ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೀರಂಗನಿಗೆ ನೈವೇದ್ಯವಾದ ಬೆಲ್ಲದ ತುಂಡು

ಅಮ್ಮ ನಿನ್ನ ಮೊಮ್ಮಗನಿಗೆ ಮಾತು ಬರುವಂತೆ ಮಾಡುತ್ತೇನೆ. ಈಗ ಹೇಳು ನಿನ್ನ ಮೊಮ್ಮಗು ಮಾತಾಡಿ ದರೆ ನನ್ನ ರಂಗನಾಥನಿಗೆ ಏನು ಕೊಡ್ತಿಯಾ? ಎಂದು ಕೇಳಿದರು. ಆ ವೃದ್ಧೆ ನನ್ನ ಬಳಿ ಏನಿದೆ ಸ್ವಾಮಿ! ನಾನೊಬ್ಬ ತಿರುಕಿ ತಿನ್ನಲು ಸಹ ಗತಿ ಇಲ್ಲದವಳು. ನಾನೇನು ಕೊಟ್ಟೇನು ಎಂದಳು. ರಾಮಾನುಜರು ಅದೆಲ್ಲ ಗೊತ್ತಿಲ್ಲ. ನನ್ನ ರಂಗನಾಥ ತುಂಬಾ ಸ್ವಾರ್ಥಿ ನೀನೇನಾದರೂ ಕೊಟ್ಟೆರೆ ಮಾತ್ರ ಅನುಗ್ರಹಿಸುವ ಎಂದರು. ಆ ವೃದ್ಧೆಗೆ ಏನೂ ತೋಚುವದಿಲ್ಲ

ಶ್ರೀರಂಗನಿಗೆ ನೈವೇದ್ಯವಾದ ಬೆಲ್ಲದ ತುಂಡು

ಒಂದೊಳ್ಳೆ ಮಾತು

rgururaj628@gmail.com

ಶ್ರೀರಂಗನ ದೇವಾಲಯ ಗರ್ಭಗುಡಿಯಲ್ಲಿ ಧ್ಯಾನಸ್ತರಾಗಿ ಕುಳಿತಿದ್ದ ರಾಮಾನುಜಾಚಾರ್ಯರಿಗೆ ಯಾರೋ ಕೂಗಿದಂತೆ ಅನುಭವವಾಯಿತು. ದೇವಾಲಯದ ಆಚೆ ದೇಶದ ನಾನಾ ಕಡೆಯಿಂದ ಬಂದಂತಹ ಭಕ್ತಾದಿಗಳು ಅವರನ್ನು ಒಮ್ಮೆಯಾದರೂ ನೋಡುವ ತವಕದಿಂದ ನಾನಾ ವಿಧವಾದ ಕಾಣಿಕೆಗಳನ್ನು ತಂದು ಕಾಯುತ್ತಾ ನಿಂತಿದ್ದರು. ಹಾಗೆಯೇ ಶ್ರೀರಂಗನಾಥನಿಗೆ ನಾನಾ ವಿಧವಾದ ವಸ್ತ್ರ ಫಲ ಪುಷ್ಪಗಳನ್ನೂ ಅರ್ಪಿಸಲು ತಂದಿದ್ದರು. ಆಚೆ ಬಂದ ರಾಮಾನುಜರು ನೇರ ಒಬ್ಬ ವೃದ್ಧೆಯ ಕಡೆ ನಡೆದರು. (ಅವರು ಧ್ಯಾನದಲ್ಲಿ ಕುಳಿತಾಗ ಧ್ವನಿ ಕೇಳಿದ್ದು ಈ ವೃದ್ಧೆಯದ್ದೆ). ರಾಮಾನುಜರ ಕಂಡು ಆ ವೃದ್ಧೆ ಕಣ್ಣು ತುಂಬಿ ನಿಮ್ಮನ್ನು ಕಾಣಲು ಬಹಳ ದೂರದಿಂದ ಬಂದಿದ್ದೇನೆ ಎಂದಳು.

ಆ ವೃದ್ಧೆಯ ಹರಕು ಸೀರೆ, ಕಾಲಿಗೆಲ್ಲ ಚುಚ್ಚಿದ ಮುಳ್ಳುಗಳನ್ನು ಕಂಡು ಏನು ತಾಯಿ ನಿನ್ನ ಸಮಸ್ಯೆ ಎಂದು ರಾಮಾನುಜರು ಕೇಳಿದರು. ಆ ವೃದ್ಧೆ ನನಗ್ಯಾರೂ ದಿಕ್ಕು ದೆಸೆಯಿಲ್ಲ ಇರೋದು ಒಬ್ಬನೇ ಮೊಮ್ಮಗ. ಅವನು ಕೂಡ ಮೂಗ. ಚಿಕ್ಕ ಮಗು ಬೇರೆ. ಅವನಿಗೆ ನಿಮ್ಮ ಅನುಗ್ರಹವಾಗಬೇಕು ಮಾತುಬರಬೇಕು ಎಂದು ಕೇಳಿಕೊಂಡಳು. ಅವರು ಆಗ ಆತ ಪುಟ್ಟ ಬಾಲಕನನ್ನು ನೋಡಿ ತಲೆಯ ಮೇಲೆ ಕೈ ಇಟ್ಟು ಆಯ್ತು.

ಇದನ್ನೂ ಓದಿ: Roopa Gururaj Column: ಹಾಲಿನ ಪಾಲು ಹಾಲಿಗೆ ನೀರಿನ ಪಾಲು ನೀರಿಗೆ

ಅಮ್ಮ ನಿನ್ನ ಮೊಮ್ಮಗನಿಗೆ ಮಾತು ಬರುವಂತೆ ಮಾಡುತ್ತೇನೆ. ಈಗ ಹೇಳು ನಿನ್ನ ಮೊಮ್ಮಗು ಮಾತಾಡಿದರೆ ನನ್ನ ರಂಗನಾಥನಿಗೆ ಏನು ಕೊಡ್ತಿಯಾ? ಎಂದು ಕೇಳಿದರು. ಆ ವೃದ್ಧೆ ನನ್ನ ಬಳಿ ಏನಿದೆ ಸ್ವಾಮಿ! ನಾನೊಬ್ಬ ತಿರುಕಿ ತಿನ್ನಲು ಸಹ ಗತಿ ಇಲ್ಲದವಳು. ನಾನೇನು ಕೊಟ್ಟೇನು ಎಂದಳು. ರಾಮಾನುಜರು ಅದೆಲ್ಲ ಗೊತ್ತಿಲ್ಲ. ನನ್ನ ರಂಗನಾಥ ತುಂಬಾ ಸ್ವಾರ್ಥಿ ನೀನೇನಾದರೂ ಕೊಟ್ಟೆರೆ ಮಾತ್ರ ಅನುಗ್ರಹಿಸುವ ಎಂದರು. ಆ ವೃದ್ಧೆಗೆ ಏನೂ ತೋಚುವದಿಲ್ಲ. ಮತ್ತೆ ರಾಮಾನುಜರು ಅದೇನದು ನಿನ್ನ ಸೆರಗಿನಲ್ಲಿ ಗಂಟು ಇದೆಯಲ್ಲ, ಅದರಲ್ಲಿ ಏನಿದೆ? ಎಂದರು.

ಆಗ ಆ ವೃದ್ಧೆ ಅಳುಕುತ್ತಾ ಇದು ನನ್ನ ಮೊಮ್ಮಗನಿಗೆ ತಂದಿದ್ದ ಬೆಲ್ಲದ ತುಂಡು. ಅರ್ಧ ತಿಂದಿ ದ್ದಾನೆ ಮಿಕ್ಕಿದ್ದು ಅರ್ಧ ಉಳಿದಿದೆ ಎಂದಳು. ರಾಮಾನುಜರು ಸರಿ ಅದನ್ನೇ ಕೊಡು ನನ್ನ ಸ್ವಾಮಿಗೆ ಅದನ್ನೇ ಕೊಡುವೆಎಂದರು ನಗುತ್ತಾ. ಅಲ್ಲಿದ್ದ ಜನರು ಆಶ್ಚರ್ಯ ಕೋಪದಿಂದ ನಾವು ನಾನಾ ವಿಧ ಫಲ ಪುಷ್ಪ ತಂದರೂ ನೋಡದ ಗುರುಗಳು ನೈವೇದ್ಯಕ್ಕಾಗಿ ಆ ಎಂಜಲು ಬೆಲ್ಲವನ್ನು ಕೇಳಿದ್ದಾರೆ. ಇದು ಯಾಕೋ ಅತಿಯಾಯಿತು ಎಂದು ಆಡಿಕೊಳ್ಳಲು ಪ್ರಾರಂಭಿಸಿದರು.

ವೃದ್ಧೆ ಬೇಡ ಸ್ವಾಮಿ ಇದು ಎಂಜಲು ಈಗಲೇ ನನ್ನ ಪಾಪ ಸಾಕಷ್ಟು ಇದೆ ಈ ಪಾಪವನ್ನೂ ಹೊರಲಾರೆ ಎಂದಳು. ರಾಮಾನುಜರು ಪ್ರಪಂಚದಲ್ಲಿ ಎಲ್ಲವೂ ಎಂಜಲೇ ತಾಯಿ, ಆ ರಂಗನಿಗೆ ಹಾಲಿನ ಅಭಿಷೇಕ ಮಾಡುವ ಹಾಲು ಕರು ಬಿಟ್ಟ ಎಂಜಲು... ಪಂಚಾಂಮೃತದಲ್ಲಿ ಒಂದಾದ ಜೇನು ತುಪ್ಪ, ಜೇನು ನೊಣದ ಎಂಜಲು, ರಂಗನಿಗೆ ಹೂಮಾಲೆಯಾಗುವ ಹೂವು... ಪಾತರಗಿತ್ತಿಯ ಎಂಜಲು.. ಇನ್ನು ಜಲರಂಗನಿಗೆ ಅಭಿಷೇಕ ಮಾಡುವ ಕಾವೇರಿ ನೀರು ಮೀನು ಮೊಸಳೆ ಹಲವು.. ಜಲಚರಗಳ ಎಂಜಲು.

ಇಲ್ಲಿ ಜಾತಿ ಮಡಿ ಮೈಲಿಗೆ ಕನಿಷ್ಠ ದನಿಷ್ಟ ಮುಖ್ಯವಲ್ಲ ಭಗವಂತನಲ್ಲಿ ಭಕ್ತಿ ಮುಖ್ಯ ಎಂದರು. ಅವರ ಮಾತನ್ನು ಕೆಲವರು ಒಪ್ಪುವದಿಲ್ಲ. ಆಗ ರಾಮಾನುಜರು. ಆ ಬೆಲ್ಲದ ತುಂಡನ್ನು ಹಿಡಿದು... ನಾರಾಯಣ ಸ್ವಿಕೃತಮ್ ಎಂದರು. ಬೆಲ್ಲದ ತುಂಡು ಸ್ವೀಕೃತವಾಗಿ ವೃದ್ಧೆಯ ಮೊಮ್ಮಗು ಜೋರಾಗಿ ‘ನಮೋ ನಾರಾಯಣಾಯ’ ಅಂತ ಕೂಗತ್ತೆ.

ಇದನ್ನು ಕಣ್ಣಾರೆ ಕಂಡ ಎಲ್ಲರೂ ಮೂಕವಿಸ್ಮಿತರಾಗಿ ರಾಮಾನುಜರ ಪಾದಕ್ಕೆ ಬೀಳುತ್ತಾರೆ. ಭಕ್ತಿ ಇರುವೆಡೆ ಯಾವ ಮೈಲಿಗೆಯೂ ಸೋಕುವುದಿಲ್ಲ. ದೇಹದ ಶುದ್ಧಿಯ ಜೊತೆ ಜೊತೆಗೆ ಮನಸ್ಸಿನ ಶುದ್ದಿಯು ಕೂಡ ಭಗವಂತನಿಗೆ ಸಮರ್ಪಿತವಾಗಬೇಕು. ಆಗ ಮಾತ್ರ ನಮ್ಮ ಭಕ್ತಿ ಅವನಿಗೆ ಸ್ವೀಕೃತ ವಾಗುವುದು.