Hari Paraak Column: 2025ಕ್ಕೆ ಆದಿತ್ಯನಾಥ್ ಹೇಳಿದ್ದು: ಆಜ್ ಸೇ ತುಮಾರಾ ನಾಮ್ 2026
‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ಸ್ವತಃ ನಿರ್ಮಾಪಕರೇ ಹೇಳ್ತಾರೆ. ಇತ್ತೀಚೆಗೆ ಬಿಡುಗಡೆ ಆದ ಚಿತ್ರಗಳ ಕಥೆಯೂ ಇದೇ. 10 ಕೋಟಿ, 15 ಕೋಟಿ, ಅಂತ ಶುರು ಆಗಿ ನೂರು ಕೋಟಿ ಮಾಡುತ್ತೆ ಅಂತೆ ರಿಪೋರ್ಟುಗಳು ಬಂದಿ ದ್ದವು. ಅದಾದ ನಂತರ ನಿರ್ಮಾಪಕರು ತಮ್ಮ ಅಫಿಷಿಯಲ್ ಸೋಷಿಲ್ ಮೀಡಿಯಾ ಪೇಜ್‌ಗಳಿಂದ ಅಂಥ ರಿಪೋಟ್ʼಗಳನ್ನು ತೆಗೆದು ಹಾಕಿದ್ದರು.
-
ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಹೊಸದೊಂದು ಚಾಳಿ ಶುರು ಆಗಿದೆ. ಅದು ಚಿತ್ರದ ಕಲೆಕ್ಷನ್ ವಿಚಾರದ್ದು. ಮೊದಲೆಲ್ಲ ಸಿನಿಮಾ ಒಂದು, 100 ದಿನ ಓಡಿದ್ರೂ ನಿರ್ಮಾಪಕರು ಬಾಯಲ್ಲಿ ಕೋಟಿ ಅನ್ನೋಕೆ ಮುಂಚೆ ಕೋಟಿ ಸಲ ಯೋಚನೆ ಮಾಡ್ತಾ ಇದ್ರು. ಈಗ ಮಾತೆತ್ತಿದರೆ ಬಾಯಿಗೆ ಬಂದ ಹಾಗೆ ಮೊದಲ ದಿನವೇ ಕೋಟಿಗಟ್ಟಲೆ ಲೆಕ್ಕದಲ್ಲಿ ಮಾತಾಡ್ತಾರೆ. ಆದ್ರೆ ಇದ್ಯಾವುದೂ ಅಫಿಷಿಯಲ್ ಹೇಳಿಕೆ ಅಲ್ಲ.
ಕೆಲವು ‘ಬಿ’ ಮತ್ತು ‘ಸಿ’ ಗ್ರೇಡ್ ವೆಬ್‌ಸೈಟುಗಳು, ಯುಟ್ಯೂಬ್ ಚಾನೆಲ್ಲುಗಳು ಮೊದಲ ದಿನದ ಮಾರ್ನಿಂಗ್ ಶೋ ಅಥವಾ ಈಗಿನ ಹೊಸ ಟ್ರೆಂಡ್‌ನಂತೆ ಅರ್ಲಿ ಮಾರ್ನಿಂಗ್ ಶೋ ಮುಗಿಯೋ ಮೊದಲೇ ಕೋಟಿಗಳ ಲೆಕ್ಕ ಬರೆಯೋಕೆ ಶುರು ಮಾಡಿರ್ತವೆ. ಇದಕ್ಕೆ ಚಿತ್ರದ ನಿರ್ಮಾಪಕರು ಹೌದು ಅಂತಲೂ ಹೇಳಲ್ಲ, ಇಲ್ಲ ಅಂತನೂ ಹೇಳಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ. ‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ಸ್ವತಃ ನಿರ್ಮಾಪಕರೇ ಹೇಳ್ತಾರೆ. ಇತ್ತೀಚೆಗೆ ಬಿಡುಗಡೆ ಆದ ಚಿತ್ರಗಳ ಕಥೆಯೂ ಇದೇ. 10 ಕೋಟಿ, 15 ಕೋಟಿ, ಅಂತ ಶುರು ಆಗಿ ನೂರು ಕೋಟಿ ಮಾಡುತ್ತೆ ಅಂತೆ ರಿಪೋರ್ಟುಗಳು ಬಂದಿದ್ದವು. ಅದಾದ ನಂತರ ನಿರ್ಮಾಪಕರು ತಮ್ಮ ಅಫಿಷಿಯಲ್ ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಅಂಥ ರಿಪೋಟ್ʼಗಳನ್ನು ತೆಗೆದು ಹಾಕಿದ್ದರು.
ಇವೆಲ್ಲ ಏನಿದ್ರೂ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಮಾಡುವ ತಂತ್ರ ಎನ್ನಲಾಗುತ್ತಿದೆ. ಇದಕ್ಕೆ ಸಹಾಯ ಮಾಡುವಂತೆ ಕಾರ್ಪೋರೇಟ್ ಬುಕ್ಕಿಂಗ್ ಎನ್ನುವ ಹೊಸ ದಂಧೆ ಶುರು ಆಗಿದೆ. ಇದು ಸುಳ್ಳು ಟಿಕೆಟ್ ಬುಕ್ಕಿಂಗ್ ತೋರಿಸುವ ಕೆಲಸ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ.
ಅದರ ಬೆನ್ನ, ಈ ಚಿತ್ರಗಳು ಇನ್ನೇನು ಓಟಿಟಿಗೆ ಬರುತ್ತಿವೆ ಅಂತಾರೆ. ಇದೆಲ್ಲದರ ನಡುವೆ ಸಿನಿಮಾ ಗಳು ಎಷ್ಟರ ಮಟ್ಟಿಗೆ ಹಿಟ್ ಆಗಿವೆ ಅನ್ನೋದು ನಮ್ಮ ಊಹೆಗೆ ಬಿಟ್ಟಿದ್ದು. ಇದನ್ನೆ ನೋಡಿ, ಸಿನಿಮಾಗಳ ಕಲೆಕ್ಷನ್ ಅಸಲಿಯತ್ತು ಗೊತ್ತಾಗುವುದು ಹೇಗೋ ಅಂತಿದ್ದಾನೆ ಕನ್ನಡ ಪ್ರೇಕ್ಷಕ.
ಇದನ್ನೂ ಓದಿ: Hari Paraak Column: ಅಡ್ಡಗೋಡೆ ಮೇಲೆ ಸುʼದೀಪʼ
ಲೂಸ್ ಟಾಕ್ - ಸಿದ್ರಾಮಯ್ಯ
ಏನ್ ಸರ್, ಕೋಗಿಲು ಏರಿಯಾದಲ್ಲಿ ಮನೆ-ಮಠ ಕಳೆದು ಕೊಂಡವರಿಗೆ ಹೊಸ ಮನೆ ಕೊಡ್ತೀವಿ ಅಂದ್ರೆ ಬಿಜೆಪಿ ರಾಜಕೀಯ ಮಾಡ್ತಾ ಇದೆಯಲ್ಲ?
- ಅಲ್ಲಿ ಜನ ಕಳೆದು ಕೊಂಡಿದ್ದು ಬರೀ ಮನೆ ಅಷ್ಟೇ, ‘ಮಠ’ ಕಳೆದುಕೊಂಡಿದ್ರೆ ಬಿಜೆಪಿ ಸಪೋರ್ಟ್ ಮಾಡ್ತಾ ಇತ್ತು.
ನಿಜ ಬಿಡಿ. ಆದ್ರೆ, ನೀವು ಬೆಳಗ್ಗೆ ಬೆಳಗ್ಗೆ ಮಲಗಿ ದ್ದವರ ಮನೆ ಮುರುಕ ಕೆಲಸ ಮಾಡಿದ್ದು ಸರಿನಾ?
- ಏನ್ ಮಾಡೋದು, ಉತ್ತರ ಪ್ರದೇಶದ ರೀತಿಯಲ್ಲಿ ಬುಲ್ಡೋಜರ್ ಓಡಿಸೋಕೆ ಹೋಗಿದ್ವಿ. ಈಗ ಈ ವಿಷಯದಲ್ಲಿ ಉತ್ತರ ಕೊಡೋಕೆ ಆಗ್ತಾ ಇಲ್ಲ ಅನ್ನೋ ಥರ ಆಗಿದೆ.
ಆದ್ರೂ ಈ ವಿಷಯದಲ್ಲಿ ಕೇರಳದವರೆಲ್ಲ ಕರ್ನಾಟಕಕ್ಕೆ ಬರೋ ಹಾಗಾಯ್ತಲ್ಲ?
- ಮಲಯಾಳಿಗಳು ಬೆಂಗಳೂರಿಗೆ ಬರೋದು ಹೊಸ ವಿಷಯ ಏನಲ್ಲ ಬಿಡಿ.
ಅಂದ ಹಾಗೆ ನಿಮ್ಮ ಹೋಮ್ ಮಿನಿಸ್ಟರ್ ಹೊಸ ವರ್ಷದ ಸಮಯದಲ್ಲಿ ಕುಡಿದವರನ್ನು ಮನೆಗೆ ಸೇರಿಸುವ ಪ್ರೋಗ್ರಾಮ್ ಹಾಕಿದ್ರಲ್ಲ, ಅದು ಸಕ್ಸಸ್ ಆಯ್ತಾ?
- ನಮ್ ಹೋಮ್ ಮಿನಿಸ್ಟರ್ ಏನೋ ಕುಡುಕರನ್ನ ಮನೆಗೆ ಕರ್ಕೊಂಡ್ ಹೋದ್ರು. ಆದ್ರೆ ಕುಡುಕರ ಹೋಮ್ ಮಿನಿಸ್ಟರ್‌ಗಳು ತಮ್ಮ ಗಂಡಂದಿರನ್ನು ಮನೆಗೆ ಸೇರಿಸಲು ಒಪ್ಪಲಿಲ್ಲವಂತೆ.
ಸರಿ, ನಿಮ್ಮ ಹಾಗೂ ಡಿಕೆಶಿ ಅವರ ಕುರ್ಚಿ ಕದನ ಎಲ್ಲಿಯವರೆಗೆ ಬಂತು?
- ಸದ್ಯಕ್ಕಂತೂ, ಮಳ್ಳಿ ಮಳ್ಳಿ ಸಿಎಂ ಕುರ್ಚಿಗೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅಂತ ಸುಮ್ನೆ ಇದ್ದಾರೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕೆಲಸದ ಹೆಂಗಸು ಕಮಲ, ಯಜಮಾನಿ ಹತ್ರ ಬಂದು “ಮುಂದಿನ ತಿಂಗಳಿಂದ ನನ್ನ ಸಂಬಳ ಜಾಸ್ತಿ ಮಾಡಿ" ಅಂತ ಕೇಳಿದ್ಲು. ಅದಕ್ಕೆ ಯಜಮಾನಿ, “ಅ, ನೀನೇನು ಮಹಾ ಕೆಲಸ ಮಾಡ್ತಿಯಾ ಅಂತ ನಿಂಗೆ ಸಂಬಳ ಜಾಸ್ತಿ ಮಾಡಬೇಕು?" ಅಂತ ಉಲ್ಟಾ ದಬಾಯಿಸಿದ್ಲು. ಅದನ್ನ ಕೇಳಿ ಕಮಲಳಿಗೆ ಸಿಟ್ಟು ಬಂತು. ಏನಾರ ಒಂದ್ ಡಿಸೈಡ್ ಆಗ್ಲಿ ಅಂತ ಅ ಯಜಮಾನಿ ಮುಂದೆ ಕೂತು ಕಮಲ ಮಾತಾಡೋಕೆ ಶುರು ಮಾಡಿದ್ಳು..
“ನೋಡಿ, ಅಮ್ಮಾವ್ರೇ, ನನಗೆ ಯಾಕೆ ಸಂಬಳ ಜಾಸ್ತಿ ಮಾಡಬೇಕು ಅನ್ನೋದಕ್ಕೆ ನಾನು ಮೂರು ಕಾರಣ ಹೇಳ್ತೀನಿ"
“ಸರಿ, ಹೇಳು"
“ಮೊದಲನೆಯದು, ನಾನು ಅಡುಗೆ ಮನೆಯಲ್ಲಿ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ"
“ಯಾರು ಹೇಳಿದ್ದು?"
’ನಿಮ್ಮ ಗಂಡ’
“ಸರಿ, ಎರಡನೆಯದು?"
“ನಾನು ಹಿತ್ತಲ ಕಡೆ, ಪಾತ್ರೆ ತೊಳೆಯೋದ್ರಲ್ಲೂ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ"
“ಯಾರ್ ಹೇಳಿದ್ದು?"
“ನಿಮ್ಮ ಗಂಡ"
“ಸರಿ, ಮೂರನೆಯದು?"
“ನಾನು ಬೆಡ್ ರೂಮಲ್ಲೂ ನಿಮಗಿಂತ ಬೆಟರ್"
“ಏನ್ ಮಾತಾಡ್ತಾ ಇದ್ದೀಯಾ? ಇದನ್ನೂ ನನ್ ಗಂಡನೇ ಹೇಳಿದ್ದಾ?"
“ಅಲ್ಲ, ನಮ್ಮನೆ ವಾಚ್‌ಮ್ಯಾನ್’
“ಸಂಬ್ಳ ಎಷ್ಟು ಜಾಸ್ತಿ ಮಾಡ್ಬೇಕು?".
ಲೈನ್ ಮ್ಯಾನ್
2025ಕ್ಕೆ ಆದಿತ್ಯನಾಥ್ ಹೇಳಿದ್ದು
- ಆಜ್ ಸೇ ತುಮಾರಾ ನಾಮ್ 2026
ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಿ, ಮತ್ತೆ ಅಧಿಕಾರ ಸಿಗುತ್ತೆ ಅಂತ ಹಳೇ ಪಕ್ಷಕ್ಕೆ ವಾಪಸ್ ಆಗುವ ಕಲೆ
- ‘ಮರಳು’ ನೀತಿ
ಹೊಸ ಹುಡುಗನ ಜತೆ ಹೋಗುವಾಗ ಹಳೇ ಬಾಯ್ ಫ್ರೆಂಡ್ ಎದುರಿಗೆ ಸಿಕ್ರೆ ಹುಡುಗೀರ ರಿಯಾಕ್ಷನ್
- ಫಾರಿನ್‌ನಲ್ಲಿ: Honey, this is my Ex-boy friend.
- ಇಂಡಿಯಾದಲ್ಲಿ: ಅಯ್ಯೋ, ಇವ್ನ್ ಯಾಕಪ್ಪಾ ಬಂದ ಇಲ್ಲಿ...
ನಲ್ಲಿ ರಿಪೇರಿ ಮಾಡೋನಿಗೆ ಕೊಡಬಹುದಾದ ಬಿರುದು
- ‘ನಳ’ ಮಹಾರಾಜ
ಅರಸಿಕನ ಗಾದೆ
- ಅಲ್ಪನಿಗೆ ಐಶ್ವರ್ಯ ರೈ ಸಿಕ್ರೆ, ಅರ್ಧರಾತ್ರಿಲಿ ಅಕ್ಕಾ ಅಂದ್ನಂತೆ.
ಚಿಲ್ಲಿ ಚಿಕನ್‌ನಲ್ಲಿ ಚಿಕನ್‌ನಂತೆ ಕಾಣುವ ಕ್ಯಾಪ್ಸಿಕಮ್ ತುಂಡು
- ಡಮ್ಮಿ ‘ಪೀಸ್’
ಚರ್ಚ್‌ಗಳಿರುವ ದಾರಿ
- ‘ಕ್ರಾಸ್’ ರೋಡ್
ಕೆಟ್ಟ ಕಂಠದವರಿಗೆ ಇರುವ ಸಾಮರ್ಥ್ಯ
- ‘ರಾಗ’ ನಿರೋಧಕ ಶಕ್ತಿ
ಸಾಲ ಕೊಟ್ಟವರಿಂದ ತಪ್ಪಿಸಿಕೊಳ್ಳಲು ಮನೆಯ ಅಡಗಿ ಕೂತರೆ ಅದು
- ಹೋಮ್ ಆ‘ಲೋನ್