ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ajith Shetty Heranje Column: ಅಂಬೇಡ್ಕರ್‌ ಕನಸು, ಮೋದಿ ಕೈಗಳಲ್ಲಿ ಕೃತಿಯಾಯಿತು

ತಜ್ಞರ ಅಂದಾಜಿನ ಪ್ರಕಾರ ವರ್ಷಕ್ಕೆ ರೂ.20000 ಕೋಟಿ ವಿದೇಶಕ್ಕೆ ಹೋಗುತ್ತಿದ್ದ ಶುಲ್ಕ ಇಂದು ದೇಶದ ಉಳಿಯುತ್ತಿದೆ. ಅಂಬೇಡ್ಕರ್ 1923ರ ಹೇಳಿದ್ದ ಹಣಕಾಸು ವ್ಯವಸ್ಥೆ ಸಾರ್ವಜನಿಕ ಹಿತಕ್ಕಾಗಿ ಇರಬೇಕು, ವಿದೇಶಿ ಹಿತಾಸಕ್ತಿಗಾಗಿ ಅಲ್ಲ ಎಂಬ ಮಾತುಗಳನ್ನು ಯುಪಿಐ ತಂತ್ರಜ್ಞಾನದ ಮೂಲಕ ಮೋದಿ ಜಾರಿಗೆ ತಂದರು.

ಅಂಬೇಡ್ಕರ್‌ ಕನಸು, ಮೋದಿ ಕೈಗಳಲ್ಲಿ ಕೃತಿಯಾಯಿತು

-

Profile
Ashok Nayak Jun 16, 2026 2:01 PM

ರಾಜನೀತಿ

ಅಜಿತ್‌ ಶೆಟ್ಟಿ ಹೆರಂಜೆ

1947ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯ ಜೀವನದಲ್ಲಿ ಸಮಾನತೆ ಇರುತ್ತದೆ, ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಇರುತ್ತದೆ ಎಂದು ಅಂದೇ ಎಚ್ಚರಿಸಿದ್ದರು. ಆದರೆ ಏಳು ದಶಕಗಳು ಕಳೆದರೂ ಆ ಅಸಮಾನತೆ ಉಳಿದಿತ್ತು. ಕಾರಣ ಒಂದೇ, ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಆರ್ಥಿಕ ವಾಗಿ ಅದೇ ವಸಾಹತುಶಾಹಿ ಕಾಲದ ಆರ್ಥಿಕ ವ್ಯವಸ್ಥೆಯ ಕಪಿಮುಷ್ಠಿಯ ಸಿಕ್ಕಿತ್ತು. ಅಂತಹ ಕಾಲಘಟ್ಟದಲ್ಲಿ ದೇಶದ ಚುಕ್ಕಾಣಿ ಹಿಡಿದವರು ಪ್ರಧಾನಿ ನರೇಂದ್ರ ಮೋದಿ.

2026ರ ಜೂನ್ 10ರಂದು ಮೋದಿ ಭಾರತದ ಚುನಾಯಿತ ಪ್ರಧಾನ ಮಂತ್ರಿಯಾಗಿ 4300 ದಿನ ಗಳನ್ನು ಪೂರ್ಣಗೊಳಿಸಿ ನೆಹರೂ ಅವರ ದಾಖಲೆ ಮೀರಿದರು. ಆದರೆ ಈ ದಾಖಲೆಯ ನಿಜವಾದ ಮಹತ್ವ ದಿನಗಳ ಲೆಕ್ಕದಲ್ಲಿಲ್ಲ, ಬದಲಿಗೆ ಆ ದಿನಗಳಲ್ಲಿ ಅವರು ಭಾರತದ ಆರ್ಥಿಕ ಆತ್ಮಾಭಿಮಾನ ವನ್ನು ಮರಳಿ ನಿಲ್ಲಿಸುವಲ್ಲಿ ಮಾಡಿದ ಕೆಲಸದಲ್ಲಿದೆ. ಅಂಬೇಡ್ಕರ್ ಅವರು ಕಂಡ ಆರ್ಥಿಕ ಸ್ವಾತಂತ್ರ್ಯದ ಕನಸನ್ನುಮೋದಿ ಒಂದೊಂದಾಗಿ ಕಾರ್ಯರೂಪಕ್ಕೆ ತಂದರು.

ನಮ್ಮ ಹಣ, ನಮ್ಮ ನಿಯಂತ್ರಣ

೧೯೯೧ರ ನಂತರ ವೀಸಾ, ಸ್ವಿ- ಮತ್ತು ಮಾಸ್ಟರ್‌ಕಾರ್ಡ್ ಭಾರತೀಯರ ಪ್ರತಿ ವ್ಯವಹಾರದದಲ್ಲಿ ಕಮಿಷನ್ ಪಡೆಯುವುದರ ಜೊತೆಗೆ ಅದರ ಮಾಹಿತಿಯನ್ನು ಅಮೆರಿಕದ ಸರ್ವರ್‌ಗಳಿಗೆ ರವಾನಿಸು ತ್ತಿದ್ದವು. ಭಾರತ ವಿದೇಶಿ ಆರ್ಥಿಕ ಕುಣಿಕೆಯಲ್ಲಿ ಸಿಕ್ಕಿಬಿದ್ದಿತ್ತು.

ಇದನ್ನೂ ಓದಿ: Ajith Shetty Column: ರಾಜತಾಂತ್ರಿಕತೆ ಬದಲಾಯಿಸಿದ ಮೋದಿ-ಟ್ರಂಪ್

೨೦೨೨ರಲ್ಲಿ ಉಕ್ರೇನ್ ಯುದ್ಧ ಶುರುವಾದ ರಾತ್ರಿ ಆ ಎರಡೂ ಕಂಪನಿಗಳು ರಷ್ಯಾಗೆ ಕೊಡುತ್ತಿದ್ದ ಸೇವೆಯನ್ನ ತತ್ಕ್ಷಣದಲ್ಲಿ ನಿಲ್ಲಿಸಿದವು. ಬ್ಯಾಂಕ್‌ಗಳು ತೆರೆದಿದ್ದವು, ಖಾತೆಗಳಲ್ಲಿ ಹಣವಿತ್ತು- ಆದರೆ ಕೋಟ್ಯಂತರ ರಷ್ಯನ್ ನಾಗರಿಕರು ತಮ್ಮದೇ ಹಣವನ್ನು ಮುಟ್ಟಲಾಗದ ಅಸಹಾಯಕ ಸ್ಥಿತಿಯಲ್ಲಿ ನಿಂತರು. ಭಾರತ ಅದೇ ದಾರಿಯಲ್ಲಿದ್ದಿದ್ದರೆ ಏನಾಗುತ್ತಿತ್ತು? ೨೦೧೬ರಲ್ಲಿ ಯುಪಿಐ ಮತ್ತು ರುಪೇ ಬಂದವು. ನಮ್ಮ ಹಣ, ನಮ್ಮ ದತ್ತಾಂಶ, ನಮ್ಮ ನಿಯಂತ್ರಣ. ಮೂರೂ ಭಾರತದ ನೆಲದ ಉಳಿದವು.

ತಜ್ಞರ ಅಂದಾಜಿನ ಪ್ರಕಾರ ವರ್ಷಕ್ಕೆ ರೂ.20000 ಕೋಟಿ ವಿದೇಶಕ್ಕೆ ಹೋಗುತ್ತಿದ್ದ ಶುಲ್ಕ ಇಂದು ದೇಶದ ಉಳಿಯುತ್ತಿದೆ. ಅಂಬೇಡ್ಕರ್ 1923ರ ಹೇಳಿದ್ದ ಹಣಕಾಸು ವ್ಯವಸ್ಥೆ ಸಾರ್ವಜನಿಕ ಹಿತಕ್ಕಾಗಿ ಇರಬೇಕು, ವಿದೇಶಿ ಹಿತಾಸಕ್ತಿಗಾಗಿ ಅಲ್ಲ ಎಂಬ ಮಾತುಗಳನ್ನು ಯುಪಿಐ ತಂತ್ರಜ್ಞಾನದ ಮೂಲಕ ಮೋದಿ ಜಾರಿಗೆ ತಂದರು.

ಅಡವಿಟ್ಟ ಆತ್ಮಾಭಿಮಾನ ಮರಳಿ ತಂದರು

2014ರಲ್ಲಿ ಭಾರತದ ಬಳಿ 557.75 ಟನ್ ಚಿನ್ನವಿತ್ತು, ಅದರಲ್ಲಿ 265.49 ಟನ್ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬಿಐಎಸ್ ವಶದಲ್ಲಿತ್ತು. ‌2014ರ ನಂತರ ಮೋದಿ ಸರಕಾರ ಹೊಸದಾಗಿ 322.77 ಟನ್ ಚಿನ್ನವನ್ನು ಖರೀದಿಸುವುದರ ಜೊತೆಗೆ, ವಿದೇಶದಲ್ಲಿ ಇದ್ದ ಹಳೆಯ ಚಿನ್ನದಲ್ಲಿ ಸುಮಾರು 68 ಟನ್ ಮರಳಿ ದೇಶದೊಳಗೆ ತಂದಿತು. 2026ರ ಹೊತ್ತಿಗೆ ಭಾರತದ ಖಜಾನೆಯಲ್ಲಿರುವ ಚಿನ್ನದ ಪ್ರಮಾಣ ಒಟ್ಟು 880.52 ಟನ್‌ಗೆ ಹೆಚ್ಚಿದೆ. ಇದರಲ್ಲಿ 683 ಟನ್ ಭಾರತದೊಳಗೆ ಇದ್ದರೆ, ಉಳಿದ ಚಿನ್ನ ವಿದೇಶದಲ್ಲಿ ಇದೆ. ಮುಂಬರುವ ದಿನಗಳಲ್ಲಿ ವಿದೇಶಿ ವಿನಿಮಯದ ಖರೀದಿಗೆ ಎಷ್ಟು ಅವಶ್ಯಕವಾಗಿರುತ್ತದೆಯೋ ಅಷ್ಟನ್ನು ಮಾತ್ರ ಬಿಟ್ಟು ಉಳಿದ ಚಿನ್ನವನ್ನು ಮರಳಿ ತರುವ ಯೋಚನೆಯಲ್ಲಿ ಮೋದಿ ಸರಕಾರವಿದೆ.

೧೨ ok

ಈ ರೀತಿ ವಿದೇಶಿ ಶಕ್ತಿಗಳ ಮುಂದೆ ಅಸಹಾಯಕರಾಗಿರುವ ಸ್ಥಿತಿಯಿಂದ ಭಾರತ ಇವತ್ತು ಸ್ವಾಭಿಮಾನದ ಆರ್ಥಿಕ ವ್ಯವಸ್ಥೆಯತ್ತ ಮರಳುತ್ತಿದೆ. ಅಂಬೇಡ್ಕರ್ ಅವರು ಆರ್ಥಿಕ ಅವಲಂಬನೆ ಎಂದರೆ ರಾಜಕೀಯ ಅವಲಂಬನೆ ಅಂದಿದ್ದರು. ಚಿನ್ನ ವಾಪಸ್ ಬಂದ ದಿನ ಆ ಅವಲಂಬನೆಯ ದೊಡ್ಡ ಕೊಂಡಿ ಮುರಿಯಿತು.

ಇಂದಿರಾ ಮರೆತ ಕನಸು ನನಸು

೧೯೬೯ರ ಜುಲೈ ೧೯ರಂದು ಇಂದಿರಾ ಗಾಂಧಿ ದೇಶದ ಬಡವರಿಗೆ ಬ್ಯಾಂಕುಗಳ ಬಾಗಿಲು ತೆರೆಯಬೇಕು ಎಂಬ ಕಾರಣಕ್ಕೆ ದೇಶದ ೧೪ ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಉದ್ದೇಶ ಒಳ್ಳೆಯದೇ ಆಗಿತ್ತು. ಅದು ಅಂಬೇಡ್ಕರ್ ಕಂಡ ಆರ್ಥಿಕ ಪ್ರಜಾಪ್ರಭುತ್ವದ ದಿಕ್ಕಿನಲ್ಲಿ ಇಟ್ಟ ಮಹತ್ತರವಾದ ಹೆಜ್ಜೆಯಾಗಿತ್ತು. ಆದರೆ ಆ ರಾಷ್ಟ್ರೀಕರಣ ತನ್ನ ಉದ್ದೇಶದಿಂದ ವಿಮುಖವಾಯಿತು.

ಬಡತನ ನಿರ್ಮೂಲನೆ ಕೇವಲ ಘೊಷಣೆಯಾಗಿಯೇ ಉಳಿಯಿತು. ನಂತರ ಬಂದ ಕಾಂಗ್ರೆಸ್ ಸರಕಾರಗಳು ಆ ಬ್ಯಾಂಕುಗಳನ್ನು ರಾಜಕೀಯ ಆಟದ ಮೈದಾನ ಮಾಡಿಕೊಂಡವು. ೨೦೧೪ರಲ್ಲಿ ಬಂದಮೋದಿಯವರು ಆ ಅಪೂರ್ಣ ಕಾರ್ಯವನ್ನು ಮುಗಿಸಿದರು. ಜನ್ ಧನ್ ಯೋಜನೆಯಡಿ ೫೦ ಕೋಟಿ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟವು.

ಯುಪಿಐ ಮೂಲಕ ಡಿಜಿಟಲ್ ಭಾರತದ ಬಾಗಿಲು ಬಡವನಿಗೂ ತೆರೆಯಿತು. ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ) ಮೂಲಕ ?೩.೫ ಲಕ್ಷ ಕೋಟಿ ಮಧ್ಯವರ್ತಿಗಳ ಕೈ ಸೇರದೆ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿತು. ಬೀದಿ ವ್ಯಾಪಾರಿ, ದಿನಗೂಲಿ ಕಾರ್ಮಿಕ, ಹಳ್ಳಿಯ ರೈತ ಹೀಗೆ ದೇಶದ ಪ್ರತಿಯೊಬ್ಬ ಬಡವನೂ ಭಾರತದ ಆರ್ಥಿಕ ಮುಖ್ಯವಾಹಿನಿಗೆ ಬಂದರು. ಅಂಬೇಡ್ಕರ್ ೧೯೨೩ರ ಕೇಳಿದ್ದರು- ಈ ವ್ಯವಸ್ಥೆ ಯಾರಿಗಾಗಿ ಕೆಲಸ ಮಾಡುತ್ತಿದೆ? ಎಂಬುದಾಗಿ ಜನ್ ಧನ್ ಆ ಪ್ರಶ್ನೆಗೆ ಅಂತಿಮ ಉತ್ತರ ನೀಡಿತು. ಅಂಬೇಡ್ಕರ್ ಆಶಯದ ಆರ್ಥಿಕ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದರು.

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

೧೯೯೧ರಲ್ಲಿ ಭಾರತ ಐಎಂಎಫ್ ಮುಂದೆ ಮಂಡಿಯೂರಿ ಷರತ್ತುಗಳನ್ನು ಒಪ್ಪಿ ಸಾಲ ತಂದಿತ್ತು. ಆರ್ಥಿಕ ನೀತಿಯ ನಿಯಂತ್ರಣ ವಾಷಿಂಗ್ಟನ್‌ಗೆ ಹೋಯಿತು. ಆ ಅವಮಾನ ಮೂರು ದಶಕಗಳ ಕಾಲ ಭಾರತವನ್ನು ಕಾಡಿತು. ಇಂದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ವಿದೇಶಿ ವಿನಿಮಯದ ಮೀಸಲು ೭೦೦ ಬಿಲಿಯನ್ ಮೀರಿದೆ. ಕೋವಿಡ್ ಬಂತು, ಈಗ ಮಧ್ಯಪ್ರಾಚ್ಯದ ಯುದ್ಧ ಕಾರಣಕ್ಕೆ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿದ್ದರೂ ಭಾರತ ತಲೆ ಎತ್ತಿ ನಿಂತಿತು. ಅಂಬೇಡ್ಕರ್ ಅವರು ಆರ್ಥಿಕ ಸ್ವಾತಂತ್ರ್ಯ ಇಲ್ಲದ ದೇಶ ಎಂದಿಗೂ ನಿಜವಾಗಿ ಸ್ವತಂತ್ರವಲ್ಲ ಎಂದು ಹೇಳಿದ್ದರು. ೭೦೦ ಬಿಲಿಯನ್ ಡಾಲರ್ ಆ ಸ್ವಾತಂತ್ರ್ಯದ ಕವಚ ಆಯಿತು. ಪ್ರಧಾನಿ ಮೋದಿ ಭಾರತಕ್ಕೆ ಆ ಕವಚವನ್ನು ತೊಡಿಸಿದರು.

ತೈಲ ಸೇರಿದಂತೆ ಆಮದಿನ ಮೇಲೆ ಭಾರತ ದೊಡ್ಡ ಪ್ರಮಾಣದಲ್ಲಿ ಅಮೆರಿಕಾದ ಡಾಲರ್ ಮೇಲೆ ಅವಲಂಬಿತವಾಗಿತ್ತು. ಇದು ಭಾರತ ಸೇರಿದಂತೆ ಇಡೀ ಜಗತ್ತಿನ ಅನಿವಾರ್ಯತೆಯಾಗಿದ್ದು, ಈ ಕಾರಣದಿಂದಲೇ ಅಮೆರಿಕ ಜಗತ್ತಿನ ಮೇಲೆ ಪರೋಕ್ಷವಾಗಿ ಹಿಡಿತ ಸಾಧಿಸುತ್ತದೆ. ಆದರೆ ಮೋದಿ ಸರಕಾರ ಬಂದ ಮೇಲೆ ಭಾರತ ಹಂತಹಂತವಾಗಿ ಇತರ ದೇಶಗಳ ಕರೆನ್ಸಿಯನ್ನೂ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದೆ; ರಷ್ಯಾ ಹಾಗೂ ಮಧ್ಯಪ್ರಾಚ್ಯದ ಪ್ರಮುಖ ದೇಶಗಳ ಜೊತೆ ಅವರ ಕರೆನ್ಸಿಯನ್ನೇ ಬಳಸಿಕೊಳ್ಳುತ್ತಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ ಆರಂಭಿಸಿದೆ. ಈ ಮೂಲಕ ನಿಧಾನವಾಗಿ ಭಾರತ ಅಮೆರಿಕಾದ ಡಾಲರ್ ಮೇಲಿನ ತನ್ನ ಅವಲಂಬನೆ ಕಡಿಮೆ ಮಾಡಿದೆ. ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಭಾರತ ಅಮೆರಿಕಾದ ಒತ್ತಡಕ್ಕೆ ಮಣಿಯದ ಸ್ವತಂತ್ರ ವಿದೇಶ ನೀತಿಯನ್ನು ನಡೆಸುತ್ತಿದೆ. ಯಾರ ಹಣದ ಮೇಲೆ ಅವಲಂಬಿತರೋ, ಅವರ ನೀತಿಯ ಮೇಲೆ ಅವಲಂಬಿತರಾಗಿರುತ್ತೇವೆ ಎನ್ನುವ ಅಂಬೇಡ್ಕರ್ ಅವರ ಮಾತು ನಿಜಕ್ಕೂ ಇಲ್ಲಿ ಸತ್ಯವಾಗಿದೆ.

ಅಂಬೇಡ್ಕರ್ ದೂರದೃಷ್ಟಿಗೆ ಇಂಬು

ಅಂಬೇಡ್ಕರ್ ಅವರನ್ನು ಜಗತ್ತು ಸಂವಿಧಾನ ಶಿಲ್ಪಿ ಎಂದು ನೆನಪಿಸಿಕೊಳ್ಳುತ್ತದೆ ಮತ್ತು ಸಾಮಾಜಿಕ ನ್ಯಾಯದ ಹೋರಾಟಗಾರ ಎಂದು ಗೌರವಿಸುತ್ತದೆ. ಆದರೆ ಅವರ ಅತ್ಯಂತ ಕಡೆಗಣಿಸಲ್ಪಟ್ಟ ಪರಿಚಯ ಬೇರೆಯೇ ಇದೆ; ಅವರು ಭಾರತ ಕಂಡ ಮೊದಲ ಮಹಾನ್ ಅರ್ಥಶಾಸಜ್ಞ. ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್‌ʼನಲ್ಲಿ ಡಿಎಸ್‌ಸಿ ಪದವಿ ಪಡೆದ, ರೂಪಾಯಿ ಸಿದ್ಧಾಂತ ರಚಿಸಿದ ಹಾಗೂ ಆರ್‌ಬಿಐ ಸ್ಥಾಪನೆಗೆ ಬೌದ್ಧಿಕ ಅಡಿಪಾಯ ಹಾಕಿದ ದಾರ್ಶನಿಕರು ಅವರು. ಆದರೆ ಅವರ ಅರ್ಥಶಾಸವು ಕೇವಲ ಹಣ ಮತ್ತು ಬ್ಯಾಂಕ್‌ಗಳಿಗೆ ಸೀಮಿತವಾಗಿರಲಿಲ್ಲ, ಅದು ನೀರಿನ ತನಕ ವಿಸ್ತರಿಸಿತ್ತು.

೧೯೪೨ರಿಂದ ೧೯೪೬ರ ನಡುವೆ ವೈಸರಾಯ್ ಕಾರ್ಯಕಾರಿ ಮಂಡಳಿಯ ಲೇಬರ್ ಮೆಂಬರ್ ಆಗಿದ್ದ ಅಂಬೇಡ್ಕರ್, ಭಾರತದ ನದಿಗಳನ್ನು ಒಬ್ಬ ಅರ್ಥಶಾಸಜ್ಞನ ಕಣ್ಣಿನಿಂದ ನೋಡಿದರು. ೧೯೪೩ರ ದಾಮೋದರ ನದಿ ಪ್ರವಾಹ ಬಂಗಾಳವನ್ನು ನಡುಗಿಸಿದಾಗ, ಅವರು ಅದನ್ನು ಕೇವಲ ವಿಪತ್ತಾಗಿ ನೋಡಲಿಲ್ಲ, ಅದನ್ನೊಂದು ಆರ್ಥಿಕ ಅವಕಾಶವಾಗಿ ಕಂಡರು. ಅಮೆರಿಕದ ಟೆನ್ನಿಸ್ಸೀ ವ್ಯಾಲಿ ಅಥಾರಿಟಿ ಮಾದರಿಯನ್ನುಅಧ್ಯಯನ ಮಾಡಿ ದಾಮೋದರ ವ್ಯಾಲಿ ಕಾರ್ಪೊರೇಶನ್ ಯೋಜನೆಯನ್ನು ರೂಪಿಸಿದರು. ೧೯೪೫ರ ನವೆಂಬರ್ ೮ರಂದು ಕಟಕ್‌ನಲ್ಲಿ ಮಹಾನದಿಯನ್ನು ತಡೆಯಲು ಯೋಜನೆ ರೂಪಿಸಿದರು. ಅದೇ ಮುಂದೆ ಹಿರಾಕುಡ್ ಅಣೆಕಟ್ಟು ಆಯಿತು. ೧೯೪೫ರಲ್ಲಿ ಸೆಂಟ್ರಲ್ ವಾಟರ್‌ವೇಸ್, ಇರಿಗೇಶನ್ ಮತ್ತು ನ್ಯಾವಿಗೇಶನ್ ಕಮಿಶನ್ ಸ್ಥಾಪಿಸಿದರು. ಅದು ಇಂದು ಸೆಂಟ್ರಲ್ ವಾಟರ್ ಕಮಿಶನ್ ಆಗಿ ಉಳಿದಿದೆ.

ರೈಲ್ವೇ ಜಾಲವು ಬ್ರಿಟಿಷರ ಸಂಪತ್ತು ದೋಚುವ ಸಾಧನ ಎಂದು ಅರ್ಥ ಮಾಡಿಕೊಂಡ ಅಂಬೇಡ್ಕರ್, ಭಾರತದ ನದಿಗಳನ್ನು ಒಳನಾಡಿನ ಸಾರಿಗೆ ಮಾರ್ಗಗಳಾಗಿ ಪರಿವರ್ತಿಸಬೇಕು ಎಂದು ಪ್ರತಿಪಾದಿಸಿದರು. ನದಿಮಾರ್ಗದ ಸರಕು ಸಾಗಣೆ ರೈಲಿಗಿಂತ ಏಳು ಪಟ್ಟು ಅಗ್ಗ - ಅದು ರೈತರ ಮತ್ತು ಬಡವರ ವ್ಯಾಪಾರ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಲೆಕ್ಕ ಹಾಕಿದರು. ಆ ದೃಷ್ಟಿಯು ಅವರ ಕಾಲದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿಲ್ಲ. ಅದಕ್ಕಾಗಿ ಭಾರತ ಏಳು ದಶಕ ಕಾಯಬೇಕಾಯಿತು.

ಮೋದಿ ಸರಕಾರ ಸಾಗರಮಾಲ ಮತ್ತು ಒಳನಾಡು ಜಲಸಾರಿಗೆ ಯೋಜನೆಗಳನ್ನು ಜಾರಿಗೆ ತಂದಾಗ, ಅದು ಕೇವಲ ಮೂಲಸೌಕರ್ಯ ಯೋಜನೆಯಾಗಿರಲಿಲ್ಲ. ಅದು ೧೯೪೫ರಲ್ಲಿ ಅಂಬೇಡ್ಕರ್ ತೋರಿಸಿದ ಮಾರ್ಗದಲ್ಲಿ ಮೋದಿ ಸರಕಾರ ಇಟ್ಟ ಮಹತ್ತರ ಹೆಜ್ಜೆಗಳಲ್ಲಿ ಒಂದಾಗಿತ್ತು. ಅಂಬೇಡ್ಕರ್ ರೂಪಾಯಿ ಸಿದ್ಧಾಂತ ಬರೆದಾಗ ಅದು ಆರ್‌ಬಿಐ ಆಯಿತು; ಅವರ ಜಲದೃಷ್ಟಿ ಬರೆದಾಗ ಅದು ಸಾಗರ್‌ಮಾಲ ಆಯಿತು. ಒಂದು ಮಹಾನ್ ರಾಷ್ಟ್ರೀಯ ದಾರ್ಶನಿಕನ ಪ್ರಬಂಧ ಮತ್ತೊಬ್ಬ ನಾಯಕನ ಆಡಳಿತ ನೀತಿಯಾಗುವ ಅಪೂರ್ವ ಗೌರವ, ಇದು ಅಂಬೇಡ್ಕರ್- ಮೋದಿ ನಡುವಿನ ಕಾಲಾತೀತ ಸಂಬಂಧ.

ಈ ಆರೂ ನಿರ್ಧಾರಗಳು ಒಂದೊಂದೂ ಅಂಬೇಡ್ಕರ್ ಅವರ ಒಂದೊಂದು ಮಾತಿಗೆ ನೀಡಿದ ಉತ್ತರಗಳಾಗಿವೆ. ಮೋದಿಯವರು ೪,೩೯೯ ದಿನ ಅಽಕಾರದಲ್ಲಿದ್ದ ಆ ದಿನಗಳ ನಿಜವಾದ ದಾಖಲೆ

ಇದು. ಇಂದಿರಾ ಗಾಂಽ ೧೯೬೯ರಲ್ಲಿ ತೆರೆದ ಬಾಗಿಲು ಅರ್ಧ ತೆರೆದೇ

ಉಳಿದಿತ್ತು. ಮೋದಿ ಅದನ್ನು ಸಂಪೂರ್ಣವಾಗಿ ತೆರೆದರು. ದೇಶದ

ಅತ್ಯಂತ ಕಟ್ಟಕಡೆಯ ವ್ಯಕ್ತಿಯೂ ಭಾರತದ ಆರ್ಥಿಕ

ಮುಖ್ಯವಾಹಿನಿಗೆ ಬಂದ. ಅಂಬೇಡ್ಕರ್ ಕಂಡ ಆರ್ಥಿಕ ಸ್ವಾಯತ್ತ

ಭಾರತದ ಕನಸು ಇಂದು ನನಸಾಗುತ್ತಿದೆ. ಪ್ರಧಾನಿ ನರೇಂದ್ರ

ಮೋದಿ ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುತ್ತಿದ್ದಾರೆ.