KSRTC: ಕೆಎಸ್‌ಆರ್‌ಟಿಸಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್. ಕೊಂಡಪ್ಪರಿಗೆ ಆತ್ಮೀಯ ಬೀಳ್ಕೊಡುಗೆ
ಸಮಾರಂಭದಲ್ಲಿ ಘಟಕ ವ್ಯವಸ್ಥಾಪಕ ಸಚಿನ್, ಸಿಬ್ಬಂದಿ ಮೇಲ್ವಿಚಾರಕರಾದ ಶಿವಣ್ಣ, ಮೈಲಾರಪ್ಪ, ಕಾರ್ಮಿಕ ಮುಖಂಡರಾದ ಮುನಿಕೃಷ್ಣಪ್ಪ, ಸರ್ವಣ ಚೆನ್ನರಾಯಪ್ಪ, ಬುಲೆಟ್ ನಾಗರಾಜ್, ಶಿವಲಿಂಗಯ್ಯ, ಮುರಳಿ ಮೋಹನ್, ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್. ಕೊಂಡಪ್ಪ ಅವರನ್ನು ಸನ್ಮಾನಿಸಿ, ಅವರ ಸೇವೆಯನ್ನು ಸ್ಮರಿಸಿದರು.
-
Ashok Nayak
Aug 4, 2026 9:24 PM
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ (40/78) ಚಿಕ್ಕಬಳ್ಳಾಪುರ ಘಟಕದ ಮಾಜಿ ಅಧ್ಯಕ್ಷ ಎಚ್. ಕೊಂಡಪ್ಪ ಅವರ ನಿವೃತ್ತಿ ಅಂಗವಾಗಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಇದನ್ನೂ ಓದಿ: Chinthamani News: ನಿಯಮಿತ ಮಣ್ಣು ಪರೀಕ್ಷೆಯಿಂದ ವೆಚ್ಚ ಕಡಿಮೆ, ಆದಾಯ ಹೆಚ್ಚಳ: ಕೃಷಿ ವಿಜ್ಞಾನಿಗಳ ಸಲಹೆ
ಸಮಾರಂಭದಲ್ಲಿ ಘಟಕ ವ್ಯವಸ್ಥಾಪಕ ಸಚಿನ್, ಸಿಬ್ಬಂದಿ ಮೇಲ್ವಿಚಾರಕರಾದ ಶಿವಣ್ಣ, ಮೈಲಾರಪ್ಪ, ಕಾರ್ಮಿಕ ಮುಖಂಡರಾದ ಮುನಿಕೃಷ್ಣಪ್ಪ, ಸರ್ವಣ ಚೆನ್ನರಾಯಪ್ಪ, ಬುಲೆಟ್ ನಾಗರಾಜ್, ಶಿವಲಿಂಗಯ್ಯ, ಮುರಳಿ ಮೋಹನ್, ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್. ಕೊಂಡಪ್ಪ ಅವರನ್ನು ಸನ್ಮಾನಿಸಿ, ಅವರ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದ ಗಣ್ಯರು, ನಿಗಮದ ಅಭಿವೃದ್ಧಿಗೆ ಎಚ್. ಕೊಂಡಪ್ಪ ಅವರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದರು.