Gururaj Gantihole Column: ಮಂದಿರಗಳ ಮೇಲೆ ಸರಕಾರದ ಹಿಡಿತಕ್ಕೆ ನ್ಯಾಯವೇನು ?
ಸುಪ್ರೀಂ ಕೋರ್ಟ್‌ನ ಮೂಲತೀರ್ಪು, ಅರ್ಥ ಮತ್ತು ವ್ಯಾಪ್ತಿಯನ್ನು ಗಮನಿಸಿದಾಗ, ಈ ತೀರ್ಪಿನ ಮೂಲ ಅಂಶಗಳು Temple money belongs to the deity ದೇವರನ್ನು ಜೂರಿಸ್ಟಿಕ್ ಪರ್ಸನ್ ಎಂದು ಪರಿಗಣಿ ಸುವ ಭಾರತದ ಕಾನೂನು ಪರಂಪರೆಯನ್ನು ಮತ್ತೊಮ್ಮೆ ಪುನಃಸ್ಥಾಪಿಸುವ ನಿರ್ಣಯ ಇದಾಗಿದೆ ಎನ್ನಬಹುದು.
-
ಗಂಟಾಘೋಷ
ದೇಶದ ಸರ್ವೋಚ್ಚ ನ್ಯಾಯಾಲಯದ ಘನವೆತ್ತ ಮುಖ್ಯನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರ ಪೀಠದಿಂದ ನೀಡಿರುವ Temple money belongs to the deity, not to enrich someone or cooperative banks ಅನ್ನುವ ಮಹತ್ವದ ತೀರ್ಪು, ಇತ್ತೀಚಿನ ದಶಕಗಳಲ್ಲಿ ಧಾರ್ಮಿಕ ಸಂಸ್ಥೆಗಳ ಆರ್ಥಿಕ ನಿರ್ವಹಣೆ ಕುರಿತಂತೆ ಬಂದ ಅತಿ ಪ್ರಮುಖ ನ್ಯಾಯಾಂಗ ನಿರ್ದೇಶನವಾಗಿದೆ.
ಈ ತೀರ್ಪು ಕೇವಲ ಕಾನೂನು ನಿರ್ಣಯವಲ್ಲ; ಇದು ಭಾರತದ ಧಾರ್ಮಿಕ ಆಸ್ಥೆ, ಮಂದಿರಗಳ ಆಡಳಿತ, ರಾಜ್ಯದ ಪಾತ್ರ, ಭಕ್ತರ ಹಕ್ಕುಗಳು, ಸಾಮಾಜಿಕ ನೈತಿಕತೆ, ರಾಜಕೀಯ ಮೌಲ್ಯಗಳು, ಮತ್ತು ಧರ್ಮ-ರಾಜಕೀಯ ಸಂಬಂಧಗಳ ಬಗ್ಗೆ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.
ಮಂದಿರಗಳ ಹಣ ಸಾರ್ವಜನಿಕ ಹಣವೋ? ಧಾರ್ಮಿಕ ಆಸ್ತಿಯೋ? ಸರ್ಕಾರದ ಹಸ್ತಕ್ಷೇಪದ ಮಿತಿಗಳು ಯಾವುವು? ಮತ್ತು ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಸಂಸ್ಥೆಗಳ ಶಾಶ್ವತತೆಯನ್ನು ಹೇಗೆ ಕಾಪಾಡಬೇಕೆಂಬ ಪ್ರಶ್ನೆಗಳಿಗೆ ಈ ತೀರ್ಪು ಹೊಸ ಬೆಳಕು ಚೆಲ್ಲುವ ಹೆzರಿಯಂತಾಗಿದೆ ಎನ್ನಬಹುದು
ಪ್ರಾಚೀನ ಭಾರತದಲ್ಲಿ ಮಂದಿರಗಳು ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಕೇಂದ್ರಗಳಾಗಿದ್ದವು. ಪ್ರಾಚೀನ ಮಂದಿರಗಳು ಕೇವಲ ಪೂಜೆ ಮಾಡುವ ಸ್ಥಳಗಳಲ್ಲ; ಅವು ಜ್ಞಾನ, ಸಂಗೀತ, ವಾಸ್ತುಶಿಲ್ಪ, ಕೃಷಿ, ವ್ಯಾಪಾರ, ಶಿಕ್ಷಣ, ದಾನ-ಧರ್ಮ, ಭೂವಿನ್ಯಾಸ, ಮತ್ತು ಸಮುದಾಯ ನಿರ್ವಹಣೆಯ ಕೇಂದ್ರಗಳಾಗಿದ್ದವು.
ಇದನ್ನೂ ಓದಿ: Gururaj Gantihole Column: ನಭೋಮಂಡಲದಲ್ಲಿ ನವ ಮನ್ವಂತರ ಸೃಷ್ಟಿಸುತ್ತಿರುವ ಇಸ್ರೋ !
ಚೋಳ, ಪಾಂಡ್ಯ, ವಿಜಯನಗರ ಕಾಲದಲ್ಲಿ ಮಂದಿರಗಳು ದೊಡ್ಡ ಸಂಸ್ಥೆಗಳಾಗಿದ್ದವು. ಲಕ್ಷಾಂತರ ಎಕರೆ ಭೂಮಿ, ಹಳ್ಳಿಗಳು, ಕಾರ್ಖಾನೆಗಳು, ಹೊಲಗಳು ಮಂದಿರಗಳಿಗೆ ನೀಡಲ್ಪಟ್ಟಿದ್ದವು. ಮಂದಿರ ಗಳು ಜನ-ಜೀವನವನ್ನು ಚಲಾಯಿಸುವ ಆರ್ಥಿಕ ಎಂಜಿನ್ ಆಗಿದ್ದವು.
ಬ್ರಿಟಿಷ್ ಕಾಲದಲ್ಲಿ ಮಂದಿರಗಳ ಮೇಲಿನ ರಾಜ್ಯದ ನಿಯಂತ್ರಣ ಆರಂಭವಾಯಿತು. ಬ್ರಿಟಿಷರು 1817ರ Regulation Act ಮೂಲಕ ಮಂದಿರಗಳ ಆರ್ಥಿಕ ನಿರ್ವಹಣೆಯನ್ನು ರಾಜ್ಯದ ಪಾಲಿಗೆ ತೆಗೆದುಕೊಂಡರು. ಕಾರಣ, ಮಂದಿರಗಳಲ್ಲಿದ್ದ ದೊಡ್ಡ ಪ್ರಮಾಣದ ಆಸ್ತಿ. ರಾಜ್ಯಕ್ಕೆ ತೆರಿಗೆ ಮತ್ತು ಹಣದ ಹರಿವಿನ ಮೇಲೆ ಕಣ್ಗಾವಲು ಇಟ್ಟು, ಸ್ಥಳೀಯ ಪ್ರಭುತ್ವವನ್ನುದುರ್ಬಲಗೊಳಿಸುವ ಉದ್ದೇಶ ಇದರ ಹಿಂದೆ ಅಡಗಿತ್ತು.
ಸ್ವಾತಂತ್ರ್ಯದ ನಂತರ ಹಲವಾರು ರಾಜ್ಯಗಳು (ಕೇರಳ, ತಮಿಳುನಾಡು, ಆಂಧ್ರ, ಕರ್ನಾಟಕ ಇತ್ಯಾದಿ) Hindu Religious Charitable Endowment Acts ರೂಪಿಸಿ ಮಂದಿರಗಳ ನಿರ್ವಹಣೆಯನ್ನು ರಾಜ್ಯದ ಅಧೀನದ ಉಳಿಸಿಕೊಂಡವು. ಇದರಿಂದ, ಮಂದಿರಗಳು ಸ್ವಾಯತ್ತ ಧಾರ್ಮಿಕ ಸಂಸ್ಥೆಗಿಂತ ಹೆಚ್ಚಾಗಿ ಸರ್ಕಾರಿ ಇಲಾಖೆಗಳಂತೆ ಕಾರ್ಯನಿರ್ವಹಿಸಲಾರಂಭಿಸಿದವು. ಇದಕ್ಕೆ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ ಪರಿಣಾಮಗಳು ಕಂಡುಬಂದಿವೆ. ಸುಪ್ರೀಂ ಕೋರ್ಟ್‌ನ ಮೂಲತೀರ್ಪು, ಅರ್ಥ ಮತ್ತು ವ್ಯಾಪ್ತಿಯನ್ನು ಗಮನಿಸಿದಾಗ, ಈ ತೀರ್ಪಿನ ಮೂಲ ಅಂಶಗಳು Temple money belongs to the deity ದೇವರನ್ನು ಜೂರಿಸ್ಟಿಕ್ ಪರ್ಸನ್ ಎಂದು ಪರಿಗಣಿಸುವ ಭಾರತದ ಕಾನೂನು ಪರಂಪರೆ ಯನ್ನು ಮತ್ತೊಮ್ಮೆ ಪುನಃಸ್ಥಾಪಿಸುವ ನಿರ್ಣಯ ಇದಾಗಿದೆ ಎನ್ನಬಹುದು.
ದೇವರ ಹೆಸರಿನಲ್ಲಿ ಸಂಗ್ರಹವಾಗುವ ಹಣ, ಆಸ್ತಿ, ಬಂಗಾರ, ನಗದು ಸರ್ಕಾರದ್ದೂ ಅಲ್ಲ, ಯಾವುದೇ ರಾಜಕೀಯ ಪಕ್ಷ, ಮಂಡಳಿ ಸದಸ್ಯ, ಅಧಿಕಾರಿಯ ಖಾಸಗಿ ಸ್ವತ್ತೂ ಅಲ್ಲ. ಇದು ದೇವರ ಮತ್ತು ಭಕ್ತರ ಧಾರ್ಮಿಕ ಉದ್ದೇಶಗಳಿಗೆ ಮೀಸಲಾದ ಹಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. Money has landed in unsafe hands ಎಂದು ಸರ್ವೋಚ್ಚ ಪೀಠವು ತಪರಾಕಿ ಹಾಕಿತಲ್ಲದೇ, ಈ ತೆರನಾಗಿ ದೊಡ್ಡ ಆರೋಪ ನ್ಯಾಯಾಲಯದಿಂದ ಬಂದಿತು.
ಮಂದಿರಗಳ -ಂಡುಗಳು ಸುರಕ್ಷಿತವಾಗಿ ನಿರ್ವಹಿಸಲ್ಪಡದೇ ಇರಲು ಕಾರಣಗಳು ಅನೇಕ ವಿರಬಹುದು. ಅವುಗಳಲ್ಲಿ, ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ರಾಜಕೀಯ ಪ್ರಭಾವ, ಕೆಲವೆಡೆ ಭಕ್ತರ ಹಣ ದುರುಪಯೋಗವಾಗಿರುವ ಸಾಧ್ಯತೆ ಹೆಚ್ಚು ಎಂದು ಕೇರಳ ಕೋ-ಆಪರೇಟಿವ್ ಬ್ಯಾಂಕ್‌ಗಳ ಅರ್ಜಿ ತಿರಸ್ಕಾರ ಮಾಡುತ್ತ ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.
ಮಂದಿರದ ಹಣವನ್ನು ಯಾರದೋ ಇಚ್ಛೆಯಂತೆ ಬೇರೆ ಬ್ಯಾಂಕುಗಳಲ್ಲಿ ಅಥವಾ ವ್ಯಕ್ತಿಗಳ ಪರವಾಗಿ ಬಳಸಲು ಸಾಧ್ಯವಿಲ್ಲ. ದೇವರ ಹಣವನ್ನು ಲಾಭಕ್ಕಾಗಿ ಬಳಸುವ ಆಲೋಚನೆಯೇ ತಪ್ಪು ಎಂದು ತೀರ್ಪಿನಲ್ಲಿ ಹೇಳಿದೆ.
ತೀರ್ಪಿನ ಕಾನೂನು ಆಧಾರವಾಗಿ, ನ್ಯಾಯಾಲಯವು ಈ ತೀರ್ಪು ನೀಡಲು Article-25 Religious Freedom, Article-26 Deity as Juristic Person-Property Rights ಮತ್ತು Indian Trust Act ದಲ್ಲಿರುವ Principles-Fiduciary Duty ಎಂಬ ಮೂರು ಕಾನೂನು ಶಿಲಾಸ್ತಂಭಗಳನ್ನು ಬಳಸಿದೆ. ತೀರ್ಪಿನ ಆಳವಾದ ಕಾನೂನು ವಿಶ್ಲೇಷಣೆ ಮಾಡಿದಾಗ, ದೇವರ ಜೂರಿಸ್ಟಿಕ್ ಪರ್ಸನ್ ಹಕ್ಕು ಕುರಿತಂತೆ ಭಾರತೀಯ ನ್ಯಾಯಾಲಯಗಳು ಶತಮಾನಗಳ ಕಾಲ ಹೇಳುತ್ತಲೇ ಬಂದಿವೆ.
ದೇವರ ಹೆಸರಿನಲ್ಲಿ ಹೂಡಿಕೆ, ಆಸ್ತಿ, ಬ್ಯಾಂಕ್ ಖಾತೆ ಇತ್ಯಾದಿ ಇರಬಹುದು. ದೇವರ ಪರವಾಗಿ ಅರ್ಜಿ ಹಾಕಬಹುದು/ ಸ್ವೀಕರಿಸಬಹುದು, ದೇವರ ಆಸ್ತಿ ರಕ್ಷಣೆಗೆ ಪುರೋಹಿತರು, ಧರ್ಮದರ್ಶಿಗಳು, ಟ್ರಸ್ಟಿಗಳು ಕೇವಲ ನಿರ್ವಾಹಕರು ಆಗಿರುತ್ತಾರೆಯೇ ಹೊರತು ಮಾಲೀಕರು ಆಗಿರಲು ಸಾಧ್ಯವಿಲ್ಲ.
ಟ್ರಸ್ಟ್ ಕಾನೂನಿನ ಪ್ರಕಾರ, ಮಂದಿರ ಆಸ್ತಿಗಳು - ಧಾರ್ಮಿಕ ಟ್ರಸ್ಟ್, ಸಾರ್ವಜನಿಕ ಟ್ರಸ್ಟ್, ಭಕ್ತರ ದೇಣಿಗೆಗಳ ಟ್ರಸ್ಟ್‌ಗೆ ಸೇರಿದ್ದಾಗಿದ್ದು, ಇವುಗಳನ್ನು ವೈಯಕ್ತಿಕ ಸ್ವಾರ್ಥಕ್ಕೆ ಬಳಸಲಾಗದು. 1951ರ ಅಂಗುರಬಾಲ ಪ್ರಕರಣದಲ್ಲಿ ದೇವಸ್ಥಾನದ ಆಸ್ತಿ ದೇವರದ್ದೇ ಆಗಿರುತ್ತದೆ ಎಂದಿದೆ.
1954ರಲ್ಲಿ ರತಿಲಾಲ-ಬಾಂಬೇ ಪ್ರಕರಣದಲ್ಲಿ ದೇವಸ್ಥಾನದ ನಿಧಿಯ ಮೇಲೆಸರ್ಕಾರಕ್ಕೆ ಹಕ್ಕಿಲ್ಲ ಎಂದು Article 25, 26 ರ ಉಲ್ಲೇಖ ಮಾಡಿದೆ. 1994ರಲ್ಲಿ ಇಸ್ಮಾಯಿಲ್-ಯುನಿಯನ್ ಪ್ರಕರಣದಲ್ಲಿ ಧಾರ್ಮಿಕ ಸ್ಥಳವು ಸಾಮಾನ್ಯ ಸಾರ್ವಜನಿಕ ಆಸ್ತಿ ಎಂದು ಹೇಳಿದೆ.
ಹೀಗೆ ದೇವಸ್ಥಾನಗಳ ವಿಚಾರದಲ್ಲಿ ಸರ್ವೋಚ್ಚ ಪೀಠವು ಸರ್ಕಾರಕ್ಕೆ ಬಳಸುವ ಹಕ್ಕಿಲ್ಲವೆಂದೇ ತನ್ನ ಐತಿಹಾಸಿಕ ತೀರ್ಪುಗಳಲ್ಲಿ ಹೇಳುತ್ತ ಬಂದಿದೆ. ಈ ಮೇಲಿನ ಎಲ್ಲತೀರ್ಪುಗಳಿಗೆ ಕಳಸವಿಟ್ಟಂತೆ, ಇಡೀ ದೇಶದಲ್ಲಿ ಸರ್ಕಾರದ ಕಪಿಮುಷ್ಟಿಯಲ್ಲಿ ಬಂಧಿಯಾಗಿರುವ ಎಲ್ಲ ದೇವಸ್ಥಾನಗಳನ್ನು ಮುಕ್ತ ಗೊಳಿಸಲು ಮೊನ್ನೆಯ ತೀರ್ಪು ರಾಜಮಾರ್ಗ ತೋರಬಲ್ಲದಾಗಿದೆ.
ಮಂದಿರ ಆಡಳಿತದಲ್ಲಿ ರಾಜ್ಯದ ಹಸ್ತಕ್ಷೇಪದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಈ ವಿಚಾರವಾಗಿ ನೂರಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿವೆ. ಸುಪ್ರೀಂ ಕೋರ್ಟ್ ಹಲವು ಬಾರಿ State should not run temples perpetually ಎಂದು ಸೂಚಿಸಿದೆ.
ಹೀಗಿದ್ದರೂ, ಮುಖ್ಯ ಸಮಸ್ಯೆಗಳಾಗಿ ಕಾಡುತ್ತಿರುವುದು ರಾಜಕೀಯ ನೇಮಕಾತಿಗಳು. ಮಂಡಳಿ ಸದಸ್ಯರು ಆಡಳಿತ ಪಕ್ಷದ ನಿಷ್ಠರಾಗಿರುತ್ತಾರೆ, ಸರ್ಕಾರಕ್ಕೆ ನಿಯತ್ತು ತೋರುವವರಾಗಿರುತ್ತಾರೆ. ಇಂತಹ ಸ್ಥಳಗಳಲ್ಲಿ ಭಕ್ತರ ಹಿತಾಸಕ್ತಿ ಕಡೆಗಣಿಸಿ ರಾಜಕೀಯ ಪ್ರಭಾವ ಹೆಚ್ಚಾಗುತ್ತದೆ.
ಆರ್ಥಿಕ ಅಸ್ಪಷ್ಟತೆ, ನಗದು/ಬಂಗಾರದ ಲೆಕ್ಕದಲ್ಲಿ ಭ್ರಷ್ಟಾಚಾರದ ಆರೋಪಗಳು, ಮಹಾ ದೇಣಿಗೆಗಳ ದುರುಪಯೋಗ, ಧಾರ್ಮಿಕ ಆಚರಣೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಪೂರ್ವ ನಿಗದಿತ ಸಂಪ್ರದಾಯಗಳಲ್ಲಿ ಬದಲಾವಣೆಗಳನ್ನು ಬಲವಂತವಾಗಿ ಹೇರುವ ಮೂಲಕ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವ ಹತ್ತಾರು ಪ್ರಕರಣಗಳು ಮಾಧ್ಯಮಗಳ ಮೂಲಕ ನಿತ್ಯವರದಿ ಯಾಗುತ್ತಿವೆ.
Temple Revenue diversion allegations ಹಲವು ಕಡೆ ಕಂಡು ಬರುತ್ತಿದ್ದು, ಅದರಲ್ಲೂ ವಿಶೇಷ ವಾಗಿ ದಕ್ಷಿಣಭಾರತದಲ್ಲಿನ ಪುರಾತನ, ಪ್ರಮುಖ ಮಂದಿರಗಳ ಹಣವನ್ನು ಸರಕಾರದ ಕಾರ್ಯಗಳಿಗೆ, ಅನ್ಯಧಾರ್ಮಿಕ ಕಾರ್ಯಗಳಿಗೆ ಬಳಸುವುದು ನಡೆಯುತ್ತಲೇ ಇದೆ. ಧಾರ್ಮಿಕ ಉದ್ದೇಶಕ್ಕೆ ಸಂಗ್ರಹಿಸಿದ ಹಣ ಲೌಕಿಕ ಉದ್ದೇಶಗಳಿಗೆ ಹೋಗುತ್ತಿರುವುದನ್ನು ಉಲ್ಲೇಖಿಸಿ, ಇದನ್ನೇ unsafe hands ಎಂಬ ಪದಗಳಿಂದ ಸೂಚಿಸಿದೆ. ಅಷ್ಟಕ್ಕೂ ಏನಿದು ಕೇರಳ ಕೋ-ಆಪರೇಟಿವ್ ಬ್ಯಾಂಕ್ ಪ್ರಕರಣ ಎಂದು ಗಮನಿಸಿದರೆ, THE THIRUNELLY SERVICE CO-OPERATIVE BANK LTD AND ANR. v. SREE THIRUNELLY DEVASWOM AND ORS ಆಗಿದ್ದು, SLP/Petition No (s): SLP(C) No. 34386/2025 ಇದ್ದು, ದಿನಾಂಕವು ೦೫ ಡಿಸೆಂಬರ್ 2025ರಂದು ( Supreme Court benches: CJI Surya Kant ಮತ್ತು Joymalya Bagchi) ಈ ಪೀಠದಿಂದ ಆದೇಶಿಸಲ್ಪಟ್ಟಿರುತ್ತದೆ.
ಕೇರಳದ ಕೋ-ಆಪರೇಟಿವ್ ಬ್ಯಾಂಕ್ ವ್ಯವಸ್ಥೆಯು ಆಳವಾದ ರಾಜಕೀಯ ಹಿನ್ನೆಲೆ ಹೊಂದಿದ್ದು, ಸಿಪಿಎಂ ಪ್ರಭಾವ ಹೆಚ್ಚಿರುವ ಸಹಕಾರ ಬ್ಯಾಂಕುಗಳು ಮಂದಿರಗಳ ಹಣವನ್ನು ಇವುಗಳಲ್ಲಿ ಇಡುವುದರಿಂದ ರಾಜಕೀಯ ಬಳಕೆಯ ಶಂಕೆ ವ್ಯಕ್ತವಾಗಿದ್ದಲ್ಲದೇ, ಅಮೂಲ್ಯ ನಿಧಿಗಳು ಅಪಾಯ ಕ್ಕೆ ಗುರಿಯಾಗುವ ವದಂತಿಗಳು ಸಾರ್ವಜನಿಕವಾಗಿ ಹರಡಿದವು.
ಕೋ-ಆಪರೇಟಿವ್ ಬ್ಯಾಂಕುಗಳು ಪೂರ್ಣಪ್ರಮಾಣದಲ್ಲಿ ಸುರಕ್ಷಿತವಲ್ಲ ಮತ್ತು ಇದರಲ್ಲಿ ಭಕ್ತರ ಹಣದ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ ಎಂದಿತಲ್ಲದೆ, ರಾಜಕೀಯ ವ್ಯವಸ್ಥೆಯ ಪ್ರಭಾವ ದಿಂದ ಸ್ವತಂತ್ರ ನಿಯಂತ್ರಣದ ಕೊರತೆ ಕಳೆದುಹೋಗಬಹುದು ಎನ್ನುವ ಕಾರಣಗಳನ್ನು ಹೇಳುತ್ತ ಸುಪ್ರೀಂಕೋರ್ಟ್ ಕೋ-ಆಪರೇಟಿವ್ ಬ್ಯಾಂಕುಗಳ ಮನವಿಯನ್ನು ತಿರಸ್ಕಾರ ಮಾಡಿತು.
2025ರ Thirunelly Temple Devaswom/ Thirunelly Service Co operative Bank Ltd ವಿರುದ್ಧದ ತೀರ್ಪಿನ ( Mananthawady Co operative Urban Society Ltd ಗ್ರೂಪ್ ಬ್ಯಾಂಕ್‌ಗಳು vs Devaswom ) ಪ್ರಕರಣದಲ್ಲಿ ಆಮೂಲಾಗ್ರವಾಗಿ ಅಧ್ಯಯನ, ಸ್ಪಷ್ಟ ವಿವೇಚನೆ ಮತ್ತು ಕಠೋರ ವಾಸ್ತವಗಳನ್ನು ಅರಿತಿದ್ದೇ ಈ ಆದೇಶ ಜಾರಿಯಾಗಿದೆ ಎಂದೆನಿಸುತ್ತದೆ.
ಇದೊಂದು, ದೇವಾಲಯದ ದೇಣಿಗೆ ವಿಚಾರದಲ್ಲಿ ಆದೇಶಿಸಲ್ಪಟ್ಟಿರುವ ಅತ್ಯಂತ ಮಹತ್ವದತೀರ್ಪು ಎಂದೇ ಮುಂದಿನ ದಿನಗಳಲ್ಲಿ ದಾಖಲೆಯಾಗಿ ಉಳಿಯಬಲ್ಲದು. ಈ ತೀರ್ಪಿನಿಂದ ಭಾರತ ರಾಜಕೀಯಕ್ಕೆ ಆಗುವ ಪರಿಣಾಮಗಳು, ವಿಶೇಷವಾಗಿ HRCE ಕಾಯಿದೆಗಳ ಮರುಪರಿಶೀಲನೆ ಯಾಗುವ ಸಾಧ್ಯತೆಯಿದೆ.
ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ರಾಜ್ಯಗಳು ಮಂದಿರಗಳನ್ನು ನೇರವಾಗಿ ನಿರ್ವಹಿಸು ತ್ತಿದ್ದು, ಈ ತೀರ್ಪಿನಿಂದ ರಾಜ್ಯವು ದೇವಸ್ಥಾನಗಳನ್ನುನಿರ್ವಹಿಸುವುದು ಶಾಶ್ವತವಾಗಿರಲು ಸಾಧ್ಯ ವಿಲ್ಲ ಎಂಬ ಒತ್ತಡ ಹೆಚ್ಚಾಗುತ್ತದೆ. ಜೊತೆಗೆ, ಮಂದಿರಗಳ ಸ್ವಾಯತ್ತತೆ ಕುರಿತು ಹೊಸ ಕಾನೂನು ಚರ್ಚೆ ಆರಂಭವಾಗಬಹುದು.
ಹಿಂದೂ ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆಯ ಚಳವಳಿ ದೇಶದಾದ್ಯಂತ ಆರಂಭವಾಗುವ ಮೂಲಕ ಇದನ್ನು Temple Autonomy Movement ಎಂದು ದಾಖಲೆಯಾಗಬಲ್ಲದು ಮತ್ತು ಈ ತೀರ್ಪು ಆ ಚಳವಳಿಗೆ ನ್ಯಾಯಾಂಗ ಬಲ ನೀಡುತ್ತದೆ.
ಸಂವಿಧಾನಿಕ ಪ್ರಶ್ನೆಗಳು ಕೂಡ ಉದ್ಭವಿಸುವ ಸಾಧ್ಯತೆಗಳಿದ್ದು, Article 27-Religious tax prohibition ಪ್ರಕಾರ, ರಾಜ್ಯವು ಧಾರ್ಮಿಕ ಉದ್ದೇಶಕ್ಕೆ ತೆರಿಗೆ ವಿಧಿಸಬಾರದು. ಆದರೆ ಮಂದಿರದ ಹಣವನ್ನು ಸರ್ಕಾರಿ ಯೋಜನೆಗಳಿಗೆ ಬಳಸುತ್ತಿರುವುದು ಇದಕ್ಕೆ ವಿರುದ್ಧವೆಂಬ ವಾದ ಮುನ್ನೆಲೆಗೆ ಬರುತ್ತದೆ.
Article 25-Religious freedom ಧಾರ್ಮಿಕ ಆಚರಣೆಗಳಲ್ಲಿ ರಾಜ್ಯದ ಹಸ್ತಕ್ಷೇಪ ಮಿತಿಯು ಅಗತ್ಯ ವಿದ್ದಾಗ ಮಾತ್ರ, ಅದೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದ ಮಟ್ಟಿಗೆ ಎಂಬುದೂ ಮುನ್ನೆಲೆಗೆ ಬರುವ ಸಾಧ್ಯತೆ ಹೆಚ್ಚು. Article 26-Religious denomination rights ಮೂಲಕ, ಮಂದಿರಗಳು denomination ಆಗಿ ಪರಿಗಣಿತವಾಗಬಹುದು.
ಅಂದರೆ, ಮಂದಿರ ನಿರ್ವಹಣೆಯಲ್ಲಿ ಭಕ್ತ ಸಮುದಾಯದ ಹಕ್ಕು ಪ್ರಮುಖವಾಗಿದ್ದು, ರಾಜ್ಯದ ಅನಿಯಂತ್ರಿತ ಹಸ್ತಕ್ಷೇಪ ಅಸಂವಿಧಾನಿಕ ಎಂಬುದನ್ನು ಈ ತೀರ್ಪು ಬಲಪಡಿಸುತ್ತದೆ. ಮಂದಿರಗಳ ಹಣ ದೇವರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಕೇವಲ ತೀರ್ಪಲ್ಲ, ಇದು ಭಾರತೀಯ ಸಾಂವಿಧಾನಿಕ ಚಿಂತನೆ, ಧಾರ್ಮಿಕ ಪರಂಪರೆ, ಭಕ್ತಭಾವ ಮತ್ತು ಸಾರ್ವಜನಿಕ ನೈತಿಕತೆಯ ಆಳವಾದ ಪ್ರತಿಬಿಂಬವಾಗಿದೆ. ಈ ತೀರ್ಪು ಧಾರ್ಮಿಕ ಸ್ವಾಯತ್ತತೆ, ರಾಜ್ಯದ ಮಿತಿ, ರಾಜಕೀಯ ಪ್ರಭಾವ, ಮಂದಿರ ಆರ್ಥಿಕತೆ, ಮತ್ತು ಸಾಂವಿಧಾನಿಕ ಮೌಲ್ಯಗಳ ಮಧ್ಯೆ ಸಮನ್ವಯ ಸಾಧಿಸುವ ದಿಕ್ಕಿನಲ್ಲಿ ಅತ್ಯಂತ ಮಹತ್ವದ ಹಂತವಾಗಿದೆ. ಇದು ಮುಂದಿನ ದಶಕದಲ್ಲಿ Temple Governance Revolution ಎಂಬ ಬೃಹತ್ ಪರಿವರ್ತನೆಯ ಕಾಲಘಟ್ಟಕ್ಕೆ ಬಹುದೊಡ್ಡ ಆರಂಭಿಕ ಮುನ್ನುಡಿ ಬರೆದಂತಿದೆ.