Narada Sanchara: ಜಿಂಕೆಮರಿ ನಾ, ಜಿಂಕೆಮರಿ ನಾ...!
ದಾವೋಸ್‌ನಲ್ಲಿ ಆಯೋಜಿಸಲಾಗಿರುವ ‘ವರ್ಲ್ಡ್ ಇಕನಾಮಿಕ್ ಫಾರಂ’ನ ಸಭೆಯಲ್ಲಿ ಪಾಲ್ಗೊಳ್ಳ ಲೆಂದು ತೆರಳಿದ ಅವರು ದಶಕಗಳಿಂದ ತಾವು ತೊಡುತ್ತಲೇ ಬಂದಿರುವ ಟ್ರೇಡ್‌ಮಾರ್ಕ್ ಉಡುಪಾ ದ ಖಾದಿ ಅಂಗಿ ಮತ್ತು ಪ್ಯಾಂಟಿನಲ್ಲೇ ಆ ಚಳಿಯನ್ನು ನಿರ್ವಹಿಸಿದ್ದು ಹೆಮ್ಮೆಯ ಸಂಗತಿ.


ನಾರದ ಸಂಚಾರ
ಸ್ವಿಜರ್ಲೆಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯ ತಪ್ಪಲಲ್ಲಿ ನೆಲೆಗೊಂಡಿದೆ ದಾವೋಸ್ ಎಂಬ ಪಟ್ಟಣ. ಹೇಳಿ ಕೇಳಿ ಅಲ್ಲಿ ಸಿಕ್ಕಾಪಟ್ಟೆ ಚಳಿ, ಶೂನ್ಯ ತಾಪಮಾನ ಎಂಬಷ್ಟರ ಮಟ್ಟಿಗಿನ ತೀವ್ರತೆಯ ಚಳಿ. ಅಲ್ಲಿ ಜಾಗತಿಕ ಉದ್ಯಮದಾರರ ಸಭೆಯೊಂದನ್ನು ಈ ಚುಮುಚುಮು ಚಳಿಯಲ್ಲೇ ಆಯೋಜಿಸ ಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಬರುವ ಉದ್ದಿಮೆದಾರರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲ ಲೆಂದು ತೆರಳುವ ಭಾರತದ ಉನ್ನತ ರಾಜಕಾರಣಿಗಳು, ಸೂಟ್‌ಕೇಸ್‌ನಲ್ಲೋ ಕಪಾಟಿನಲ್ಲೋ ಲಕ್ಷಣವಾಗಿ ಮಡಿಚಿಟ್ಟಿರುವ ತಮ್ಮ ಚಳಿಗಾಲದ ಉಡುಪುಗಳನ್ನು ಹೊರಗೆ ತೆಗೆಯಬೇಕಾಗಿ ಬರುವ ಸಮಯ ವಿದು. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಈ ಜಾಯ ಮಾನದವರಲ್ಲ ಎಂಬುದು ನಿಮ್ಮ ಗಮನಕ್ಕೆ.
ದಾವೋಸ್‌ನಲ್ಲಿ ಆಯೋಜಿಸಲಾಗಿರುವ ‘ವರ್ಲ್ಡ್ ಇಕನಾಮಿಕ್ ಫಾರಂ’ನ ಸಭೆಯಲ್ಲಿ ಪಾಲ್ಗೊಳ್ಳ ಲೆಂದು ತೆರಳಿದ ಅವರು ದಶಕಗಳಿಂದ ತಾವು ತೊಡುತ್ತಲೇ ಬಂದಿರುವ ಟ್ರೇಡ್‌ಮಾರ್ಕ್ ಉಡುಪಾ ದ ಖಾದಿ ಅಂಗಿ ಮತ್ತು ಪ್ಯಾಂಟಿನಲ್ಲೇ ಆ ಚಳಿಯನ್ನು ನಿರ್ವಹಿಸಿದ್ದು ಹೆಮ್ಮೆಯ ಸಂಗತಿ.
ಇದನ್ನೂ ಓದಿ: Narada Sanchara: ಸಿಂಗ್ ಈಸ್ ಮಿಂಚಿಂಗ್!
ತಮಾಷೆಯೆಂದರೆ, ಅವರ ಜತೆಗೆ ತೆರಳಿದ್ದ ನಿಯೋಗದಲ್ಲಿದ್ದವರ ಪೈಕಿ ಹೆಚ್ಚಿನವರು ನಾಯ್ಡು ಅವರಿಗಿಂತ ವಯಸ್ಸಿನಲ್ಲಿ ಸಾಕಷ್ಟು ಚಿಕ್ಕವರಾಗಿದ್ದು ಎರಡಕ್ಕಿಂತ ಹೆಚ್ಚು ಪದರದ ಚಳಿಯು ಡುಪುಗಳನ್ನು ಧರಿಸಿದ್ದರೂ ‘ಅನ್-ಕಂಫರ್ಟಬಲ್’ ಫೀಲಿಂಗ್ ಅವರ ಮುಖದಲ್ಲಿ ಎದ್ದು ಕಾಣು ತ್ತಿತ್ತಂತೆ; ಆದರೆ 74 ವರ್ಷದ ಚಂದ್ರಬಾಬು ನಾಯ್ಡು ಅವರು ಹಿಮಾವೃತ ಪ್ರದೇಶವಾದ ದಾವೋಸ್ ನಲ್ಲಿ ಕೇವಲ ಖಾದಿ ಅಂಗಿಯನ್ನು ತೊಟ್ಟಿದ್ದರೂ ಜಿಂಕೆಮರಿಯಂತೆ ಚುರುಕಾಗಿ ಓಡಾಡಿಕೊಂಡು ತುಂಬಾ ನಿರಾಳರಾಗಿದ್ದರಂತೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎದುರಿಸಿದ ತೀವ್ರ ಚಳಿ-ಸೆಖೆ-ಮಳೆಯಂಥ ವಾತಾವರಣಕ್ಕೆ ಅವರು ಒಗ್ಗಿಕೊಂಡಿರುವುದೇ ಇದಕ್ಕೆ ಕಾರಣವಿರಬಹುದೇ?!!
ಭಗವಂತ್ ಆತ್ಮವಿಶ್ವಾಸ
ಪಂಜಾಬ್‌ನಲ್ಲಿ ಆಮ್ ಆದ್ಮಿ ಸರಕಾರವು ಶಿಕ್ಷಣ ಅಥವಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸದಾ ಕಾಲ ಜನಕಲ್ಯಾಣಕ್ಕಾಗಿ ಕೆಲಸ ಮಾಡಿದೆ. ಪಕ್ಷವು ರಾಜ್ಯದಲ್ಲಿ ಇನ್ನೂ 2 ವರ್ಷಗಳ ಕಾಲ ಅಧಿಕಾರ ದಲ್ಲಿರುತ್ತದೆ. ಪಂಜಾಬ್‌ನಲ್ಲಿ ದೆಹಲಿಯ ಅನುಭವವನ್ನು ಬಳಸಿ ನಾವು ಒಗ್ಗಟ್ಟಾಗಿ ಕೆಲಸ ಮಾಡು ತ್ತೇವೆ" ಎಂದಿದ್ದಾರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು. ಈ ಮಾತು ಕೇಳಿಸಿ ಕೊಂಡ ರಾಜಕೀಯ ವಿಶ್ಲೇಷಕರೊಬ್ಬರು, “ಪಂಜಾಬ್‌ನಲ್ಲಿ ದೆಹಲಿಯ ಅನುಭವವನ್ನು ಬಳಸಿ ಕೊಳ್ಳುವುದಕ್ಕೆ ಯಾರದ್ದೂ ಆಕ್ಷೇಪವಿಲ್ಲ; ಆದರೆ ನಿಮ್ಮ ಪಕ್ಷಕ್ಕೆ ದೆಹಲಿಯಲ್ಲಾದ ಗತಿಯನ್ನು ನೀವೂ ತಂದುಕೊಳ್ಳಬೇಡಿ" ಎಂದು ಕಾಲೆಳೆದರಂತೆ!