ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ಪ್ರತಿ ವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರ ಮಂದಿರಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೋಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ.

ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ಹರಿ ಪರಾಕ್‌ ಹರಿ ಪರಾಕ್‌ Apr 6, 2025 7:15 AM

ತುಂಟರಗಾಳಿ

ಸಿನಿಗನ್ನಡ

ಫೇಸ್‌ಬುಕ್‌ನಲ್ಲಿ ಯಾರೋ ಪೋ ಹಾಕಿದ್ರು, ಅವರು ಪ್ರತಿದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, “ಸರ್, ನೀವು ಇಲ್ಲೇ ಕೆಲಸ ಮಾಡೋದಾ?" ಅಂತ ಕೇಳಿದ್ನಂತೆ. ಕೇಳೋಕೆ ತಮಾಷೆಯಾಗಿದ್ದರೂ ಇದು ವಾಸ್ತವ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಿಮಾಗಳ ಪಟ್ಟಿಗಿಂತ, ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾಗಿತ್ತು ಆದ್ರೆ ಆಗ್ಲಿಲ್ಲ ಅನ್ನೋ ಸಿನಿಮಾಗಳ ಪಟ್ಟಿಯೇ ದೊಡ್ಡದಾಗಿದೆ. ಪ್ರತಿ ವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರು ವಾಗಲೇ ಚಿತ್ರ ಮಂದಿರ ಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೋಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ.

ಹಾಗಾಗಿ ಅಪ್ಪಟ ಚಿತ್ರಪ್ರೇಮಿಗಳು, “ಅಯ್ಯೋ, ಆ ಸಿನಿಮಾ ನೋಡೋಕಾಗ್ಲಿಲ್ಲ, ಈ ಸಿನಿಮಾ ನೋಡೋ ಕಾಗ್ಲಿಲ್ಲ" ಅಂತ ಕೊರಗೋದು ತಪ್ಪುತ್ತಿಲ್ಲ. ಬರೀ ಸಿನಿಮಾ ಪ್ರೇಮಿಗಳು ಯಾಕೆ, ಸ್ವತಃ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರಿಗೇ ಎಲ್ಲ ಸಿನಿಮಾಗಳನ್ನು ನೋಡೋಕೆ ಆಗ್ತಿಲ್ಲ. ಹಾಗೊಂದು ವೇಳೆ ಹಠಕ್ಕೆ ಬಿದ್ದು ದಿನಕ್ಕೆರಡು ಸಿನಿಮಾ ನೋಡಿ ದರೂ ಕೊನೆಯ ಸಿನಿಮಾ ವಿಮರ್ಶೆ ಮಾಡುವ ಹೊತ್ತಿಗೆ ಮುಂದಿನ ವಾರದ ಸಿನಿಮಾಗಳು ಬಿಡುಗಡೆ ಆಗಿರುತ್ತವೆ.

ಇದನ್ನೂ ಓದಿ: Hari Paraak Column: ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ? ʼಹೈದರಾಬಾದ್‌ ಕರ್ನಾಟಕʼ ಕ್ಕೆ

ಒಟ್ಟಿನಲ್ಲಿ ಕೆಲವು ಸಿನಿಮಾಗಳು ತಮ್ಮ ಕಳಪೆ ಕ್ವಾಲಿಟಿಯಿಂದ ಜನರನ್ನು ತಲುಪಲು ವಿಫಲ ವಾಗುತ್ತಿದ್ದರೆ, ಹಲವು ಸಿನಿಮಾಗಳು ಎಲ್ಲಾ ಇದ್ದರೂ ಓವರ್ ಕಾಂಪಿಟೇಶನ್‌ನಿಂದ ಜನರಿಗೆ ತಲುಪುತ್ತಿಲ್ಲ ಅನ್ನೋದಂತೂ ನಿಜ.

ಲೂಸ್‌ ಟಾಕ್-‌ ಸಿದ್ದರಾಮಯ್ಯ

ಏನ್ ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಸಿಕ್ಕಾಪಟ್ಟೆ ಬೆಲೆ ಏರಿಕೆ ಆಗ್ತಾ ಇದೆ, ಏನ್ ಸಮಾಚಾರ?

- ಅಯ್ಯೋ, ನಾವೇನ್ ಚುನಾವಣೆಗೆ ಮುಂಚೆ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ? ನಾವು ಕೊಟ್ಟಿರೋ ಗ್ಯಾರಂಟಿಗಳಿಗೆ ಮಾತ್ರ ಜವಾಬ್ದಾರರು.

ಸರಿಯಾಗಿ ಹೇಳಿದ್ರಿ ಬಿಡಿ, ಆದ್ರೂ ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ರೆ ಕೂಗಾಡ್ತೀರಿ, ಈಗ ನೀವು ಮಾಡಿರೋದೇನು?

- ಮತ್ತಿನ್ನೇನು? ಬಿಜೆಪಿಯವರು ಏನೇ ಮಾಡಿದ್ರೂ ದೇಶದಲ್ಲಿ ಜನ ಅವರಿಗೇ ವೋಟ್ ಹಾಕ್ತಿದ್ದಾರೆ. ಹಂಗಾಗಿ ನಾವೂ ಅವರ ಥರ ಬೆಲೆ ಏರಿಕೆ ಮಾಡಿ ಅವರನ್ನ ಫಾಲೋ ಮಾಡೋಣ ಅಂತ.

ನಮ್ಮ ಜನ ಅವರನ್ನ ಇಳಿಸಿ ನಿಮ್ಮನ್ನ ಅಧಿಕಾರಕ್ಕೆ ಏರಿಸಿದ್ದು ಮರೆತುಬಿಟ್ರಾ?

- ಇಲ್ಲಪ್ಪಾ.. ಅವರನ್ನ ಇಳಿಸಿ ನಮ್ಮನ್ನ ಏರಿಸಿದ್ದಕ್ಕೇ ನಾವೂ ಬೆಲೆ ಏರಿಸಿ ಋಣ ತೀರಿಸ್ತಾ ಇದ್ದೀವಿ.

ಸರಿಹೋಯ್ತು. ಆದ್ರೂ ಈ ಬೆಲೆ ಏರಿಕೆ ನೀತಿ ಸರಿನಾ?

-ಯಾಕ್ ಸರಿ ಇಲ್ಲ. ನಮ್ದು ಎಲ್ಲರಿಗೂ ಒಂದೇ ನೀತಿ. ರೇಟ್ ಜಾಸ್ತಿ ಮಾಡಿದ್ರೂ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡಲ್ಲ, ನಿಂಗೂ ರೇಟ್ ಜಾಸ್ತಿ, ಅವನಿಗೂ ರೇಟ್ ಜಾಸ್ತಿ, ನನ್ ಹೆಂಡ್ತಿಗೂ ರೇಟ್ ಜಾಸ್ತಿ.

ಪಾಪ, ಹಿಂಗೆ ರೇಟ್ ಜಾಸ್ತಿ ಮಾಡಿದ್ರೆ ಜನಸಾಮಾನ್ಯರಿಗೆ ತೊಂದ್ರೆ ಆಗಲ್ವಾ?

- ಆಗ್ದೇ ಇರುತ್ತಾ.. ಆದ್ರೆ ಏನ್ ಮಾಡೋಕಾಗುತ್ತೆ. ದೇಶದ ಒಳ್ಳೇದಕ್ಕಾಗಿ ಎಷ್ಟೇ ‘ರೇಟ್’ ಜಾಸ್ತಿ ಮಾಡಿದ್ರೂ ಸರಕಾರದ ಜತೆ ಜನ ಕೋ ಆಪ‘ರೇಟ’ ಮಾಡ್ಬೇಕಪ್ಪ..

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಮತ್ತು ಖೇಮುಶ್ರೀ ಇಬ್ಬರೂ ವಿಮಾನದಲ್ಲಿ ಕೂತಿದ್ದರು. ವಿಮಾನ ಮುಂಬೈ ಇಂದ ದೆಹಲಿಗೆ ಹೋಗ್ತಾ ಇತ್ತು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮಧ್ಯದಲ್ಲಿ ಏನೋ ತೊಂದರೆ ಆಗಿದೆ ಅಂತ ಗಗನಸಖಿ ಕಡೆಯಿಂದ ಅನೌಮೆಂಟ್ ಬಂತು. ಈ ಪ್ಲೇನ್ ಮುಂದೆ ಹೋಗಲ್ಲ ಅಂತ ಹೇಳಿ ಜೈಪುರದಲ್ಲಿ ಅದನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ‌

“ನಿಮ್ಮನ್ನು ಇನ್ನೊಂದು ಪ್ಲೇನ್‌ಗೆ ಶಿಫ್ಟ್ ಮಾಡಲಾಗುತ್ತದೆ, ಅಲ್ಲಿಯವರೆಗೂ ಕೆಳಗಿಳಿದು ಬಂದು ನಿಂತ್ಕೊಳಿ" ಅಂತ ಎಲ್ಲ ಪ್ರಯಾಣಿಕರಿಗೂ ಹೇಳಲಾಯಿತು. ಎಲ್ಲರೂ ಕೆಳಗಿಳಿದು ಬಂದು ನಿಂತರು. ಆದರೆ ಒಬ್ಬ ಅಜ್ಜಿ ಮಾತ್ರ ಅ ಕೂತಿದ್ದಳು. ಆಕೆ ಕುರುಡಿ. ತನಗೆ ದಾರಿ ತೋರಿಸಲಿಕ್ಕೆ ಅಂತ ಅಜ್ಜಿ ಯಾವಾಗಲೂ ಒಂದು ನಾಯಿಯನ್ನು ಕರೆದುಕೊಂಡು ಓಡಾಡುತ್ತಿದ್ದಳು. ಅದು ಆಕೆಯ ಕೆಳಗೆ ಕೂತಿತ್ತು. ಅಜ್ಜಿಯನ್ನು ನೋಡಿದ ಪೈಲಟ್, “ಯಾಕೆ ಕೂತಿದ್ದೀರಿ? ನೀವು ಕೆಳಗೆ ಇಳಿದು ಸ್ವಲ್ಪ ರಿಲ್ಯಾP ಮಾಡಬಹುದಲ್ವಾ?" ಅಂತ ಕೇಳಿದ. ‌

ಅದಕ್ಕೆ ಅಜ್ಜಿ “ಇಲ್ಲಪ್ಪ, ನಂಗೆ ಕಣ್ಣು ಕಾಣಿಸೋಲ್ಲ. ಮುಂದಿನ ಪ್ರಯಾಣಕ್ಕೆ ಅರೇಂಜ್‌ ಮೆಂಟ್ ಆಗೋವರೆಗೂ ನಾನು ಇಲ್ಲೇ ಕೂತಿರ್ತೀನಿ. ನನ್ನ ನಾಯಿಯನ್ನ ಸ್ವಲ್ಪ ಓಡಾಡಿಸಿ ಕೊಂಡು ಬರ್ತೀಯಾ?" ಅಂತ ಕೇಳಿತು. “ಖಂಡಿತಾ" ಅಂತ ಹೇಳಿದ ಪೈಲಟ್ ದಾರಿ ತೋರಿಸುವ ಆ ನಾಯಿಯನ್ನು ಕರೆದುಕೊಂಡು ಪ್ಲೇನ್‌ನಿಂದ ಇಳಿಯುತ್ತಿದ್ದ. ಅವನು ಕಣ್ಣಿಗೆ ಕಪ್ಪು ಕನ್ನಡಕ ಬೇರೆ ಹಾಕಿದ್ದ.

ಅವನು ಇಳಿದು ಬರುತ್ತಿದ್ದುದನ್ನು ನೋಡಿ ಕೆಳಗೆ ನಿಂತಿದ್ದ ಖೇಮು ಒಮ್ಮೆಲೇ ಗಾಬರಿ ಯಾಗಿ ಕೂಗಿದ, “ಅಯ್ಯೋ, ಅಲ್ ನೋಡೇ, ಬರೀ ಪ್ಲೇನ್ ಅಲ್ಲ, ಈ ಏರ್‌ಲೈನೇ ಚೇಂಜ್ ಮಾಡ್ಬೇಕು. ಬಡ್ಡಿಮಕ್ಳು, ಕುರುಡರನ್ನೆ ಪೈಲಟ್ ಮಾಡವ್ರೆ".

ಲೈನ್‌ ಮ್ಯಾನ್

ತಮ್ಮ ಸಿಡಿ ಬಿಡುಗಡೆ ಮಾಡಿದವರ ಮೇಲಿನ ಕೋಪ

- ಅ‘ಸಿಡಿ’ಟಿ

ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿ

-‘ತಾಟ್’ ಪ್ರೊಸೆಸ್ ‌

ದುಂಬಿ ಜೇನಿಗೆ ಹೇಳಿದ್ದೇನು?

-ನಾನು ನಿನ್ನ ಮನ‘ದುಂಬಿ’ ಪ್ರೀತಿಸ್ತೀನಿ

ಎಲ್ಲವನ್ನೂ ಪ್ರಶ್ನೆ ಮಾಡುವವರ ಗುಂಪು

-‘ಆ’ ಪೋರ್ಸ್

ಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರ ಹೆಸರು

-ಉತ್ತರ ಧ್ರುವ

ಡೇಂಜರಸ್ ಆಗಿ ಡ್ರೈವ್ ಮಾಡೋ ಆಂಬುಲೆನ್ಸ್‌ ಡ್ರೈವರ್‌ಗೆ ಏನಂತ ಬಯ್ಬೇಕು?

-ಯಾಕೋ ಮಗನೇ, ಇವತ್ ಯಾರೂ ಗಿರಾಕಿ ಸಿಗಲಿಲ್ವಾ?

ಪೂರಿಗೆ ಬರೀ ಚಟ್ನಿ ಕೊಟ್ಟಾಗ ಆಗೋ ಬೇಸರದಲ್ಲಿ ಮೂಡುವ ಹಾಡು

- ಏನಾಗಲಿ ಮುಂದೆ ‘ಸಾಗು’ ನೀ..

ಕುರಿ ಮಾಂಸ ತಿಂದು ಹೊಟ್ಟೆ ಬರಿಸಿಕೊಂಡವನು

- ಲ್ಯಾಂಬೋದರ

ಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ

- ‘ಪಿತ್ತ’ ಜನಕಾಂಗ