Hari Paraak Column: ಬ್ರೆಡ್ ಅರ್ನ್ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?
“ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿ ದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂ ಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು


ತುಂಟರಗಾಳಿ
ಸಿನಿಗನ್ನಡ
ನಟ ಅಜಯ್ ರಾವ್ ಈಗ ಹೊಸ ಚಿತ್ರಕ್ಕೆ ಹಣ ಹಾಕಿದ್ದಾರೆ. ಆ ಮೂಲಕ ಇನ್ನೊಮ್ಮೆ ನಿರ್ಮಾಪಕ ರಾಗಿದ್ದಾರೆ. ತಾವು ನಾಯಕ ಮತ್ತು ನಿರ್ಮಾಪಕ ಆಗಿರುವ ‘ಯುದ್ಧಕಾಂಡ’ ಚಿತ್ರದೊಂದಿಗೆ ಮತ್ತೆ ಲೈಮ್‌ಲೈಟಿಗೆ ಬಂದಿದ್ದಾರೆ ಅಜಯ್ ರಾವ್. ಬಹಳ ದಿನಗಳಿಂದ ಸೋಲನ್ನೇ ನೋಡ್ತಾ ಇರೋ ತಮ್ಮ ಕೆರಿಯರ್‌ಗೆ ಈ ಚಿತ್ರದ ಮೂಲಕ ಬೂ ಸಿಗುತ್ತದೆ ಅನ್ನೋ ನಂಬಿಕೆ ಅವರದ್ದು. ಆದರೆ ಇತ್ತೀಚೆಗೆ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅವರು ತಾವು ಮಾಡಿಕೊಂಡಿ ರುವುದಾಗಿ ಹೇಳಿಕೊಂಡ ಕೋಟಿಗಟ್ಟಲೆ ಸಾಲವೇ ಅವರ ಯುದ್ಧಕಾಂಡ ಚಿತ್ರಕ್ಕಿಂತ ಹೆಚ್ಚು ಸದ್ದು ಮಾಡುತ್ತಿದೆ. ಈಗ ಇದನ್ನೆ ಯಾಕೆ ಹೇಳಬೇಕು ಅಂದ್ರೆ, ಇದು ಅವರ ಚಿತ್ರ ಬಿಡುಗಡೆ ಆಗೋ ಸಮಯ. ಎಮೋಷ ವರ್ಕ್ ಆಗುತ್ತೆ ಅನ್ನೋದು ಕಾರಣ.
ಇದರ ಜತೆಗೆ ಅಜಯ್ ರಾವ್, ತಮ್ಮ ಬಿಎಂಡಬ್ಲ್ಯು ಕಾರನ್ನ ಮಾರಿದ್ದು ಅದನ್ನ ನೋಡಿ ಅವರ ಪುಟ್ಟ ಮಗಳು ಅತ್ತಿದ್ದು ಎಲ್ಲವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಿನಿಮಾ ಬಿಡುಗಡೆಯ ಸಮಯದಲ್ಲಿ ಎಲ್ಲವನ್ನೂ ಎನ್‌ಕ್ಯಾಷ್ ಮಾಡಿಕೊಳ್ಳೋ ಧಾವಂತದಲ್ಲಿದ್ದಾರೆ.
ಇದೇ ವೇಳೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, “ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು. ಅವರು ಹಾಕಿರೋ ಥಂಬ್‌ನೈಲ್ ನೋಡಿದ್ರೆ ‘ನಾನು ರಿಷಭ್, ರಕ್ಷಿತ್‌ಗಿಂತ ಮುಂಚೆ ಬಂದಿದ್ದೆ. ನನಗೆ ಅವರಿಗಿಂತ ಮೊದಲು ಹೆಸರು, ಖ್ಯಾತಿ ಬರಬೇಕು’ ಅಂತ ಅಜಯ್ ರಾವ್ ಅವರು ಹೇಳಿದ ಹಾಗೆ ಭಾಸವಾಗುತ್ತದೆ. ಇದೇನಾದ್ರೂ ನಿಜ ಆಗಿದ್ರೆ ಅದಕ್ಕಿಂತ ಹಾಸ್ಯಾಸ್ಪದ ವಿಷಯ ಇನ್ನೊಂದಿಲ್ಲ. ಈ ಮಾತುಗಳನ್ನು ಕೇಳಿದ ಮೇಲೆ ಸಕ್ಸಸ್‌ಗೆ ಮಾನದಂಡ ಯಾವುದು, ಕನ್ನಡ ಚಿತ್ರರಂಗದಲ್ಲಿ ಯಾರಾದ್ರೂ ‘- ಕಮ್ - ಸರ್ವ್ ಬೇಸಿಸ್’ ಅಂತ ಬೋರ್ಡ್ ಹಾಕ್ಕೊಂಡ್ ಕೂತಿದ್ದಾರಾ ಅಂತ ಎಲ್ಲರಿಗೂ ಅನುಮಾನ ಬರೋದಂತೂ ಸಹಜ.
ಇದನ್ನೂ ಓದಿ: Hari Paraak Column: ನಾವೇನ್ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?
ಲೂಸ್ ಟಾಕ್- ಫುಟ್ ಪಾತಿನಲ್ಲಿ ಕೂತಿರುವ ಭಿಕ್ಷುಕ
ಅಲ್ರೀ, ಹಿಂಗೆಲ್ಲ ದೇವರ ಫೋಟೋಸ್ ಇಟ್ಕೊಂಡು ಭಿಕ್ಷೆ ಬೇಡೋದು ಸರೀನಾ?
-ಏನ್ ತಪ್ಪು? ಜನ ದೇವರ ಹತ್ರ ದುಡ್ಡು ಕೇಳಿದಾಗ ಅವನು ಕೊಡಲ್ವಾ? ಹಂಗೆ ದೇವರು ಕೇಳಿದಾಗ ಜನನೂ ಕೊಡ್ಬೇಕಪ್ಪ... ಗಿವ್ ಆಂಡ್ ಟೇಕ್ ಪಾಲಿಸಿ ಯೂ ನೋ...
ಅದ್ಸರಿ, ನಿಮಗೆ ಒಂದು ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ?
-ಬರೋ ಶೇರ್‌ನಲ್ಲಿ ಬಾಡಿಗೆ ಎಲ್ಲಾ ಕಳೆದು ಒಳ್ಳೆ ಲಾಭನೇ ಬರುತ್ತೆ ಬಿಡಿ. ಆದ್ರೆ ಅದರ ಜತೆಗೆ ಲಾಭ ಏನು ಅಂದ್ರೆ, ಯಾರೂ ನನಗೆ ‘ಮಗನೇ, ಫುಟ್‌ಪಾತ್‌ಗೆ ಬಂದ್ಬಿಡ್ತೀಯಾ’ ಅಂತ ಆವಾಜ್ ಹಾಕಂಗಿಲ್ಲ.
ಯಾಕೋ ನಿಮ್ಮ ಮಾತು ಒಂಥರಾ ಇದೆ. ಸರಿ, ಇಲ್ಲಿ ಭಿಕ್ಷಾಟನೆ ಮಾಡಬಾರದು ಅಂತ ಯಾರೂ ನಿಮ್ಮನ್ನ ಉಚ್ಚಾಟನೆ ಮಾಡಿ ಇನ್ನೂ?
-ಜನ ಓಡಾಡೋ ಈ ಫುಟ್‌ಪಾತಲ್ಲಿ ಭಿಕ್ಷೆ ಎತ್ತೋದ್ರಿಂದ ಯಾರಿಗೆ ತೊಂದ್ರೆ ಆಗುತ್ತೆ ಹೇಳಿ, ‘ನರಮನುಷ ನಡೆಯೋ ಹಾದೀಲಿ ಗರಿಕೇನೂ ಬೆಳೆಯಲ್ಲ’ ಅಂತ ಹಂಸಲೇಖ ಅವರೇ ಹೇಳಿಲ್ವಾ?
ಓಹೋ, ಸಿನಿಮಾ ಹುಚ್ಚು ಇದ್ದಂಗಿದೆ, ಇದೇ ಕಲೆಕ್ಷನ್ನಲ್ಲಿ ಸಿನಿಮಾ ಮಾಡೋ ಪ್ರೋಗ್ರಾಮ್ ಏನಾದ್ರೂ ಇದೆಯೋ?
- ಯಾಕಿಲ್ಲ, ಬಿಡಲ್ಲ. ‘ಮತ್ತೆ’ ನಾನು ಸಿನಿಮಾ ಮಾಡೇ ಮಾಡ್ತೀನಿ, ಸಿನಿಮಾಕ್ಕೆ ‘ಬೀದಿಗೆ ಬಂದ ಭಗವಂತ’ ಅಂತ ಹೆಸರಿಡ್ತೀನಿ.
ಒಂದ್ ನಿಮಿಷ ಇರಿ, ಆವಾಗ್ಲೆ ನಂಗೆ ಡೌಟ್ ಆಯ್ತು. ನಿಮ್ ಮಾತು ಯಾಕೋ ಒಂಥರಾ ಇದೆ ಅಂತ. ಈಗ ನಿಜ ಹೇಳಿ. ಇಲ್ಲಿ, ‘ಮತ್ತೆ’ ಅಂದ್ರೆ ಏನರ್ಥ?
- ಮೊದಲು ನಾನು ಕನ್ನಡ ಸಿನಿಮಾ ಪ್ರೊಡ್ಯೂಸರ್ ಆಗಿದ್ದೆ ಕಣ್ರೀ...
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಬೆಳಗ್ಗೆ ಬೆಳಗ್ಗೆ ಎದ್ದು ಖೇಮು ದಿನಭವಿಷ್ಯ ನೋಡೋಣ ಅಂತ ಪೇಪರ್ ತೆರೆದ. ಅದರಲ್ಲಿ ‘ಭಯಾನಕ ಗಂಡಾಂತರವೊಂದು ಎದುರಾಗಲಿದೆ. ಆದರೆ, ಸಮಯಪ್ರe ಇದ್ದರೆ ಬಚಾವಾಗ ಬಹುದು’ ಎಂದು ಬರೆದಿತ್ತು. ಖೇಮುಗೆ ಪುಲ್ ಗಾಭರಿ ಆಯ್ತು. ಇವತ್ತು ಆಫೀಸಿಗೆ ರಜಾ ಹಾಕೋಣ ಅಂದ್ಕೊಂಡ. ಆದ್ರೆ ಆಫೀಸಲ್ಲಿ ಸಾಕಷ್ಟು ಕೆಲಸ ಇತ್ತು. ಅಲ್ಲದೆ ಗಂಡಾಂತರ ಅಂದ್ರೆ ಅದು ಮನೆಯಲ್ಲೂ ಎದುರಾಗಬಹುದು, ಯಾರಿಗ್ಗೊತ್ತು. ಆಗಿದ್ದಾಗ್ಲಿ ನೋಡಿಯೇಬಿಡೋಣ ಅಂತ ರೆಡಿ ಆಗಿ ಆಫೀಸಿಗೆ ಹೊರಟ. ‘ಯಾಕ್ರೀ ಒಂಥರಾ ಡಲ್ ಇದೀರಾ?’ ಅಂತ ಕೇಳಿದ ಹೆಂಡತಿ ಖೇಮುಶ್ರೀಗೂ ಏನೂ ಹೇಳದೆ ಹೊರಟ ಖೇಮು, ಗಾಡಿ ಸ್ಟಾರ್ಟ್ ಮಾಡಿಕೊಂಡು ಆಫೀಸ್ ಕಡೆ ಹೊರಟವನು ಎಂದಿಗಿಂತ ಹೆಚ್ಚು ಕೇರ್‌ಪುಲ್ ಆಗಿ ಗಾಡಿ ಓಡಿಸತೊಡಗಿದ. ಇನ್ನೇನು ಮನೆಯ ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ಆ ತಿರುವಿನಲ್ಲಿ ಖೇಮು ಗಾಡಿ ತಿರುಗಿಸುವುದಕ್ಕೂ ಪಕ್ಕದ ಇದ್ದ ಟ್ರಾನ್ಸ್ ಫಾರ್ಮರ್‌ನ ಹೈ ವೋಲ್ಟೇಜ್ ತಂತಿ ಮೇಲಿನಿಂದ ಇವನ ಮೇಲೆ ಬೀಳುವುದಕ್ಕೂ ಸರಿಹೋಯಿತು. ಗಾಡಿಯಿಂದಲೂ ಕೆಳಗೆ ಬಿದ್ದ ಖೇಮುವಿನ ಮೈಮೇಲೆಯೇ ಆ ತಂತಿ ಬಿದ್ದಿತ್ತು. ಖೇಮು ‘ಅಯ್ಯೋ, ಕಡೆಗೂ ದಿನಭವಿಷ್ಯ ನಿಜವೇ ಆಯ್ತಲ್ಲಪ್ಪ ’ ಎಂದು ಕೂಗಿಕೊಂಡು ಅ ವಿಲವಿಲನೆ ಒದ್ದಾಡ ತೊಡಗಿದ. ಆದರೆ ಒಂದೆರಡು ಕ್ಷಣಗಳ ನಂತರ ಇದ್ದಕ್ಕಿದ್ದಂತೆ ಅವನಿಗೆ ಜ್ಞಾಪಕ ಬಂತು, ‘ಅರೇ, ನಮ್ ಏರಿಯಾದಲ್ಲಿ ಎರಡು ದಿನದಿಂದ ಕರೆಂಟೇ ಇಲ್ಲವಲ್ಲ’ ಅಂತ. ಹಾಗಾಗಿ, ಸಮಾಧಾನ ವಾಗಿ ಮೇಲೆದ್ದು ನಿಟ್ಟುಸಿರು ಬಿಡುತ್ತಾ ಮನಸ್ಸಿನ ಅಂದ್ಕೊಂಡ ‘ಅಬ್ಬಾ, ಸದ್ಯ, ನಮ್ ಏರಿಯಾದಲ್ಲಿ ಕರೆಂಟ್ ಇಲ್ಲ ಅಂತ ಸರಿಯಾದ ಸಮಯದಲ್ಲಿ ನೆನಪಾಗ್ದೇ ಇದ್ದಿದ್ರೆ, ಇವತ್ತು ಸತ್ತೇ ಹೋಗ್ಬಿಡ್ತಿದ್ದೆ’.
ಲೈನ್ ಮ್ಯಾನ್
ಸಿಎಸ್‌ಕೆ - ಪರದಾಟ
ಮ್ಯಾಚ್‌ಗೆ ಮುಂಚೆ
- ಈಗ ಕ್ಯಾಪ್ಟನ್ ಚೇಂಜ್.. ಇವತ್ತು ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲೆ ಬರ್ತೀವಿ.
ಮ್ಯಾಚ್‌ನ ನಂತರ
-ಮನುಷ್ಯ ನೀರಲ್ಲಿ ಮುಳುಗಿ ಸತ್ತ ಮೇಲೆ ಹೆಣನಾದ್ರೂ ಮೇಲೆ ಬರುತ್ತೆ. ಈ ‘ತಳ’ದಲ್ಲಿ ಇರೋ
ರು ಮೇಲೆ ಬರೋದು ಡೌಟು.
ಕರಾವಳಿ ಕಡೆ ಜನರ ಕೈ ಕುಯ್ದರೆ ಕೇಸರಿ ಕಲರ್ ರಕ್ತ ಬರುತ್ತೆ: ಮಾಳವಿಕ
-ಬಯಲುಸೀಮೆ ಜನ: ನಮ್ ಕಡೆಯವರಿಗೆ ಕೈ ಕುಯ್ಯೋದೆಲ್ಲ ಬೇಕಾಗೇ ಇಲ್ಲ ಕಣಕ್ಕ, ನಿಮ್ಮಂಥವರ ಮಾತು ಕೇಳಿದ್ರೆ ಸಾಕು, ಕಿವಿಯ ರಕ್ತ ಬರುತ್ತೆ
ವಿಚಿತ್ರ ಸತ್ಯ
-ಕಂಪ್ಯೂಟರ್ ಶಟ್ ಡೌನ್ ಮಾಡ್ಬೇಕು ಅಂದ್ರೂ ಮೊದಲು ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಏರ್‌ಪೋರ್ಟ್‌ನಿಂದ ಓಡಿಹೋದ ಮದುವಣಗಿತ್ತಿ
-‘ರನ್‌ವೇ’ ಬ್ರೈಡ್
ಜೀವನದಲ್ಲಿ ಬ್ರೆಡ್ ಆಂಡ್ ಬಟರ್ ಅರ್ನ್ ಮಾಡೋದು ಬಹಳ ಮುಖ್ಯ
-ಹಾಗಾಗಿ ಬ್ರೆಡ್ ಅರ್ನ್ ಮಾಡಲೆಂದೇ ಕೆಲವರು ‘ಬಟರ್’ ಹಚ್ಚುವುದನ್ನು ಕಲಿತುಕೊಂಡಿರುತ್ತಾರೆ.
ತಲೆಗೆ ಸುತ್ತಿಗೆಯಿಂದ ಹೊಡೆದಾಗ ಆಗುವ ಅನುಭವ
-ಸೆನ್ಸ್ ಆಫ್ ಹ್ಯಾಮರ್
ಇನ್ನೊಬ್ಬರ ಮನಸ್ಸು, ಹೃದಯವನ್ನು ಘಾಸಿಗೊಳಿಸಲೆಂದು ಕೆಲವರು ಮಾಡುವ ದೌರ್ಜನ್ಯ
-ಹಾರ್ಟ್ ‘ಅಟ್ಯಾಕ್’
ವೆಸ್ಟ್ ಬೆಂಗಾಲ್‌ನಲ್ಲಿ ಕಸ ಹಾಕುವ ಜಾಗವನ್ನು ಏನಂತಾರೆ?
- ‘ವೇಸ್ಟ್’ ಬೆಂಗಾಲ್