ಗಂಧದ ಬಣ್ಣದ ಚಂದನ ಚಿರತೆ
ಸಾಮಾನ್ಯವಾಗಿ ಚಿರತೆಗಳು ಕಪ್ಪು ಚುಕ್ಕೆಗಳಿರುವ ಹಳದಿ-ಕಂದುಮಿಶ್ರಿತ ಬಣ್ಣದ ಚರ್ಮವನ್ನು ಹೊಂದಿರುತ್ತವೆ. ಅತ್ಯಂತ ವಿರಳವಾದ ಬಣ್ಣದ ಈ ರೂಪಾಂತರವು ಗಂಧದ ಬಣ್ಣವನ್ನು ಹೋಲುವ ಮಬ್ಬಾದ ಕೆಂಪು-ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಹಾಗೂ ಅದರ ಮೇಲಿನ ಚುಕ್ಕೆಗಳು ಮಂಕಾದ ಕಂದು ಬಣ್ಣ ಹೊಂದಿವೆ. ಚಿರತೆಯಲ್ಲಿನ ಆನು ವಂಶಿಕ ಬದಲಾವಣೆಯಿಂದ ಚಿರತೆಯ ಚರ್ಮದಲ್ಲಿ ಅತಿಯಾದ ಕೆಂಪುವರ್ಣದ ಉತ್ಪಾದನೆ ಅಥವಾ ಗಾಢ ವರ್ಣದ ಕೊರತೆಯಿಂದ ಈ ಸ್ಥಿತಿ ಉಂಟಾಗುತ್ತದೆ ಎಂದು ನಂಬಲಾಗಿದೆ.
-
ರಾಜ್ಯದಲ್ಲೇ ಪ್ರಥಮ, ದೇಶದಲ್ಲಿ 2ನೇ ಬಾರಿ ಪತ್ತೆ, ವಿಶ್ವದಲ್ಲೂ ಅಪೂರ್ವ
ವನ್ಯಜೀವಿ ಸಂಶೋಧನೆಯಲ್ಲಿನ ಮಹತ್ವದ ಬೆಳವಣಿಗೆಯೊಂದರಲ್ಲಿ, ಅತ್ಯಂತ ಅಪರೂಪದ, ವಿಶೇಷ ಬಣ್ಣದ ಚಿರತೆಯೊಂದನ್ನು ಕರ್ನಾಟಕದ ವಿಜಯನಗರ ಜಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗುರ್ತಿಸಲಾಗಿದೆ. ಹೊಳೆಮತ್ತಿ ನೇಚರ್ ಫೌಂಡೇಶನ್ (ಎಚ್‌ಎನ್‌ಎಫ್) ಸಂಸ್ಥೆಯ ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡದವರ ಚಿರತೆಗಳ ಮೇಲಿನ ಸಂಶೋಧನೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಚಿರತೆಗಳು ಕಪ್ಪು ಚುಕ್ಕೆಗಳಿರುವ ಹಳದಿ-ಕಂದುಮಿಶ್ರಿತ ಬಣ್ಣದ ಚರ್ಮವನ್ನು ಹೊಂದಿರುತ್ತವೆ. ಅತ್ಯಂತ ವಿರಳವಾದ ಬಣ್ಣದ ಈ ರೂಪಾಂತರವು ಗಂಧದ ಬಣ್ಣವನ್ನು ಹೋಲು ವ ಮಬ್ಬಾದ ಕೆಂಪು-ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಹಾಗೂ ಅದರ ಮೇಲಿನ ಚುಕ್ಕೆಗಳು ಮಂಕಾ ದ ಕಂದು ಬಣ್ಣ ಹೊಂದಿವೆ. ಚಿರತೆಯಲ್ಲಿನ ಆನು ವಂಶಿಕ ಬದಲಾವಣೆಯಿಂದ ಚಿರತೆಯ ಚರ್ಮ ದಲ್ಲಿ ಅತಿಯಾದ ಕೆಂಪುವರ್ಣದ ಉತ್ಪಾದನೆ ಅಥವಾ ಗಾಢ ವರ್ಣದ ಕೊರತೆಯಿಂದ ಈ ಸ್ಥಿತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು, ಡಾ.ಸಂಜಯ್ ಗುಬ್ಬಿ ಅವರು ಇದಕ್ಕೆ ಚಂದನ ಚಿರತೆ ಎಂದು ಹೆಸರು ನೀಡಿದ್ದಾರೆ.
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ವಾಸನೆ: ಆತಂಕ
ಜಾಗತಿಕವಾಗಿ ಈ ಬಣ್ಣ ರೂಪದ ಚಿರತೆಯನ್ನು ಸ್ಟ್ರಾಬೆರಿ ಚಿರತೆ ಎಂದು ಕರೆಯುತ್ತಾರೆ. ಅತ್ಯಂತ ಅಪರೂಪಕ್ಕೆ ಕಾಣಸಿಗುವ ಇವುಗಳನ್ನು ದಕ್ಷಿಣ ಆಫ್ರಿಕಾ ದೇಶದಲ್ಲಿ ಕೆಲವು ಕಡೆ ಮತ್ತು ತಾಂಜಾ ನಿಯಾದಲ್ಲಿ ಒಂದು ಬಾರಿ ಮಾತ್ರ ದಾಖಲಿಸಗಿದ್ದು, ಜಗತ್ತಿನಾದ್ಯಂತ ಕೆಲವೇ ಕೆಲವು ದಾಖಲೆಗಳು ಲಭ್ಯವಿವೆ. ಭಾರತದಲ್ಲಿ ಈ ಚಿರತೆಗಳು ಅತ್ಯಂತ ವಿರಳ. ಇದಕ್ಕೂ ಮೊದಲು 2021ರ ನವೆಂಬರ್ ನಲ್ಲಿ ರಾಜಸ್ಥಾನದ ರಣಕಪುರ ಪ್ರದೇಶದಲ್ಲಿ ಒಂದು ಚಂದನ ಚಿರತೆಯನ್ನು ದಾಖಲಿಸಲಾಗಿತ್ತು. ಹೀಗಾಗಿ ವಿಜಯನಗರ ಜಿಲ್ಲೆಯ ಈ ದಾಖಲೆ, ದೇಶದಲ್ಲಿನ ಎರಡನೇ ದಾಖಲೆಯಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿರುವ ಚಂದನ ಚಿರತೆ ಸುಮಾರು 6 ರಿಂದ 7 ವರ್ಷ ವಯಸ್ಸಿನ ಹೆಣ್ಣು ಚಿರತೆಯಾಗಿದ್ದು, ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಇದರ ಚಿತ್ರ ಸೆರೆಯಾಗಿದೆ. ಒಂದು ಚಿತ್ರದಲ್ಲಿ ಈ ಚಿರತೆ ಸಾಮಾನ್ಯ ಬಣ್ಣ ಹೊಂದಿರುವ ಮರಿಯೊಂದಿಗೆ ಕೂಡ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದೆ.
ಬಣ್ಣಗಳ ವೈಶಿಷ್ಟ್ಯಗಳ ಆಧಾರದ ಮೇಲೆ ಧೃಡೀಕರಣ: ಡಾ.ಸಂಜಯ್ ಗುಬ್ಬಿ: ಚಂದನ ಚಿರತೆಯಲ್ಲಿ ಈ ಬಣ್ಣ ಹೈಪೊಮೆಲನಿಸಮ ಅಥವಾ ಎರಿತ್ರಿಸಮ ಎನ್ನುವ ಆನುವಂಶಿಕ ಸ್ಥಿತಿ ಯಿಂದ ಉಂಟಾಗುತ್ತದೆ. ಪ್ರಸ್ತುತ, ಈ ಚಿರತೆಯ ಸ್ಥಿತಿಯನ್ನು, ಛಾಯಾಚಿತ್ರ ಮತ್ತು ಬಣ್ಣಗಳ ವೈಶಿಷ್ಟ್ಯಗಳ ಆಧಾರದ ಮೇಲೆ ಧೃಡೀಕರಿಸಲಾಗಿದೆ. ಈ ಲಕ್ಷಣಗಳು ವಿಶಿಷ್ಟವಾಗಿದ್ದರೂ, ನಿಖರ ವಾದ ಆನುವಂಶಿಕ ಬದಲಾವಣೆಯನ್ನು ದೃಢೀಕರಿಸಲು ಅವುಗಳ ಹಿಕ್ಕೆ ಅಥವಾ ಕೂದಲುಗಳಿಂದ ಆನುವಂಶಿಕ ಮಾದರಿಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸುವ ಅಗತ್ಯವಿದೆ.
ಇಂತಹ ಆನುವಂಶಿಕ ಸಾಕ್ಷ್ಯಗಳು ಲಭ್ಯವಾಗುವವರೆಗೆ, ಈ ಪ್ರಾಣಿಯನ್ನು ನಿರ್ದಿಷ್ಟ ಅನುವಂಶಿಕ ವಿಧಕ್ಕೆ (ಹೈಪೊಮೆಲನಿಸಮ ಅಥವಾ ಎರಿತ್ರಿಸಮ) ಸೇರಿಸುವ ಬದಲು ವಿರಳವಾದ ಬಣ್ಣದ ರೂಪಾಂತರವೆಂದು ವೈಜ್ಞಾನಿಕವಾಗಿ ವಿವರಿಸುವುದು ಸೂಕ್ತ ಎಂದು ಡಾ. ಸಂಜಯ್ ಗುಬ್ಬಿ ಹೇಳಿದರು.