ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸಹೋದರರನ್ನು ಬದುಕಿಸಿಕೊಂಡ ಧರ್ಮರಾಯ

ಯಾವುದೇ ಗಾಯವಿಲ್ಲದೆ ಬಿದ್ದಿದ್ದ ವೀರ ಸಹೋದರರನ್ನು ನೋಡಿ, ಇದು ಸಾಮಾನ್ಯ ಶತ್ರುವಿನ ಕೆಲಸ ವಲ್ಲ, ಯಾವುದೋ ದೈವಿಕ ಪರೀಕ್ಷೆ ಎಂಬುದು ಆತನಿಗೆ ಅರ್ಥವಾಯಿತು. ದುಃಖದ ನಡುವೆಯೂ ನೀರಿಗಿಳಿದಾಗ, ಬಕರೂಪಿ ಯಕ್ಷ ಪ್ರತ್ಯಕ್ಷನಾಗಿ ಅದೇ ಸಾವಿನ ಎಚ್ಚರಿಕೆ ನೀಡಿದ. ಧರ್ಮರಾಯ ಧಾವಂತಕ್ಕೆ ಬೀಳದೆ, ಕೈಮುಗಿದು, ‘ಮಹಾತ್ಮನೇ, ನಿಮ್ಮ ಪ್ರಶ್ನೆಗಳನ್ನು ಕೇಳಿ, ನನ್ನ ಬುದ್ಧಿಗನುಸಾರ ಉತ್ತರಿಸುವೆ’, ಎಂದು ಶಾಂತಚಿತ್ತನಾಗಿ ನಿಂತ.

ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸಹೋದರರನ್ನು ಬದುಕಿಸಿಕೊಂಡ ಧರ್ಮರಾಯ

-

ಒಂದೊಳ್ಳೆ ಮಾತು

ಅರಣ್ಯದ ಅಜ್ಞಾತವಾಸದಲ್ಲಿ ಕಗ್ಗತ್ತಲಲ್ಲಿ ಬಾಯಾರಿಕೆಯಿಂದ ಕಂಗೆಟ್ಟಿದ್ದ ಪಾಂಡವರಿಗೆ ವಿಶ್ರಾಂತಿ ಬೇಕಿತ್ತು. ಪ್ರಾಣವೇ ಹೋಗು ವಂತಿದ್ದ ಆ ಕ್ಷಣದಲ್ಲಿ ಧರ್ಮರಾಯನ ಮಾತಿ ನಂತೆ ನಕುಲ ಸರೋವರ ವೊಂದನ್ನು ಹುಡುಕಿ ಕೊಂಡು ಹೋದ. ಸಟಿಕದಂತಿದ್ದ ತಂಪಾದ ನೀರನ್ನು ಕಂಡು ಬೊಗಸೆಯಲ್ಲಿ ತುಂಬಿಕೊಳ್ಳಲು ಹೋದಾಗ, ‘ನಿಲ್ಲು ನಕುಲ! ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ನೀರನ್ನು ಮುಟ್ಟಿದರೆ ಮರಣ ನಿಶ್ಚಿತ’, ಎಂಬ ಅಶರೀರವಾಣಿ ಮೊಳಗಿತು.

ಆದರೆ, ವಿಪರೀತ ಬಾಯಾರಿಕೆ ಮತ್ತು ತನ್ನ ಧನುರ್ವಿದ್ಯೆಯ ಅಹಂನಲ್ಲಿದ್ದ ನಕುಲ ಆ ಮಾತನ್ನು ಲೆಕ್ಕಿಸದೆ ನೀರು ಕುಡಿದು ಕ್ಷಣಾರ್ಧದಲ್ಲಿ ಹೆಣವಾಗಿ ಬಿದ್ದ. ನಂತರ ಬಂದ ಸಹದೇವ, ಗದಾಪಾಣಿ ಭೀಮ ಮತ್ತು ಲೋಕವೀರ ಅರ್ಜುನ ಸಹ ತಮ್ಮ ಅಪಾರ ಬಾಹುಬಲ ಹಾಗೂ ಶಸ್ತ್ರಾಸ್ತ್ರಗಳ ಗರ್ವದಿಂದ ಆ ನಿಗೂಢ ಎಚ್ಚರಿಕೆಯನ್ನು ಕಡೆಗಣಿಸಿದರು. ಯಾರ ಶಕ್ತಿಯೂ ಆ ಸರೋವರದ ದಂಡೆಯಲ್ಲಿ ನಡೆಯ ಲಿಲ್ಲ; ನಾಲ್ವರೂ ನಿರ್ಜೀವವಾಗಿ ನೆಲಕ್ಕು ರುಳಿದರು. ಕೊನೆಗೆ ತಮ್ಮಂದಿ ರನ್ನು ಅರಸುತ್ತಾ ಬಂದ ಧರ್ಮರಾಯನಿಗೆ ಅಲ್ಲಿ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು.

ಯಾವುದೇ ಗಾಯವಿಲ್ಲದೆ ಬಿದ್ದಿದ್ದ ವೀರ ಸಹೋದರರನ್ನು ನೋಡಿ, ಇದು ಸಾಮಾನ್ಯ ಶತ್ರುವಿನ ಕೆಲಸ ವಲ್ಲ, ಯಾವುದೋ ದೈವಿಕ ಪರೀಕ್ಷೆ ಎಂಬುದು ಆತನಿಗೆ ಅರ್ಥವಾಯಿತು. ದುಃಖದ ನಡುವೆಯೂ ನೀರಿಗಿಳಿ ದಾಗ, ಬಕರೂಪಿ ಯಕ್ಷ ಪ್ರತ್ಯಕ್ಷನಾಗಿ ಅದೇ ಸಾವಿನ ಎಚ್ಚರಿಕೆ ನೀಡಿದ. ಧರ್ಮರಾಯ ಧಾವಂತಕ್ಕೆ ಬೀಳದೆ, ಕೈಮುಗಿದು, ‘ಮಹಾತ್ಮನೇ, ನಿಮ್ಮ ಪ್ರಶ್ನೆ ಗಳನ್ನು ಕೇಳಿ, ನನ್ನ ಬುದ್ಧಿಗನುಸಾರ ಉತ್ತರಿಸುವೆ’, ಎಂದು ಶಾಂತಚಿತ್ತನಾಗಿ ನಿಂತ.

ಇದನ್ನೂ ಓದಿ: Roopa Gururaj Column: ಗುವಾಹಟಿಯ ನವಗ್ರಹ ದೇವಾಲಯ: ಬ್ರಹ್ಮನ ಅಧ್ಯಯನ ತಾಣ

ಅಲ್ಲಿಂದ ಜ್ಞಾನ ಮತ್ತು ವಿವೇಕದ ಅಪರೂಪದ ಸಂವಾದ ಆರಂಭವಾಯಿತು. ಭೂಮಿಗಿಂತ ಭಾರ ವಾದದ್ದು ಯಾವುದು? ಆಕಾಶಕ್ಕಿಂತ ಎತ್ತರ ವಾದದ್ದು ಯಾವುದು? ಗಾಳಿಗಿಂತ ವೇಗವಾಗಿ ಓಡುವುದು ಯಾವುದು? ಎಂದು ಯಕ್ಷ ಕೇಳಿ ದಾಗ, ಧರ್ಮರಾಯ ಕಿಂಚಿತ್ತೂ ತಡಮಾಡದೆ, ಹೆತ್ತ ತಾಯಿ ಭೂಮಿಗಿಂತ ಭಾರ, ತಂದೆ ಆಕಾಶ ಕ್ಕಿಂತ ಎತ್ತರ, ಮನುಷ್ಯನ ಮನಸ್ಸು ಗಾಳಿಗಿಂತ ವೇಗ, ಮತ್ತು ನಮ್ಮ ಚಿಂತೆ ಹುಲ್ಲಿಗಿಂತ ಹೆಚ್ಚಾಗಿ ಹರಡುತ್ತದೆ, ಎಂದ.

ಮನುಷ್ಯ ಯಾವುದನ್ನು ತೊರೆದರೆ ಎಲ್ಲರಿಗೂ ಪ್ರಿಯನಾಗುತ್ತಾನೆ? ಜಗತ್ತಿನ ಅತ್ಯಂತ ದೊಡ್ಡ ಆಶ್ಚರ್ಯ ಯಾವುದು? ಎಂಬ ಯಕ್ಷನ ಕಠಿಣ ಪ್ರಶ್ನೆಗೆ, ಅಹಂಕಾರವನ್ನು ತೊರೆದರೆ ಮನುಷ್ಯ ಎಲ್ಲರಿಗೂ ಪ್ರಿಯನಾಗುತ್ತಾನೆ. ದಿನವೂ ಕಣ್ಣೆದುರೇ ಸಾವಿರಾರು ಜೀವಿಗಳು ಸಾವನ್ನಪ್ಪುತ್ತಿ ದ್ದರೂ, ತಾನು ಮಾತ್ರ ಶಾಶ್ವತವಾಗಿ ಬದುಕಿರುತ್ತೇನೆ ಎಂದು ಮಾನವ ಭಾವಿಸುವುದೇ ಜಗತ್ತಿನ ಪರಮ ಆಶ್ಚರ್ಯ, ಎಂದು ಉತ್ತರಿಸಿದ. ಧರ್ಮರಾಯನ ಅಪಾರ ಜ್ಞಾನ ಮತ್ತು ಸ್ಥಿತ ಪ್ರಜ್ಞತೆಗೆ ಮೆಚ್ಚಿದ ಯಕ್ಷ, ನಿನ್ನ ಒಬ್ಬ ಸಹೋದರನನ್ನು ಮಾತ್ರ ಬದುಕಿಸುವೆ, ಯಾರು ಬೇಕು? ಎಂದಾಗ, ಧರ್ಮರಾಯ ಭೀಮ-ಅರ್ಜುನರನ್ನು ಬಿಟ್ಟು ಮಾದ್ರಿಯ ಮಗ ನಕುಲನನ್ನು ಆಯ್ಕೆ ಮಾಡಿದ.

ಆಶ್ಚರ್ಯಗೊಂಡ ಯಕ್ಷನಿಗೆ, ನನ್ನ ತಂದೆಗೆ ಕುಂತಿ ಮತ್ತು ಮಾದ್ರಿ ಇಬ್ಬರೂ ಸಮಾನ ತಾಯಂದಿರು. ಕುಂತಿಯ ಮಗನಾಗಿ ನಾನು ಬದುಕಿರುವಾಗ, ಮಾದ್ರಿಯ ಒಬ್ಬ ಮಗನಾದರೂ ಬದುಕಿರ ಬೇಕಲ್ಲವೇ? ಧರ್ಮ ಮತ್ತು ಸಮಾನತೆಯೇ ನನ್ನ ನಿಲುವು, ಎಂದು ಉತ್ತರಿಸಿದ. ಈ ನಿಸ್ವಾರ್ಥ ಧರ್ಮನಿಷ್ಠೆಗೆ ಶರಣಾದ ಯಕ್ಷ, ಸಾಕ್ಷಾತ್ ಯಮಧರ್ಮರಾಜನಾಗಿ ಪ್ರತ್ಯಕ್ಷನಾಗಿ ನಾಲ್ವರೂ ಸಹೋದರರನ್ನು ಬದುಕಿಸಿಕೊಟ್ಟ. ಆಪತ್ತಿನ ಸಮಯದಲ್ಲಿ ಮನುಷ್ಯನನ್ನು ಪಾರು ಮಾಡುವುದು ಆತನ ಶಕ್ತಿ, ಶೌರ್ಯ ಅಥವಾ ಆಸ್ತಿ ಪಾಸ್ತಿಯಲ್ಲ; ಬದಲಿಗೆ ಆತನಲ್ಲಿರುವ ಸಂಯಮ, ವಿವೇಕ ಮತ್ತು ಧರ್ಮದ ಮಾರ್ಗ ಮಾತ್ರ. ಅಹಂಕಾರವನ್ನು ಬದಿಗಿಟ್ಟು ಶಾಂತವಾಗಿ ಯೋಚಿಸಿದರೆ ಎಂತಹ ಮಹಾಸಂಕಟವನ್ನೂ ಮೆಟ್ಟಿ ನಿಲ್ಲ ಬಹುದು.

ಕೆಲವೊಮ್ಮೆ ನಾವು ಯಾರನ್ನು ಎದುರು ಹಾಕಿಕೊಂಡಿದ್ದೇವೆ ಎನ್ನುವ ಸೂಕ್ಷ್ಮ ನಮಗೆ ತಿಳಿದಿರುವು ದಿಲ್ಲ. ನಮಗಿಂತ ಅಧಿಕಾರ ಮತ್ತು ಹಣದ ವಿಷಯದಲ್ಲಿ ಶಕ್ತಿ ವಂತರನ್ನು ಎದುರು ಹಾಕಿಕೊಂಡಾಗ ಅಲ್ಲಿ ಬರಿ ಧೈರ್ಯ ಇದ್ದರೆ ಸಾಲದು, ಅದರ ಜೊತೆಗೆ ಯುಕ್ತಿ ಮತ್ತು ಸಮಾಧಾನವೂ ಇರಬೇಕು. ನಮ್ಮಲ್ಲಿನ ವಿವೇಕ ಮತ್ತು ಸಮಾಧಾನ ಪ್ರಜ್ಞೆ ಜಾಗೃತವಾಗಿದ್ದಾಗ ಎಂತಹ ಸಮಸ್ಯೆಯನ್ನು ಕೂಡ ನಿವಾರಿಸಲು ಮನಸ್ಸು ಸಿದ್ಧವಾಗಿ ಬಿಡು ತ್ತದೆ. ಆದ್ದರಿಂದಲೇ ಬದುಕನ್ನು ಆತ್ಮವಿಶ್ವಾಸ ದಿಂದ, ಸಮಾಧಾನ ಸ್ಪಷ್ಟ ನಿಲುವಿನಿಂದ ಎದುರಿಸೋಣ.