ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಕಾಂಗ್ರೆಸ್ ಪಕ್ಷವು ‘ಶಾಂತಿ’ನಿವಾಸವೇ?!

ನಿಮಗೆ ವಿಜಯಶಾಂತಿ ಗೊತ್ತುಂಟಲ್ಲವೋ?! ಅದೇ ಮಾರಾಯ್ರೇ... ‘ಲೇಡಿ ಅಮಿತಾಭ್ ಬಚ್ಚನ್’ ಎಂದೇ ಕಂಡಾಬಟ್ಟೆ ಫೇಮಸ್ ಆಗಿದ್ದ ತೆಲುಗು ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್... ಅವರೀಗ ಭಾರಿ ಸುದ್ದಿ ಯಲ್ಲಿದ್ದಾರೆ ನೋಡಿ! ಕಾರಣ, ಇತ್ತೀಚೆಗಷ್ಟೇ ಅವರು ತೆಲಂಗಾಣ ಕಾಂಗ್ರೆಸ್‌ನಿಂದ ‘ಎಂಎಲ್‌ ಸಿ’ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು, ವಿಧಾನ ಪರಿಷತ್ತಿನ ಸದಸ್ಯರಾಗಲು ಸಜ್ಜಾಗಿದ್ದಾರೆ.

ಕಾಂಗ್ರೆಸ್ ಪಕ್ಷವು ‘ಶಾಂತಿ’ನಿವಾಸವೇ?!

Profile Ashok Nayak Mar 18, 2025 9:25 AM

ನಾರದ ಸಂಚಾರ

ಕಲಹಪ್ರಿಯ

ನಿಮಗೆ ವಿಜಯಶಾಂತಿ ಗೊತ್ತುಂಟಲ್ಲವೋ?! ಅದೇ ಮಾರಾಯ್ರೇ... ‘ಲೇಡಿ ಅಮಿತಾಭ್ ಬಚ್ಚನ್’ ಎಂದೇ ಕಂಡಾಬಟ್ಟೆ ಫೇಮಸ್ ಆಗಿದ್ದ ತೆಲುಗು ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್... ಅವರೀಗ ಭಾರಿ ಸುದ್ದಿಯಲ್ಲಿದ್ದಾರೆ ನೋಡಿ! ಕಾರಣ, ಇತ್ತೀಚೆಗಷ್ಟೇ ಅವರು ತೆಲಂಗಾಣ ಕಾಂಗ್ರೆಸ್‌ನಿಂದ ‘ಎಂಎಲ್‌ ಸಿ’ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು, ವಿಧಾನ ಪರಿಷತ್ತಿನ ಸದಸ್ಯರಾಗಲು ಸಜ್ಜಾಗಿದ್ದಾರೆ. ಇಷ್ಟು ಮಾತ್ರವೇ ಅಲ್ಲ ಸ್ವಾಮೀ, ತೆಲಂಗಾಣ ಸರಕಾರದ ಸಚಿವ ಸಂಪುಟವೂ ಸದ್ಯದಲ್ಲೇ ಪುನರ್‌ ರಚನೆಗೊಳ್ಳಲಿರುವುದರಿಂದ, ಈ ಲೇಡಿ ಸೂಪರ್‌ಸ್ಟಾರ್‌ಗೆ ಮಂತ್ರಿ ಗಿರಿಯ ಬಂಪರ್ ಲಾಟರಿ ಹೊಡೆದರೂ ಅಚ್ಚರಿಯಿಲ್ಲ ಎಂಬುದು ಅಲ್ಲಿನ ಒಂದಷ್ಟು ‘ಇನರ್ಮೆಂಟುಗಳು’ ತ್ರಿಲೋಕ ಸಂಚಾರಿ ನಾರದರಿಗೆ ಒಪ್ಪಿಸಿರುವ ವರದಿ!

ಇದನ್ನೂ ಓದಿ: Narada Sanchara: ಇನ್ನಾದರೂ ಎಚ್ಚೆತ್ತುಕೊಳ್ಳೋಣ

ತೆಲುಗು ಸಿನಿಮಾಗಳಲ್ಲಿ ‘ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ’ಯ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸಿದ ಹೆಗ್ಗಳಿಕೆ ವಿಜಯಶಾಂತಿ ಅವರದ್ದು. ಅದರಲ್ಲೂ, ನಮ್ಮ ಕನ್ನಡದ ಚರಣ್‌ರಾಜ್ ಅವರು ಖಳ ನಾಯಕರಾಗಿ ಕಾಣಿಸಿಕೊಂಡಿದ್ದ ‘ಪ್ರತಿಘಟನ’ ಚಿತ್ರದಲ್ಲಿ ವಿಜಯಶಾಂತಿ ಅಬ್ಬರಿಸಿದ ಪರಿಯನ್ನು ಕಂಡು, “ಇವರು ರಾಜಕೀಯಕ್ಕೆ ಬಂದ್ರೆ ಶಾನೆ ಚೆನ್ನಾಗಿರುತ್ತಲ್ವಾ?" ಅಂದೋರು ಬಹಳಷ್ಟು ಮಂದಿ. ಇದು ಅದ್ಯಾವಾಗ ವಿಜಯಶಾಂತಿಯವರ ಕಿವಿಗೆ ಬಿತ್ತೋ ಗೊತ್ತಿಲ್ಲ, ಚಿತ್ರರಂಗವನ್ನು ಚಿಮ್ಮು ಹಲಗೆಯಾಗಿಸಿಕೊಂಡು ರಾಜಕೀಯಕ್ಕೆ ಧುಮುಕಿಬಿಡೋದೇ?!

ಹಾಗೆ ನೋಡಿದರೆ, ರಾಜಕೀಯ ರಂಗದಲ್ಲೂ ‘ವೈವಿಧ್ಯಮಯ’ ಪಾತ್ರಗಳನ್ನು ನಿರ್ವಹಿಸಿದ್ದು ವಿಜಯಶಾಂತಿಯವರ ಹೆಗ್ಗಳಿಕೆ. ‘ವೈವಿಧ್ಯಮಯ’ ಅಂದಾಕ್ಷಣ ಅದನ್ನು ನೀವು ‘ವಿಭಿನ್ನತೆ’ ಎಂಬ ಪರಿಕಲ್ಪನೆಯೊಂದಿಗೆ ಸಮೀಕರಿಸಿಕೊಳ್ಳಬಾರದು; ಅವರು ವಿವಿಧ ಪಕ್ಷಗಳಿಗೆ ಜಂಪ್ ಮಾಡಿದ್ದನ್ನು ಸಂಕ್ಷೇಪಿಸಿ ಹಾಗೆ ಹೇಳಲಾಗಿದೆಯಷ್ಟೇ!

ಈ ಮಾತಿಗೆ ಪುರಾವೆ ಬೇಕೇ, ಇಲ್ಲಿದೆ ನೋಡಿ- ಮೊದಲಿಗೆ ಬಿಜೆಪಿಯಿಂದ ತಮ್ಮ ರಾಜಕೀಯ ಪಯಣವನ್ನು ಶುರುಹಚ್ಚಿಕೊಂಡ ವಿಜಯಶಾಂತಿ, ನಂತರ ಅಲ್ಲೇಕೋ ಗಿಟ್ಟಲಿಲ್ಲವೆಂದು ಹೊರ ಬಂದು ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಿದರು. ಅದೂ ಯಾಕೋ ಸರಿಹೋಗಲಿಲ್ಲವೆಂದು ‘ಭಾರತ ರಾಷ್ಟ್ರ ಸಮಿತಿ’ (ಬಿಆರ್‌ಎಸ್) ಪಕ್ಷವನ್ನು ಸೇರಿದರು. ಅದೂ ಯಾಕೋ ಅಡ್ಜಸ್ಟ್ ಆಗಲಿಲ್ಲ, ‘ಹೋಗ್ ಅತ್ಲಾಗಿ’ ಅಂದ್ಕೊಂಡು ಕಾಂಗ್ರೆಸ್‌ಗೆ ಕಾಲಿಟ್ಟರು. ಅಲ್ಲೂ ಪರಿಸ್ಥಿತಿ ‘ಅನುಕೂಲಕರವಾಗಿ’ ಇರಲಿಲ್ಲ ಅನ್ಸುತ್ತೆ, ‘ಟಣ್’ ಅಂತ ಬಿಜೆಪಿಗೆ ಜಿಗಿದರು.

ಅಲ್ಲೊಂದಿಷ್ಟು ದಿನ ಏಗಿದ ನಂತರ ಮತ್ತೆ ಈಗ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ ವಿಜಯಶಾಂತಿ. ಅವರು ಇಷ್ಟೊಂದು ‘ಪಾತ್ರ ವೈವಿಧ್ಯ’ ಮೆರೆದು ಮತ್ತೆ ಹೀಗೆ ಕಾಂಗ್ರೆಸ್‌ಗೇ ಮರಳಿರೋದನ್ನು ಕಂಡ ಕೆಲವರು, “ಕಾಂಗ್ರೆಸ್ಸು ವಿಜಯ‘ಶಾಂತಿ’ನಿವಾಸವೇ?" ಎಂದು ಪ್ರಶ್ನಿಸುತ್ತಿದ್ದಾರಂತೆ!!