ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಉತ್ತರ ಕನ್ನಡದ ಸುಗ್ಗಿ ಕುಣಿತ

ಸುಗ್ಗಿ ಕುಣಿತವು ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಮೃದ್ಧವಾದ -ಸಲಿಗಾಗಿ ದೇವತೆಗೆ ಕೃತಜ್ಞತೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ವಾಗಿದೆ. ಹೋಳಿ ಹಬ್ಬ ಸಮೀಪಿಸಿದ ತಕ್ಷಣ, ಸುಗ್ಗಿಯ ಕಾಲ ಮತ್ತು ಆಚರಣೆಗಳು ಪ್ರಾರಂಭ ವಾಗುತ್ತವೆ.

ಉತ್ತರ ಕನ್ನಡದ ಸುಗ್ಗಿ ಕುಣಿತ

Profile Ashok Nayak Mar 22, 2025 8:12 AM

ಸುರೇಂದ್ರ ಪೈ, ಭಟ್ಕಳ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬರುವ ಸುಗ್ಗಿ ಕುಣಿತವು ನಿಜಕ್ಕೂ ವರ್ಣರಂಜಿತ ಜನಪದ ಆಚರಣೆ. ಹೋಳಿ ಹಬ್ಬದ ಸಮಯದಲ್ಲಿ ಕಾಣಸಿಗುವ ಈ ಕುಣಿತವು, ನಮ್ಮ ನಾಡಿನ ಶ್ರೀಮಂತ ಪರಂಪರೆಯ ಭಾಗ ಎನಿಸಿದೆ.

ಹೋಳಿ ಹುಣ್ಣಿಮೆ ಮೊನ್ನೆ ತಾನೇ ಮುಗಿದಿದೆ. ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳದ ಭಾಗದಲ್ಲಿ ಹಾಲಕ್ಕಿ ಸಮುದಾಯದವರು ತಲೆತಲಾಂತರದಿಂದಲೂ ನಡೆಸಿಕೊಂಡು ಬರುತ್ತಿರುವ ಸುಗ್ಗಿ ಕುಣಿತ’ವು ಜಾನಪದ ಕಲಾ ಪ್ರಕಾರಗಳಲ್ಲಿ ಒಂದು. ಹೋಳಿ ಹಬ್ಬದ ಸಮಯದಲ್ಲಿ ಉತ್ತರ ಕನ್ನಡದಹಾಲಕ್ಕಿ ಒಕ್ಕಲಿಗ, ಗುನಗಿ, ಹಳ್ಳೇರ, ಮುಕ್ರಿ, ಕೋಮಾರ ಪಂತ ಸಮುದಾಯದ ಜನರ ಸುಗ್ಗಿ ಕುಣಿತ ನೃತ್ಯ ಮನಸೆಳೆಯುತ್ತಿದೆ. ತಲೆಗೆ ಬಣ್ಣ ಬಣ್ಣದ ಗರಿಗಳ ತುರಾಯಿ ಕಟ್ಟಿಕೊಂಡು, ಸಾಂಪ್ರದಾಯಿಕ ಹಾಡುಗಳಿಗೆ ಗುಮಟೆ ಪಾಂಗ್, ಕಂಸಾಳೆ, ನಗಾರಿ, ಜಾಗಟೆ ಸದ್ದಿಗೆ ಕಲಾವಿದರು ’ಚೋಹೋಚೋ...ಸೋಹೋಚೋ...’ ಎಂಬ ಕೂಗು ಹಾಕುತ್ತಾ ಮನೆಯಿಂದ ಮನೆಗೆ ಹೆಜ್ಜೆ ಹಾಕುತ್ತಾ, ಸುಗ್ಗಿ ಕುಣಿತವನ್ನು ಪ್ರದರ್ಶನ ಮಾಡುತ್ತಾರೆ.

ಇದನ್ನೂ ಓದಿ: Surendra Pai Column: ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣವೇ ?!

ಸುಗ್ಗಿ ಕುಣಿತವು ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಮೃದ್ಧವಾದ -ಸಲಿಗಾಗಿ ದೇವತೆಗೆ ಕೃತಜ್ಞತೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಹೋಳಿ ಹಬ್ಬ ಸಮೀಪಿಸಿದ ತಕ್ಷಣ, ಸುಗ್ಗಿಯ ಕಾಲ ಮತ್ತು ಆಚರಣೆಗಳು ಪ್ರಾರಂಭ ವಾಗುತ್ತವೆ.

ಮನೆಯಿಂದ ಮನೆಗೆ ಹೋಗಿ ಪ್ರದರ್ಶನ ನೀಡುವುದರಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಅವರು ನಂಬುತ್ತಾರೆ. ಸುಗ್ಗಿ ಕುಣಿತವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದ್ದು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯ ಸಂಕೇತವಾಗಿದೆ. ಬಣ್ಣ ಬಣ್ಣದ ಬಟ್ಟೆ ಧರಿಸಿ, ಗುಮಟೆ ಹಿಡಿದು ಹಾಡುವ ಸುಗ್ಗಿ ಕುಣಿತವು, ಹೋಳಿ ಹಬ್ಬದ ಸಮಯದಲ್ಲೇ ನಡೆಯುವುದು ವಿಶೇಷ. ಇದೇ ಸಮಯದಲ್ಲಿ ಇತರ ಕೆಲವು ಪಂಗಡದವರು ಹೋಳಿ ಕುಣಿತವನ್ನು ನಡೆಸುವುದನ್ನು ಇಲ್ಲಿ ಸ್ಮರಿಸಬಹುದು.