ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Veeresh Dhupadamath: ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕದಿರಿ

ಸುದ್ದಿ ಔಚಿತ್ಯ ಏನೇ ಇರಲಿ, ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರ ಷಾರಣ ದಿಂದ ಭ್ರಷ್ಟಾಚಾರಕ್ಕೆ ಅಲ್ಪ ಸ್ವಲ್ಪವಾದರೂ ಕಡಿವಾಣ ಬಿದ್ದಿದೆ. ಒಂದಷ್ಟು ಕೆಲಸ ಕಾರ್ಯಗಳು ನಡೆ ಯುತ್ತಿವೆ ಮತ್ತು ಸುಧಾರಿಸಿವೆ. ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲೀಸಾಗಿ ದಕ್ಕುವು ದಿಲ್ಲ

Veeresh Dhupadamath: ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕದಿರಿ

Profile Ashok Nayak Feb 6, 2025 10:08 AM

ಪ್ರಸ್ತುತ

ವೀರೇಶ ಧೂಪದಮಠ

ಕೆಲವು ದಿನಗಳ ಹಿಂದೆ ಒಂದು ಸುದ್ದಿ ಬಂದಿತ್ತು. ಅದರಲ್ಲಿ ಅನಗತ್ಯ ಮಾಹಿತಿ ಹಕ್ಕು ಕಾರ್ಯ ಕರ್ತರ ಅರ್ಜಿಗಳ ವಿರುದ್ಧ ವಜಾಸ್ತ್ರ, ಇನ್ನುಮುಂದೆ ಅರ್ಜಿ ಹಾಕದಂತೆ ನಿಬಂಧ ಆದೇಶ ಇನ್ನಿತರ ಶೀರ್ಷಿಕೆಯಡಿ ಸುದ್ದಿಯಾಗಿತ್ತು. ಸುದ್ದಿ ಔಚಿತ್ಯ ಏನೇ ಇರಲಿ, ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರ ಷಾರಣ ದಿಂದ ಭ್ರಷ್ಟಾಚಾರಕ್ಕೆ ಅಲ್ಪ ಸ್ವಲ್ಪವಾದರೂ ಕಡಿವಾಣ ಬಿದ್ದಿದೆ. ಒಂದಷ್ಟು ಕೆಲಸ ಕಾರ್ಯಗಳು ನಡೆಯುತ್ತಿವೆ ಮತ್ತು ಸುಧಾರಿಸಿವೆ. ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲೀಸಾಗಿ ದಕ್ಕುವುದಿಲ್ಲ. ಅಧಿಕಾರಿಗಳು ಯಾವ ಕೆಲಸವನ್ನೂ ಸುಲಭವಾಗಿ ಮಾಡಿಕೊಡುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿಯೇ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ. ಅಧಿಕಾರಿಗಳು 30 ದಿನದಲ್ಲಿ ಮಾಹಿತಿ ಕೊಡಲು ಏನು ಸಮಸ್ಯೆ?. ಮಾಹಿತಿ ಕೇಳುವ ಹಕ್ಕು ಸಾರ್ವಜನಿಕರದ್ದು, ಮಾಹಿತಿ ಕೊಡು ವ ಹಕ್ಕು ಅಧಿಕಾರಿಗಳದ್ದು ಅಲ್ಲವೇ.

ಇದನ್ನೂ ಓದಿ: Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !

ಸರಿಯಾದ ಮಾಹಿತಿ ಒದಗಿಸಿದರೇ ಪ್ರಥಮ ಮೇಲ್ಮನವಿ, ದ್ವಿತೀಯ ಮೇಲ್ಮನವಿ ಎಂಬ ಪ್ರಶ್ನೆಯೇ ಉದ್ಬವವಾಗಲ್ಲ. ಸಾರ್ವಜನಿಕರು ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದು ಕಡಿಮೆ. ಮಾಹಿತಿ ಕೊಟ್ಟರೂ ದಿಕ್ಕು ತಪ್ಪಿಸುವಂತಹ ತಪ್ಪು ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಅಲ್ಲದೇ ಕೇಳಲು ಹೋದಲ್ಲಿ ರೌಡಿ, ಗುಂಡಾ ವರ್ತನೆ ಮಾಡ್ತಾರೆ ಅಂತ ಸಾರ್ವ ಜನಿಕರು ಸಾಕಷ್ಟು ಸಲ ಪತ್ರಿಕೆ, ದೃಶ್ಯ ಮಾಧ್ಯಮದ ಪತ್ರಕರ್ತರ ಮುಂದೆ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿ ಆರೋಪಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಅರ್ಜಿ ಹಾಕಿದರೆ ಸ್ಪಂದಿಸುತ್ತಾರೆಯೇ ?

ಆದ್ದರಿಂದ ವ್ಯವಸ್ಥೆ ಬದಲಾಗಲ್ಲ. ಎಲ್ಲಿಯವರೆಗೆ ಸರಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿ ಸುವ ಕೆಲಸ ಮಾಡುತ್ತೋ, ಅಲ್ಲಿವರೆಗೆ ಸರ್ಕಾರ ಮರು ಆಯ್ಕೆಯಾಗಿ ಬರುತ್ತದೆ. ಉದಾಹರಣೆಯಾಗಿ ತೆಗೆದುಕೊಂಡರೇ ಬೊಮ್ಮಾಯಿ ಸರಕಾರ ಬೀಳಲು ಇದು ಒಂದು ಕಾರಣವಾತು ಅಂತಲೂ ಹೇಳ ಬಹುದು.

ಸರಕಾರ ಬೀಳಬೇಕು ಎಂತಲೇ ಕೆಲ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡದೇ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡದೇ ಕಾಲಹರ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆಗಳು ತಲೆನೋನ ಸಮಸ್ಯೆಯಾಗುದಲ್ಲದೇ ಸರ್ಕಾರಕ್ಕೂ ಮುಜುಗರವಾಗುತ್ತಿದೆ. ಆದರಿಂದ ಐಪಿ ಎನ್ನು ವುದು ಹೆಸರು ಮಾತ್ರ ಸಾಮಾಜಿಕ ಕಾರ್ಯಕರ್ತ,

ಮಾಹಿತಿ ಕಾರ್ಯಕರ್ತ ಎನ್ನುವುದು ಉಸಿರು ಆಗಿದೆ. ಅವರನ್ನು ಹತ್ತಿಕ್ಕುವ ಪ್ರಯತ್ನ ಬೇಡ, ಬಗೆ ಹರಿಯಲಾರದಂತ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತ, ಮಾತಿ ಹಕ್ಕು ಕಾರ್ಯಕರ್ತರು ಬಗೆಹರಿಸಿದ್ದ ಉದಾಹರಣೆ ಸಾಕ್ಟವೆ. ಅಂತಹವರನ್ನು ಪ್ರೋತ್ಸಾಸುವ. ಸನ್ಮಾನಿಸುವ ಕಾರ್ಯ ವಾಗಲಿ.