Narada Samchara: ಅತಿಥಿಗಳ ಹಿಂಡು!
ಮೈಕ್ರೋಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕರಾಗಿದ್ದುಕೊಂಡು ಲೋಕೋಪಕಾರಿ ಕೆಲಸಗಳಲ್ಲೂ ಭಾರಿ ಹೆಸರು ಮಾಡಿರುವ ಬಿಲ್ ಗೇಟ್ಸ್. ತಮ್ಮ ತಂಡದೊಂದಿಗೆ ಸಂಸತ್ತಿಗೆ ದಾಂಗುಡಿಯಿಟ್ಟ ಬಿಲ್ ಗೇಟ್ಸ್ ಅವರು, ಆರೋಗ್ಯ ಖಾತೆ ಸಚಿವ ಜೆ.ಪಿ.ನಡ್ಡಾ, ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ರನ್ನು ಮಾತ್ರವಲ್ಲದೆ ಒಂದಷ್ಟು ಉನ್ನತಾಧಿಕಾರಿಗಳನ್ನೂ ಭೇಟಿ ಮಾಡಿ ಕೆಲ ವಿಷಯಗಳಿಗೆ ಸಂಬಂಧಿಸಿ ದಂತೆ ವಿಚಾರ-ವಿನಿಮಯ ಮಾಡಿಕೊಂಡರಂತೆ.


ಸರಕಾರದ ಆಯಕಟ್ಟಿನ ಸ್ಥಾನಗಳಲ್ಲಿರುವವರನ್ನು ಭೇಟಿ ಮಾಡಲು ದೇಶ-ವಿದೇಶಗಳ ಗಣ್ಯರು ತವಕಿಸುವುದು ಮತ್ತು ಅದಕ್ಕಾಗಿ ಸಂಬಂಧಪಟ್ಟವರಿಂದ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ತವಕಿಸುವುದು ಹೊಸದೇನಲ್ಲ. ಈ ಮಾತಿಗೆ ಪುಷ್ಟಿ ನೀಡುವಂತೆ, ಸಂಸತ್ತಿಗೆ ಮೊನ್ನೆ ಬುಧವಾರ ಒಬ್ಬ ವಿಶಿಷ್ಟ ಅತಿಥಿ ಭೇಟಿ ನೀಡಿದ್ದರು. ಅವರೇ, ಮೈಕ್ರೋಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕ ರಾಗಿದ್ದುಕೊಂಡು ಲೋಕೋಪಕಾರಿ ಕೆಲಸಗಳಲ್ಲೂ ಭಾರಿ ಹೆಸರು ಮಾಡಿರುವ ಬಿಲ್ ಗೇಟ್ಸ್. ತಮ್ಮ ತಂಡದೊಂದಿಗೆ ಸಂಸತ್ತಿಗೆ ದಾಂಗುಡಿಯಿಟ್ಟ ಬಿಲ್ ಗೇಟ್ಸ್ ಅವರು, ಆರೋಗ್ಯ ಖಾತೆ ಸಚಿವ ಜೆ.ಪಿ.ನಡ್ಡಾ, ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್‌ರನ್ನು ಮಾತ್ರವಲ್ಲದೆ ಒಂದಷ್ಟು ಉನ್ನತಾಧಿಕಾರಿಗಳನ್ನೂ ಭೇಟಿ ಮಾಡಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ-ವಿನಿಮಯ ಮಾಡಿಕೊಂಡರಂತೆ.
ಇದನ್ನೂ ಓದಿ: Narada Sanchara: ಕಾಂಗ್ರೆಸ್ ಪಕ್ಷವು ‘ಶಾಂತಿ’ನಿವಾಸವೇ?!
ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅಧಿಕಾರಾವಧಿಯಲ್ಲಿ ಗೂಗಲ್ ಕಂಪನಿಯ ಸುಂದರ್ ಪಿಚೈ ಅವರು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಹೀಗೆಯೇ ಭೇಟಿ ಮಾಡಿ ದ್ದುಂಟು. ಬಲ್ಲವರು ಹೇಳುವಂತೆ, ಅಮೆರಿಕದ/ ಜಾಗತಿಕ ಮಟ್ಟದ ದೈತ್ಯ ಕಂಪನಿಗಳಿಗೆ ಭಾರತೀಯ ಮೂಲದವರನ್ನು ಸಿಇಒಗಳಾಗಿ ನಿಯೋಜಿಸುವ ಪರಿಪಾಠ ಶುರುವಾದಾಗಿನಿಂದ, ‘ವಾಣಿಜ್ಯಿಕ’ ಮಾತುಕತೆಗಳಿಗೆ ಸಂಬಂಧಿಸಿ ಅವರನ್ನೇ ಭಾರತದತ್ತ ಕಳಿಸಿಕೊಡುವ ಬೆಳವಣಿಗೆಗೂ ವೇಗ ಸಿಕ್ಕಿದೆ.
ಆಲಾಬೆಟ್ ಮತ್ತು ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲಾ, ಅಡೋಬ್‌ನ ಶಂತನು ನಾರಾಯಣ್, ಐಬಿಎಂನ ಅರವಿಂದ್ ಕೃಷ್ಣ, ಸ್ಟಾರ್ ಬಕ್ಸ್‌ನ ಲಕ್ಷ್ಮಣ್ ನರಸಿಂಹನ್, ಅರಿಸ್ಟಾ ನೆಟ್‌ವರ್ಕ್ಸ್‌ನ ಜಯಶ್ರೀ ಉಲ್ಲಾಳ್, ಚಾನೆಲ್ ಸಂಸ್ಥೆಯ ಜಯಶ್ರೀ ನಾಯರ್ ಹೀಗೆ ಭಾರತೀಯ ಮೂಲದ ಸಿಇಒಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿದೇಶಿ ಮೂಲದ ಕಂಪನಿ ಗಳ ಆಯಕಟ್ಟಿನ ಸ್ಥಾನಗಳಿಗೆ ಭಾರತೀಯ ಮೂಲದವರು ನಿಯೋಜಿಸಲ್ಪಟ್ಟರೆ “ಇವರು ನಮ್ಮೋ ರು ಕಣ್ರೀ‘ ಎಂದು ಹೇಳಿಕೊಂಡು ನಮ್ಮಂಥವರು ಖುಷಿ ಪಡುತ್ತೇವೆ; ಆದರೆ ಇಂಥ ನಿಯೋಜನೆ/ನೇಮಕಾತಿಗಳ ಹಿಂದೆ ಆಯಾ ಕಂಪನಿಗಳು ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿಕೊಂಡಿರುತ್ತವೆ ಎಂಬುದು ನಮಗೆ ಗೊತ್ತಾಗುತ್ತದೆಯೇ?!
ನಿತೀಶರ ಉಪನ್ಯಾಸ ಹಾರ್ವರ್ಡ್ ಕೆನಡಿ ಸ್ಕೂಲ್’ನಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಉದ್ದೇ ಶಿಸಿ ಉಪನ್ಯಾಸ ನೀಡುವುದಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ‘ಬುಲಾವ್’ ಬಂದಿದೆಯಂತೆ. ‘ಶಿಕ್ಷಣ, ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣದ ವಿಷಯದಲ್ಲಿ ಬಿಹಾರದ ದೃಷ್ಟಿಕೋನ’ ಎಂಬುದು ಅವರಿಗೆ ನೀಡಲಾಗಿರುವ ವಿಷಯವಂತೆ. ಅಂದ ಹಾಗೆ, ಸದರಿ ಉಪನ್ಯಾಸ ನೀಡುವುದಕ್ಕೆ ನಿತೀಶರೇನೂ ಅಲ್ಲಿಗೆ ತೆರಳಬೇಕಿಲ್ಲ, ಏಕೆಂದರೆ ಇದು ‘ಆನ್‌ಲೈನ್’ ಮಾರ್ಗೋ ಪಾಯದಲ್ಲಿ ನಡೆಯಲಿರುವ ಉಪನ್ಯಾಸ ಹಾಗೂ ಅದಕ್ಕೆ ಸಮಯ ನಿಗದಿಯಾಗಿರುವುದು ಏಪ್ರಿಲ್ ನಲ್ಲಿ. ಭಾರತದ ರಾಜಕೀಯ ವಲಯದಲ್ಲಿ ‘ಪಲ್ಟುರಾಮ್’ ಎಂದೇ (ಕು) ಖ್ಯಾತರಾಗಿರುವ ನಿತೀಶ್ ಕುಮಾರ್ ಅವರು ಸದರಿ ವಿಷಯದ ಕುರಿತಾಗಿ ತಮ್ಮ ‘ಬಿಹಾರಿ ಆಕ್ಸೆಂಟ್’ನಲ್ಲಿ ಹೇಗೆ ಉಪನ್ಯಾಸ ನೀಡಬಹುದು ಎಂಬುದನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ರಾಜಕೀಯ ವಿಶ್ಲೇಷಕರು ಮಾತ್ರವಲ್ಲದೆ, ನಿತೀಶರ ಟೀಕಾಕಾರರು ಕೂಡ ತಂತಮ್ಮ ಕಿವಿಯೊಳಗಿನ ‘ಗುಗ್ಗೆ’ಯನ್ನು ಚೊಕ್ಕ ಮಾಡಿಸಿಕೊಂಡಿ ದ್ದಾರಂತೆ!