Hari Paraak Column: ಅಧ್ಯಾತ್ಮ ಬಾ, ಬಾ ಅಂತಿತ್ತು!
ಹಾಗಾಗಿ ಅದರ ಸೀಕ್ವೆಲ್ ಮಾಡೋದು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭ ಎಂದು ಕೊಂಡು ಸಂಪೂರ್ಣ ಸಪ್ಪೆ ಸಿನಿಮಾ ಮಾಡಿದ್ದಾರೆ ನಾಗಶೇಖರ್
Source : Vishwavani Daily News Paper
ಹರಿ ಪರಾಕ್
ತುಂಟರಗಾಳಿ
ಸಿನಿಗನ್ನಡ
ಪ್ರೇಮಿಗಳ ಪಾಲಿನ ಭಗವದ್ಗೀತಾ ಎನ್ನಿಸಿಕೊಳ್ಳದಿದ್ದರೂ ಹಲವು ವರ್ಷಗಳ ಹಿಂದೆ ಬಂದ ‘ಸಂಜು ವೆಡ್ಸ್ ಗೀತಾ’ ಚಿತ್ರ ಕ್ಲಾಸಿಕ್ ಪ್ರೇಮಕಥೆ ಎನ್ನಿಸಿಕೊಂಡಿತ್ತು. ಆ ಚಿತ್ರದಲ್ಲಿ ನಾಯಕಿ ಗೆ ಶ್ವಾಸಕೋಶದ ಸಿಕ್‌ನೆಸ್ ಇರುತ್ತೆ. ಆದ್ರೆ ಈಗಿನ ಚಿತ್ರ ಕ್ಲಾಸಿಕ್ ಅನ್ನಿಸಿಕೊಳ್ಳದೇ ಇರೋಕೆ ಅದು ಕಾರಣ ಅಲ್ಲ.
ಮೂಲ ಚಿತ್ರದ ಯಶಸ್ಸಿನ ಗುಂಗಿನಲ್ಲಿ ಮತ್ತೆ ಅಂಥದ್ದೇ ರಸದೌತಣ ಸಿಗುತ್ತೆ ಅಂತ ನಂಬಿ ಕೊಂಡು ನೀವು ಚಿತ್ರಮಂದಿರಕ್ಕೆ ಹೋದರೆ ನಿಮಗೆ ಸಿಗೋದು ರಸದೌತಣ ಅಲ್ಲ, ಬದ ಲಾಗಿ ಆಸ್ಪತ್ರೆ ಊಟ. ಅಂದ್ರೆ, ಊಟ ಹೆಲ್ದಿಯಾಗೇನೋ ಇರುತ್ತೆ. ಆದ್ರೆ ಟೇ ಇಲ್ಲ. ನಿರ್ದೇಶಕ ನಾಗಶೇಖರ್ ಅವರು ತಾವು ಅಂದುಕೊಂಡಂತೆ ಈ ಚಿತ್ರವನ್ನು ಮಾಡಲಾ ಗಲಿಲ್ಲವೋ ಏನೋ ಗೊತ್ತಿಲ್ಲ,
ಆದರೆ ಸಂಜು ವೆಡ್ಸ್ ಗೀತಾ ಪ್ರೇಕ್ಷಕರು ಅಂದುಕೊಂಡಂತೆ ಮಾತ್ರ ಖಂಡಿತಾ ಆಗಿಲ್ಲ. ಮೊದಲು ಮಾಡಿದ ಚಿತ್ರ ಹಿಟ್ ಆಗಿದೆ. ಹಾಗಾಗಿ ಅದರ ಸೀಕ್ವೆಲ್ ಮಾಡೋದು ಬಾಳೆ ಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭ ಎಂದು ಕೊಂಡು ಸಂಪೂರ್ಣ ಸಪ್ಪೆ ಸಿನಿಮಾ ಮಾಡಿzರೆ ನಾಗಶೇಖರ್. ಇಡ್ಲಿ, ಐಡಿಎಲ್‌ವೈ ಅಂದ್ರೆ ‘ಐ ಡೀಪ್ಲಿ ಲವ್ ಯೂ’ ಅನ್ನೋ ವಿವರಣೆ ಕೊಟ್ಟಿರುವ ನಾಗಶೇಖರ್ ತುಂಬಾ ಸಾಫ್ಟ್ ಸೀದಾ ಕಥೆಗೆ ಒಗ್ಗರಣೆಯನ್ನೇ ಹಾಕಿಲ್ಲ.
ಸಿನಿಮಾದಡೆ ಇಲ್ಲ. ಹಾಗಾಗಿ ಅದು ಪ್ರೇಕ್ಷಕನ ಎದೆಯ ಆಳಕ್ಕೆ ಇಳಿಯೋದಿಲ್ಲ, ಇಂಪಾದ ಡ್ಯುಯೆಟ್‌ಗಳು ಇರೋ ರುಚಿಕರ ಊಟದ ಬದಲು ಡಯಟ್ ನಲ್ಲಿರೋ ಪ್ರೇಮಿಗಳ ಕಥೆ ಯಂತೆ ಸಪ್ಪೆಯಾಗಿದೆ. ಚಿತ್ರದ ಪ್ರೇಮಕಥೆಯ ನಡುವೆ ಶಿಡ್ಲಘಟ್ಟದ ಸಿಲ್ಕ್ ಅನ್ನು ಜನಪ್ರಿಯಗೊಳಿಸೋ ಯತ್ನವನ್ನೂ ಮಾಡ ಲಾಗಿದೆ. ಹಾಗಂತ ನಿರ್ದೇಶಕರು ಸಿನಿಮಾಗೆ ‘ಸಿಲ್ಕೀ ಟಚ್’ ಕೊಟ್ಟಿದ್ದಾರೆ ಅನ್ನೋಕೆ ಆಗಲ್ಲ.
ಒಟ್ಟಾರೆ ಹೇಳೋದಾದ್ರೆ, ‘ಸೀಕ್ವೆಲ್’ ಸಿನಿಮಾ ಮಾಡುವಾಗ ಹಳೆಯ ಸಿನಿಮಾದ ಕ್ವಾಲಿಟಿಗೆ ಕನಿಷ್ಠಪಕ್ಷ ‘ಈಕ್ವಲ್’ ಅನ್ನಿಸಿ ಕೊಳ್ಳುವ ಕಂಟೆಂಟ್ ಮತ್ತು ಎಫರ್ಟ್ ಬೇಕಾಗುತ್ತದೆ. ಆದರೆ ‘ಸಂಜು ವೆಡ್ಸ್ ಗೀತಾ-೨’ ಸಿನಿಮಾ ದಲ್ಲಿ ಹಳೆಯ ಸಿನಿಮಾದ ಮ್ಯಾಜಿಕ್ ಮೈನಸ್ ಆಗಿ ರೋದು ವಿಪರ್ಯಾಸ.
ಲೂಸ್ ಟಾಕ್-ಐಐಟಿ ಬಾಬಾ
ನೀವು ಐಐಟಿಯಲ್ಲಿ ಓದಿ ಆಮೇಲೆ ಬಾಬಾ ಆಗಿದ್ದು ಯಾಕೆ?
- ಏನ್ ಮಾಡೋದು? ಓದೋದೇನೋ ಓದಿದೆ. ಆದ್ರೆ ಅಧ್ಯಾತ್ಮ ಬಾ, ಬಾ ಅಂತ ಕರೀತಾ ಇತ್ತು. ಅದಕ್ಕೇ ಬಾಬಾ ಆದೆ.
ಆದ್ರೆ, ನಿಮ್ಮನ್ನ ಐಐಟಿಯಿಂದ ಅಧ್ಯಾತ್ಮಕ್ಕೆ ಸೆಳೆದ ವಿಷಯ ಯಾವುದು?
- ಐಐಟಿಯಲ್ಲಿ ಎರಡೆರಡು ‘ಐ’ ಇದ್ದಾವೆ. ಹಾಗಾಗಿ ‘ಐ’ ಅನ್ನೋದನ್ನ, ಅಂದ್ರೆ ‘ನಾನು’ ಅನ್ನೋ ವ್ಯಾಮೋಹವನ್ನ ಬಿಡಬೇಕು ಅಂದುಕೊಂಡಿದ್ದರಿಂದ ಇದು ಸಾಧ್ಯ ಆಯ್ತು.
ವ್ಯಾಮೋಹ ಅಂದಿದ್ದಕ್ಕೆ ನೆನಪಾಯ್ತು. ಐಐಟಿ ಓದುವಾಗ ನಿಮಗೆ ಯಾವ ಹುಡುಗಿ ಮೇಲೂ ಲವ್ ಆಗಲಿಲ್ವಾ?
- ಆಗ ಲವ್ ಆಗಿದ್ದಿದ್ರೆ ನಾನು ಈಗ ಐಐಟಿ ಬಾಬಾ ಆಗಿರ್ತಾ ಇರಲಿಲ್ಲ. ಐಐಟಿ ಡ್ರಾಪ್ ಔಟ್ ಬಾಬಾ ಆಗಿ, ಐ ಡ್ರಾಪ್ ಹಾಕ್ಕೊಳ್ಳದೇ ಅಳ್ತಾ ಇರ್ತಿದ್ದೆ.
ಸರಿ, ಐಐಟಿ ಜೀವನಕ್ಕೂ ಈ ಜೀವನಕ್ಕೂ ಏನು ವ್ಯತ್ಯಾಸ?
- ಆವಾಗ ಐಐಟಿ, ಈಗ ಆಗಾಗ ಗಾಂಜಾ ಸೇದಿ ಹೈ, ಹೈ ಟಿ. ಐಐಟಿ ಯಾರ್ ಬೇಕಾದ್ರೂ ಓದ್ತಾರೆ. ಅದೊಂಥರಾ ಕುಂಬಳಕಾಯಿ ಮೇಳ ಇದ್ದಂಗೆ. ಅದಕ್ಕಿಂತ ಕುಂಭಮೇಳಕ್ಕೆ ಬರೋದು ಗ್ರೇಟು.
ಆದ್ರೂ, ನೀವು ಬಾಬಾ ಆಗಿದ್ರಿಂದ ಒಬ್ಬ ಪ್ರತಿಭಾವಂತ ಹುಡುಗನಿಗೆ ಐಐಟಿ ಸೀಟು ಸಿಗೋದನ್ನ ತಪ್ಪಿಸಿದಂತೆ ಆಗಲಿಲ್ವೇ?
- ಏನ್ ಮಾಡೋಕಾಗಲ್ಲ. IT's all right
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಹೆಂಡತಿಯ ಮಹಿಳಾ ಸಮಾಜದ ಗೆಳತಿಯರೆ ಸೇರಿಕೊಂಡು ಒಂದು ಕಪಲ್ ಪಾರ್ಟಿ ಏರ್ಪಡಿಸಿದರು. ಪಾರ್ಟಿಯ ದಿನ ಎಲ್ಲರೂ ಗೆಳೆಯರೊಬ್ಬರ ಮನೆಯಲ್ಲಿ ಸೇರಿ ದರು. ಅಲ್ಲಿ ಮನರಂಜನೆ, ಊಟ, ಡ್ಯಾ ಎಲ್ಲವೂ ಆದ ನಂತರ ಏನಾದರೂ ಗೇಮ್ ಆಡೋಣ ಅಂತ ಎಲ್ಲರೂ ಮಾತಾಡಿಕೊಂಡರು.
ಆಗ ಖೇಮುಶ್ರೀ, “ನಮ್ಮೆಲ್ಲರ ಗಂಡಂದಿರು ನಮ್ಮನ್ನ ಎಷ್ಟು ಪ್ರೀತಿಸುತ್ತಾರೆ ಅಂತ ತಿಳ್ಕೊಳ್ಳೋದಕ್ಕೆ ಒಂದು ಆಟ ಆಡೋಣ" ಅಂದ್ಳು. ಅದರ ಪ್ರಕಾರ ಎಲ್ಲಾ ಹೆಂಡತಿಯರು ಅವರವರ ಗಂಡಂದಿರಿಗೆ ಉತ್ತರಿಸಲು ಕಷ್ಟ ಆಗುವಂಥ ಪ್ರಶ್ನೆ ಕೇಳಬೇಕು ಎಂದಾಯ್ತು. ಅದರ ಜತೆಗೆ ಆ ಪ್ರಶ್ನೆಯಲ್ಲಿ ಆಯಾ ಗಂಡ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆ ಅಂತನೂ ಎಲ್ಲರಿಗೂ ಗೊತ್ತಾಗಬೇಕು ಎಂದು ತೀರ್ಮಾನ ಆಯಿತು. ಸರಿ, ಒಬ್ಬೊಬ್ಬರದ್ದೇ ಸರದಿ ಶುರುವಾಯ್ತು.
ಎಲ್ಲರೂ ಗಂಡಂದಿರನ್ನು ಪ್ರಶ್ನೆ ಕೇಳೋಕೆ ಶುರು ಮಾಡಿದ್ರು. “ನಿಮಗೆ ನಾನು ಮುಖ್ಯನಾ, ನಿಮ್ಮ ತಾಯಿ ಮುಖ್ಯನಾ?" ಎಂಬ ಟಿಪಿಕಲ್ ಪ್ರಶ್ನೆಯಿಂದ ಆಟ ಶುರುವಾಯಿತು. ಎಲ್ಲರೂ ಹೀಗೆ ಕೇಳ್ತಾ ಹೋದರು. ಅದಕ್ಕೆ ತಕ್ಕಂತೆ, ಸತ್ಯನೋ ಸುಳ್ಳೋ, ಒಟ್ಟಿನಲ್ಲಿ ತಮ್ಮ ತಮ್ಮ ಹೆಂಡತಿಯರನ್ನು ಮೆಚ್ಚಿಸುವಂಥ ಉತ್ತರಗಳನ್ನು ಕೊಟ್ಟು ಎಲ್ಲ ಗಂಡಂದಿರು ತಮಗೆ ಹೆಂಡತಿ ಮೇಲೆ ಪ್ರೀತಿ ಇದೆ ಅಂತ ನಿರೂಪಿಸುತ್ತಾ ಹೋದರು. ಕೊನೆಯಲ್ಲಿ, ಪಾರ್ಟಿ ಆಯೋಜಿಸಿ ಈ ಆಟವನ್ನು ಶುರುಮಾಡಿದ ಖೇಮುಶ್ರೀ ಸರದಿ ಬಂತು. ಎಲ್ಲರೂ ಬರೀ ಸುಲಭದ ಪ್ರಶ್ನೆ ಕೇಳ್ತಾ ಇದ್ದಾರೆ.
ನಾನು ನನ್ನ ಗಂಡನನ್ನು ಸಿಕ್ಕಿ ಹಾಕಿಸುವಂಥ ಪ್ರಶ್ನೆ ಕೇಳಬೇಕು ಅಂದುಕೊಂಡ ಖೇಮು ಶ್ರೀ, ಖೇಮುಗೆ ತನ್ನ ಪ್ರಶ್ನೆ ಕೇಳಿದಳು, “ನಿಮಗೆ ಒಂದು ದಿನ 5 ಕೋಟಿ ರು. ಲಾಟರಿ ಹೊಡೆ ಯುತ್ತೆ. ನೀವು ತುಂಬಾ ಖುಷಿಯಾಗಿ ಆ ದುಡ್ಡು ತಗೊಂಡು ಮನೆಗೆ ಬಂದ ತಕ್ಷಣ, ನಿಮ ಗೊಂದು ಕಾಲ್ ಬರುತ್ತೆ- ‘ನಿಮ್ಮ ಹೆಂಡತಿಯನ್ನ ಕಿಡ್ನ್ಯಾಪ್ ಮಾಡಿದ್ದೇವೆ, 5 ಕೋಟಿ ಕೊಟ್ಟು ಕರ್ಕೊಂಡ್ ಹೋಗು’ ಅಂತ. ಆಗ ನೀವೇನ್ ಮಾಡ್ತೀರಾ?". ಈ ಪ್ರಶ್ನೆ ಕೇಳಿದ ಮೇಲೆ ಎಲ್ಲರೂ ಖೇಮು ಮುಖ ನೋಡೋಕೆ ಶುರು ಮಾಡಿದ್ರು. ಒಂದು ಕ್ಷಣ ಸುಮ್ಮನಿದ್ದ ಖೇಮು ನಂತರ ಹೇಳಿದ, “ಇದೆ ಆಗಲ್ಲ ಬಿಡು. ನನ್ನ ಅದೃಷ್ಟ ಒಂದೇ ದಿನ ಎರಡೆರಡು ಲಾಟರಿ ಹೊಡೆಯುವಷ್ಟು ಚೆನ್ನಾಗಿಲ್ಲ ಅಂತ ನಂಗೊತ್ತು".
ಲೈನ್ ಮ್ಯಾನ್
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
- ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಅಮೆರಿಕದಲ್ಲೂ ಬೆಂಕಿ, ಭಾರತದಲ್ಲೂ ಬೆಂಕಿ ಔರ್, ರಾಜು ಭಾಯ, ಕ್ಯಾ ಚಲ್ ರಹಾ ಹೈ?’ “ಆಜ್ ಕಲ್ ‘ಆಗ್’ ಜಲ್ ರಹಾ ಹೈ"
“ಹಾ, ವೋ ತೋ ಪತಾ ಹೈ, ಲೇಕಿನ್, ಔರ್ ಕ್ಯಾ ಚಲ್ ರಹಾ ಹೈ"
“ಔರ್....... ‘ಆಗ್’ ಹಿ ಜಲ್ ರಹಾ ಹೈ"
ಸಾರ್ವಕಾಲಿಕ ಸತ್ಯ
- ಕಿಡ್ನಿ ‘ಫೇಲ್’ ಆದ್ರೆ ಯೂರಿನ್ ‘ಪಾಸ್’ ಆಗಲ್ಲ.
ಇಗೋ ಜಾಸ್ತಿ ಇದ್ದು ದುರಹಂಕಾರ ತೋರಿಸುವವರದು
- ‘ನಾನ್’ ಸೆನ್ಸ್
ಯಾವಾಗಲೂ ನಾನು, ನಾನು ಅಂತನೇ ಮಾತಾಡೋನು
- ‘ಐ’ ಸ್ಪೆಷಲಿಸ್ಟ್
ಸಣ್ಣ ಸತ್ಯ
- ಸಣ್ ಹುಡುಗೀರನ್ನ ‘ಚಿಕ್’ ಹುಡುಗಿ ಅನ್ನಬಹುದು.. ಸಣ್ ಹುಡುಗರನ್ನಲ್ಲ..
ಕಾಡುಪಾಪಗಳ ಫೋಟೋ ತೆಗೆಯೋನು
- ವೈಲ್ಡ್ ಲೈಫ್ ಫೋಟೋಗ್ರಾಫರ್
ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು
- ಚೈಲ್ಡ್ ಲೈಫ್ ಫೋಟೋಗ್ರಾಫರ್
ಯಾರೋ ತಮ್ಮ ಮನೆಗೆ ‘ಆಶ್ಚರ್ಯ’ ನಿವಾಸ ಅಂತ ಹೆಸರಿಟ್ಟಿದ್ರು
- ಅದನ್ನ ನೋಡಿ ಡೌಟ್ ಆಯ್ತು, ಇವ್ರೇನ್ ಮನೆ ಕಟ್ಟಿದ್ದಾರೋ, ಇಲ್ಲಾ ‘ವಂಡರ್’ ಲಾ
ಕಟ್ಟಿದ್ದಾರೋ?!
ಇದನ್ನೂ ಓದಿ: Hari Paraak Column: ಎಲ್ಲಾ ಕಡೆ ಬರೀ ಮ್ಯಾಕ್ಸ್, ಟ್ಯಾನ್ಸ್‌ನದ್ದೇ ಟಾಕ್ಸ್