ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಕಿಚ್ಚನ ಸಾರಥ್ಯದಲ್ಲಿ ಇಂದು ನಡೆಯಲಿದೆ ಒಂದು ಮಹತ್ವದ ಎಲಿಮಿನೇಷನ್

ಈ ವಾರ ಮನೆಯಿಂದ ಆಚೆ ಹೋಗಲು ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ರಜತ್ ಕಿಶನ್, ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರಿಬ್ಬರು ಹೊರಹೋಗುತ್ತಾರೆ ಎಂಬುದು ನೋಡಬೇಕಿದೆ.

ಕಿಚ್ಚನ ಸಾರಥ್ಯದಲ್ಲಿ ಇಂದು ನಡೆಯಲಿದೆ ಒಂದು ಮಹತ್ವದ ಎಲಿಮಿನೇಷನ್

Varada Kathe Kichchana Jothe

Profile Vinay Bhat Jan 18, 2025 6:53 AM

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಕೊನೆಯ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇಂದು ನಡೆಯಲಿದೆ. ಮುಂದಿನ ಫಿನಾಲೆ ಆಗಿರುವ ಕಾರಣ ಇದು ಸೀಸನ್ 11ರ ಕೊನೆಯ ಪಂಚಾಯಿತಿ ಆಗಿದೆ. ಇಂದು ಎಲ್ಲ ಸ್ಪರ್ಧಿಗಳಿಗೆ ಮಹತ್ವದ ದಿನವಾಗಿದೆ. ಯಾಕೆಂದರೆ ಈ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯಲಿದೆ. ಸದ್ಯ ಮನೆಯಲ್ಲಿರುವ ಏಳು ಸ್ಪರ್ಧಿಗಳ ಪೈಕಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬರಲಿದ್ದಾರೆ. ಉಳಿದ ಐದು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಕಿಚ್ಚನ ಸಾರಥ್ಯದಲ್ಲಿ ಇಂದು ಮಹತ್ವದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.

ಈ ವಾರ ಮನೆಯಿಂದ ಆಚೆ ಹೋಗಲು ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ರಜತ್ ಕಿಶನ್, ಭವ್ಯಾ ಗೌಡ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರಿಬ್ಬರು ಹೊರಹೋಗುತ್ತಾರೆ ಎಂಬುದು ನೋಡಬೇಕಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬುಧವಾರದ ಎಪಿಸೋಡ್​ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಓರ್ವ ಸ್ಪರ್ಧಿ ಆಚೆ ಹೋಗಬೇಕಿತ್ತು. ಆದರೆ, ಅಂತಿಮ ಹಂತದಲ್ಲಿ ಬಿಗ್ ಬಾಸ್ ಬಿಗ್ ಟ್ವಿಸ್ಟ್ ಕೊಟ್ಟು, ಮಿಡ್​ ವೀಕ್​ ಎಲಿಮಿನೇಷನ್​ ಮುಂದೂಡಲಾಗಿದೆ ಎಂದು ಹೇಳಿದ್ದರು.

ಮಿಡ್ ವೀಕ್ ನಾಮಿನೇಷನ್​ನಿಂದ ಪಾರಾಗಲು ಬಿಗ್ ​ಬಾಸ್​ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್​ ನೀಡುತ್ತಿದ್ದರು. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದು ಧನರಾಜ್ ಆಚಾರ್ ಸೇವ್ ಆಗಿದ್ದರು. ಆದರೆ, ಕೊನೆಯ ಟಾಸ್ಕ್​ನಲ್ಲಿ ಧನರಾಜ್ ಮೋಸದಾಟ ಆಡಿರುವುದು ಬೆಳಕಿಗೆ ಬಂದಿದೆ. ಧನು ಎದುರಿದ್ದ​ ಕನ್ನಡಿಯನ್ನು ನೋಡಿ ಪಜಲ್​ ಗೇಮ್ ಆಡಿದ್ದರು. ಹೀಗಾಗಿ ಬಿಗ್​ ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ತಡೆ ಹಿಡಿದಿದ್ದರು.

ಬಳಿಕ ಅಂತಿಮವಾಗಿ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಅನ್ನೇ ರದ್ದು ಮಾಡಿದರು. ಇದರ ಜೊತೆಗೆ ಮತ್ತೊಂದು ಮಹತ್ವದ ಘೋಷಣೆ ಕೂಡ ಮಾಡಿದರು. ಧನರಾಜ್ ಎಲಿಮಿನೇಷನ್​ನಿಂದ ಪಾರಾಗುವ ಪಾಸ್ ಪಡೆದಿದ್ದರು. ಇದನ್ನು ಹಿಂತೆಗೆದುಕೊಂಡರು. ಹಾಗೆಯೆ ಈ ವಾರಾಂತ್ಯ ಡಬಲ್ ಎಲಿಮಿನೇಷನ್ ಇರಲಿದೆ ಎಂದು ಹೇಳಿದರು. ಹೀಗಾಗಿ ಇಬ್ಬರು ಸ್ಪರ್ಧಿಗಳು ದೊಡ್ಮನೆ ತೊರೆಯಲಿದ್ದಾರೆ. ಜೊತೆಗೆ ಧನರಾಜ್ ಆಟದ ವೈಖರಿ ಬಗ್ಗೆ ಸುದೀಪ್ ಏನು ಮಾತನಾಡಲಿದ್ದಾರೆ ಎಂಬುದು ನೋಡಬೇಕಿದೆ.

BBK 11: ವಾರದ ಕಟ್ಟಕಡೆಯ ನಾಮಿನೇಷನ್: ಎಲ್ಲರ ಟಾರ್ಗೆಟ್ ಈ ಓರ್ವ ಸ್ಪರ್ಧಿ