೇಶ ಸಾರುವ ಧೀಮಂತ ಕೇಂದ್ರವಾಗಲಿದೆ.
ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ
ಕಲಬುರಗಿಯಲ್ಲಿ ಸ್ಥಾಪನೆಯಾಗುತ್ತಿರುವ ‘ಪ್ರಬುದ್ಧ ಅಕಾಡೆಮಿ’ ಯು ಸಿದ್ದರಾಮಯ್ಯ ಅವರ ದೂರದೃಷ್ಟಿಯ ಫಲ. ದೆಹಲಿ ಅಥವಾ ಬೆಂಗಳೂರಿಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ಪಡೆಯಲು ಸಾಧ್ಯವಾಗದ ಬಡ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಕಲಬುರಗಿಯ ಉನ್ನತ ಮಟ್ಟದ ತರಬೇತಿ ನೀಡುವ ಯೋಜನೆ ಇದು. ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಅಕಾಡೆಮಿ ಯುಪಿಎಸ್ಸಿ, ಕೆಪಿಎಸ್ಸಿ ಆಕಾಂಕ್ಷಿಗಳಿಗೆ ದಾರಿ ದೀಪವಾಗಿದೆ.
ಕಲ್ಯಾಣಕ್ಕೆ ಗ್ಯಾರಂಟಿ ಆರ್ಥಿಕ ಚೈತನ್ಯ
ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಗ್ಯಾರೆಂಟಿ ಯೋಜನೆಗಳು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ. ‘ಅನ್ನಭಾಗ್ಯ’ದ ಮೂಲಕ ಹಸಿವು ಮುಕ್ತ ಜಿಲ್ಲೆ ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಕೈಗೆ ಹಣ, ಶಕ್ತಿ ಯೋಜನೆ ಮೂಲಕ ಮಹಿಳಾ ಸಮುದಾಯಕ್ಕೆ ಆರ್ಥಿಕ ಬಲ ತುಂಬಿದೆ. ಗ್ಯಾರಂಟಿ ಪರಿಣಾಮದಿಂದ ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳ ಜನರ ವಲಸೆ ಪ್ರಮಾಣ ಗಣನೀಯ ಇಳಿಕೆ ಕಂಡಿದೆ.
ನೀರಾವರಿ, ಆರೋಗ್ಯ ಕ್ಷೇತ್ರಕ್ಕೆ ಒತ್ತು
ಕೃಷ್ಣಾ ಮೇಲ್ದಂಡೆ ಯೋಜನೆ (ಯಕೆಪಿ) ಹಂತ-3ರ ಅನುಷ್ಠಾನಕ್ಕೆ ಒತ್ತು ನೀಡಿರುವುದು ಮತ್ತು ತುಂಗಭದ್ರಾ ನಾಲಾ ಆಧುನೀಕರಣಕ್ಕೆ ಸಾವಿರಾರು ಕೋಟಿ ರು. ಹಣ ಮೀಸ ಲಿಟ್ಟಿರುವುದು ಈ ಭಾಗದ ರೈತರ ಪಾಲಿಗೆ ವರದಾನವಾಗಿದೆ. ರಾಯಚೂರಿನಲ್ಲಿ ಏಮ್ಸ ( AIIMS ) ಮಾದರಿಯ ಆಸ್ಪತ್ರೆಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವುದು ಮತ್ತು ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಯನ್ನು ಉನ್ನತೀಕರಿಸಿದ್ದುಆರೋಗ್ಯ ಕ್ಷೇತ್ರದಲ್ಲಿನ ದೊಡ್ಡ ಸಾಧನೆ.
ನಗರಸಭೆಗಳ ಮೇಲ್ದರ್ಜೆ, ಏಮ್ಸ್‌ಗೆ ಬೇಡಿಕೆ
ಬೀದರ್ ಮತ್ತು ರಾಯಚೂರು ನಗರಸಭೆಗಳನ್ನು ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆ ಗೇರಿಸುವ ಐತಿಹಾಸಿಕ ತೀರ್ಮಾನ ಹಾಗೂ (AIIMS) ರಾಯಚೂರಿನಲ್ಲಿ ಸ್ಥಾಪನೆಗಾಗಿ ಏಮ್ಸ್ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಲ್ಯಾಣ ಕರ್ನಾಟಕದ ಮೇಲಿನ ವಿಶೇಷ ಕಾಳಜಿ ಯನ್ನು ಎತ್ತಿ ತೋರಿಸುತ್ತದೆ. ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಆಡಳಿತಾತ್ಮಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ರಾಜ್ಯ ಸರಕಾರ ಮುಂದಾಗಿದೆ. ಇದು ಕೇವಲ ಘೋಷಣೆಯಲ್ಲ, ಈ ಭಾಗದ ಸರ್ವಾಂಗೀಣ ಪ್ರಗತಿಗೆ ಸಿಎಂ ಹಾಕಿದ ಭದ್ರ ಬುನಾದಿ.
ಒಟ್ಟಾರೆ, ಸಿದ್ದರಾಮಯ್ಯ ಅವರ ಆಡಳಿತಾವಧಿ ಅವಧಿಯು ಕಲ್ಯಾಣ ಕರ್ನಾಟಕಕ್ಕೆ ‘ಸುವರ್ಣ ಯುಗ’ದ ಮುನ್ನುಡಿ ಎಂದರೆ ತಪ್ಪಾಗುವುದಿಲ್ಲ. ಕೇವಲ ಘೋಷಣೆಗಳಿಗೆ ಸೀಮಿತವಾಗದೆ, 371 (ಜೆ) ಅನುಷ್ಠಾನ, ಪ್ರತ್ಯೇಕ ಸಚಿವಾಲಯದ ಸ್ಥಾಪನೆಗೆ ನಿರ್ಧಾರ, ಕೆಕೆಆರ್‌ಡಿಬಿಗೆ 5000 ಕೋಟಿ ರು. ಅನುದಾನ, ಅನುಭವ ಮಂಟಪಕ್ಕೆ 600 ಕೋಟಿ ಅನುದಾನ ನೀಡಿರುವುದು ಈ ಭಾಗದ ಜನರ ಮೇಲೆ ಸಿದ್ದರಾಮಯ್ಯ ಅವರಿಗಿರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ, ಸಮೃದ್ಧ ಕರ್ನಾಟಕ ಕಟ್ಟುವ ಅವರ ಹಾದಿಯಲ್ಲಿ ಕಲ್ಯಾಣ ಕರ್ನಾಟಕ ಶರವೇಗದಲ್ಲಿ ಮುನ್ನುಗ್ಗು ತ್ತಿದೆ.