#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hari Paraak Column: ದಕ್ಷಿಣ ಭಾರತದ ಹೌಸ್‌ ವೈಫ್‌ - ಸೌಟ್‌ ಇಂಡಿಯನ್

ಕಾಡಿನಲ್ಲಿ ನಡೆಯೋ ಕಥೆ ಆದ್ರೂ ‘ಕಾಡ ನೋಡ ಹೋದೆ ಕವಿತೆಯೊಡನೆ ಬಂದೆ’ ಎನ್ನುವಂಥ ಕವನ ವಾಸ ಇಲ್ಲಿಲ್ಲ. ಇಲ್ಲಿ ಬರೀ ವನವಾಸ. ಅದರ ಜತೆಗೆ ಭೂತ, ಪ್ರೇತಗಳ ಸಹವಾಸ. ವೀರಪ್ಪನ್‌ನ ಅಟ್ಟ ಹಾಸ. ಒಟ್ಟಾರೆ ಹೇಳೋದಾದ್ರೆ, ಕಾಡಿನಲ್ಲಿ ನಡೆಯುವ ಘಟನೆಗಳ ಸರಮಾಲೆ ಆಗಿರುವ ಫಾರೆಸ್ಟ್ ಅನ್ನೋ ಈ ಸಿನಿಮಾ, ಚಂದ್ರಮೋಹನ್ ಅವರು ಮಾಡಿರುವ ಕಾಡು-ವ ಸಿನಿಮಾ ಅಂತ ಖಂಡಿತಾ ಹೇಳಬಹುದು

Hari Paraak Column: ದಕ್ಷಿಣ ಭಾರತದ ಹೌಸ್‌ ವೈಫ್‌ - ಸೌಟ್‌ ಇಂಡಿಯನ್

ಅಂಕಣಕಾರ ಹರಿ ಪರಾಕ್

ಹರಿ ಪರಾಕ್‌ ಹರಿ ಪರಾಕ್‌ Jan 26, 2025 8:30 AM

ತುಂಟರಗಾಳಿ

ಸಿನಿಗನ್ನಡ

ಸ್ಟಾರ್‌ಗಳಿಲ್ಲದ ಸಿನಿಮಾ ಮಾಡುವಾಗ ನಿರ್ದೇ ಶಕರು ಸಾಮಾನ್ಯವಾಗಿ ಸ್ವಲ್ಪ ಸೇಫ್ ಅನ್ನಿಸು‌ ವಂಥ ಸಬ್ಜೆಕ್ಟ್‌ ತಗೋತಾರೆ. ಆದರೆ ಮೊನ್ನೆ ಬಿಡುಗಡೆಯಾದ ‘ಫಾರೆಸ್ಟ್’ ಸಿನಿಮಾದಲ್ಲಿ ನಿರ್ದೇಶಕ ಚಂದ್ರಮೋಹನ್ ಅವರು ವೀರಪ್ಪನ್ ಇದ್ದ ಕಾಡಿನೊಳಗೆ ಹೋಗಿ, ಅನ್‌ಸೇಫ್ ಅನ್ನಿಸಿಕೊಳ್ಳುವ ಘಟನೆಗಳಿಗೆ ಸಾಕ್ಷಿ ಆಗೋ ನಾಲ್ಕೈದು ಜನರ ಕಥೆ ಹೇಳಿದ್ದಾರೆ.

ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಈ ಚಿತ್ರಕ್ಕೆ ಒಂದು ಇತಿಹಾಸ ಇದೆ. ಪೊಲೀಸರಿಗೆ ವರ್ಷಾನುಗಟ್ಟಲೆ ಚಳ್ಳೆಹಣ್ಣು ತಿನ್ನಿಸಿದರೂ, ಕೊನೆಗೆ ಪೊಲೀ ಸರು ಅವನನ್ನು ಅರೆ ಮಾಡೋಕೆ ಆಗದಿದ್ರೂ, ಅವರ ಕೈಯ ಸಾವಿಗೀಡಾಗಿ ‘ರೆಸ್ಟ್ ಇನ್ ಪೀಸ್’ ಎನ್ನಿಸಿಕೊಂಡ ಕಾಡುಗಳ್ಳ ವೀರಪ್ಪನ್‌ನ ಹಿನ್ನೆಲೆ ಫಾರೆಸ್ಟ್ ಸಿನಿಮಾಗೆ ಇದೆ. ಚಿತ್ರದ ಪ್ರಮುಖ ಪಾತ್ರ ಗಳಿಗೆ ‘ಊರು ಹೋಗು’ ಅನ್ನುವಷ್ಟು ವಯಸ್ಸಾಗಿಲ್ಲದಿದ್ದರೂ, ‘ಕಾಡು ಬಾ’ ಅಂತಿದೆ ಅನ್ನುವಂಥ ಸನ್ನಿವೇಶ ಎದುರಾಗುತ್ತೆ.

ಕಡುಬಡವರನ್ನು ಕಾಡು ಶ್ರೀಮಂತರನ್ನಾಗಿ ಮಾಡುತ್ತೆ ಅನ್ನೋ ಆಸೆ. ಅವರೆಲ್ಲ ಬಂಗಾರದ ಮೇಲಿನ ಆಸೆಯಿಂದ, ತಮಗೆ ಸಿಗುವ ಗೋಲ್ಡನ್ ಆಪರ್ಚುನಿಟಿಯನ್ನ ಬಳಸಿಕೊಂಡು ಅದೃಷ್ಟ ಪರೀಕ್ಷೆಗೆ ಜಂಗಲ್‌ಗೆ ಇಳಿಯುವ ಕಥೆ ಒಂಥರಾ ಜಂಗ್ಲಿ ರಮ್ಮಿ ಥರ ಅನ್ಬೋದು. ಆದ್ರೆ ಕೊನೆಯಲ್ಲಿ ಜಾಕ್‌ಪಾಟ್ ಹೊಡೆಯುತ್ತಾ ಇಲ್ವಾ ಅನ್ನೋದು ಸಸ್ಪೆ. ಕ್ಲೈಮ್ಯಾಕ್ಟ್‌ ನಲ್ಲಿ ಪ್ರೇಕ್ಷಕನಿಗೆ ಸರ್ಪ್ರೈಸ್ ಮೇಲೆ ಸರ್‌ಪ್ರೈಸ್ ಕೊಟ್ಟು ಪ್ರೇಕ್ಷಕ ಪ್ರಭುವಿನಿಂದ ಮನರಂಜನೆ ವಿಷಯದಲ್ಲಿ - ಪ್ರೈಸ್ ಗಿಟ್ಟಿಸಿ ಕೊಳ್ಳುತ್ತಾರೆ ನಿರ್ದೇಶಕ ಚಂದ್ರಮೋಹನ್.

ಇದನ್ನೂ ಓದಿ: Hari Paraak Column: ಎಲ್ಲಾ ಕಡೆ ಬರೀ ಮ್ಯಾಕ್ಸ್‌, ಟ್ಯಾನ್ಸ್‌ನದ್ದೇ ಟಾಕ್ಸ್

ಯಾಕಂದ್ರೆ ಪ್ರೇಕ್ಷಕನಿಗೆ ಅವನು ಟಿಕೆಟ್‌ಗೆ ಕೊಟ್ಟ ಪ್ರೈಸ್‌ಗಿಂತ ಹೆಚ್ಚೇ ಮಜಾ ಕೊಟ್ಟಿದ್ದಾರೆ ಅವರು. ಕಾಡಿನಲ್ಲಿ ನಡೆಯೋ ಕಥೆ ಆದ್ರೂ ‘ಕಾಡ ನೋಡ ಹೋದೆ ಕವಿತೆಯೊಡನೆ ಬಂದೆ’ ಎನ್ನುವಂಥ ಕವನವಾಸ ಇಲ್ಲಿಲ್ಲ. ಇಲ್ಲಿ ಬರೀ ವನವಾಸ. ಅದರ ಜತೆಗೆ ಭೂತ, ಪ್ರೇತಗಳ ಸಹವಾಸ. ವೀರಪ್ಪನ್‌ನ ಅಟ್ಟಹಾಸ. ಒಟ್ಟಾರೆ ಹೇಳೋದಾದ್ರೆ, ಕಾಡಿನಲ್ಲಿ ನಡೆಯುವ ಘಟನೆಗಳ ಸರಮಾಲೆ ಆಗಿರುವ ಫಾರೆಸ್ಟ್ ಅನ್ನೋ ಈ ಸಿನಿಮಾ, ಚಂದ್ರಮೋಹನ್ ಅವರು ಮಾಡಿರುವ ಕಾಡು-ವ ಸಿನಿಮಾ ಅಂತ ಖಂಡಿತಾ ಹೇಳಬಹುದು.

ಲೂಸ್‌ ಟಾಕ್‌ -ಶ್ರೀರಾಮುಲು

ಏನಿದು, ನಿಮ್ಮ ಹಾಗೂ ಜನಾರ್ದನ್ ರೆಡ್ಡಿ ಅವರ ಮಧ್ಯೆ ಜಗಳ?

- ಏನಿಲ್ಲ, ಇತ್ತೀಚಿಗೆ ‘ಲವ್ ರೆಡ್ಡಿ’ ಅಂತ ಸಿನಿಮಾ ಬಂದಿತ್ತಲ್ಲ, ಅದಕ್ಕೆ ವಿರುದ್ಧವಾಗಿ ‘ಹೇಟ್ ರೆಡ್ಡಿ’ ಅಭಿಯಾನ ಶುರುಮಾಡಿದ್ದೀನಿ ಅಷ್ಟೇ.

ಓಹೋ, ಸ್ವಾಭಿಮಾನಿಯ ಅಭಿಯಾನ. ಆದ್ರೆ ಎಲ್ ಹೋಯ್ತು ಅಭಿಮಾನ? ನೀವಿಬ್ರು ತುಂಬಾ ಕ್ಲೋಸ್ ಆಗಿದ್ರಲ್ಲ.. ಏನಾಯ್ತು ಇದ್ದಕ್ಕಿದ್ದಂಗೆ?

- ಕ್ಲೋಸ್ ಆಗಿದ್ದೆಲ್ಲ ಈಗ ಕ್ಲೋ ಚಾಪ್ಟರ್.. ಬಿಟ್ಟಾಕಿ..

ಇತ್ತೀಚೆಗೆ ನೀವು ಜನಾರ್ದನ ರೆಡ್ಡಿ ಅವರ ಮಾತು ಕೇಳ್ತಾ ಇಲ್ವಂತೆ?

- ಅವರ ಮಾತು ಕೇಳೋಕೆ ನಾನೇನು ಅವರ ಸೇವಕ ಅಲ್ಲ, ನಾನು ಜನತಾ ಜನಾರ್ದನನ ಸೇವೆ ಮಾಡೋಕೆ ರಾಜಕೀಯಕ್ಕೆ ಬಂದಿರೋದು, ಜನಾರ್ದನನ ಸೇವೆ ಮಾಡೋಕೆ ಅಲ್ಲ..

ನೀವು ರಾಜಕೀಯಕ್ಕೆ ಬಂದಿದ್ದೇ ಜನಾರ್ದನ್ ರೆಡ್ಡಿ ಅವರ ಅಕೌಂಟ್‌ನಿಂದ ಅಂತೆ?

- ನಂಗೆ ಮೋದಿ ಅವರ ಜನಧನ್ ಅಕೌಂಟ್ ಅಷ್ಟೇ ಗೊತ್ತು, ಜನಾರ್ದನ್ ಅಕೌಂಟ್ ಎಲ್ಲ ಗೊತ್ತಿಲ್ಲ..

ಅಂದ ಹಾಗೆ, ನೀವು ಕಾಂಗ್ರೆಸ್‌ಗೆ ಹೋಗ್ತೀರಿ ಅನ್ನೋ ಸುದ್ದಿ ಇದೆಯಲ್ಲ?

- ರೀ, ಶ್ರೀರಾಮುಲು ಅಂತ ಹೆಸರಿಟ್ಟುಕೊಂಡು, ಶ್ರೀರಾಮನ ಪಕ್ಷ ಬಿಜೆಪಿ ಬಿಟ್ಟು, ಕಾಂಗ್ರೆಸ್‌ಗೆ ಹೆಂಗ್ರಿ ಹೋಗ್ಲಿ?

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ - ಆಗಿ ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ‌

ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ. ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿದಳು. “ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾ ಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರರ್ಥ ಏನು?" ಅಂತ ಕೇಳಿ ದಳು.

“ಏನು?" ಅಂದ ಖೇಮು. “ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ. ಅವನ ಮನಸ್ಸಿನಲ್ಲಿ ನಾವಿಬ್ಬರೂ ಜತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿzನೆ" ಅಂತ ರೊಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಕೇಳಿ ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, “ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಗಳಿಗೆ ಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ". ಖೇಮು ಹೌದು ಅಂತ ತಲೆ ಆಡಿಸಿದ.

ತಕ್ಷಣ ಆ ಹುಡುಗಿ ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, “ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ?" ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು, “ಇಲ್ಲ, ನಾನು ಪೊಲೀಸ್ ಬರ್ಲಿ ಅಂತ ಕಾಯ್ತಾ ಇದ್ದೀನಿ".

ಲೈನ್‌ ಮ್ಯಾನ್

ಹೊಸ ಸಿನಿಮಾ ಸುದ್ದಿ

- ಎಸ್.ನಾರಾಯಣ, ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ ಆಗ ಚಂಡ, ಈಗ ಮಾರುತ.

- ಒಟ್ನಲ್ಲಿ ಚಂಡ ಮಾರುತ ‌

IIT ಬಿಟ್ಟು ಬಾಬಾ ಆದ ವ್ಯಕ್ತಿ

- ಅ ಇದ್ದಿದ್ರೆ ಹೋಮಿ ಜಹಾಂಗೀರ್ ಬಾಬಾ ಥರ ಆಗ್ಬೋದಿತ್ತು

ಕಾಲ ನಿಯಮ

- ಮನುಷ್ಯ ಸತ್ತಾಗ ಅವನು ಹೆಂಗ್ ಬದುಕಿದ ಅನ್ನೋ ಪ್ರಶ್ನೆಗಿಂತ, ಅವನ ಉತ್ತರ ಕ್ರಿಯೆ ಬಗ್ಗೆನೇ ಎಲ್ಲರೂ ಜಾಸ್ತಿ ತಲೆ ಕೆಡಿಸ್ಕೊತಾರೆ..

ಕೆಲವು ಹೋಟೆಲ್ ಚಿಕನ್ ಡಿಶ್‌ಗಳಲ್ಲಿ ನಾರಿನ ಪೀಸ್ ಗಳೇ ಜಾಸ್ತಿ ಇರುತ್ತೆ.

- ‘ಮಾಂಸದ ಜತೆ ನಾರೂ ಹೊಟ್ಟೆ ಸೇರಿತು’ ಅನ್ನೋ ಥರ.

ಎಣ್ಣೆ ಹೊಡೆದು ಕವನ ಹೇಳಿ ಟಾರ್ಚರ್ ಕೊಡುವ ಸಾಹಿತಿಯ ಪುಣ್ಯಕೋಟಿ ಶೈಲಿಯ ‘ನೋವಿನ ಹಾಡು’

- ಗದ್ಯವಿದೆಕೋ.. ಪದ್ಯವಿದೆಕೋ..ಗುಂಡೆದೆಯ ಬಿಸಿ ಮದ್ಯವಿದೆಕೋ..ಕಂಡ ಕಂಡವರನ್ನು ಕಾಡುವ

ಅಖಂಡ ಕಾವ್ಯವ ಸಹಿಸಿಕೋ...

ದಕ್ಷಿಣ ಭಾರತದಲ್ಲಿರೋ ಹೌಸ್‌ವೈಫ್‌ ಗಳನ್ನು ಏನಂತ ಕರೀಬಹುದು?

- ‘ಸೌಟ್’ ಇಂಡಿಯನ್ಸ್

ಟೈಮ್‌ಪಾಸ್‌ಗೆ ಯಾರಿಗಾದರೂ ಕೊಡಬಹುದಾದ ಗಿಫ್ಟ್‌

- ವಾಚ್

ಎಚ್‌ಆರ್‌ನಲ್ಲಿ ಕೆಲಸ ಮಾಡೋರು ತಮ್ಮ ಆಫೀಸಿನಲ್ಲಿ ತಮ್ಮ ಮದುವೆ ಕಾರ್ಡ್ ಕೊಡು ವಾಗ ಅದರ ಮೇಲೆ ಏನಂತ ಬರೆದಿರ್ತಾರೆ?

- ನಿಮ್ಮ ಹೆಸರು ನಮ್ಮ ಅಟೆಂಡೆನ್ಸ್ ರಿಜಿಸ್ಟರ್‌ನಲ್ಲಿದೆ. ಸೋ, ಮದುವೆಗೆ ದಯವಿಟ್ಟು

ಅಟೆಂಡ್ ಮಾಡಿ.‌

ಬುದ್ದಿಜೀವಿಗಳಿಗೆ ಇರಬೇಕಾದ ಆರ್ಹತೆ

- ಒಂದೋ, ತಲೆಕೂದಲಿಗೆ ಡೈ ಹಾಕಿರಬೇಕು, ಇಂದ್ರೆ, ಟೈ ಹಾಕಿರಬೇಕು. ಅವಾಗವಾಗ ಟೈಟ್ ಆಗಿರಬೇಕು.