ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gururaj Gantihole Column: ದ್ವೇಷ ಭಾಷಣದ ಹೆಸರಿನಲ್ಲಿ ಸಂವಿಧಾನದ ಅಡಿಪಾಯಕ್ಕೆ ಧಕ್ಕೆ ?!

ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಹೆಸರಿನಲ್ಲಿ ನೋಟೀಸ್ ನೀಡಲಾಗಿದೆ. ಇದೆಲ್ಲವನ್ನು ಗಮನಿಸಿದಾಗ, ಕಾಂಗ್ರೆಸ್‌ನವರು ದಬ್ಬಾಳಿಕೆ ಮನಸ್ಥಿತಿ ಇಟ್ಟುಕೊಡಿದ್ದಾರೆಯೇ? ಎಂದು ಇಂದಿನ ಪ್ರeವಂತ ಯುವಜನತೆ ಪ್ರಶ್ನಿಸುತ್ತಿದೆ. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 1975ರಿಂದ 1977ರವರೆಗಿನ ತುರ್ತು ಪರಿಸ್ಥಿತಿ ಒಂದು ಅತ್ಯಂತ ವಿವಾದಾತ್ಮಕ, ಸಂಕೀರ್ಣ ಮತ್ತು ಮಹತ್ವದ ಅಧ್ಯಾಯವಾಗಿದೆ.

ದ್ವೇಷ ಭಾಷಣದ ಹೆಸರಿನಲ್ಲಿ ಸಂವಿಧಾನದ ಅಡಿಪಾಯಕ್ಕೆ ಧಕ್ಕೆ ?!

-

ಗಂಟಾಘೋಷ

ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆ ಕರ್ನಾಟಕ ಹೇಟ್ ಸ್ಪೀಚ್ ಆಂಡ್ ಹೇಟ್ ಕ್ರೈಮ್ಸ್ (ಪ್ರಿವೆನ್ಷನ್ ಆಂಡ್ ಕಂಟ್ರೋಲ್) ಬಿಲ್, 2025 ಎಂಬ ಮಸೂದೆಯನ್ನು ದೊಡ್ಡ ವಿರೋಧದ ನಡುವೆಯೇ ತದ್ವತಾಗಿ ಸ್ವೀಕರಿಸಿತು. ಇದು ಹೇಟ್ ಸ್ಪೀಚ್ ಮತ್ತು ಹೇಟ್ ಟು ಕ್ರೈಮ್ ಸೇರಿದಂತೆ ಜನರ ನಡುವೆ ಹಿತ-ಅಶಾಂತಿ ಹುಟ್ಟಿಸಬಹುದಾದ ಭಾಷಣ/ವರ್ತನೆಗಳನ್ನು ನಿಯಂತ್ರಿಸಲು ಉದ್ದೇಶಿಸಿ ಕಾನೂನು ಮಾಡುವುದಾಗಿದ್ದ ಡ್ರಾಪ್ಟ್ ಆಗಿತ್ತು.‌

ಒಟ್ಟು 22 ಮಸೂದೆಗಳನ್ನು ಒಪ್ಪಿಗೆ ಪಡೆದುಕೊಳ್ಳಲು ರಾಜ್ಯಪಾಲರಿಗೆ ರಾಜ್ಯ ಸರಕಾರವು ಕಳುಹಿಸಿ ಕೊಟ್ಟಿತ್ತು. ಇದರಲ್ಲಿ, 19 ಬಿಲ್‌ಗಳಿಗೆ ಗವರ್ನರ್ ಅವರು assent (permit) ನೀಡಿದ್ದಾರೆ. ಉಳಿದ 2 ಬಿಲ್‌ಗಳನ್ನು ಗವರ್ನರ್ ತಿರಸ್ಕರಿಸಿ, ವಿವರಕ್ಕಾಗಿ ರಾಜ್ಯ ಸರಕಾರಕ್ಕೆ ಹಿಂತಿರುಗಿಸಿದ್ದಾರೆ.

ಆದರೆ, ಈ ದ್ವೇಷಭಾಷಣಕ್ಕೆ ಸಂಬಂಧಿಸಿದಂತೆ pending / in hold state - neither approved nor returned ಎಂಬಂತೆ ಗವರ್ನರ್ ಸುಮ್ಮನಾಗಿದ್ದಾರೆ. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಾಕ್ ಸ್ವಾತಂತ್ರ್ಯ ಸೇರಿದಂತೆ ಇತರೆ ಕೆಲವು ವಿಚಾರಗಳಲ್ಲಿ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತೆ ಈ ಮಸೂದೆ ರೂಪಿತವಾಗಿದೆ ಎಂದೂ ವಿರೋಧ ಪಕ್ಷಗಳು ಬಲವಾಗಿ ವಿರೋಧಿಸಿವೆ.

ಪ್ರೀ-ಸ್ಪೀಚ್ ಬಗ್ಗೆ ಆತಂಕ ವ್ಯಕ್ತಪಡಿಸಿ, ಕೆಲವು ಸಾರ್ವಜನಿಕ ಹಿತಾಸಕ್ತಿ ದೂರುಗಳೂ ಕೂಡ petition/request) ಗವರ್ನರ್ ಅಂಗಳಕ್ಕೆ, ನ್ಯಾಯಾಲಯಕ್ಕೆ ತಲುಪಿವೆ. ವಾಸ್ತವೀಕತೆ ಹೀಗಿರುವಾಗ ಇತ್ತೀಚೆಗೆ ರಾಜ್ಯದಲ್ಲಿ ಕೆಲ ಘಟನೆಗಳು ನಡೆಯುತ್ತಿವೆ. ಹೇಟ್ ಸ್ಪೀಚ್ ಮತ್ತು ಹೇಟ್ ಕ್ರೈಮ್ಸ್ ಬಿಲ್ ಇತ್ತೀಚೆಗೆ ರಾಜ್ಯ ವಿಧಾನಸಭೆಲ್ಲಿ ಅಂಗೀಕಾರಗೊಂಡರೂ, ಅಧಿಕೃತವಾಗಿ ಕಾಯ್ದೆ ಆಗಿ ಪ್ರಕಟಿತ/ನೋಟಿ- ಆಗಿಲ್ಲ.

ಇದನ್ನೂ ಓದಿ: Gururaj Gantihole Column: ಗ್ರಾಮೀಣ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಂಜೀವಿನಿ !

ಈಗ ನೀಡಿರುವ-ನೀಡುತ್ತಿರುವ ನೋಟೀಸ್‌ಗೆ ಕಾನೂನಿನ ಮಾನ್ಯತೆ ಇಲ್ಲವೆಂದೂ ಸಾರ್ವಜನಿಕ ವಾಗಿ ವಿರೋಧ ವ್ಯಕ್ತವಾಗುತ್ತಿದೆ. ಆರೆಸ್ಸೆಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ದುರ್ಭಾವನೆಗಳನ್ನು ವ್ಯಕ್ತಪಡಿಸಿ ಮಾತನಾಡಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸ ಲಾಗಿದೆ. ‌

ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಹೆಸರಿನಲ್ಲಿ ನೋಟೀಸ್ ನೀಡಲಾಗಿದೆ. ಇದೆಲ್ಲವನ್ನು ಗಮನಿಸಿದಾಗ, ಕಾಂಗ್ರೆಸ್‌ನವರು ದಬ್ಬಾಳಿಕೆ ಮನಸ್ಥಿತಿ ಇಟ್ಟುಕೊಡಿದ್ದಾರೆಯೇ? ಎಂದು ಇಂದಿನ ಪ್ರeವಂತ ಯುವಜನತೆ ಪ್ರಶ್ನಿಸುತ್ತಿದೆ. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 1975ರಿಂದ 1977ರವರೆಗಿನ ತುರ್ತು ಪರಿಸ್ಥಿತಿ ಒಂದು ಅತ್ಯಂತ ವಿವಾದಾತ್ಮಕ, ಸಂಕೀರ್ಣ ಮತ್ತು ಮಹತ್ವದ ಅಧ್ಯಾಯವಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳು, ನಾಗರಿಕ ಹಕ್ಕುಗಳು, ಸಂವಿಧಾನದ ಆತ್ಮ, ಸಂಸತ್ತಿನ ಸ್ವಾಯತ್ತೆ ಮತ್ತು ನ್ಯಾಯಾಂಗದ ಪಾತ್ರ, ಇವುಗಳು ಈ ಅವಧಿಯಲ್ಲಿ ಗಂಭೀರ ಪರೀಕ್ಷೆಗೆ ಒಳಪಟ್ಟವು. ಸ್ವಾತಂತ್ರ್ಯಾನಂತರ ಭಾರತವು ಕಂಡ ಅತ್ಯಂತ ದೀರ್ಘ ಮತ್ತು ವ್ಯಾಪಕವಾದ ಅಧಿಕಾರ ಕೇಂದ್ರೀ ಕರಣ ಈ ತುರ್ತು ಪರಿಸ್ಥಿತಿಯಲ್ಲಿಯೇ ನಡೆದಿದೆ.

ಭಾರತೀಯ ಸಂವಿಧಾನದ ಭಾಗ XVIII (ಆರ್ಟಿಕಲ್- 352360) ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಧಾನಗಳನ್ನು ವಿವರಿಸುತ್ತದೆ. ಆರ್ಟಿಕಲ್-352 ಪ್ರಕಾರ ಯುದ್ಧ, ವಿದೇಶಿ ಆಕ್ರಮಣ ಅಥವಾ ಆಂತರಿಕ ಅಶಾಂತಿ (Internal Disturbance) ಇದ್ದರೆ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸ ಬಹುದು. 1975ರಲ್ಲಿ ಇದೇ ಆಂತರಿಕ ಅಶಾಂತಿ ಎಂಬ ಅಸ್ಪಷ್ಟ ಪದಬಳಕೆಯನ್ನು ಆಧಾರವನ್ನಾಗಿ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸಲಾಯಿತು.

12 ಜೂನ್ 1975ರಂದು ಅಲಹಾಬಾದ್ ಹೈಕೋರ್ಟ್, ಅಂದಿನ ಪ್ರಧಾನಿ ಇಂದಿರಾಗಾಂಧಿಯವರ 1971ರ ಲೋಕಸಭಾ ಕ್ಷೇತ್ರದ ಗೆಲುವನ್ನು ಅಮಾನ್ಯ ಎಂದು ಘೋಷಿಸಿ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಿತು. ಈ ತೀರ್ಪು ರಾಜಕೀಯವಾಗಿ ಭಾರೀ ಆಘಾತ ಉಂಟು ಮಾಡಿತು.

ಇಂದಿರಾಗಾಂಧಿ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ತುರ್ತು ಪರಿಸ್ಥಿತಿ ಘೋಷಣೆ (25 ಜೂನ್ 1975) ಮಾಡಲಾಯಿತು. ಅಲಾಹಾಬಾದ್ ಹೈಕೋರ್ಟ್ ತೀರ್ಪು ತುರ್ತು ಪರಿಸ್ಥಿತಿಗೆ ತಕ್ಷಣದ ಕಾರಣವಾಯಿತೆನ್ನಬಹುದು.

ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ 1975ರ ಜೂನ್ 25ರ ಮಧ್ಯರಾತ್ರಿ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್, ಸಂವಿಧಾನದ 352 ನೇ ವಿಧಿಯಡಿಯಲ್ಲಿ ಆಂತರಿಕ ಅಶಾಂತಿ ಕಾರಣ ನೀಡಿ ತುರ್ತು ಪರಿಸ್ಥಿತಿ ಘೋಷಿಸಿದರು. ಇದು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಯುದ್ಧ ವಿಲ್ಲದೆ ಹೇರಲಾದ ತುರ್ತು ಪರಿಸ್ಥಿತಿ. ಸಂವಿಧಾನ ರಚನೆಯ ಬಳಿಕ ಘಟಿಸಿದ ಮೊದಲ ಕರಾಳ ಸಂದರ್ಭ ಇದಾಗಿದ್ದರಿಂದ ಜನರೂ ಭಯಭೀತರಾದರು. ವ್ಯವಸ್ಥೆಗಳು ಹಳಿ ತಪ್ಪಿದವು, ಮಾಧ್ಯಮ ಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ, ದೇಶದ ಸಂಸತ್ತನ್ನು ಅಮಾನತುಗೊಳಿಸಿ, ಪ್ರಜಾಪ್ರಭುತ್ವದ ನಡೆಯನ್ನು ಸ್ಥಗಿತಗೊಳಿಸಲಾಯಿತು. ಆರ್ಟಿಕಲ್- 356 ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷದ ಸರಕಾರಗಳನ್ನು ವಜಾ ಮಾಡುವ ಮೂಲಕ ರಾಜ್ಯ ಸರಕಾರಗಳ ಮೇಲೆ ನಿಯಂತ್ರಣ ಸಾಧಿಸಲಾ ಯಿತು.

ಸರಕಾರದ ಟೀಕೆಗೆ ಸಂಪೂರ್ಣ ನಿರ್ಬಂಧ ಹೇರಲಾಯಿತು, ಪತ್ರಿಕೆಗಳನ್ನು ಮುದ್ರಣಕ್ಕೆ ಹೋಗುವ ಮುನ್ನ ಸೆನ್ಸಾರ್ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಆರ್ಟಿಕಲ್- 19 ಅಮಾನತುಗೊಳಿಸುವ ಮೂಲಕ, ವಾಕ್ ಸ್ವಾತಂತ್ರ್ಯ, ಸಭೆ-ಸಂಘಟನೆ ಹಕ್ಕು, ಚಳವಳಿಗಳ ನಿಷೇಧ ಸೇರಿ ನಾಗರಿಕ ಹಕ್ಕುಗಳನ್ನು ಅಮಾನತು ಮಾಡಲಾಯಿತು.

ಸಂವಿಧಾನದ 21ನೇ ವಿಧಿಯಡಿಯಲ್ಲಿ ನೀಡಲಾದ ಮೂಲಭೂತ ಹಕ್ಕು ನಿಷ್ಪ್ರಯೋಜಕ ವಾಯಿತು. Maintenance of Internal Security Act (MISA) ಅಡಿಯಲ್ಲಿ ಲಕ್ಷಾಂತರ ಜನರ ಬಂಧನ ಗಳಾದವು. ಭಾರತೀಯ ಸಂವಿಧಾನದ ಆತ್ಮವೆಂದೇ ಕರೆಯಬಹುದಾದ ‘ಪ್ರಸ್ತಾವನೆ’ ಯನ್ನು ಬದಲಾಯಿಸಲಾಯಿತು.

42ನೇ ಸಂವಿಧಾನ ತಿದ್ದುಪಡಿ (Mini Constitution) 1976ರಲ್ಲಿ ಜಾರಿಗೆ ಬಂದ 42ನೇ ತಿದ್ದುಪಡಿ ಮೂಲಕ, ಮೊದಲ ಬಾರಿಗೆ ಸಂವಿಧಾನದ ಪ್ರಸ್ತಾವನೆಗೆ ಸಮಾಜವಾದಿ (Socialist), ಧರ್ಮನಿರಪೇಕ್ಷ (Secular), ರಾಷ್ಟ್ರೀಯ ಏಕತೆ ಮತ್ತು ಅಖಂಡತೆ ಸೇರಿಸಿ ಬದಲಾವಣೆ ತರಲಾ‌ಯಿತು. ಈ ಬದಲಾವಣೆಗಳು ಸಂಸತ್ತನ್ನು ಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು, ಸಾರ್ವಜನಿಕ ಚರ್ಚೆ ಇಲ್ಲದೆ ನಡೆದಿವೆ ಎನ್ನುವುದು ಗಮನಾರ್ಹ.

ವೈಯಕ್ತಿಕ ಹಾಗೂ ಪಕ್ಷದ ವಿರೋಧವನ್ನು ರಾಷ್ಟ್ರವಿರೋಧ ಎಂದು ಬಿಂಬಿಸುವ ಪ್ರಯತ್ನ ಈ ಮೂಲಕ ಮಾಡಲಾಯಿತು. ಸಂವಿಧಾನ ತಿದ್ದುಪಡಿ ನ್ಯಾಯಾಲಯದ ಪರಿಶೀಲನೆಗೆ ಒಳಪಡುವು ದಿಲ್ಲ ಎಂದು ಘೋಷಣೆ, ನ್ಯಾಯಾಂಗದ ಸ್ವಾಯತ್ತೆಗೆ ಭಾರೀ ಹೊಡೆತ ನೀಡಿ, ನ್ಯಾಯಾಂಗವನ್ನು ಶಕ್ತಿಹೀನವನ್ನಾಗಿಸುವ ಪ್ರಯತ್ನ ಮಾಡಲಾಯಿತು.

ಬಳಿಕ ಅಚಾನಕ್ಕಾಗಿ ತುರ್ತು ಪರಿಸ್ಥಿತಿ ಹಿಂಪಡೆದು 1977ರಲ್ಲಿ ಚುನಾವಣೆ ನಡೆಸಲಾಯಿತು. ಜನರು ತಮ್ಮ ತೀರ್ಪಿನಿಂದ ಇಂದಿರಾಗಾಂಧಿ ಸರಕಾರವನ್ನು ಸೋಲಿಸಿದರು. ಜನತಾಪಕ್ಷ ಅಧಿಕಾರಕ್ಕೆ ಬಂದು, 44ನೇ ತಿದ್ದುಪಡಿ ಮೂಲಕ, ಆಂತರಿಕ ಅಶಾಂತಿ ಪದ ತೆಗೆದು, Armed Rebellion ಸೇರಿಸಿತು. ಸಂವಿಧಾನದ 21ನೇ ವಿಧಿಯಡಿಯಲ್ಲಿ ನೀಡಲಾದ ಹಕ್ಕನ್ನು ತುರ್ತು ಪರಿಸ್ಥಿತಿಯಲ್ಲೂ ಅಮಾನತು ಗೊಳಿಸಲಾಗದ ಹಕ್ಕನ್ನಾಗಿ ಮಾಡಲಾಯಿತು.

ಭಾರತೀಯ ಸಂವಿಧಾನವು ನ್ಯಾಯಾಂಗವನ್ನು ಕಾರ್ಯನಿರ್ವಹಣಾ ಮತ್ತು ಶಾಸನಾಂಗದ ಹಸ್ತ ಕ್ಷೇಪದಿಂದ ರಕ್ಷಿಸುವ ಉದ್ದೇಶದಿಂದ ನ್ಯಾಯಾಧೀಶರಿಗೆ ಅತ್ಯುನ್ನತ ಭದ್ರತೆಯನ್ನು ನೀಡಿದೆ. ಇದೇ ಕಾರಣಕ್ಕೆ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ (Impeachment) ಪ್ರಕ್ರಿಯೆಯನ್ನು ಅತ್ಯಂತ ಕಠಿಣವಾಗಿಸಿ, ಸಂಸತ್ತಿನ ಎರಡೂ ಸದನಗಳಲ್ಲಿ ವಿಶೇಷ ಬಹುಮತವನ್ನು ಕಡ್ಡಾಯ ಗೊಳಿಸ ಲಾಗಿದೆ.

ಹೀಗಿದ್ದರೂ, ಕರಾಳ ಪರಿಸ್ಥಿತಿಯ ಹಿನ್ನಲೆಯಿರುವ ರಾಜಕೀಯ ಪಕ್ಷವೊಂದು, ತನ್ನ ಅಧಿಕಾರಾವಧಿ ಯಲ್ಲಿ ಹಲವು ನ್ಯಾಯಾಧೀಶರನ್ನು ಮಹಾಭೀಯೋಗದ ಮೂಲಕ ಪದಚ್ಯುತಿಗೊಳಿಸಿದೆ. ಆರ್ಟಿಕಲ್- 124(4) ಸುಪ್ರೀಂಕೋರ್ಟ್ ನ್ಯಾಯಾಧೀಶರ ಪದಚ್ಯುತಿ ಹಾಗೂ ಆರ್ಟಿಕಲ್- 217 ಮೂಲಕ ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿ ಮಾಡಬಹುದಾಗಿದ್ದು, ಅದಕ್ಕೆ ಸಾಬೀತಾದ ದುರ್ವ್ಯವಹಾರ ( Proved Misbehaviour) ಮತ್ತು ಅಸಮರ್ಥತೆ (Incapacity) ಪ್ರಖರ ಕಾರಣ ಕಂಡುಬರಬೇಕು.

ಸಂಸತ್ತಿನ ಸದಸ್ಯರ ಸಹಿ ಸಹಿತ ಪ್ರಸ್ತಾವ, ತನಿಖಾ ಸಮಿತಿ (Judges Inquiry Committee)ಯ ನಂತರ ಎರಡೂ ಸದನಗಳಲ್ಲಿ ವಿಶೇಷ ಬಹುಮತ ಪಡೆದರೆ ಪದಚ್ಯುತಿ ಯಶಸ್ವಿಯಾಗುತ್ತದೆ. ಸರಕಾರಿ ಹಣದ ದುರುಪಯೋಗ, ಐಷಾರಾಮಿ ಜೀವನಶೈಲಿ, ಕಾನೂನು ಬಾಹಿರ ಖರ್ಚು ಎಂದು ಆರೋಪ ಬಂದು, ಸಾಬೀತಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ರಾಮಸ್ವಾಮಿ ಪ್ರಕರಣ ( 199193)ವು ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನಡೆದ ಮೊದಲ ಮಹಾಭಿಯೋಗ ಪ್ರಕರಣ ವಾಯಿತು.

1993ರಲ್ಲಿ ಲೋಕಸಭೆಯಲ್ಲಿ ಮಹಾಭಿಯೋಗ ಮತದಾನ ನಡೆಯಿತು. ಇದರಲ್ಲಿ, ಕಾಂಗ್ರೆಸ್ ಪಕ್ಷವು ಮತದಾನದಿಂದ ದೂರ ( Abstention) ಉಳಿಯಿತು. ಇದರಿಂದ, ಅಗತ್ಯವಿದ್ದ ಬಹುಮತ ದೊರೆಯದೆ ನ್ಯಾಯಮೂರ್ತಿ ರಾಮಸ್ವಾಮಿ ಪದಚ್ಯುತರಾಗಲಿಲ್ಲ. ಇದು ಭಾರತೀಯ ಇತಿಹಾಸ ದಲ್ಲಿ ಆರೋಪ ಸಾಬೀತಾದರೂ, ರಾಜಕೀಯ ಕಾರಣಗಳಿಂದ ಪದಚ್ಯುತಿ ವಿಫಲವಾದ ಮೊದಲ ಪ್ರಕರಣವಾಯಿತು.

ತುರ್ತುಪರಿಸ್ಥಿತಿ ಮತ್ತು ನ್ಯಾಯಾಧೀಶರ ಮೇಲೆ ಒತ್ತಡ (197577) ಹೇರುವ ಮೂಲಕ ನೇರ ಮಹಾ ಭಿಯೋಗ ಇಲ್ಲದಿದ್ದರೂ, ಇಂದಿರಾಗಾಂಧಿ ಸರಕಾರವು ನ್ಯಾಯಾಧೀಶರ ವರ್ಗಾವಣೆ ಹಾಗೂ ಅನನುಕೂಲವಾಗಿದ್ದ ನ್ಯಾಯಾಧೀಶರನ್ನು ಬದಲಿಸುತ್ತಿತ್ತು. ನ್ಯಾಯಮೂರ್ತಿ ಎಚ್. ಆರ್.ಖನ್ನಾ, ADM ಜಬಲ್ಪುರ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ನಿರಾಕರಣೆ ಮಾಡಲಾಯಿತು.

ಇದು ಮಹಾಭಿಯೋಗವಲ್ಲದಿದ್ದರೂ, ನ್ಯಾಯಾಂಗವನ್ನು ಶಿಕ್ಷಿಸುವ ರಾಜಕೀಯ ತಂತ್ರ ಎಂದು ಇತಿಹಾಸದಲ್ಲಿ ದಾಖಲಾಗಿದೆ. ನ್ಯಾಯಮೂರ್ತಿ ಸೌಮಿತ್ರ ಸೇನ್ ಪ್ರಕರಣ (2011), ನ್ಯಾಯಮೂರ್ತಿ ಪಿ.ಡಿ.ದಿನಕರನ್ ಪ್ರಕರಣ (2010), ಅಂದಿನ ಆಡಳಿತ ವ್ಯವಸ್ಥೆಯಲ್ಲಿ ಸರಿಯಾದ ಉಪಕ್ರಮಗಳು ನಡೆಯದೆ ಸಮಾಪ್ತಿಗೊಂಡಿವೆ. ಆದರೆ, ಬಹುತೇಕ ಪ್ರಕರಣಗಳ ಆರೋಪಗಳು ಕೇಳಿಬಂದದ್ದು, ಹಗರಣ ಅಥವಾ ಹಣ, ಅಧಿಕಾರ ದುರ್ಬಳಕೆಯಂತಹ ವಿಚಾರಗಳು.

ಕಾಂಗ್ರೆಸ್ ನೇತೃತ್ವದ ಇಂದಿನ ‘ಇಂಡಿಕೂಟ’ ಮಾತ್ರ, ಇಡೀ ಸಂವಿಧಾನ-ನ್ಯಾಯಾಂಗ ಕ್ರಮದಲ್ಲಿ ವಿವೇಕವಲ್ಲದ ಮಾರ್ಗದ ಮೂಲಕ, ಸಕಾರಣವಲ್ಲದ ವಿಚಾರಕ್ಕೆ ಮಹಾಭಿಯೋಗದ ಪ್ರಸ್ತಾವ ವನ್ನು ಕೈಗೆತ್ತಿಕೊಂಡಿದ್ದು, ನ್ಯಾಯಾಂಗಕ್ಕೆ ಮಸಿ ಬಳಿಯಲು ಯತ್ನಿಸಿದ ಪ್ರಯತ್ನವೆಂದೇ ಹೇಳಬೇಕು. ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್, ಮಧುರೈ ಶಾಖೆ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಜಸ್ಟಿಸ್ ಜಿ.ಆರ್. ಸ್ವಾಮಿನಾಥನ್ ಅವರು, 2025ರಲ್ಲಿ ಕಾರ್ತಿಕ ದೀಪ ಬೆಳಗುವ ಪ್ರಕರಣದಲ್ಲಿ, ನ್ಯಾಯಾಧೀಶರು ಸ್ಥಳಕ್ಕೆ ತಾನು ನೇರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ತಿರುಪರಂಕುಂದ್ರಂ ಬೆಟ್ಟದ ದೀಪಥೂನ್ ಎಂಬ ಶಿಲಾಮೂರ್ತಿ ಬಳಿ ಕಾರ್ತಿಕ ದೀಪವನ್ನು ಹಬ್ಬದ ಸಂದರ್ಭದಲ್ಲಿ ಬೆಳಗಿಸಬಹುದು ಎಂದು ಆದೇಶ ನೀಡಿದರು.

ಈ ವಿಚಾರದಲ್ಲಿ, ನ್ಯಾಯಾಧೀಶರ ವಿರುದ್ಧವೇ ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ವಿರೋಧ ವಿವಾದಕ್ಕೆ ಕಾರಣವಾಗಿದೆ. ಈ ದೀಪ ಪ್ರಜ್ವಲನೆಯನ್ನು ಒಂದು ಧಾರ್ಮಿಕ ಚಿಹ್ನೆ ಎಂಬುದಕ್ಕಿಂತ ಇದು ತಮಿಳ್ ಪರಂಪರೆ, ಸಾಂಸ್ಕೃತಿಕ ಆಚರಣೆ ಎಂದು ನೋಡಬಹುದಾಗಿದ್ದು, ಆದೇಶವು ಐತಿಹಾಸಿಕ ಹಕ್ಕನ್ನು ಪುನರ್ ಸ್ಥಾಪಿಸುವುದು ಎಂದು ಹೇಳಿದ್ದಾರೆ.

ಆರ್ಟಿಕಲ್ 25 ಮತ್ತು ಆರ್ಟಿಕಲ್ 26 (ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ವಿಷಯಗಳಲ್ಲಿ ಸ್ವಂತ ವ್ಯವಸ್ಥೆ) ಸಂವಿಧಾನದ ಸಾರಕ್ಕನುಗುಣವಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ತೀರ್ಪಿನ ಬಳಿಕ, ರಾಜ್ಯ ಪೊಲೀಸರಿಂದ ಹಠಾತ್ ತಡೆ, ಸರಕಾರದ ವಕೀಲರಿಂದ ಹಸ್ತಕ್ಷೇಪ ಹಾಗೂ ರಾಜ್ಯದ ಲೇಟರ್ಸ್ ಪೇಟೆಂಟ್ ಅಪೀಲ್ ತೀರ್ಪನ್ನು ಹಿಂಪಡೆಯುವ ಕ್ರಮ ಸೇರಿದಂತೆ ಎಲ್ಲಾ ಮೇಲ್ಮನವಿ ಯನ್ನು ನ್ಯಾಯಾಲಯದಿಂದ ನಿರಾಕರಿಸಲಾಯಿತು.

ಇಂಡಿಕೂಟದ ಸುಮಾರು 120 ಸಂಸದರು ಲೋಕಸಭಾ ಸ್ಪೀಕರ್‌ಗೆ ಜಸ್ಟಿಸ್ ಜಿ.ಆರ್. ಸ್ವಾಮಿನಾಥನ್ ವಿರುದ್ಧ ಮಹಾಭಿಯೋಗ ನೋಟಿಸ್ ಸಲ್ಲಿಸಿದರು. ಡಿಎಂಕೆ, ಕಾಂಗ್ರೆಸ್ ಕೂಟದ ಪಕ್ಷಗಳ ಸಂಸದರು ಇದಕ್ಕೆ ಸಹಿ ಹಾಕಿದ್ದಾರೆ. ಇಲ್ಲಿಯವರೆಗೆ, ಭ್ರಷ್ಟಾಚಾರ ಇತರೆ ಕಾರಣದಿಂದ ಮಹಾಭಿಯೋಗಕ್ಕೆ ಕಾರಣವಾಗುತ್ತಿದ್ದ ವಿಚಾರವನ್ನು ಸಾಂವಿಧಾನಿಕವಾಗಿ ತೀರ್ಪು ನೀಡಿದ ಕಾರಣ ಇಟ್ಟುಕೊಂಡು ಮಹಾಭಿಯೋಗಕ್ಕೆ ಮುಂದಾಗುವ ಮೂಲಕ, ಹೊಸದೊಂದು ಅನೈತಿಕ ಉಪಕ್ರಮವನ್ನು ಕಾಂಗ್ರೆಸ್ ಹಾಗೂ ಇಂಡಿಕೂಟ ಆರಂಭಿಸಿತೆನ್ನಬಹುದು.

ಬಹುತೇಕ ಸಂವಿಧಾನ ತಜ್ಞರು, ತಪ್ಪಾದ ತೀರ್ಪು ದುರ್ವ್ಯವಹಾರ (Misconduct) ಆಗುವುದಿಲ್ಲ. ತೀರ್ಪು ನಿಮ್ಮ ವಿರುದ್ಧವಾಗಿದ್ದರೆ, ಮೇಲ್ಮನವಿ (Appeal) ಸಲ್ಲಿಸಬೇಕು. ರಾಜಕೀಯ ಕಾರಣ ಗಳನ್ನಿಟ್ಟುಕೊಂಡು ಮಹಾಭಿಯೋಗದ ಬೆದರಿಕೆ ನೀಡಬಾರದು ಎಂದು ಅಭಿಪ್ರಾಯಪಟ್ಟರು.

Judicial error is not a ground for impeachment. ಎಂಬುದು ಸುಪ್ರೀಂಕೋರ್ಟ್‌ನ ಸ್ಥಿರ ನಿಲುವಾಗಿದೆ. ಪ್ರಸ್ತುತ, ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಕಾರ್ತಿಕ ದೀಪದ ಕುರಿತು ಚರ್ಚೆಯಲ್ಲಿದೆ. ಇತ್ತ ಕರ್ನಾಟಕದಲ್ಲಿ ಕಾನೂನು ಆಗಿ ಜಾರಿಯಾಗದಿದ್ದರೂ, ಅದರ ಅಡಿಯಲ್ಲಿ ನಡೆಯದ ಘಟನೆಗಳನ್ನು ಊಹಿಸಿಕೊಂಡು ಮುಂಚಿತ ನೋಟೀಸುಗಳನ್ನು ನೀಡಲಾಗುತ್ತಿದೆ.

ಸಂಸತ್ತಿನಲ್ಲಿ ಬೆದರಿಕೆ ಹಾಕುವ, ನ್ಯಾಯಾಂಗವನ್ನು ಹೆದರಿಸುವ, ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯ ನಿಲುವಿಗೆ ಹಿಡಿದಿಟ್ಟುಕೊಳ್ಳುವ ಮಾನಸಿಕತೆಯನ್ನು ಕಾಂಗ್ರೆಸ್ ಬದಲಾಯಿಸಿಕೊಳ್ಳ ದಿದ್ದಲ್ಲಿ ಸಂವಿಧಾನ ನಿರಂತರ ಅಪಾಯಕ್ಕೊಳಗಾದೀತು ಎಂಬುದನ್ನು ಮನಗಾಣಬೇಕಿದೆ.