Roopa Gururaj Column: ನಿರ್ವಿಕಾರಯೋಗ- ಸಮಸ್ಯೆ ಸಮಾಧಾನ !
ಆಗ ...ಎರಡನೆಯ ಮಗ ಬಂದನು. ‘ನೀನು ಸಹಿ ಮಾಡದೆ ಮಾರಾಟ ಹೇಗೆ ಪೂರ್ತಿ ಆಗತ್ತೆ ಅಪ್ಪಾ? ಅಷ್ಟೂ ಗೊತ್ತಿಲ್ಲವಾ?’ ಎಂದನು ಅಷ್ಟೇ. ಮತ್ತೆ ಅವನನ್ನು ದುಃಖ ಆವರಿಸಿಕೊಂಡಿತು. ಅಷ್ಟರಲ್ಲಿ ...ಮೂರನೆಯ ಮಗ ಬಂದವನೇ ‘ಮಾತಿನ ಮೇಲೆ ನಿಲ್ಲುವ ಪ್ರಾಮಾಣಿಕ ಮನುಷ್ಯ ಆತ. ಮಾತಿನ ಮಾರಾಟ ಪೂರ್ತಿ ಆಯಿತು. ಅರ್ಧ ದುಡ್ಡು ಕೊಟ್ಟನು’ ಎಂದಾಗ ದುಃಖ ಮರೆಯಾಗಿ ಮತ್ತೆ ಸಂತೋಷವಾಯಿತು.
Source : Vishwavani Daily News Paper
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದು ಮನೆಗೆ ಬೆಂಕಿ ಬೀಳುತ್ತದೆ. ಜನ ನೋಡುತ್ತಾ ನಿಂತಿರುತ್ತಾರೆ. ಮನೆ ಯಜಮಾನ ದೂರದಲ್ಲಿ ಅಳುತ್ತ ನಿಂತಿರುತ್ತಾನೆ. ಬಹಳ ಸುಂದರವಾದ ಮನೆ. ಎರಡು ಪಟ್ಟು ಬೆಲೆ ಕೊಡುತ್ತೇನೆಂದರೂ ಮಾರಿರಲಿಲ್ಲ. ಅದಕ್ಕೆ ಅಷ್ಟು ದುಃಖ. ಅಷ್ಟರಲ್ಲಿ ...ಹಿರಿಯ ಮಗನು ಬಂದನು.
‘ನಿನಗೆ ಗೊತ್ತಿಲ್ವಾ ಅಪ್ಪಾ? ಮೂರು ಪಟ್ಟು ಬೆಲೆ ಬಂದಿದಕ್ಕೆ ನೆನ್ನೇ ತಾನೇ ಮನೆ ಮಾರಿದೆ. ನಿನಗೆ ತಿಳಿಸೋದಕ್ಕೆ ಟೈಂ ಇರಲಿಲ್ಲ’ ಎಂದನು. ಕೈಯಿಂದ ಒರೆಸಿ ಹಾಕಿದ ಹಾಗೆ ಅವನ ದುಃಖ ಕಡಿಮೆಯಾಯ್ತು. ಸಂತೋಷದಿಂದ ಒಮ್ಮೆ ಜೋರಾಗಿ ಉಸಿರಾಡಿದನು. ಆ ನಂತರ ಗುಂಪಿನ ಜನರ ಜೊತೆ ಮಾತನಾಡುತ್ತ ಉರಿಯುತ್ತಿರುವ ಮನೆ ಕಡೆ ನೋಡುತ್ತ ನಿಂತನು. ಅದೇ ಮನೆ ಅದೇ ಬೆಂಕಿ ಕ್ಷಣದ ಹಿಂದೆ ಇದ್ದ ಭಾವುಕತೆ ಈಗ ಹೋಗಿಬಿಟ್ಟಿತು. ಈಗ ನಿರಾಳ ವಾಗಿ (ಕೊಂಚ ಸಂತೋಷದಿಂದ) ಇದ್ದನು. ಆಗ ...ಎರಡನೆಯ ಮಗ ಬಂದನು.
‘ನೀನು ಸಹಿ ಮಾಡದೆ ಮಾರಾಟ ಹೇಗೆ ಪೂರ್ತಿ ಆಗತ್ತೆ ಅಪ್ಪಾ? ಅಷ್ಟೂ ಗೊತ್ತಿಲ್ಲವಾ?’ ಎಂದನು ಅಷ್ಟೇ. ಮತ್ತೆ ಅವನನ್ನು ದುಃಖ ಆವರಿಸಿಕೊಂಡಿತು. ಅಷ್ಟರಲ್ಲಿ ...ಮೂರನೆಯ ಮಗ ಬಂದವನೇ ‘ಮಾತಿನ ಮೇಲೆ ನಿಲ್ಲುವ ಪ್ರಾಮಾಣಿಕ ಮನುಷ್ಯ ಆತ. ಮಾತಿನ ಮಾರಾಟ ಪೂರ್ತಿ ಆಯಿತು. ಅರ್ಧ ದುಡ್ಡು ಕೊಟ್ಟನು’ ಎಂದಾಗ ದುಃಖ ಮರೆಯಾಗಿ ಮತ್ತೆ ಸಂತೋಷವಾಯಿತು.
ಇದು ನನ್ನದು ಅಂದರೆ ದುಃಖವಾಗುತ್ತದೆ, ಅಲ್ಲ ಅಂದುಕೊಂಡರೆ ದುಃಖ ದೂರ ವಾಗುತ್ತದೆ. ನಿಜಕ್ಕೂ ಏನೂ ಬದಲಾವಣೆ ಇರುವುದಿಲ್ಲ. ಇದೇ ಗುರುವರೇಣ್ಯರು ಹೇಳಿದ ನಿರ್ವಿಕಾರಯೋಗ. ಬೇರೆಯವರ ಪ್ರೀತಿ/ಮಾನ್ಯತೆಗಾಗಿ ಒಳ್ಳೆಯತನದಿಂದ ಬದುಕದೆ ನಮಗಾಗಿ ಬದುಕಿದಾಗ ಅಲ್ಲಿ ನೋವು ಕಡಿಮೆ, ಅಸಹನೆ ದುಃಖವೂ ಕಡಿಮೆ. ನೀವೇ ಯೋಚಿಸಿ ನೋಡಿ, ಕೆಲವೊಮ್ಮೆ ನಮಗೆ ಅರಿವೇ ಇಲ್ಲದೆ ನಮ್ಮ ವಸ್ತುಗಳು ಹಾಳಾಗುತ್ತದೆ. ಯಾವುದೋ ಒಂದು ಅವಘಡದಲ್ಲಿ ನಮ್ಮ ವಾಹನಕ್ಕೆ ಜಕಮ್ ಆಗಿ ಸಾವಿರಾರು ರುಪಾಯಿಗಳ ಖರ್ಚು ಬರುತ್ತದೆ.
ಆಗ ದುಃಖವಾಗುವುದು ಸಹಜ ಆದರೆ ವಾಹನ ತಾನೇ ಅದನ್ನು ಸರಿ ಮಾಡಿಸಿಕೊಳ್ಳ ಬಹುದು, ಸದ್ಯ ಜೀವಕ್ಕೆ ಏನು ಅಪಾಯವಾಗಲಿಲ್ಲ ಎಂದು ಸಕಾರಾತ್ಮಕವಾಗಿ ಯೋಚನೆ ಮಾಡಿದರೆ ಅಷ್ಟರಮಟ್ಟಿಗೆ ದುಃಖ ಕಮ್ಮಿ. ಜೀವನದಲ್ಲಿ ಎಲ್ಲರಿಗೂ ಕೂಡ ದುಃಖದ ಸನ್ನಿವೇಶಗಳು ಒಂದಲ್ಲ ಒಂದು ಬಾರಿ ಎದುರಾಗುತ್ತಲೇ ಇರುತ್ತವೆ. ಆದರೆ ಈ ಸನ್ನಿವೇಶ ಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅದರ ಪರಿಣಾಮ ನಿರ್ಧಾರ ವಾಗುತ್ತದೆ.
ಬದುಕು ಎಂದರೆ ಇಂಥವೆಲ್ಲ ಇದ್ದದ್ದೇ ನಿಭಾಯಿಸಿಕೊಂಡು ಮುಂದೆ ಹೋಗಬೇಕು ಎನ್ನುವ ಸ್ಥಿತಪ್ರಜ್ಞತೆ ಉಳಿಸಿಕೊಂಡು ಮುಂದೇನು ಎಂದು ಗಮನಿಸಲು ಪ್ರಾರಂಭ ಮಾಡಿ ದಾಗ ಅಷ್ಟರಮಟ್ಟಿಗೆ ದುಃಖ ಕಡಿಮೆಯಾಗುತ್ತದೆ. ಅಯ್ಯೋ ನಾನು ಹಾಕಿದ ಪರಿಶ್ರಮ ವೆಲ್ಲ ವ್ಯರ್ಥವಾಯಿತು, ಇನ್ನು ಮುಂದೇನು ಗತಿ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡರೆ ಇರುವ ಸಮಾಧಾನ ಸ್ಥಿತಿಯೂ ಮರೆಯಾಗಿ, ಮುಂದೆ ಮಾಡುವ ಕೆಲಸಗಳು ಕೂಡ ತೋಚದಂತೆ ಆಗುತ್ತದೆ. ಪ್ರತಿ ಬಾರಿ ನಾವು ಕಷ್ಟವನ್ನು ಎದುರಿಸುವು ದನ್ನು ಕಲಿತಾಗ ಒಳಗಿನಿಂದ ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತೇವೆ. ಇದರಿಂದ ಅನಗತ್ಯವಾಗಿ ಪ್ರಾಪಂಚಿಕ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದು, ಅವುಗಳಿಗಾಗಿ ಪರಿತಪಿ ಸುವುದು ಕಡಿಮೆಯಾಗುತ್ತದೆ.
ಒಮ್ಮೆ ಯೋಚಿಸಿ ನೋಡಿ ಒಳ್ಳೆಯ ಆರೋಗ್ಯ , ಉತ್ತಮ ಮನಸ್ಥಿತಿ ಇವೆರಡು ಇದ್ದಾಗ ಯಾವುದೇ ಕಷ್ಟ ನಷ್ಟವಾದರೂ ಕೂಡ ನಂತರ ನಾವು ಅದನ್ನು ಸರಿದೂಗಿಸಿಕೊಳ್ಳ ಬಹುದು. ಅದೇ ಆರೋಗ್ಯವೇ ಕೈಕೊಟ್ಟಾಗ ಬೇರೆ ಏನು ನಮಗಿದ್ದರೂ ಕೂಡ ಅದರ ಪ್ರಯೋಜನ ಪಡೆದುಕೊಳ್ಳಲು ನಮಗೆ ಸಾಧ್ಯವಿರುವುದಿಲ್ಲ. ಆದ್ದರಿಂದಲೇ ಒಳ್ಳೆಯ ಆರೋಗ್ಯ, ಆರೋಗ್ಯಕರ ಮನಸ್ಥಿತಿ ಇವೆಲ್ಲವನ್ನೂ ಬೆಳೆಸಿಕೊಳ್ಳುತ್ತಾ, ಆದಷ್ಟು ಪ್ರಾಪಂಚಿ ಕ ವಿಷಯಗಳಿಗೆ ಹೆಚ್ಚು ಒತ್ತು ಕೊಡುವುದನ್ನು ಕಡಿಮೆ ಮಾಡೋಣ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವ ಅರಿವು ಇದ್ದಾಗ ಆಗುವ ನೋವು ಕಡಿಮೆ.
ಇದನ್ನೂ ಓದಿ: Roopa Gururaj Column: ನರಿಯ ಕ್ರೌರ್ಯವೇ ಅದರ ಜಾಣತನ