Gururaj Gantihole Column: ಇಂಡಿಯನ್ ಮ್ಯಾನ್ ಎಂಬ ನಂಬಿಕೆ ಬೆಸೆಯುವ ಬಸ್ !
ಸ್ನೇಹತ್ವದ ಅತಿದೊಡ್ಡ ಪ್ರತೀಕವೆಂಬಂತೆ ಭಾರತವು QUAD (ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟ್ರಗಳೊಂದಿಗೆ ಸಮೀಪದ ಪ್ರದೇಶಗಳಲ್ಲಿ ಸಂಚಾರ ಮತ್ತು ಪರಿಕಲ್ಪನೆಗಳ ಕೇಂದ್ರ ಯೋಜನೆಗಳನ್ನು ರೂಪಿಸಲು ಮುಂದಾಳತ್ವ ವಹಿಸಿದೆ. ಇಷ್ಟೆಲ್ಲ ಸ್ನೇಹ, ನಂಬಿಕೆ, ಸಂಬಂಧಗಳ ಬೆಸುಗೆ ಬಯಸುತ್ತಿರುವ ಭಾರತದಿಂದ 50ರ ದಶಕದ ಜಗತ್ತಿನ ಒಂದು ಮಾದರಿ ಮಹಾನಂಬಿಕೆಯ ಮಾಹಾಯಾನದ ಬಸ್ ಆರಂಭಿಸಿತ್ತು ಎಂದರೆ ಸೋಜಿಗವೇ ಸರಿ!


ಗಂಟಾಘೋಷ
ಒಂದು ದೇಶ ತನ್ನ ಗಡಿಯ ಸುತ್ತ ತಂತಿಬೇಲಿ ಹಾಕಿ, ಗನ್ನು ಕೊಟ್ಟು ಸೈನಿಕರನ್ನು ನಿಯೋಜಿಸುವು ದೆಂದರೆ ದೇಶ ದೇಶಗಳ ನಡುವೆ ನಂಬಿಕೆ, ಸಹಬಾಳ್ವೆ ಎಂಬುದು ಹೊರಟುಹೋಗಿ ಅಪನಂಬಿಕೆ, ಶತೃತ್ವ, ಕುಟೀಲ ನೀತಿಗಳೇ ಹೆಚ್ಚುತ್ತಿವೆ ಎಂದರ್ಥ. ಹಿಂದೆ, ಪರಸ್ಪರರ ಸಂಪರ್ಕ, ಸಂವಹನ ಮತ್ತು ನಂಬಿಕೆಗಳೇ ಬದುಕಿನ ಭಾಗವಾಗಿದ್ದವು. ಚೀನಾದಂತಹ ಆಕ್ರಮಣಕಾರಿ ನೀತಿಯುಳ್ಳ ದೇಶಗಳು, ಭಯೋತ್ಪಾದನೆಯನ್ನೇ ಜೀವಾಳ ಮಾಡಿಕೊಂಡ ಪಾಕಿಸ್ತಾನದಂತಹ ರಾಷ್ಟ್ರಗಳು, ಅಪನಂಬಿಕೆ ಮೂಲಕ ದ್ವೀ ನೀತಿ ಅನುಸರಿಸುವ ಅಮೆರಿಕ-ಪಾಶ್ಚಾತ್ಯ ಕೂಟಗಳಿಗೆಲ್ಲ, ಪ್ರಪಂಚವೇ ನನ್ನ ಬಂಧು ಬಳಗ, ಕುಟುಂಬ ಎನ್ನುತ್ತ ಬಲಿಷ್ಠ ದೇಶವಾಗುತ್ತ ಹೊರಟಿರುವ ಭಾರತ ಮಾತ್ರವೇ ಇಂತಹ ಸ್ನೇಹಸಂಬಂಧಗಳ ಬೆಸುಗೆಗೆ ಪ್ರಾಮಾಣಿಕ ಆರಂಭಿಕನಾಗಬಲ್ಲದು ಎಂಬುದಕ್ಕೆ ಹಲವು ನಿದರ್ಶನಗಳಿವೆ.
ಭಾರತವು ಚೀನಾದ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್‌ಗೆ ಅಧಿಕೃತವಾಗಿ ಸೇರಿಲ್ಲ, ಮುಖ್ಯವಾಗಿ ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (CPEC) ಯೋಜನೆ ಪಾಕ್ ನಿಯಂತ್ರಣದಲ್ಲಿ ಇರುವ ಭಾರತದ ಕಾಶ್ಮೀರ ಭಾಗವನ್ನು ಒಳಗೊಂಡಿರುವ ಕಾರಣದಿಂದ ಭಾರತ ತನ್ನ ಭೂಸ್ವಾಮ್ಯಕ್ಕೆ ಧಕ್ಕೆ ಎಂಬ ಪ್ರತಿಭಟನಾರ್ಥವಾಗಿ ಇದರಿಂದ ಹೊರಗುಳಿದಿದೆ.
ಇದಲ್ಲೆ ಪ್ರತಿಯಾಗಿ ಭಾರತ ತನ್ನದೇ ಆದ ಭಾರತದ ಪ್ರದೇಶಗಳಲ್ಲಿ ಮತ್ತು ಹತ್ತಿರದ ದೇಶಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ ಮತ್ತು ಇವೆಲ್ಲವೂ ಪರಸ್ಪರರ ಗೌರವ, ನಂಬಿಕೆ, ಅಭಿವೃದ್ಧೀ ಹೆಚ್ಚಿಸುವಂತಹ ಯೋಜನೆಗಳು. ಹೀಗಾಗಿ, ಚೀನಾ, ಪಾಕಿಸ್ತಾನದಂತಹ ದೇಶಗಳ ಯೋಜನೆಗಳಿಗಿಂತಲೂ ಭಾರತದ ಯೋಜನೆಗಳಿಗೆ ವಿಶ್ವಮಟ್ಟದಲ್ಲಿ ಇರುವ ಗೌರವ ವಿಶೇಷವಾದುದು.
ಬಿಮ್ಸ್‌ಟೆಕ್( BIMSTEC- Bangladesh, Bhutan, India, Myanmar, Nepal, Sri Lanka and Thailand ) ಮೂಲಕ ವಿವಿಧ ದೇಶಗಳೊಂದಿಗೆ ಬಲವಾದ ಸಂಪರ್ಕ ಮತ್ತು ಸಹಕಾರ ಅಭಿವೃದ್ಧಿಯ ಪ್ರಯತ್ನಕ್ಕೆ ಬಲವಾದ ಸಹಾಯ, ಸಹಕಾರವಿರುವುದು ಭಾರತದ ನಂಬಿಕೆಯ ನಡೆತೆಗೆ ಸಾಕ್ಷಿ.
ಇದನ್ನೂ ಓದಿ: Gururaj Gantihole Column: ಕುಶಲಾಧಾರಿತ ಉದ್ಯೋಗ ಸೃಷ್ಟಿಯತ್ತ ಇಂದಿನ ನವಭಾರತ
ಇರಾನ್, ರಷ್ಯಾ ಸೇರಿದಂತೆ ದೇಶಗಳಿಗೆ ಸಂಪರ್ಕಣಾ ಮಾರ್ಗ ಸ್ಥಾಪಿಸುವ ಇಂಟರ್‌ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಗೂ ಸಮರ್ಪಕ ಬೆಂಬಲವಿರುವ ಸಾಕ್ಷಿ. ಬಾಂಗ್ಲಾ ದೇಶ, ಭಾರತ, ಮಾಯಾನ್ಮಾರ್ ರಾಷ್ಟ್ರಗಳೊಂದಿಗೆ ಬಾಂಗ್ಲಾದೇಶ-ಚೀನಾ-ಭಾರತ-ಮಾಯಾನ್ಮಾರ್ ಆರ್ಥಿಕ ಕಾರಿಡಾರ್ ಅಕ್ಕಪಕ್ಕದ ದೇಶದೊಂದಿಗಿನ ಸಹಬಾಳ್ವೆ ತತ್ವದ ಧ್ಯೋತಕ ಯೋಜನೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಗರಕೂಟ, ಶ್ರೀಲಂಕಾದಲ್ಲಿ ಪೆಟ್ರೋಲಿಯಂ ಹಬ್ ಬಂದರು ನಿರ್ಮಾಣಗಳೆಲ್ಲವೂ ಭಾರತವು ಇತರರೊಂದಿಗೆ ಸಂಬಂಧಗಳನ್ನು ಬೆಸೆಯಬಲ್ಲುದೆ ಹೊರತು, ವಿನಾಶಕಾರಕ ನಡೆಯನ್ನು ತೋರದ, ಬಯಸದ ದೇಶವಾಗಿ ಇಂದು ವಿಶ್ವಗಮನ ಸೆಳೆಯುತ್ತಿದೆ.
ಸ್ನೇಹತ್ವದ ಅತಿದೊಡ್ಡ ಪ್ರತೀಕವೆಂಬಂತೆ ಭಾರತವು QUAD (ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟ್ರಗಳೊಂದಿಗೆ ಸಮೀಪದ ಪ್ರದೇಶಗಳಲ್ಲಿ ಸಂಚಾರ ಮತ್ತು ಪರಿಕಲ್ಪನೆಗಳ ಕೇಂದ್ರ ಯೋಜನೆಗಳನ್ನು ರೂಪಿಸಲು ಮುಂದಾಳತ್ವ ವಹಿಸಿದೆ. ಇಷ್ಟೆಲ್ಲ ಸ್ನೇಹ, ನಂಬಿಕೆ, ಸಂಬಂಧಗಳ ಬೆಸುಗೆ ಬಯಸುತ್ತಿರುವ ಭಾರತದಿಂದ 50ರ ದಶಕದ ಜಗತ್ತಿನ ಒಂದು ಮಾದರಿ ಮಹಾನಂಬಿಕೆಯ ಮಾಹಾಯಾನದ ಬಸ್ ಆರಂಭಿಸಿತ್ತು ಎಂದರೆ ಸೋಜಿಗವೇ ಸರಿ!
ಜಗತ್ತು ಆಗಷ್ಟೇ ಆಧುನಿಕತೆಗೆ ತೆರೆದುಕೊಳ್ಳುತ್ತಿತ್ತು. ಯುರೋಪಿಯನ್ ಸಮಾಜದ ಯುವ ಸಮುದಾಯವು ಹೊರ ಜಗತ್ತಿನ ಸಂಸ್ಕೃತಿ, ಆಚಾರ-ವಿಚಾರಗಳ ಅನ್ವೇಷಣೆಗೆ, ಅದರ ಆಸ್ವಾದನೆ ಕಡೆಗೆ ಹೊರಟಿತು. ಇದೇ ಸಂದರ್ಭದಲ್ಲಿ 1957ರಲ್ಲಿ ಆರಂಭವಾಗಿದ್ದೇ ‘ಇಂಡಿಯಾ ಮ್ಯಾನ್’ ಎಂಬ ಮ್ಯಾಜಿಕ್ ಬಸ್! ಅಲ್ಬರ್ಟ್ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಖಾಸಗಿ ಸಂಸ್ಥೆಯು ಲಂಡನ್ ನಗರದಿಂದ ಭಾರತದ ಕೊಲ್ಕತ್ತವರೆಗಿನ 50 ದಿನಗಳ ಕಾಲ ಪ್ರಯಾಣಿಸುವ ಜಗತ್ತಿನ ಸುದೀರ್ಘ ಪ್ರಯಾಣ ಬಸ್ ಸೇವೆಯನ್ನು ಆರಂಭಿಸಿತು.

ಯೂರೋಪ್ ಖಂಡದ ಲಂಡನ್, ಡೋವರ್, ಒಸ್ಟೆಂಡ್, ಫ್ರಾಂಕ್ ಫರ್ಟ್, ಮ್ಯುನಿಕ್, ವಿಯೆನ್ನಾ, ಇಸ್ತಾಂಬುಲ್ ನಗರಗಳು ಮತ್ತು ಮಧ್ಯಪ್ರಾಚ್ಯ ಮಧ್ಯ ಏಷ್ಯಾದ ಅಂಕಾರಾ, ಟೆಹ್ರಾನ್, ಕಾಬೂಲ್ ನಗರಗಳು ಮತ್ತು ದಕ್ಷಿಣ ಏಷ್ಯಾದ ಲಾಹೋರ್, ಅಮೃತಸರ, ದೆಹಲಿ, ಆಗ್ರಾ, ಅಲಹಾಬಾದ್, ವಾರಣಾಸಿಯಿಂದ ಕೊಲ್ಕತ್ತಾದವರೆಗೆ ಈ ಬಸ್ ಪ್ರಯಾಣದ ಮಹಾಯಾತ್ರೆ ಸಾಗಿತ್ತು.
ಒಟ್ಟು 16 ಸಾವಿರ ಕಿಮೀ.ಗೂ ಅಧಿಕ ಪ್ರಯಾಣ ಹಾದಿಯನ್ನು ಹೊಂದಿದ್ದು, ಒಟ್ಟು 45 ದಿನಗಳ ಅವಧಿ ಇದಾಗಿತ್ತು. ದೀರ್ಘ ಅವಽಗೆ ತಕ್ಕಂತೆ ಇಂಡಿಯನ್ ಮ್ಯಾನ್ ಬಸ್, ತನ್ನ ಪ್ರಯಾಣಿಕರಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡ ಐರಾವತದಂತೆಯೇ ಇತ್ತು. ಡಬಲ್ ಡೆಕ್ಕರ್ (ಎರಡು ಮಹಡಿಗಳ ಬಸ್), ಎಸಿ ವ್ಯವಸ್ಥೆ, ಲೌಂಜ್ ಸೀಟಿಂಗ್, ಅಡುಗೆಮನೆ ಮತ್ತು ಊಟ ಮಾಡುವ ಜಾಗ, ಮಲಗುವ ಬಂಕ್‌ಗಳು, ಪುಸ್ತಕಗಳು, ಆಟಗಳು ಇತ್ಯಾದಿಗಳ ಲೈಬ್ರರಿ, ರೇಡಿಯೋ ಮತ್ತು ಮನರಂಜನೆ, ಅಗತ್ಯವಿದ್ದ ಸ್ಥಳಗಳಿಗೆ ಸೆರ್ವಂಟ್ ಅಥವಾ ಗೈಡ್ ಸೇರಿದಂತೆ ಸಕಲ ಸೌಕರ್ಯ ಗಳೊಂದಿಗೆ ಒಂದು ಆಧುನಿಕ ಪ್ರವಾಸದ ನೌಕೆಯಂತೆ ರೂಪುಗೊಂಡಿತ್ತು.
ಪಾಶ್ಚಾತ್ಯ ಪ್ರವಾಸಿಗಳು, ಪತ್ರಕರ್ತರು, ಲೇಖಕರು, ವಿದ್ಯಾರ್ಥಿಗಳು, ಉತ್ಸುಕಿಗಳು, ರಾಜತಾಂತ್ರಿಕರು, ವ್ಯಾಪಾರಿಗಳು, ಹಿಪ್ಪಿ ಟ್ರೇಲ್ ಪ್ರವಾಸಿಗರು ಈ ಬಸ್ ಯಾತ್ರೆಯ ಪ್ರಯಾಣಿಕರಾಗಿದ್ದರು. ಅಂದಿನ ಕಾಲದಲ್ಲಿ, ಇಂಡಿಯನ್ ಬಸ್, ಮ್ಯಾಜಿಕ್ ಬಸ್, ದಿ ಇಂಡಿಯನ್ ಮ್ಯಾನ್, ರಸ್ತೆ ಮೇಲಿನ ಹಡಗು ಎಂದೆಲ್ಲ ಅನ್ವರ್ಥನಾಮಗಳಿಂದ ವಿಶ್ವಪ್ರಸಿದ್ಧಿ ಪಡೆದಿತ್ತು!
ಲಂಡನ್ ಟು ಕೊಲ್ಕತ್ತಾ ಟು ಲಂಡನ್ ಎಂದು ಬಸ್ ಮೇಲೆ ದಪ್ಪನೆಯ ಅಕ್ಷರದಿಂದ ಬರೆಯ ಲಾಗಿದ್ದ ದಿ ಇಂಡಿಯನ್ ಮ್ಯಾನ್ ಎಂಬ ಬಸ್, 1957ರ ಏಪ್ರಿಲ್ 15ರಂದು 18 ರಾಷ್ಟ್ರಗಳ ಪ್ರಮುಖ ನಗರಗಳ ಮೂಲಕ, ಸತತ 50ದಿನಗಳ ತನ್ನ ಮೊದಲ ಪ್ರಯಾಣವನ್ನು ಲಂಡನ್ ನಗರದಿಂದ ಆರಂಭಿಸಿ ಭಾರತದ ಕೊಲ್ಕತ್ತಾಗೆ ಜೂನ್ 5ರಂದು ಬಂದು ತಲುಪಿತು. ಮೊದಲ ಯಾತ್ರೆಯಲ್ಲಿ ಒಟ್ಟು 24 ಪ್ರಯಾಣಿಕರಿದ್ದು, 32700 ಕಿಮೀ ದೂರ ಕ್ರಮಿಸಿದ್ದ ಇದರ ಪ್ರಯಾಣದರ ಆಗಿನ 85 ಪೌಂಡ್ ಆಗಿತ್ತು. ಕೊಲ್ಕತ್ತೆಯಿಂದ ಹಿಂದಿರುಗುವ ರಿಟರ್ನ್ ಟಿಕೆಟ್ ದರ 65 ಪೌಂಡ್ ಆಗಿತ್ತು.
ಹದಿನೆಂಟು ದೇಶಗಳು, ಹತ್ತಾರು ಗಡಿಪ್ರದೇಶಗಳು, ನೂರಾರು ನಗರಪಟ್ಟಣಗಳು, ಬೃಹತ್ ಬೆಟ್ಟಗುಡ್ಡಗಳು, ಕಡಿದಾದ ಕಣಿವೆಪ್ರದೇಶಗಳು, ಸರಿಯಾದ ವ್ಯವಸ್ಥೆ ಇರದಂತಹ ರಿಮೋಟ್ ಏರಿಯಾಗಳ ಜತೆಗೆ ಡಖಾಯತಿಗೆ ಹೆಸರಾದ ಜಾಗಗಳನ್ನು ಸುರಕ್ಷಿತವಾಗಿ ದಾಟಿ ಸುಗಮ ಪ್ರಯಾಣ ವನ್ನು ತನ್ನ ಪ್ರಯಾಣಿಕರಿಗೆ ಒದಗಿಸುತ್ತಿದ್ದವು ಈ ಎರಡು ಬಸ್ಸುಗಳು!
ರಾಯಲ್ ಏರ್ ಫೋರ್ಸ್ ಅಧಿಕಾರಿಯಾಗಿದ್ದ ಓಸ್ವಾಲ್ಡ್ ಜೋಸೆಫ್ ಗೆರೋ ಫಿಷರ್ (ಪ್ಯಾಡಿ) ಎಂಬಾತ ಪಶ್ಚಿಮ ದೇಶಗಳಿಂದ ಭಾರತಕ್ಕೆ ಒಂದು ವಾಣಿಜ್ಯ ಬಸ್ ಸಾರಿಗೆಯ ಕನಸು ಕಂಡು ಸಾಕಾರಗೊಳಿಸಿದವನು. ಮ್ಯಾಜಿಕ್ ಬಸ್‌ಯಾನವು ಒಬ್ಬೊಬ್ಬ ಪ್ರಯಾಣಿಕನಿಗೆ ಒಂದೊಂದು ಬಗೆಯ ವಿಶಿಷ್ಟ ಅನುಭವ ನೀಡಿತ್ತು. ಹಲವು ಸಂಸ್ಕೃತಿಗಳನ್ನು, ಜನರುಗಳನ್ನು ಏಕಕಾಲದಲ್ಲಿ ಬೇಟಿಯಾಗುವ ಮೂಲಕ ಬದುಕಿನಲ್ಲಿ ಹೊಸತನವನ್ನು ಸ್ಪೂರ್ತಿಯನ್ನು ಕಂಡುಕೊಂಡರು.
ಇಂಥಾದ್ದೇ ಒಂದು ಪ್ರಯತ್ವವನ್ನು ರೋರಿ ಮ್ಯಾಕ್ಲೀನ್ ಎಂಬ ಪ್ರವಾಸಿ ಲೇಖಕ ತನ್ನ ವಿಶಿಷ್ಟ ಅನುಭವವನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾನೆ. ಎಪ್ಪತ್ತರ ದಶಕದಲ್ಲಿ ಪಾಶ್ಚಾತ್ಯ ಯುವಕರು ಹಿಪ್ಪಿ ಟ್ರೇಲ್ ಮೂಲಕ ತಾವೇ ನಡೆಸಿದ ಅಸಾಧಾರಣ ಆತ್ಮ ಅನ್ವೇಷಣೆಯ ಹಾದಿಯಲ್ಲಿ ಯೂರೋಪ್‌ನಿಂದ ಭಾರತವರೆಗೆ ಹೊರಟ ಸುದೀರ್ಘ ಪ್ರವಾಸದ ಕುರಿತು, Magic Bus: On the Hippie Trail from Istanbul to India ಎಂಬ ಪುಸ್ತಕದಲ್ಲಿ ಈ ಯಾತ್ರೆಯ ಅನನ್ಯ ಕಥೆಯನ್ನು ವಿವರಿಸಲು ಪ್ರಯತ್ನಿಸಲಾಗಿದೆ.
1960-70ರ ಪ್ರಯಾಣಿಕರ ಫೋಟೋಗಳು, ಡೈರಿಗಳು, ಬ್ಲಾಗ್‌ಗಳು ಇಂದಿಗೂ ಲಭ್ಯವಿವೆ. ದಿ ಟೈಮ್ಸ್ ನಲ್ಲಿ ಲೇಖಕ ಇಯಾನ್ ಫ್ಲೇಮಿಂಗ್ ಅವರಿಗೆ ಮಾಜಿ ಕಾರ್ಯದರ್ಶಿ ಮತ್ತು ಜೇಮ್ಸ್ ಬಾಂಡ್ ಸರಣಿಯ ಪಾತ್ರ ಮಿಸ್ ಮನಿಪೆನ್ನಿಗೆ ಸ್ಪೂರ್ತಿಯಾಗಿದ್ದ ದಂಪತಿಗಳ ಮಗನೇ ಈ ಪುಸ್ತಕದ ಲೇಖಕ. ಪ್ರಸ್ತುತ, ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಫೆಲೋ ಮತ್ತು ವಾರ್ಷಿಕ ಶೆರ್ಬೋರ್ನ್ ಟ್ರಾವೆಲ್ ರೈಟಿಂಗ್ ಫೆಸ್ಟಿವಾದ ಸ್ಥಾಪಕ ಮತ್ತು ಮೇಲ್ವಿಚಾರಕರಾಗಿದ್ದಾರೆ.
ಇಷ್ಟೆಲ್ಲ ಹಿನ್ನಲೆ ಇರುವ ರೋರಿ ಮ್ಯಾಕ್ಲೀನ್ 70ರ ದಶಕಗಳಲ್ಲಿ ಲಕ್ಷಾಂತರ ಪಾಶ್ಚಾತ್ಯ ಯುವಕರು ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕದಿಂದ ಹೇಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪಯಣ ಕ್ಕಾಗಿ ಹಿಪ್ಪಿ ಟ್ರೇಲ್ ಮೂಲಕ ಭಾರತದತ್ತ ಪ್ರಯಾಣಿಸಿದರು ಎಂಬುದನ್ನು ವಿವರಿಸುತ್ತಾರೆ.
ಪಾಶ್ಚಾತ್ಯ ಪ್ರಯಾಣಿಕರು ಲಂಡನ್‌ನಿಂದ ಇಸ್ತಾಂಬುಲ್‌ಗೆ (ಟರ್ಕಿ), ಅಲ್ಲಿಂದ ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನದ ಮೂಲಕ ಭಾರತಕ್ಕೆ ಬಸ್ ಅಥವಾ ಟ್ರಕ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಅವರ ಗುರಿ ವಿಶೇಷವಾಗಿ ಭಾರತದ ಕಾಶಿ, ಹಿಮಾಚಲ ಪ್ರದೇಶ, ಗೋವಾದಂತಹ ಪ್ರದೇಶಗಳು ಮತ್ತು ಇಲ್ಲಿರುವ ಆಶ್ರಮಗಳು, ಆಧ್ಯಾತ್ಮಿಕ ಕೇಂದ್ರಗಳು ಹೆಚ್ಚು ಆಕರ್ಷಣೆಯಾಗಿದ್ದವು. ಬಸ್ ಪ್ರಯಾಣಗಳ ಅನುಭವ, ಯೋಗ, ಅಧ್ಯಾತ್ಮ ಮತ್ತು ಗುರುಗಳಂತಹ ಆಧ್ಯಾತ್ಮದ ಹುಡುಕಾಟದಲ್ಲಿ ತೊಡಗಿದ್ದನ್ನು ಲೇಖಕ ಕಣ್ಣಾರೆ ಕಂಡಿzರೆ, ಅನುಭವಿಸಿ ನೋಡಿ ಸಾಧ್ಯಂತ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ವಿವರಿಸಲು ಯತ್ನಿಸಿದ್ದಾರೆ.
ಇದು ಪ್ರವಾಸವಲ್ಲ, ಪರಿವೃತ್ತಿಯ ಪ್ರಾರಂಭ ಎಂದೇ ಪರಿಗಣಿಸುವ ಈ ಪುಸ್ತಕ 11 ಅಧ್ಯಾಯ ಗಳನ್ನು ಒಳಗೊಂಡಿದ್ದು, ಯಾವ ಸಾಹಸಮಯ ಸಿನಿಮಾಗೂ ಕಡಿಮೆಯಿಲ್ಲದ ಕಥಾನಕ ಹೊಂದಿದೆ. ಮೊದಲ ಅಧ್ಯಾಯದಿಂದ ಕೊನೆಯವರೆಗೆ, ಪಾಶ್ಚಾತ್ಯ ಹಿಪ್ಪಿ ಜೀವನ, ಇಸ್ತಾಂಬುಲ್ ಜೀವನ, ಅಸ್ಥಿರತೆಯುಳ್ಳ ಇರಾನ, ಅಫ್ಘಾನಿಸ್ತಾನ, ಪಾಕಿಸ್ತಾನ-ಗಡಿಗಳ ರಾಜಕೀಯ ಅಸ್ಥಿರತೆ, ಭಾರತ-ತಲೆಕೆಡಿಸುವ, ಹುಚ್ಚೆಬ್ಬಿಸುವ ಶಾಂತಿ ಇಲ್ಲಿ ಸಿಗುತ್ತದೆ ಎನ್ನುತ್ತಾರೆ ಲೇಖಕ!
ಗಡಿದಾಟಿ ಭಾರತ ಪ್ರವೇಶಿಸಿದ ಮೇಲೆ ಲೇಖಕರಿಗೆ ದೆಹಲಿ, ವಾರಾಣಸಿ, ಗೋವಾ, ಧರ್ಮಶಾಲಾ ಮುಂತಾದ ಸ್ಥಳಗಳಲ್ಲಿ ಯಾತ್ರಿಕರೊಂದಿಗೆ ಆಧ್ಯಾತ್ಮಿಕ ಅನುಭವಗಳು ನಡೆಯುತ್ತವೆ. ಎಲ್ಲರಿಗೂ ಭಾರತ ಶಾಶ್ವತ ಉತ್ತರಗಳನ್ನು ಕೊಡುವ ಶಕ್ತಿಯುಳ್ಳzದರೂ, ಪ್ರಶ್ನೆಗಳನ್ನು ಕೇಳುವ ಶಕ್ತಿ ಖಂಡಿತ ವಾಗಿಯೂ ನೀಡುತ್ತದೆ ಎನ್ನುತ್ತಾರೆ. ಜಾಗತಿನ ವಿಶಿಷ್ಟ ಬಸ್ ಎಂದು ಗುರುತಿಸಿಕೊಂಡಿದ್ದ ಇಂಡಿಯಾ ಮ್ಯಾನ್, ಇರಾನ್ ಕ್ರಾಂತಿ, ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣ, ಪಾಕ್-ಭಾರತ ಗಡಿ ಗೊಂದಲಗಳು, ಅಗ್ಗದ ವಿಮಾನ ಸೇವೆಗಳ ಲಭ್ಯತೆ, ಪಾಶ್ಚಾತ್ಯ ನೀತಿಗಳಲ್ಲಿನ ಬದಲಾವ ಣೆಯಿಂದಾಗಿ 1980ರ ವೇಳೆಗೆ ಬಸ್ ಸ್ಥಗಿತಗೊಂಡಿತು, ಹಿಪ್ಪಿ ಟ್ರೇಲ್ ನಕ್ಷೆಯಲ್ಲಿ ಮಾಯವಾಗಿ ಹೋಯಿತು.
ಮಹಾಕಾವ್ಯದ ಅನುಭವವನ್ನು ಮರುಸೃಷ್ಟಿಸುವ ಗುರಿ ಹೊಂದಿ, ಲಂಡನ್ಗೆ ಬಸ್ ಪ್ರಯಾಣವನ್ನು ಅಡ್ವೆಂಚರ್ಸ್ ಓವರ್ ಲ್ಯಾಂಡ್ ಪ್ರಯತ್ನ ಆರಂಭಿಸಿತು. ೨೦೨೩ಕ್ಕೆ ಯೋಜಿಸಲಾದ ಈ ಪ್ರಯಾಣವು 22 ದೇಶಗಳನ್ನು ಒಳಗೊಳ್ಳುವ ಗುರಿ ಹೊಂದಿತ್ತು. ಆದರೆ, ಗಡಿಪ್ರಯಾಣ ನಿರ್ಬಂಧಗಳು, ಕೋರೊನಾದಂತಹ ಸಮಸ್ಯೆಗಳು ಈ ಪ್ರಯತ್ನವನ್ನು ವಿಫಲಗೊಳಿಸಿತು. ಹೀಗಿದ್ದರೂ, ಈ ಮಹಾಕಾವ್ಯ ಪ್ರಯಾಣದ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ಸದಾ ಪ್ರಯತ್ನಗಳು ನಡೆಯುತ್ತಿವೆ. ಶಾಂತಿ, ಅಭಿವೃದ್ಧಿ ಮತ್ತು ನಂಬಿಕೆಗೆ ಪರ್ಯಾಯವಾಗಿರುವ ಭಾರತ ದೇಶದಿಂದ ಮಾತ್ರವೇ ಇಂತಹ ಪ್ರಯತ್ನ ನಡೆಯಬಲ್ಲದು!