Sharada Kaudi Column: ಏಳು ಬಣ್ಣಗಳ ಸರದಾರ ರಥವೇರುವ ಬೆಳಕಿನ ಧೀರ !
ರಥಸಪ್ತಮಿಯ ದಿನದಿಂದ ಸೂರ್ಯನು ತನ್ನ ವಾಹನ ಸಪ್ತಾಶ್ವ ರಥವನ್ನೇರಿ ಉತ್ತರಾಯಣದತ್ತ ಪಯಣಿಸುವ ಪುಣ್ಯದಿನ. ಸೌರಮಂಡಲದ ಅಧಿಪತಿ ಸೂರ್ಯ. ಸೂರ್ಯನು ಆರೋಗ್ಯದ ಪ್ರತೀಕ. ಆತನ ಕಿರಣಗಳಲ್ಲಿ ಇರುವ ವಿಟಾಮಿನ್ ಡಿ ಕಣ್ಣು, ಚರ್ಮಗಳ ರೋಗ ನಿವಾರಣೆಗೆ ಹಾಗು ಆರೋಗ್ಯಾ ಭಿವೃದ್ದಿಗೆ ಸಹಾಯಕಾರಿಯಾಗಿದೆ ಎನ್ನುವದು ಎಲ್ಲರಿಗೂ ತಿಳಿದ ವಿಷಯ
ಶಾರದಾ ಕೌದಿ
ಸಂಕ್ರಾಂತಿ ಹಬ್ಬದ ನಂತರ ಸೂರ‍್ಯನು ತನ್ನ ರಥವನ್ನೇರಿ, ಉತ್ತರದ ದಿಕ್ಕಿಗೆ ಪಯಣಿಸುವನು ಎಂಬ ನಂಬಿಕೆ. ಏಳು ರಥಗಳನ್ನೇರಿ ಆ ಆಗಸದಲ್ಲಿ ಸಂಚರಿಸುವನು ಎಂಬ ನಂಬಿಕೆ. ಆತ ರಥವೇರುವ ದಿನವನ್ನು ರಥ ಸಪ್ತಮಿ ಎಂದು ಆಚರಿಸುವುದು ನಮ್ಮ ಸಂಸ್ಕೃತಿಯ ವಿಶೇಷ.
ಸೂರ್ಯದೇವನ ಆರಾಧನೆ ಮುಖ್ಯ ಅಂಗವಾಗಿ ರಥಸಪ್ತಮಿ ಮಹತ್ವ ಪಡೆದಿದೆ. ಅಂದು ಹೊಸ ರಥ ಏರುವದರೊಂದಿಗೆ ತನ್ನ ಪಯಣ ಮುಂದುವರೆಸುತ್ತಾ ಭೂಮಿಯ ಜನರಿಗೆ ನವಚೈತನ್ಯ ತುಂಬುವನು. ಮಾಘ ಮಾಸದ ಶುಕ್ಲಪಕ್ಷದ ಏಳನೇಯ ದಿನ ಬರುವದೇ ರಥಸಪ್ತಮಿ.
ರಥಸಪ್ತಮಿಯ ದಿನದಿಂದ ಸೂರ್ಯನು ತನ್ನ ವಾಹನ ಸಪ್ತಾಶ್ವ ರಥವನ್ನೇರಿ ಉತ್ತರಾಯಣದತ್ತ ಪಯಣಿಸುವ ಪುಣ್ಯದಿನ. ಸೌರಮಂಡಲದ ಅಧಿಪತಿ ಸೂರ್ಯ. ಸೂರ್ಯನು ಆರೋಗ್ಯದ ಪ್ರತೀಕ. ಆತನ ಕಿರಣಗಳಲ್ಲಿ ಇರುವ ವಿಟಾಮಿನ್ ಡಿ ಕಣ್ಣು, ಚರ್ಮಗಳ ರೋಗ ನಿವಾರಣೆಗೆ ಹಾಗು ಆರೋ ಗ್ಯಾಭಿವೃದ್ದಿಗೆ ಸಹಾಯಕಾರಿಯಾಗಿದೆ ಎನ್ನುವದು ಎಲ್ಲರಿಗೂ ತಿಳಿದ ವಿಷಯ.
ಇದನ್ನೂ ಓದಿ;Ramanand Sharma Column: ಅಮೆರಿಕ ವಲಸೆ ನೀತಿ: ಡೊನಾಲ್ಡ್ ಟ್ರಂಪ್ ಈಗ ಖಳನಾಯಕರೇ ?
ಅಂತೆಯೇ ಹಿರಿಯರು ಪ್ರಕೃತಿಯನ್ನು ಪೂಜಿಸುವದರೊಂದಿಗೆ ಸೂರ್ಯನನ್ನು ಪೂಜಿಸಿದರು. ರಥಸಪ್ತಮಿ ಆಚರಣೆಗೆ ಅನೇಕ ಪೌರಾಣಿಕ ಹಿನ್ನೆಲೆ ಇವೆ. ಕಣ್ಣಿಗೆ ಕಾಣುವ ದೇವರಾದ ಸೂರ್ಯ ನನ್ನು ಜಾತಿ ಮತ ಪಂಥಗಳ ಭೇದವಿಲ್ಲದೆ ಎಲ್ಲರು ಪೂಜಿಸುವರು. ಧಾರ್ಮಿಕ ದೃಷ್ಟಿಯಿಂದ ಕೂಡ ಬಹಳ ವಿಶೇಷವೆಂದು ಹೇಳುವ ರಥಸಪ್ತಮಿಯಂದು ಸೂರ್ಯೋದಕ್ಕೆ ಸರಿಯಾಗಿ ನದಿ, ಸಮುದ್ರ, ಸಂಗಮಗಳಲ್ಲಿ ಸ್ನಾನಮಾಡಿ ಸೂರ್ಯನಿಗೆ ಮತ್ತು ಸಪ್ತಮಿಗೆ ಅರ್ಘ್ಯ ನೀಡಿದರೆ ಪೂರ್ವಜನ್ಮದ ಪಾಪವೆಲ್ಲ ನಾಶವಾಗುವದು. ಸಕಲ ದು:ಖಗಳು ನಿವಾರಣೆ ಆಗುವವು. ಆಯುರಾರೋಗ್ಯ ಸಂಪತ್ತು ಲಭಿಸುವವು ಎಂಬ ನಂಬಿಕೆ.
ಸೂರ್ಯೋದಯದ ಸ್ನಾನ ತುಂಬ ಫಲದಾಯಕ ಎನ್ನಲಾಗಿದೆ. ಔಷಧಿಯ ಗುಣವುಳ್ಳ ಎಕ್ಕೆ ಎಲೆ ಸೂರ್ಯದೇವನಿಗೆ ತುಂಬ ಇಷ್ಟವಾದ್ದರಿಂದ ಸ್ನಾನಮಾಡುವಾಗ 7 ಎಕ್ಕೆ ಎಲೆಗಳನ್ನು ಉಪಯೋ ಗಿಸಿ ಸ್ನಾನಮಾಡುವ ವಾಡಿಕೆ.
ರಥಸಪ್ತಮಿಯ ದಿನ ಮನೆಬಾಗಿಲಲ್ಲಿ ಸೂರ್ಯನ ರಥ ಬಿಡಿಸಿ ಅರಿಷಿಣ ಕುಂಕುಮ ಗೆಜ್ಜೆವಸ್ತ್ರ ಏರಿಸಿ ಪೂಜಿಸುವರು. ಎಕ್ಕೆ ಎಲೆಯಲ್ಲಿ ತುಪ್ಪದ ದೀಪ ಹಚ್ಚಿ ನೀರಿನ ತಟ್ಟೆಯಲ್ಲಿಟ್ಟು ಸೂರ್ಯನಿಗೆ ಬೆಳಗುವರು. ಚಿಕ್ಕಪಾತ್ರೆಯಲ್ಲಿ ಹಾಲನ್ನು ಉಕ್ಕುಬರುವಂತೆ ಕುದಿಸಿ ಆ ಹಾಲನ್ನೇ ನೈವೇದ್ಯ ಮಾಡು ವರು. ಹೀಗೆ ರಥಸಪ್ತಮಿಯ ಹಬ್ಬದ ಕೇಂದ್ರಬಿಂದು ಜಗದ ಅಧಿನಾಯಕನ್ನು ಕೆಳಗಿನ ಮಂತ್ರ ದೊಂದಿಗೆ ಭಕ್ತಿ ಭಾವದಿಂದ ಪೂಜಿಸುವರು.
ಯೋಗಾಸನಗಳಲ್ಲಿ ಸೂರ್ಯ ನಮಸ್ಕಾರಕ್ಕೆ ಮೊದಲ ಪ್ರಾಶಸ್ತ. ಇದು ಮನಸ್ಸು, ದೇಹ ಹಾಗು ಉಸಿರಾಟಕ್ಕೆ ಪರಿಣಾಮಕಾರಿಯಾಗಿದೆ. ಯೋಗವನ್ನು ಅಭ್ಯಾಸ ಮಾಡುವವರು, ರಥಸಪ್ತಮಿಯ ದಿನ ಹಲವು ಸೂರ್ಯನಮಸ್ಕಾರಗಳನ್ನು ಮಾಡುವುದುಂಟು. ಇದರಿಂದಾಗಿ, ಸೂರ್ಯನಿಗೆ ನಮಿಸಿ ದಂತೆಯೂ ಆಗುತ್ತದೆ ಮತ್ತು ದೇಹದ ಆರೋಗ್ಯಕ್ಕೂ ಉತ್ತಮ. ರಥಸಪ್ತಮಿ ಅತ್ಯಂತ ವಿಶಿಷ್ಟವಾದ ದಿನ. ಮನೆಕಟ್ಟಲು, ಮದುವೆ ಮುಂಜಿವೆ, ಬಂಗಾರ ಮತ್ತು ಬಟ್ಟೆ ಖರೀದಿ, ಹೊಸ ಆಸ್ತಿ
ಖರೀದಿ ಮುಂತಾದ ಎಲ್ಲ ಒಳ್ಳೆಯ ಕಾರ್ಯಗಳಿಗೆ ಶುಭದಿನವೆಂದು ಪರಗಣಿಸುವರು. ಇನ್ನು ಗ್ರಹ ಗಳ ಅಧಿಪತಿ ಸೂರ್ಯ ನೇರುವ ರಥ ಕೇವಲ ವಾಹನವಲ್ಲ. ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಎನಿ ಸುವ 7 ಸಂಖ್ಯೆಯನ್ನು ಸೂರ್ಯನು ಪ್ರತಿನಿಧಿಸುತ್ತಾನೆ. ಇವು ದೇಹದಲ್ಲಿ 7 ಚಕ್ರಗಳನ್ನು, ಕಾಮನ ಬಿಲ್ಲಿನ 7 ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಆಧ್ಯಾತ್ಮಿಕ ದೃಷ್ಟಿಯಲ್ಲಿ ರಥವೆಂದರೆ ಶರೀರ. ಸಪ್ತಾಶ್ವಗಳೆಂದರೆ ಸಪ್ತ ಚೈತನ್ಯಗಳು. ಸೂರ್ಯನು ನಿಯಮಬದ್ಧ ಉದಯ ಮತ್ತು ಅಸ್ತಂಗಗಳ ಮೂಲಕ ನಿಯಮಬದ್ದ ಜೀವನಪಾಠ ಕಲಿಸು ತ್ತಿರುವದನ್ನು ಕಾಣುತ್ತೇವೆ. ಆಧುನಿಕ ಯುಗದಲ್ಲಿ ಸೂರ್ಯನ ಬೆಳಕನ್ನು ವೈಜ್ಞಾನಿಕ ವಿಶ್ಷೇಷಣೆಗೆ ಒಳಪಡಿಸಲಾಗಿದೆ; ವಿಜ್ಞಾನದ ಪ್ರಕಾರ ಸೂರ್ಯನ ಬೆಳಕಿನಲ್ಲಿ ಏಳು ಬೆಳಕುಗಳು ಅಡಗಿವೆ. ಮಸೂ ರದ ಮೂಲಕ ಸೂರ್ಯನ ಬೆಳಕನ್ನು ಹಾಯಿಸಿದಾಗ, ಏಳು ಬಣ್ಣಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಇದೊಂದು ನಿಜಕ್ಕೂ ಅಪರೂಪದ ಸಂಶೋಧನೆ. ಸೂರ್ಯನು ರಥಸಪ್ತಮಿಯಂದು ಏರುವ ರಥವನ್ನು ಏಳು ಕುದುರೆಗಳು ಎಳೆಯುತ್ತವೆ ಎಂಬ ನಂಬಿಕೆಯೂ ಇದೆ. ನಮ್ಮ ಸಂಸ್ಕೃತಿಯ ಪ್ರಕಾರ ಸೂರ್ಯನಿಗೆ ನೀಡುತ್ತಿದ್ದ ಗೌರವವನ್ನು, ಏಳಬಣ್ಣದ ಕುರಿತಾದ ವೈಜ್ಞಾನಿಕ ಸಂಶೋ ಧನೆಯು ಪರೋಕ್ಷವಾಗಿ ಪ್ರಮಾಣೀಕರಿಸಿದೆ ಎನ್ನಬಹುದು.
ನಮ್ಮ ದೇಶದ ಪುರಿಯ ಕೊನಾರ್ಕನಲ್ಲಿ ರಥ ಮಾದರಿಯ ಸೂರ್ಯ ದೇವಾಲಯ ಜಗತ್ಪ್ರಸಿದ್ಧ ವಾಗಿದೆ. ಹಾಗೆ ಗುಜರಾತನ ಮೊಧೇರಾದಲ್ಲಿ ಅತಿ ಪುರಾತನ ಸೂರ್ಯ ದೇವಾಲಯ ತುಂಬಾ ವಿಶಿಷ್ಟವಾಗಿದೆ. ರಥಸಪ್ತಮಿಯಂದು ಇಲ್ಲಿ ಸೂರ್ಯ ದೇವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವು ಭಾಗಗಳಲ್ಲಿ ಸೂರ್ಯನಿಗೆ ದೇಗುಲಗಳಿವೆ; ಅವುಗಳಲ್ಲಿ ಕೆಲವು ನಾಶವಾಗಿವೆ.
ಇನ್ನು ಕೆಲವು ಉಳಿದುಕೊಂಡಿವೆ. ಸೂರ್ಯನನ್ನು ದೇವರು ಎಂದು ಕರೆದಿರುವ ನಮ್ಮ ಸಂಸ್ಕೃತಿ ಯು, ಅವನಿಗೆ ರಥ ಸಪ್ತಮಿಯ ದಿನ ವಿಶೇಷ ಗೌರವ ನೀಡುವುದು ನಿಜಕ್ಕೂ ವಿಶೇಷ ಎನಿಸಿದೆ.
ಏಳು ಕುದುರೆಗಳು
ನಮ್ಮ ದೇಶದ ವಾಸ್ತುಶಿಲ್ಪದಲ್ಲಿ ಹಲವು ಕಡೆ ಸೂರ್ಯನ ಶಿಲಾ ಪ್ರತಿಮೆಗಳನ್ನು ಐತಿಹಾಸಿಕ ಕಾಲ ದಲ್ಲಿ ನಿರ್ಮಿಸಲಾಗಿದೆ. ಅಲ್ಲೆಲ್ಲಾ ಸೂರ್ಯನು ಒಂದು ರಥದ ಮೇಲೆ ಕುಳಿತಂತೆ ಚಿತ್ರಿಸಿ, ಆ ರಥ ವನ್ನು ಏಳು ಕುದುರೆಗಳು ಎಳೆಯುವಂತೆ ಕಂಡರಿಸಲಾಗಿದೆ. ಸೂರ್ಯನು 7ನ್ನು ಪ್ರತಿನಿಧಿಸುವ ಅಪರೂಪದ ವಾಸ್ತು ಇದು. ಆಧುನಿಕ ವಿಜ್ಞಾನವು ಸೂರ್ಯನ ಬೆಳಕಿನಲ್ಲಿ 7 ಬಣ್ಣಗಳು ಅಡಗಿವೆ ಎಂದು ಸಂಶೋಧನೆ ನಡೆಸಿದ್ದು, ಇವು ಸೂರ್ಯನ 7 ಕುದುರೆ ಗಳನ್ನು ನೆನಪಿಸುತ್ತವೆ.