Vinayaka M Bhatta Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ
ಪಂಡಿತನು ತಾನು ಕೊಟ್ಟ ಮಾತಿನಂತೆ ಸಂಪೂರ್ಣ ರಾಮಾಯಣ ಹೇಳಬೇಕೆಂದರೆ ವಾರ ಗಟ್ಟಲೆ ಕಾಲಾವಕಾಶ ಬೇಕು. ಆದರೆ ಆತ ಚತುರ ಬುದ್ಧಿ ಉಪಯೋಗಿಸಿ, ‘ಆದೌ ರಾಮ ತಪೋ ವನಾಭಿಗಮನಂ ಹತ್ವಾ ಮೃಗಂ ಕಾಂಚನಂ| ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|| ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ| ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||’ ಅಂತ ರಾಮಾಯಣದ ಅತಿ ಮುಖ್ಯವಾದ ಘಟನೆಗಳನ್ನು ಹೊಂದಿಸಿ ಒಂದು ಶ್ಲೋಕ ರಚಿಸಿ ಹೇಳಿಬಿಟ್ಟನಂತೆ. ಈ ಏಕಶ್ಲೋಕಿ ರಾಮಾ ಯಣಕ್ಕೆ ‘ಮಜ್ಜಿಗೆ ರಾಮಾಯಣ’ ಎಂಬ ಹೆಸರು ಬಂತಂತೆ

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ವಿದ್ಯಮಾನ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆ ಮುಂದೆ ಬಾಲಕಿಯೊಬ್ಬಳು ನಿಂತಿರುವುದನ್ನು ಕಂಡು, ತನಗೆ ಬಹಳ ಬಾಯಾರಿಕೆಯಾಗಿದ್ದು ಕುಡಿಯಲು ನೀರು ಕೊಡಬೇಕೆಂದು ಕೇಳಿದನಂತೆ. ಅದಕ್ಕೆ ಬಾಲಕಿ, “ನೀವು ನನಗೆ ರಾಮಾಯಣದ ಕಥೆಯನ್ನು ಹೇಳುವಿರಾದರೆ, ನೀರೇಕೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ" ಎಂದಳಂತೆ. ಅದಕ್ಕೆ ಪಂಡಿತ ಒಪ್ಪಿದ. ಬಾಲಕಿ ಆ ಪಂಡಿತ ನಿಗೆ ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟು, “ಈಗ ರಾಮಾಯಣದ ಕಥೆ ಹೇಳಿ" ಎಂದಳಂತೆ.
ಪಂಡಿತನು ತಾನು ಕೊಟ್ಟ ಮಾತಿನಂತೆ ಸಂಪೂರ್ಣ ರಾಮಾಯಣ ಹೇಳಬೇಕೆಂದರೆ ವಾರ ಗಟ್ಟಲೆ ಕಾಲಾವಕಾಶ ಬೇಕು. ಆದರೆ ಆತ ಚತುರ ಬುದ್ಧಿ ಉಪಯೋಗಿಸಿ, ‘ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ| ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|| ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ| ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||’ ಅಂತ ರಾಮಾಯಣದ ಅತಿ ಮುಖ್ಯವಾದ ಘಟನೆಗಳನ್ನು ಹೊಂದಿಸಿ ಒಂದು ಶ್ಲೋಕ ರಚಿಸಿ ಹೇಳಿಬಿಟ್ಟನಂತೆ. ಈ ಏಕಶ್ಲೋಕಿ ರಾಮಾಯಣಕ್ಕೆ ‘ಮಜ್ಜಿಗೆ ರಾಮಾಯಣ’ ಎಂಬ ಹೆಸರು ಬಂತಂತೆ.
ಇದನ್ನೂ ಓದಿ: Vinayaka M Bhatta Column: ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ
‘ಒಂದಾನೊಂದು ಕಾಲದಲ್ಲಿ ಶ್ರೀರಾಮನು ತಪೋವನಕ್ಕೆ ತೆರಳಿದನು, ಅಲ್ಲಿ ಕಾಂಚನ ಮೃಗವನ್ನು ಕೊಂದನು. ಸೀತೆಯ ಅಪಹರಣವಾಯಿತು. ಜಟಾಯುವಿನ ಮರಣ ವಾಯಿತು. ಸುಗ್ರೀವನೊಡನೆ ಸಂಧಿಯ ಸಂಭಾಷಣೆಯಾಯಿತು, ವಾಲಿಯನ್ನು ವಧಿಸ ಲಾಯಿತು, ಹನುಮಂತನಿಂದ ಸಮುದ್ರ ದಾಟಲ್ಪಟ್ಟಿತು ಮತ್ತು ಲಂಕಾಪುರಿ ದಹಿಸ ಲ್ಪಟ್ಟಿತು, ನಂತರದಲ್ಲಿ ರಾವಣ-ಕುಂಭಕರ್ಣಾದಿಗಳನ್ನು ಕೊಂದಾಯಿತು’ ಎಂಬಲ್ಲಿಗೆ ರಾಮಾಯಣದ ಕಥೆಯನ್ನು ಹೇಳಿದ ಹಾಗಾಯಿತಲ್ಲ. ಇನ್ನೂ ಮುಂದುವರಿದು, ‘ರಾಮವದಾ ಚರಿತವ್ಯಮ್ ನರಾವಣವತ್’- ಅಂದರೆ ‘ಜೀವನದಲ್ಲಿ ರಾಮನಂತೆ ವರ್ತಿಸ ಬೇಕು, ರಾವಣನಂತಲ್ಲ’ ಎಂದು ಹೇಳಿ ಇಡೀ ರಾಮಾಯಣದ ಸಾರವನ್ನು ಒಂದು ಸಾಲಿನಲ್ಲಿ ಹೇಳಿ ಮುಗಿಸಿಬಿಡುವವರೂ ಇದ್ದಾರೆ.
ಮೂಲ ವಾಲ್ಮೀಕಿ ರಾಮಾಯಣವನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ ಸಮಗ್ರವಾಗಿ ಕಟ್ಟಿಕೊಡುವವರಿಲ್ಲದೆ ಈ ತರಹದ ರಾಮಾಯಣವನ್ನೇ ಕೇಳಿದರೆ, ಕೊನೆಗೆ ಸೀತೆಗೂ ರಾಮನಿಗೂ ಏನು ಸಂಬಂಧವಾಯಿತು? ಎನ್ನುವ ಅಯೋಮಯ ಸ್ಥಿತಿ ಓದುಗನಿಗೆ/ಕೇಳು ಗನಿಗೆ ಉಂಟಾಗಬಹುದು. ಸಂಕೀರ್ಣ ಪಾತ್ರಗಳ ನಿರ್ವಹಣೆ, ಕಾವ್ಯಾತ್ಮಕವಾಗಿ ಹೇಳಿ ರುವ ಚಂದ್ರವಂಶದ ಇತಿಹಾಸದ ದೃಷ್ಟಿಯಿಂದ ಮಹಾಭಾರತ ಅತ್ಯಂತ ಶ್ರೇಷ್ಠ ಕಾವ್ಯ ಎನಿಸಿ ಕೊಂಡರೆ, ಶ್ಲೋಕಗಳ ಸಂಖ್ಯೆಯ ದೃಷ್ಟಿಯಿಂದಲೂ ಮಹಾಭಾರತವನ್ನು ಮೀರಿಸುವ ಕಾವ್ಯವೇ ಇಲ್ಲವೆನ್ನಬಹುದು.
18 ಅಧ್ಯಾಯಗಳನ್ನು ಹೊಂದಿರುವ ಐದನೇ ವೇದ ಎನಿಸಿಕೊಳ್ಳುವ ಮಹಾಭಾರತವು 10000 ಶ್ಲೋಕಗಳನ್ನು ಒಳಗೊಂಡಿದೆ. ಮಹಾಭಾರತದ ಘನತೆಯನ್ನು ಹೇಳುವಾಗ, ‘ಬೇರೆಲ್ಲೂ ದೊರಕದ್ದು ಮಹಾಭಾರತದಲ್ಲಿ ದೊರಕೀತು, ಆದರೆ ಮಹಾಭಾರತದಲ್ಲಿ ದೊರಕದ್ದು ಮತ್ತೆಲ್ಲಿ ಹುಡುಕಿದರೂ ವ್ಯರ್ಥ’ ಎನ್ನುವುದೂ ಇದೆ.
ವೈಚಾರಿಕವಾಗಿ ಅಷ್ಟು ಸಂಪದ್ಭರಿತವಾದ ಕೃತಿ ಅದು. ಋಷಿ ವೇದವ್ಯಾಸ ಪ್ರಣೀತ ಮಹಾಭಾರತವು, ಪ್ರಪಂಚದ ಮಹಾಕಾವ್ಯಗಳಲ್ಲಿ ಒಂದಾಗಿದೆ. ವೇದಸಾಹಿತ್ಯದ ನಂತರ ಬಂದ ವಾಲ್ಮೀಕಿ ರಾಮಾಯಣವು ಆದಿಕಾವ್ಯ ಎನಿಸಿಕೊಂಡಿದೆ. ವೇದವೇದ್ಯನಾದ ಮಹಾ ವಿಷ್ಣುವು ಶ್ರೀರಾಮನಾಗಿ ಅವತರಿಸಿದಂತೆ, ಜೀವೋತ್ಕರ್ಷಕ್ಕಾಗಿ ವೇದಗಳೇ ರಾಮಾಯಣ ವಾಗಿ ಅವತರಿಸಿದವು ಎಂಬ ನಂಬಿಕೆಯೂ ಇದೆ (ವೇದವೇದ್ಯೇ ಪರೇ ಪುಂಸಿ ಜಾತೇ ದಶ ರಥಾತ್ಮಜೇ, ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ).
ಅನೇಕ ಭಾರತೀಯ ಆಸ್ತಿಕರಿಗೆ ಮೂಲ ವಾಲ್ಮೀಕಿ ರಾಮಾಯಣವನ್ನೂ, ವ್ಯಾಸಕೃತ ಮಹಾ ಭಾರತವನ್ನೂ ಅಧ್ಯಯನ ಮಾಡುವ, ಒಂದೊಮ್ಮೆ ಅದು ಸಾಧ್ಯವಾಗದಿದ್ದರೆ ಜೀವನ ದಲ್ಲಿ ಒಮ್ಮೆಯಾದರೂ ಸಮಗ್ರವಾಗಿ ಓದುವ ಹಂಬಲವಂತೂ ಇದ್ದೇ ಇರುತ್ತದೆ. ಅದು ಸಹಜ ಕೂಡಾ. ಆದರೆ, ಅವುಗಳ ಭಾಷೆ ಮತ್ತು ಗಾತ್ರ ಇವೆರಡೂ ಸಾಮಾನ್ಯ ಓದುಗನ ಹಂಬಲಕ್ಕೆ ಪ್ರತಿಬಂಧಕವಾಗಿಬಿಡುತ್ತವೆ.
ಕಾರಣ, ರಾಮಾಯಣವನ್ನು ಓದುಗಲು ಉತ್ಸುಕನಾಗಿರುವ ಸಾಮಾನ್ಯನೊಬ್ಬ ಇಂದು 24000 ಸಂಸ್ಕೃತ ಶ್ಲೋಕಗಳನ್ನು ಓದುವುದೆಂದರೆ ಹುಡುಗಾಟವಾ? ಆ ಶ್ಲೋಕಗಳನ್ನು ಅರ್ಥಮಾಡಿಕೊಳ್ಳುವುದು ಮತ್ತೊಂದು ದೊಡ್ಡ ಸವಾಲು. ಅಷ್ಟೋ ಇಷ್ಟೋ ಸಂಸ್ಕೃತ ಬಲ್ಲವರಿಗೂ ಮೂಲ ವಾಲ್ಮೀಕಿಯ ಹೃದಯವನ್ನು ಅರ್ಥಮಾಡಿಕೊಳ್ಳುವುದು ದುಸ್ತರ; ವಿದ್ವಾಂಸರೆನಿಸಿಕೊಂಡವರೂ ಅನೇಕ ವ್ಯಾಖ್ಯಾನಗಳ ಮೂಲಕ ವಾಲ್ಮೀಯ ಹೃದಯ ವನ್ನು ಅರ್ಥೈಸಿಕೊಳ್ಳಲು ಯತ್ನಿಸುವುದುಂಟು.
ಹೀಗಿರುವಾಗ ಸಾಮಾನ್ಯರಿಗೆ ಈ ಮಹಾಕಾವ್ಯಗಳು ದಕ್ಕುವುದಾದರೂ ಹೇಗೆ? ಹಾಗಾಗಿ, ಕರ್ಣಾಕರ್ಣಿತವಾಗಿ ಕೇಳಿದ ಕಥೆಗಳನ್ನೇ ಆಧಾರವಾಗಿಟ್ಟುಕೊಂಡು, ಅಲ್ಲಿ ಇಲ್ಲಿ ಚೂರು ಪಾರು ಓದಿಕೊಂಡು, ತಮ್ಮದೇ ಆದ ತರ್ಕಕ್ಕೆ ಬರುತ್ತಾ ಈ ಮಹಾಕಾವ್ಯಗಳ ಕುರಿತು ಸರಿ-ತಪ್ಪುಗಳ ವಿಮರ್ಶೆ ಮಾಡುವಂತಾಗಿದೆ. ಸರಿಯಾದ ಮತ್ತು ಸಮಗ್ರವಾದ ಅಧ್ಯಯನ ವಿಲ್ಲದೆ ತಮಗೆ ತಿಳಿದಷ್ಟೇ ಸತ್ಯ ಎಂದು ಬಿಂಬಿಸಿರುವುದಕ್ಕೆ ನೂರಾರು ಉದಾಹರಣೆ ಗಳಿದ್ದರೂ, ಮೈಸೂರಿನ ಭಗವಾನ್ ಮುಂತಾದ ಕುಬುದ್ಧಿಜೀವಿಗಳ ಉದಾಹರಣೆ ಕೊಟ್ಟರೆ ಎಲ್ಲರಿಗೂ ಅರ್ಥವಾದೀತು.
ದೇಶದ ಓದುಗರ ಸೌಲಭ್ಯಕ್ಕಾಗಿ ವಿವಿಧ ಭಾಷೆಗಳಲ್ಲಿ 300ಕ್ಕೂ ಹೆಚ್ಚು ರಾಮಾಯಣ ಗಳಿರುವುದು ನಿಜವಾದರೂ, ಎಲ್ಲವೂ ವಾಲ್ಮೀಕಿ ರಾಮಾಯಣದ ಪಡಿಯಚ್ಚಲ್ಲ. ಅವು ಅದರಿಂದ ದೂರ ಸರಿದು, ಅಲ್ಲಿ ಇಲ್ಲಿ ಬೇರೆಯದ್ದೇ ಆದ ಚಿತ್ರಣವನ್ನು ನೀಡಿರುವುದಾಗಿದೆ. ಉದಾಹರಣೆಗೆ, ಹಳೆಗನ್ನಡದ ತೊರವೆ ರಾಮಾಯಣ, ತಮಿಳಿನ ಕಂಬ ರಾಮಾಯಣ, ಬಂಗಾಳಿಯ ಆನಂದ ರಾಮಾಯಣ ಮತ್ತು ಅವಧಿ ಭಾಷೆಯಲ್ಲಿರುವ ಗೋಸ್ವಾಮಿ ತುಳಸೀದಾಸರ ರಾಮಚರಿತ ಮಾನಸ ಅಥವಾ ತುಳಸಿ ರಾಮಾಯಣ ಇವೆಲ್ಲವೂ ವಾಲ್ಮೀಕಿ ರಾಮಾಯಣದ ಸಾರವನ್ನೇ ಹೊತ್ತು ತಂದಿರುವುದು ನಿಜವಾದರೂ, ಮಧ್ಯ ಮಧ್ಯ ಸಣ್ಣ ಪುಟ್ಟ ತಿರುವುಗಳನ್ನು ನೀಡಿರುವುದರಿಂದ ಅವು ಪ್ರತ್ಯೇಕವಾಗಿಯೇ ನಿಂತಿವೆ.
ಅವುಗಳಲ್ಲಿ ಕೆಲವಂತೂ ವಾಲ್ಮೀಕಿಗಳ ಮನೋಧರ್ಮಕ್ಕೆ ವಿರುದ್ಧವಾದ ಚಿಂತನೆಯವೇ ಆಗಿವೆ. ಹಳೆಗನ್ನಡ ಕವಿಯೊಬ್ಬ ‘ಉದಾತ್ತನೊಳ್ ಪುಟ್ಟದಲ್ತೆ ನೀಲಿ ರಾಗಂ’ ಎಂದು ರಾವಣನನ್ನು ಕಥಾನಾಯಕನಂತೆ ಬಿಂಬಿಸಿದ್ದೂ ಇದೆ. ರಾಮೇಶ್ವರದಲ್ಲಿ ಶ್ರೀರಾಮನು ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಮುಂದಾದಾಗ ಶ್ರೋತ್ರೀಯ ಬ್ರಾಹ್ಮಣರು ದೊರಕಲಿಲ್ಲ.
ಆಗ ಹಿರಿಯನಾಗಿದ್ದ ಜಾಂಬವಂತನು ವೇದವಿದನಾಗಿದ್ದ ರಾವಣನನ್ನು ಪೌರೋಹಿತ್ಯ ಕ್ಕಾಗಿ ಆಹ್ವಾನಿಸಿದ್ದನಂತೆ. ಅದನ್ನೊಪ್ಪಿದ ರಾವಣ ವೈರವನ್ನು ಮರೆತು ಪೌರೋಹಿತ್ಯ ವನ್ನು ನಿರ್ವಹಿಸಿದ್ದಷ್ಟೇ ಅಲ್ಲದೆ, ಶಿವಲಿಂಗ ಪ್ರತಿಷ್ಠಾಪನೆಗೆ ಶ್ರೀರಾಮನಿಗೆ ಸಹ ಧರ್ಮಿಣಿಯ ಅಗತ್ಯವಿರುವುದರಿಂದ, ಲಂಕೆಯಿಂದ ಸೀತೆಯನ್ನೂ ತನ್ನೊಂದಿಗೆ ಕರೆತಂದು ‘ಸರ್ವಭಾವೇ ಪುರೋಹಿತಃ’ ಎನ್ನುವ ಪುರೋಹಿತ ಧರ್ಮವನ್ನು ಪಾಲಿಸಿದ್ದ ಎಂದು ತಮಿಳಿನ ಕಂಬ ರಾಮಾಯಣ ವರ್ಣಿಸುತ್ತದೆ.
ಹೀಗೆ ಮೂಲ ರಾಮಾಯಣದ ಸತ್ಯ ಮತ್ತು ತತ್ವಗಳಿಂದ ವ್ಯತೀತವಾದ ರಾಮಾಯಣ ಗಳನ್ನು ಓದುವವರು, ಈಗ ಮೈಸೂರಿನಲ್ಲಿ ಮಹಿಷಾಸುರ ದಸರಾ ಆಚರಿಸುತ್ತೇವೆ ಎನ್ನು ವಂತೆ ಮುಂದೊಂದು ದಿನ ರಾವಣ ಜಯಂತಿಯನ್ನು ಆಚರಿಸುತ್ತೇವೆ ಎಂದರೂ ಅಚ್ಚರಿ ಯಿಲ್ಲ!
ಇನ್ನು, ಮೂಲ ವಾಲ್ಮೀಕಿ ರಾಮಾಯಣದ್ದೇ ಅನುವಾದ ಎಂಬ ಹಣೆಪಟ್ಟಿಯೊಂದಿಗೆ ಬಂದ ರಾಮಾಯಣಗಳೂ ಲೋಕದಲ್ಲಿ ಸಾಕಷ್ಟಿವೆಯಾದರೂ, ಅವುಗಳಲ್ಲಿ ಕೇವಲ ಭಾಷಾನುವಾದವನ್ನು ಕಾಣಬಹುದೇ ವಿನಾ, ಭಾವಾನುವಾದವನ್ನು ನಿರೀಕ್ಷಿಸು ವಂತಿ ರುವುದಿಲ್ಲ. ಅವುಗಳಲ್ಲಿ ವಾಲ್ಮೀಕಿಗಳ ಸೂಕ್ಷ್ಮ ಸಂವೇದನೆಗಳು ಮೂಡಿಬರುವುದೇ ಇಲ್ಲ.
ಆವಾಗಲೂ ಮಹಾಕಾವ್ಯದ ಓದು ಎನ್ನುವುದು ವ್ಯರ್ಥವಾಗಿಬಿಡುತ್ತದೆ. ಹಾಗೆ ನೋಡಿದರೆ, ಬೇರೆ ಭಾಷಿಕರಿಗೆ ಹೋಲಿಸಿದರೆ ಕನ್ನಡಿಗರು ಸೌಲಭ್ಯವಂತರು ಎನ್ನಬೇಕು. ಶ್ರೀ ರಂಗಪ್ರಿಯ ಮಹಾದೇಶಿಕ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ‘ಭಾರತ ದರ್ಶನ ಪ್ರಕಾಶನ’ದವರು ರಾಮಾಯಣ, ಮಹಾಭಾರತ ಮತ್ತು ಭಾಗವತ ಈ ಮೂರೂ ಮಹಾಗ್ರಂಥಗಳನ್ನು ಅನೇಕ ಸಂಪುಟಗಳಲ್ಲಿ ಕನ್ನಡಕ್ಕೆ ತಂದು ಉಪಕರಿಸಿದ್ದಾರೆ.
ಇಂದು ಅನೇಕ ಮನೆಗಳಲ್ಲಿ ಸಂಪೂರ್ಣ ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಪುರಾಣಗಳ ಪುಸ್ತಕಗಳು ಕಾಣುವಂತಾಗಲು ಈ ಪ್ರಕಾಶನ ಸಂಸ್ಥೆ ಕಾರಣವಾಯಿತು. ‘ನಾವು ಓದುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಮನೆಯಲ್ಲಿ ಸಂಪೂರ್ಣ ರಾಮಾಯಣ ವಿದೆ’ ಎಂದು ಹೆಮ್ಮೆಪಟ್ಟುಕೊಂಡ ಕನ್ನಡಿಗರು ಸಾಕಷ್ಟಿದ್ದಾರೆ. ಮಹಾಕಾವ್ಯಗಳನ್ನು ಹೀಗೆ ಒಟ್ಟಿಗೆ ಕಾಣುವ ಮೊದಲನುಭವ ಕನ್ನಡಿಗರಿಗೆ ಸಿಕ್ಕಿದ್ದು ಭಾರತ ದರ್ಶನ ಪ್ರಕಾಶನ ದವರಿಂದ. ಶತಮಾನಗಳ ಹಿಂದೆ ಅವತರಿಸಿ, ಭಗವದ್ಗೀತೆ ಸೇರಿದಂತೆ ಅನೇಕ ಧಾರ್ಮಿಕ ಪುಸ್ತಕಗಳನ್ನು ದೇಶಾದ್ಯಂತದ ವಿವಿಧ ಭಾಷೆಗಳಲ್ಲಿ ಅತಿಕಡಿಮೆ ಬೆಲೆಗೆ ಮುದ್ರಿಸಿ ಹಂಚು ತ್ತಿರುವ ಗೋರಖ್‌ಪುರದ ‘ಗೀತಾ ಪ್ರೆಸ್ ’ನಂತೆ, ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ದಾನಿಗಳ ಸಹಾಯದಿಂದ ಕನ್ನಡದ ಜನತೆಗೆ ಕಡಿಮೆ ಬೆಲೆಯಲ್ಲಿ ತಲುಪಿಸ ಲೆಂದೇ ಹುಟ್ಟಿದ ಹೆಮ್ಮೆಯ ಸಂಸ್ಥೆ ಬೆಂಗಳೂರಿನ ‘ಭಾರತ ದರ್ಶನ ಪ್ರಕಾಶನ’.
ಈ ಸ್ತರದಲ್ಲಿ ನಿಲ್ಲುವ, ವಾಲ್ಮೀಕಿ ರಾಮಾಯಣದ ಇನ್ನೊಂದು ಕನ್ನಡಾನುವಾದವನ್ನು ಉದಾಹರಿಸುವುದಾದರೆ, ಅದು ದೇಶ ಕಂಡ ಶ್ರೇಷ್ಠ ವಯ್ಯಾಕರಣಿಕರಾದ ವಿದ್ವಾನ್ ರಂಗನಾಥ ಶರ್ಮರ ರಾಮಾಯಣ. ಒಮ್ಮೆ ಡಿ.ವಿ.ಗುಂಡಪ್ಪನವರಿಗೆ (ಡಿವಿಜಿ) ಶ್ರೀಮದ್ವಾ ಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ವ್ಯವಸ್ಥಿತವಾಗಿ ತರ್ಜುಮೆಗೊಳಿಸುವ ಹಂಬಲವಾಗಿ, ವಯಸ್ಸಿನಲ್ಲಿ ಕಿರಿಯರಾದರೂ ವಿದ್ಯೆಯಿಂದ ತಾವು ಅಪಾರ ಗೌರವಿಸುತ್ತಿದ್ದ ರಂಗನಾಥ ಶರ್ಮರನ್ನು ಕರೆಸಿ ತಮ್ಮ ಇಂಗಿತವನ್ನು ಹೇಳಿದರಂತೆ.
ಭಗವದ್ಗೀತೆಗೆ ಕನ್ನಡದಲ್ಲಿ ತಾತ್ಪರ್ಯ ರಚಿಸಿ ಜನಮನ್ನಣೆ ಗಳಿಸಿದ್ದ ಡಿವಿಜಿಯವರ ಈ ಮಾತು ಕೇಳಿ ರಂಗನಾಥ ಶರ್ಮರು ಸಂತಸಪಟ್ಟು, “ಬಹಳ ಸ್ತುತ್ಯರ್ಹವಾದ ಕಾರ್ಯ ವನ್ನು ಕೈಗೆತ್ತಿಕೊಳ್ಳುತ್ತಿರುವಿರಿ, ಈ ನಿಟ್ಟಿನಲ್ಲಿ ನನ್ನ ಸಂಪೂರ್ಣ ಸಹಕಾರವಿರುತ್ತದೆ" ಎಂದರಂತೆ. ಡಿವಿಜಿ ನಸುನಗುತ್ತ, “ಈ ಮಹತ್ಕಾರ್ಯವನ್ನು ಮಾಡಲಿಕ್ಕಿರುವುದು ನೀವು, ನಾನಲ್ಲ" ಎಂದಾಗ ಶರ್ಮರು ಹೌಹಾರಿದ್ದರಂತೆ.
“ಶ್ರೀಮದ್ವಾಲ್ಮೀಕಿಗಳ ಹೃದಯವನ್ನು ಕನ್ನಡ ಜನಕ್ಕೆ ನೀವೊಬ್ಬರೇ ತೋರಿಸಬಲ್ಲಿರಿ. ನಿಮ್ಮ ಜತೆ ನಾನಿದ್ದೇನೆ, ಶುರುವಿಟ್ಟುಕೊಳ್ಳಿ" ಎಂದರಂತೆ ಡಿವಿಜಿ. ಅವರ ಪ್ರೇರಣೆಯಂತೆ, ಕನ್ನಡ ಜನಮಾನಸಕ್ಕೆ ಹೊಂದುವ ಭಾಷೆಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ಅನುವಾ ದಿಸುವ ಸೌಭಾಗ್ಯ ಶರ್ಮರಿಗೆ ಒದಗಿತು. ಅದು ಕನ್ನಡಿಗರ ಮಹಾಸೌಭಾಗ್ಯವೂ ಆಯಿತು.
“ಸಂಸ್ಕೃತ ಶಬ್ದಕ್ಕೆ ಕನ್ನಡದ ಪ್ರತಿಶಬ್ದವನ್ನು ಬರೆಯುವುದು ಅನುವಾದವಾಗಲಾರದು. ಸಂಸ್ಕೃತ ಬಲ್ಲವರಿಗೆ ಆಗುವ ಆ ಶಬ್ದಗಳ ಮಾಧುರ್ಯ, ಸನ್ನಿವೇಶದ ಚಿತ್ರಣ ಅಥವಾ ಗಾಂಭೀರ್ಯದ ಅನುಭವವನ್ನು ಅನುವಾದಿತ ಕೃತಿಯೂ ನೀಡಿದರಷ್ಟೇ ಅನುವಾದ ಸಾರ್ಥಕವಾಗುತ್ತದೆಯಷ್ಟೇ! ಇದು ಬುದ್ಧಿಯ ಪರಿಶ್ರಮವನ್ನು, ರಸವಿವೇಕವನ್ನು ಬಹು ವಾಗಿ ಅಪೇಕ್ಷಿಸುತ್ತದೆ.
ಕಾವ್ಯವನ್ನು ಕಾವ್ಯವಾಗಿಯೇ ಪರಿವರ್ತಿಸುವುದಲ್ಲವೇ ನಮಗೆ ಬೇಕಾದ್ದು? ರಾಮಾಯಣ ಕ್ಕಿರುವ ಸುಮಾರು 6 ಪ್ರಸಿದ್ಧ ವ್ಯಾಖ್ಯಾನಗಳನ್ನು ಪರಿಶೀಲಿಸಿ, ಅದರಲ್ಲಿ ದೊರೆತದ್ದಕ್ಕೆ ಸ್ವಂತ ವಿಮರ್ಶನಗೈದಿದ್ದಾರೆ. ಇನ್ನೂ ಶಂಕೆಗಳು ಉಳಿದಾಗ ನನ್ನ ಸಲಹೆ ಪಡೆದು ಶರ್ಮರು ನಿರ್ಧಾರಕ್ಕೆ ಬಂದಿರುತ್ತಾರೆ. ಹೀಗೆ ಪ್ರಯಾಸಸಿದ್ಧವಾಗಿ ಮೂಡಿಬಂದಿರುವ ಭಾವಾನುವಾದವಿದು" ಎಂದು ಶರ್ಮರ ಕೆಲಸಕ್ಕೆ ಷರಾ ಬರೆದಿದ್ದಾರೆ ಡಿವಿಜಿ.
“ಒಂದು ವಿಷಯವನ್ನು ಹೇಳುವಾಗ, ನಾಲ್ಕು ತರಹದ ವಾಕ್ಯರಚನೆ ಸಾಧ್ಯವಾದರೆ, ಅವು ಗಳಲ್ಲಿ ಯಾವುದು ಹೆಚ್ಚು ರಸಪೋಷಕವಾಗಿದೆಯೆಂದು ಆರಿಸಿ ಶರ್ಮರು ವಾಕ್ಯಗಳನ್ನು ರಚಿಸಿದ್ದಾರೆ. ಅವರ ವಾಕ್ಪ್ರವಾಹದಲ್ಲಿ ಸಹಜತೆ, ಲಾಲಿತ್ಯ, ವೈಶದ್ಯ, ಗಾಂಭೀರ್ಯ, ಓಜಸ್ಸು ಮುಂತಾದ ಗುಣಗಳು ಪ್ರಕಾಶಮಾನವಾಗಿವೆ. ಒಳ್ಳೆಯ ಕನ್ನಡ ಹೇಗಿರುತ್ತದೆ ಎಂದು ಕೇಳುವವರಿಗೆ ರಂಗನಾಥ ಶರ್ಮರ ರಾಮಾಯಣವು ನಾನು ತೋರಿಸುವ ದಾರಿ" ಎನ್ನುತ್ತಾರೆ ಡಿವಿಜಿ.
ಈ ಕೃತಿಯ ಪಾರಮ್ಯವನ್ನು ಹೇಳಲು ಇಷ್ಟು ಸಾಕಲ್ಲವೇ? ಈ ಗ್ರಂಥಕ್ಕೆ ಡಿವಿಜಿಯವರೇ ಸುದೀರ್ಘ-ಸಾರಭೂತ ಮುನ್ನುಡಿ ಬರೆದಿದ್ದು, ಮಹಾಕಾವ್ಯಗಳಲ್ಲಿ ಆಸಕ್ತಿಯಿರುವವರು ಇದನ್ನೊಮ್ಮೆ ಓದಬೇಕು. ಬೆಂಗಳೂರಿನ ರಾಮಾಯಣ ಪ್ರಕಾಶನ ಸಮಿತಿಯವರು ಹೊರತಂದಿರುವ ಈ ಕೃತಿಯು ಈಗಾಗಲೇ ಆರೇಳು ಬಾರಿ ಮರುಮುದ್ರಣಗೊಂಡಿದೆ.
‘ಶುದ್ಧ ಮತ್ತು ಯಥಾರ್ಥವಾದ ವಾಲ್ಮೀಕಿ ರಾಮಾಯಣವನ್ನು ತಿಳಿಯಲು ಕನ್ನಡಿಗರು ಡಾ.ಕೆ.ಎಸ್ .ನಾರಾಯಣಾಚಾರ್ಯರಿಂದ ಪ್ರವಚನ ಕೇಳಬೇಕು, ಓದುವುದಾದರೆ ರಂಗನಾಥ ಶರ್ಮರ ರಾಮಾಯಣವನ್ನು ಓದಬೇಕು’ ಎಂಬಷ್ಟರ ಮಟ್ಟಿಗಿನ ಗೌರವ ಸಂಪಾದಿಸಿದ ಕೃತಿಯಿದು. ರಾಮಾಯಣ ಕುರಿತಾದ ಸಂದೇಹಗಳನ್ನು ಪರಿಹರಿಸುವಲ್ಲಿನ ಆಕರವಾಗಿಯೂ ಈ ಗ್ರಂಥವನ್ನು ಬಳಸಿಕೊಳ್ಳಬಹುದು. ಇನ್ನೇಕೆ ತಡ! ದಿನಕ್ಕೆ 66 ಶ್ಲೋಕ ಗಳನ್ನು ಓದಿದರೂ ಒಂದು ವರ್ಷದಲ್ಲಿ ಇದನ್ನು ಅರ್ಥಸಹಿತ ಓದಿ ಮುಗಿಸಿ ಬಿಡಬಹುದು. ಸೌಲಭ್ಯವಂತೂ ಇದೆ, ನಾವು ಮನಸ್ಸು ಮಾಡಬೇಕಷ್ಟೇ...