Hari Paraak Column: ಹನಿ ಹನಿ 'ಫ್ರೇಮ್' ಕಹಾನಿ
ಒಂದೊಮ್ಮೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕಿಳಿಯು ತ್ತಾರೆ. ಒಟ್ಟಿನಲ್ಲಿ ಫೇಸ್ ಬುಕ್‌ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟಗಳಿಗೆ ಕೊನೆ ಇರೋ ದಿಲ್ಲ. ಇಂಥವರ ಬಗ್ಗೆ ಅದೆಷ್ಟು ತಲೆಕೆಡಿಸಿಕೊಳ್ಳೋಕಾಗುತ್ತೆ? ಒಂದೆರಡು ಸಲ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರಂತೆ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾ ಗಲ್ಲ ಅನ್ನೋದೇ ಇಂಥವರ ಭಂಡಧೈರ್ಯ.

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಸಿನಿಗನ್ನಡ
ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲೆಂದೇ ಕೆಲವರಿದ್ದಾರೆ. ಅಭಿಮಾನಿಗಳ ಹೆಸರಲ್ಲಿ ದುರಭಿಮಾನ ತೋರಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅದರಲ್ಲೂ ಕೆಲವರು ವಿಕೃತ ಅಭಿಮಾನಿಗಳು ಎನಿಸುತ್ತದೆ. ಡಾ.ರಾಜ್‌ಕುಮಾರ್ ಮತ್ತು ಅವರ ಕುಟುಂಬದ ಬಗ್ಗೆ ಸುಖಾಸುಮ್ಮನೆ ಅಸಭ್ಯ ಪೋಗಳನ್ನು ಹಾಕಿ ವಿಕೃತಿ ಮೆರೆಯುವುದು ಕೆಲವರ ಚಟ. ಇದು ಮೊನ್ನೆ ‘ಅಪ್ಪು’ ಚಿತ್ರದ ಮರುಬಿಡುಗಡೆಯ ಸಮಯದಲ್ಲೂ ಆಯ್ತು. ಇಂಥವರಿಗೆ ರಾಜ್‌ಕುಮಾರ್ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಇಂಥ ವಿಕೃತಿಗೆ ಕಾರಣ ಹುಡುಕಿದಾಗ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಇಂಥವರಿಗೆ ಓದು, ಕೆಲಸ ಯಾವುದರಲ್ಲೂ ಆಸಕ್ತಿ ಇರೋದಿಲ್ಲ. ಯಾವ ಟ್ಯಾಲೆಂಟೂ ಇರೋದಿಲ್ಲ, ಹಾಗಾಗಿ ಫೇಸ್‌ಬುಕ್ ನಲ್ಲಿ ಗಮನ ಸೆಳೆಯಲು ಇಂಥ ಕೆಲಸಗಳಿಗೆ ಕೈ ಹಾಕುತ್ತಾರೆ. ಬೇಸರದ ಸಂಗತಿ ಅಂದ್ರೆ ಇದಕ್ಕೆ ಬಳಕೆ ಆಗ್ತಿರೋದು ‘ದರ್ಶನ್ ಅಭಿಮಾನಿಗಳು’ ಅನ್ನೋ ‘ಟ್ಯಾಗ್’.
ಇದನ್ನೂ ಓದಿ: Hari Paraak Column: ಶಿವಕುಮಾರ ಅಂತ ಹೆಸರಿಟ್ಟುಕೊಂಡು ಶಿವನ ಪೂಜೆಗೆ ಹೋಗೋದೂ ತಪ್ಪಾ ?
ಇಂಥವರು ತಮ್ಮ ನಟನ ಮೇಲಿನ ಅಭಿಮಾನದ ಹೆಸರಲ್ಲಿ ರಾಜ್‌ಕುಮಾರ್ ಅಷ್ಟೇ ಅಲ್ಲ, ವಿಷ್ಣು ವರ್ಧನ್ ಅವರನ್ನೂ ಬಿಡಲ್ಲ. ಇಂಥ ಕೆಲಸದಲ್ಲಿ ಅದೇನೋ ವಿಕೃತ ಆನಂದ ಇವರಿಗೆ. ಇಂಥವರ ಅಕೌಂಟ್‌ಗಳು ರಿಪೋರ್ಟ್ ಆಗಿ ಲಾಕ್ ಆದರೆ ಇನ್ನೊಂದು ಅಕೌಂಟ್ ಓಪನ್ ಮಾಡುತ್ತಾರೆ. ಫೇಸ್ -ಟು-ಫೇಸ್ ಯಾರೂ ಸಿಗಲ್ಲ ಎಂಬ ನಂಬಿಕೆಯಲ್ಲಿ ಅಶ್ಲೀಲವಾಗಿ ಮಾತನಾಡುತ್ತಾರೆ. ಒಂದೊಮ್ಮೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕಿಳಿಯುತ್ತಾರೆ. ಒಟ್ಟಿನಲ್ಲಿ ಫೇಸ್ ಬುಕ್‌ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟಗಳಿಗೆ ಕೊನೆ ಇರೋ ದಿಲ್ಲ. ಇಂಥವರ ಬಗ್ಗೆ ಅದೆಷ್ಟು ತಲೆಕೆಡಿಸಿಕೊಳ್ಳೋಕಾಗುತ್ತೆ? ಒಂದೆರಡು ಸಲ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರಂತೆ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾ ಗಲ್ಲ ಅನ್ನೋದೇ ಇಂಥವರ ಭಂಡಧೈರ್ಯ.
*
ಲೂಸ್ ಟಾಕ್ - ಹನಿ ಟ್ರ್ಯಾಪ್ ರಾಜಕಾರಣಿ
ಏನ್ ಸರ್, ಹನಿ ಟ್ರ್ಯಾಪ್ ವಿಷ್ಯ ಜೋರಾಗಿ ಕೇಳಿಸ್ತಾ ಇದೆ ಅಲ್ವಾ?
- ಏನ್ ಮಾಡೋದು. ಈ ಪರಿಸ್ಥಿತಿಯಲ್ಲಿ ರಾಜಣ್ಣ ಅವರ ‘ಜೇನಿನ ಹೊಳೆಯೋ’ ಹಾಡು ಹಾಡೋ ಕೂ ಭಯ ಆಗುತ್ತೆ. ಅಂದಹಾಗೆ ನಾನ್ ಹೇಳಿದ್ದು ಅಣ್ಣಾವ್ರ ಬಗ್ಗೆ ಕಣ್ರೀ, ನಮ್ ಸಚಿವ ರಾಜಣ್ಣ ಅವ್ರ್ ಬಗ್ಗೆ ಅಲ್ಲ.
ಓಹೋ, ಸರಿ, ನೀವ್ಯಾಕೆ ಇಷ್ಟ್ ಬೇಸರ ಮಾಡ್ಕೊಂಡಿದ್ದೀರಿ. ಮಾಡಿದೋರು ಅನುಭವಿಸ್ತಾರೆ.
ಹನಿಟ್ರ್ಯಾಪ್ ಅಂದ್ರೆ ನೀವು ತುಟಿ ಮುಟ್ಟಿ ನೋಡಿಕೊಳ್ಳೋದು ಯಾಕೆ?
- ಅಯ್ಯೋ, ಈಗ ಜನರ ಕಣ್ಣಿಗೆ ಎಲ್ಲರೂ ಹಂಗೇ ಕಾಣಿಸ್ತಾರೆ. ಮಾಡಿದ್ರೂ ಮಾಡದಿದ್ರೂ ಬೆಲೆ ತೆರಲೇಬೇಕು, ಇದೊಂಥರಾ ತುಟಿ ಭತ್ಯೆ.
ಇದರಲ್ಲಿ ಎಲ್ಲರನ್ನೂ ಸಿಕ್ಕಾಕಿಸ್ತಾರೆ ಅಂತೀರಾ?
- ಹೌದು ಮತ್ತೆ. ಇದು ತಮಗೆ ಆಗದವರನ್ನು ‘ಫ್ರೇಮ್’ ಮಾಡೋಕೆ ಮಾಡಿರೋ ಪ್ಲ್ಯಾನ್. ಹನಿ ಹನಿ ‘ಫ್ರೇಮ್’ ಕಹಾನಿ
ಮುಂದೆ ಏನಾಗಬಹುದು ನಿಮ್ಮ ಪ್ರಕಾರ?
-ಏನಾಗುತ್ತೆ. ಸುದೀಪ್ ಅವರಂಥವರು, ‘ಮಕ್ಕೀ’ ಆಯ್ತು ಈಗ ‘ಮಧುಮಕ್ಕೀ’ ಅಂತ ಹನಿಟ್ರ್ಯಾಪ್ ಬಗ್ಗೆ ಸಿನಿಮಾ ಮಾಡ್ತಾರೆ ಅಷ್ಟೇ.
ಹೋಗ್ಲಿ ಬಿಡಿ, ಇನ್ಮುಂದೆ ಆದ್ರೂ ಹುಷಾರಾಗಿರಿ
- ಖಂಡಿತಾ ಇರ‍್ಲೇಬೇಕು. ಇನ್ಮೇಲೆ ರೋಡಲ್ಲಿ ಯಾರಾದ್ರೂ ಡ್ರಾಪ್ ಕೇಳಿದ್ರೂ ಹುಷಾರಾಗಿ ರ‍್ಬೇಕು. ಯಾರಿಗೆ ಗೊತ್ತು ಅದು ಹನಿ ‘ಡ್ರಾಪ್’ ಇರಬಹುದು ಅಂತ. ಲೂಸ್ ಟಾಕ್ ಹನಿ ಟ್ರ್ಯಾಪ್ಡ್ ರಾಜಕಾರಣಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಒಂದ್ಸಲ ಕೆಲಸದ ನಿಮಿತ್ತ ಸ್ಪೇನ್‌ಗೆ ಹೋಗಿದ್ದ ಖೇಮು ಅಲ್ಲಿ ತಿಂಗಳುಗಟ್ಟಲೇ ಇರಬೇಕಿತ್ತು. ಆದರೆ, ಇಂಡಿಯಾದ ಊಟಕ್ಕೆ ಅಡಿಕ್ಟ್ ಆಗಿದ್ದ ಖೇಮುಗೆ ಅಲ್ಲಿನ ಊಟ ರುಚಿಸಿರಲಿಲ್ಲ. ಹಂಗಾಗಿ ವೀಕೆಂಡ್ ಗಳಲ್ಲಿ ಅಲ್ಲಿರೋ ಎಲ್ಲಾ ರೆಸ್ಟೋರೆಂಟ್‌ಗಳನ್ನೂ ಹುಡುಕಿಕೊಂಡು ಹೋಗಿ ಟೇ ಹೇಗಿದೆ ಅಂತ ನೋಡ್ತಿದ್ದ. ಹಿಂಗೇ ಒಮ್ಮೆ ಅಲ್ಲಿ ‘ಫೈಟಿಂಗ್ ಬುಲ್’ ಅನ್ನೋ ರೆಸ್ಟೋರೆಂಟ್ ಕಾಣಿಸಿತು.
ಇವತ್ತು ಇಲ್ಲಿನ ಟೇಸ್ಟ್ ಟೆಸ್ಟ್ ಮಾಡೋಣ ಅಂದುಕೊಂಡು ಒಳಗೆ ಹೋದ. ವೇಟರ್ ಬಂದು “ಏನು ಕೊಡ್ಲಿ?" ಅಂದ. ಅದಕ್ಕೆ ಖೇಮು, “ಇವತ್ತಿನ ಸ್ಪೆಷಲ್ ಏನಿದೆ ತಗೊಂಡ್ ಬಾ" ಅಂದ. ವೇಟರ್, ಒಂದು ಪ್ಲೇಟ್‌ನಲ್ಲಿ ಮೀಟ್ ತಂದಿಟ್ಟ. ಖೇಮು ಅದನ್ನು ತಿನ್ನತೊಡಗಿದ. ಮೊದಲ ಬಾರಿಗೆ ಖೇಮುಗೆ ಸ್ಪೇನ್ ಹೋಟೆಲ್‌ನ ಒಂದು ಡಿಷ್ ತುಂಬಾ ಇಷ್ಟ ಆಗಿಬಿಡ್ತು.
ವೇಟರ್‌ನ ಕರೆದು “ಇದು ಯಾವ ಡಿಷ್?" ಅಂತ ಕೇಳಿದ. ಅದಕ್ಕೆ ವೇಟರ್, “ಸರ್ ನಿಮಗೆ ಗೊತ್ತು, ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಫೇಮಸ್. ಇಲ್ಲಿ ಪ್ರತಿದಿನ ನಡೆಯುತ್ತೆ. ಇವತ್ತಿನ ಫೈಟರ್ ಸೋಲಿಸಿದ ಬುಲ್‌ನ ಟೆಸ್ಟಿಕಲ್ಸ ಇದು. ಟೆಸ್ಟಿಕಲ್ಸ್ -" ಅಂದ. ಅದಕ್ಕೆ ಖೇಮು, “ಟೇಸ್ಟ್ ತುಂಬಾ ಚೆನ್ನಾಗಿದೆ. ಇನ್ನೊಂದು ಪ್ಲೇಟ್ ಕೊಡು" ಅಂದ. ಅದಕ್ಕೆ ವೇಟರ್, “ಇಲ್ಲ ಸರ್, ಪ್ರತಿದಿನ ಒಂದ್ ಫೈಟ್ ನಡೆಯೋದು, ಒಂದೇ ಬುಲ್ ಸಿಗೋದು, ಮತ್ತೆ ನಾಳೆನೇ ಈ ಡಿಷ್ ಸಿಗೋದು, ಇದೇ ಟೈಮಿಗೆ ಬಂದು ವೆಯ್ಟ ಮಾಡಿದ್ರೆ ಸಿಗುತ್ತೆ" ಅಂದ.
ಸರಿ, ಖೇಮು ಮರುದಿನ ಅದೇ ಸಮಯಕ್ಕೆ ಹೋಗಿ ಅದನ್ನೇ ಆರ್ಡರ್ ಮಾಡಿದ. ವೇಟರ್ ಪ್ಲೇಟ್ ತಂದಿಟ್ಟ. ಎಲ್ಲಾ ತಿಂದ ಮೇಲೆ ವೇಟರ್‌ನ ಕರೆದು, “ಟೇಸ್ಟೇನೋ ಚೆನ್ನಾಗಿತ್ತು. ಆದರೆ ನಿನ್ನೆ ನೀನು ೊಟ್ಟ ಪೀಸ್‌ಗಳ ಸೈಜ್ ದೊಡ್ಡದಿತ್ತು. ಇವತ್ತು ತುಂಬಾ ಸಣ್ಣವಿದ್ದವು, ಯಾಕೆ?" ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ-“ಏನ್ ಮಾಡೋದು ಸರ್, ಒಂದೊಂದ್ ಸಲ ಫೈಟ್‌ನಲ್ಲಿ ಬುಲ್ ಕೂಡಾ ಗೆಲ್ಲುತ್ತೆ"
ಲೈನ್ ಮ್ಯಾನ್
ಕ್ರಿಯೇಟಿವ್ ಸತ್ಯ - ಹೊಟ್ಟೆ ಖಾಲಿ ಇದ್ರೆ ತಲೆ ಮೆಸೇಜ್ ಕಳಿಸುತ್ತೆ ಹಸಿವಾಗಿದೆ ಅಂತ. ತಲೆ ಖಾಲಿ ಇದೆ, ಏನೂ ಮಾಡೋಕಾಗಲ್ಲ ಅಂತ ಅನ್ನಿಸಿದಾಗ ಹೊಟ್ಟೆ ಮೆಸೇಜ್ ಕಳಿಸುತ್ತೆ, ಹೊಟ್ಟೆ ಪಾಡಿಗೆ ಏನಾದ್ರೂ ಕೆಲಸ ಮಾಡ್ಲೇಬೇಕು, ಮುಚ್ಕೊಂಡ್ ಮಾಡು ಅಂತ.
ಕಾನ್ಫಿಡೆನ್ಸ್ ಮ್ಯಾಟರ್
- ಲೈಫಲ್ಲಿ ಆತ್ಮವಿಶ್ವಾಸ ಮುಖ್ಯ. ಘಟಞZಠಿಟದವರನ್ನ ನೋಡಿ ಕಲೀಬೇಕು. ಹಬ್ಬದ ದಿನಾನೂ,
‘ಊಟ ಆರ್ಡರ್ ಮಾಡಲ್ವಾ?’ ಅಂತ ಮೆಸೇಜ್ ಮಾಡ್ತಾರೆ..
ಫೆಸ್ಟಿವಲ್ ಟೈಮ್
- ಹಬ್ಬಗಳ ದಿನ ಹುಷಾರಾಗಿರಿ. ರಿಸ್ಕ್ ತಗೋಳ್ಳೋಕೆ ಹೋಗ್ಬಾರದು.. ಯಾಕಂದ್ರೆ ಹಬ್ಬಗಳ ಹಿಂದೆ ಮುಂದೆ ಏನೇ ಸಡನ್ ಆಗಿ ಕಷ್ಟ ಬಂದ್ರೂ, ಪ್ರಾಣ ಹೋಗುತ್ತೆ ಅಂದ್ರೂ ಸಹಾಯಕ್ಕೆ ಯಾವ ಸ್ನೇಹಿ ತರೂ ಬರಲ್ಲ. ನೀವು need help urgent ಅಂತ ಎಷ್ಟ್ ಮೆಸೇಜ್ ಹಾಕಿದ್ರೂ ರಿಪ್ಲೈ ಮಾಡಲ್ಲ. ಒಂದ್ ವೇಳೆ ಮಾಡಿದ್ರೂ, ಮ್ಯಾಕ್ಸಿಮಮ್ ಅಂದ್ರೆ .. Thank u, same to u ಅಂತ ರಿಪ್ಲೈ ಮಾಡ್ತಾರೆ ಅಷ್ಟೇ.
ಗುಂಪು ಗಲಭೆಯಲ್ಲಿ ಸತ್ತವರು
- ಗುಂಪಲ್ಲಿ ‘ಗೋವಿಂದ’
ಗಂಡ ಹೆಂಡ್ತಿ ಮ್ಯಾಟ್ರು
- ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್
ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ
ಕಿಸ್ಸಿಂಗ್ ಸೀನ್ ಜಾಸ್ತಿ ಇರೋ ಯುವ ಪ್ರೇಮಕಥೆ ಇರೋ ಸಿನಿಮಾ ಟೈಟಲ್
- ಜೈ ‘ಜವಾನ್’, ಜೈ ಕಿಸ್-ಆನ್
ಒಂದೇ ಹಕ್ಕಿ ಮೇಲೆ ಕಣ್ಣಾಕಿರೋ ಇಬ್ಬರು ಹುಡುಗರು
- ಸಮಾನ ಲುಕ್ಕಿಗಳು
ಯಾರಿಗೂ ಗೊತ್ತಿಲ್ಲದ ವಿಷಯಗಳ ಮೇಲೆ ‘ಬೆಳಕು’ ಚೆಲ್ಲುವವರು
- ‘ಲೈಟ್’ ಮೈಂಡೆಡ್ ಪೀಪಲ್