Hari Paraak Column: ಶಿವಕುಮಾರ ಅಂತ ಹೆಸರಿಟ್ಟುಕೊಂಡು ಶಿವನ ಪೂಜೆಗೆ ಹೋಗೋದೂ ತಪ್ಪಾ ?
ನಾಟಕ ಚೆನ್ನಾಗಿಲ್ಲ ಅಂತ ಜನ ಬರದೇ ಇದ್ದಾಗ, ಅದರ ಮಾಲೀಕ ‘ಎಂಟ್ರಿ ಫ್ರೀ’ ಅಂತ ಮಾಡಿದ ನಂತೆ. ಆ ನಾಟಕ ಎಷ್ಟ್ ಕೆಟ್ಟದಾಗಿತ್ತು ಅಂತ ಅವನಿಗೂ ಗೊತ್ತಿತ್ತು. ಹಾಗಾಗಿ, ಜನ ಥಿಯೇಟರ್ ಒಳಗೆ ಹೋದ ಮೇಲೆ ಅಲ್ಲಿಂದ ಅರ್ಧಕ್ಕೇ ಎದ್ದು ಹೋಗಬೇಕು ಅಂದ್ರೆ ಮಾತ್ರ ಸಾವಿರ ರುಪಾ ಯಿ ಕೊಡ ಬೇಕು ಅಂತ ರೂಲ್ ಮಾಡಿದ್ನಂತೆ. ಈ ಚಿತ್ರದ ಕಥೆಯೂ ಒಂಥರಾ ಆ ನಾಟಕದ ಕಥೆಗೆ ತೀರಾ ಹತ್ತಿರವಾಗಿದೆ ಅನಿಸಿದರೆ ಸುಳ್ಳಲ್ಲ ಬಿಡಿ

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಸಿನಿಗನ್ನಡ
ಜನ ಚಿತ್ರಮಂದಿರಗಳಿಗೆ ಬರ್ತಾ ಇಲ್ಲ ಅನ್ನೋ ಈ ಕಾಲದಲ್ಲಿ, ಸಿನಿಮಾರಂಗ ವಿಭಿನ್ನ ತಂತ್ರಗಳ ಮೂಲಕ ಜನರನ್ನು ಸಿನಿ ಮಾಕ್ಕೆ ಮತ್ತೆ ಕರೆತರಲು ಯತ್ನಿಸುತ್ತಿದೆ. ಅಂಥದ್ದೇ ಒಂದು ವಿಭಿನ್ನ ಪ್ರಯತ್ನ ‘ನಾಕ್ ಔಟ್’ ಅನ್ನೋ ಕನ್ನಡ ಚಿತ್ರದ್ದು. ಜನರನ್ನು ದುಡ್ಡು ಕೊಟ್ಟು ಕರೆತಂದು, ಅವರಿಗೆ ಎಕ್ ಟ್ರಾ ಕಾಸು, ಸ್ನ್ಯಾಕ್ಸ್ ಕೊಟ್ಟು ಬಲವಂತವಾಗಿ ಚಿತ್ರ ಮಂದಿರದಲ್ಲಿ ಕೂರಿಸೋ ಟ್ರೆಂಡ್ ಈಗ ಇದೆ. ಇದರ ಪ್ರಕಾರ ಅವರೆ ಸಿನಿಮಾ ಮುಗಿ ದಾಕ್ಷಣ ಹೊರಬಂದು ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೈಕ್ ಮುಂದೆ ‘100 ಡೇಸ್ ಗ್ಯಾರಂಟಿ, ಸೂಪರ್ ಹಿಟ್ ಸಿನಿಮಾ’ ಅಂತ ಘೋಷಿಸಿ ಮನೆಗೆ ಹೋಗೋ ದಾರಿ ಯಲ್ಲಿ ಒಂದು ಕ್ವಾರ್ಟರ್ ಬಿಟ್ಕೊಂಡ್ ಹೋಗ್ತಾರೆ. ಆದ್ರೆ ಅದೇ ಸಿನಿಮಾಗೆ ಒಂದು ಶೋ ಬಿಟ್ಕೊಂಡ್ ಹೋದ್ರೆ ಅಲ್ಲಿ ಜನನೇ ಇರಲ್ಲ. ಆದರೆ ಇಂಥದ್ದೆಲ್ಲ ಗಿಮಿಕ್ ಬೇಡ ಅಂತ ತ್ತೀಚೆಗೆ ಒಂದು ಚಿತ್ರದ - ಹಾಫ್ ಫ್ರೀ, ಸಿನಿಮಾ ಇಷ್ಟ ಆದ್ರೆ ಸೆಕೆಂಡ್ ಹಾಫ್ ನೋಡೋಕೆ ಒಳಗೆ ಹೋಗುವಾಗ ಟಿಕೆಟ್ ತಗೊಳ್ಳಿ ಅಂತ ಆಫರ್ ಬಿಟ್ಟಿದ್ದರು. ಇದನ್ನ ನೋಡಿದ್ರೆ, ಒಂದು ನಾಟಕ ಕಂಪನಿಯ ಹಳೇ ಜೋಕು ನೆನಪಾಗುತ್ತೆ. ನಾಟಕ ಚೆನ್ನಾಗಿಲ್ಲ ಅಂತ ಜನ ಬರದೇ ಇದ್ದಾಗ, ಅದರ ಮಾಲೀಕ ‘ಎಂಟ್ರಿ ಫ್ರೀ’ ಅಂತ ಮಾಡಿದನಂತೆ. ಆ ನಾಟಕ ಎಷ್ಟ್ ಕೆಟ್ಟ ದಾಗಿತ್ತು ಅಂತ ಅವನಿಗೂ ಗೊತ್ತಿತ್ತು. ಹಾಗಾಗಿ, ಜನ ಥಿಯೇಟರ್ ಒಳಗೆ ಹೋದ ಮೇಲೆ ಅಲ್ಲಿಂದ ಅರ್ಧಕ್ಕೇ ಎದ್ದು ಹೋಗಬೇಕು ಅಂದ್ರೆ ಮಾತ್ರ ಸಾವಿರ ರುಪಾಯಿ ಕೊಡ ಬೇಕು ಅಂತ ರೂಲ್ ಮಾಡಿದ್ನಂತೆ. ಈ ಚಿತ್ರದ ಕಥೆಯೂ ಒಂಥರಾ ಆ ನಾಟಕದ ಕಥೆಗೆ ತೀರಾ ಹತ್ತಿರವಾಗಿದೆ ಅನಿಸಿದರೆ ಸುಳ್ಳಲ್ಲ ಬಿಡಿ.
ಇದನ್ನೂ ಓದಿ: Hari Paraak Column: 144 ವರ್ಷಕ್ಕೊಮ್ಮೆ ಬರುತ್ತೆ ಅಂತ, ಸೆಕ್ಷನ್ 144 ಜಾರಿ ಮಾಡೋಕಾಗುತ್ತಾ?
ಲೂಸ್ ಟಾಕ್ -ಡಿ.ಕೆ.ಶಿವಕುಮಾರ್
ಏನ್ ಸರ್, ಯಾಕೋ ನಿಮ್ಮ ಮನಸ್ಸು ಬಿಜೆಪಿ ಕಡೆ ವಾಲ್ತಾ ಇದೆಯಲ್ಲ?
- ಅವೆಲ್ಲ ಸೀನೇ ಇಲ್ಲ. ಜನರು ನನ್ನ ಬಂಡೆ ಅಂತ ಕರೀತಾರೆ, ಭಂಡ ಅಂತ ಅಲ್ಲ. ‘ನೀಲ’ ಕಂಠನ ಪೂಜೆಗೆ ಹೋಗಿದ್ದೇ ಅಷ್ಟೇ. ‘ಬ್ಲೂ’ಜೆಪಿಗೆ ಹೋಗಲ್ಲ.
ಬಿಜೆಪಿಯವರ ಪಾಳಯದ ಕಾರ್ಯಕ್ರಮಕ್ಕೆ ಯಾಕೆ ಹೋಗಿದ್ರಿ ಮತ್ತೆ?
- ಅಯ್ಯೋ, ಅವರ ಆಶ್ರಮ ‘ಕನಕಪುರ’ ರೋಡಲ್ಲಿದೆ ಅಂತ ಹೋಗಿದ್ದೆ, ಅಷ್ಟೇ.
ಅಂದಹಾಗೆ ಅಮಿತ್ ಶಾ ಅವರಿಗೆ ಚಪ್ಪಲಿ ಬಿಟ್ಟು ನಮಸ್ಕಾರ ಮಾಡಿದ್ರಿ ಅಂತ
ಗುದ್ದಿದೆಯಲ್ಲ?
-ಅಯ್ಯೋ, ದೊಡ್ಡೋರಿಗೆ ಚಪ್ಪಲಿ ಬಿಟ್ಟು ನಮಸ್ಕಾರ ಮಾಡೋದು ತಪ್ಪಾ, ನುವ್ವೇ ಚಪ್ಪಾಲಿ
ಈಗೇನು ನೀವು ಬಿಜೆಪಿಗೆ ಹೋಗ್ತೀರೋ ಇಲ್ವೋ?
- ಅದೇನೋ ಅಂತಾರಲ್ಲ, ರಾತ್ರಿಯೆಲ್ಲ ಜಾಗರಣೆ ಮಾಡಿ ಶಿವಕುಮಾರ್ ಬಿಜೆಪಿನೋ,
ಕಾಂಗ್ರೆಸ್ಸೋ ಅಂತ ಕೇಳಿದ್ರಂತೆ, ಹಂಗಾಯ್ತು.
ಏನೂ ಅರ್ಥ ಆಗ್ಲಿಲ್ಲ, ಆದ್ರೂ ನಿಮ್ಮ ಶಿವರಾತ್ರಿ ಔಟಿಂಗ್ ತುಂಬಾ ಸದ್ದು ಮಾಡ್ತಾ ಇದೆ ಕಣ್ರೀ?
-ಅಯ್ಯೋ, ಶಿವಕುಮಾರ ಅಂತ ಹೆಸರಿಟ್ಟುಕೊಂಡು ಶಿವನ ಪೂಜೆಗೆ ಹೋಗೋದೂ ತಪ್ಪಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಎಂಜಿನಿಯರಿಂಗ್ ಓದಿದ್ದ ಖೇಮು ಮತ್ತೆ ಸೋಮು ಒಂದ್ ಇಂಟರ್ವ್ಯೂಗೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಖೇಮುಗಂತೂ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿಬಾರಿಯಂತೆ ಈ ಬಾರಿಯೂ ಯಾರು ಮೊದಲು ಒಳಗೆ ಹೋಗಿ ಬರ್ತಾರೋ ಅವರು, ಸಂದರ್ಶನ ಕೊಠಡಿಯಿಂದ ಹೊರಬಂದ ಮೇಲೆ ಅಲ್ಲಿ ಕೇಳಿದ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಹೇಳಬೇಕು ಅಂತ ಕರಾರು ಆಗಿತ್ತು. ಸರಿ ಇಬ್ಬರೂ ಹೋಗಿ ಇಂಟರ್ವ್ಯೂಗೆ ರೆಡಿ ಆಗಿ ಕೂತರು. ಈ ಬಾರಿ ಮೊದಲು ಸೋಮುವನ್ನು ಒಳಗೆ ಕರೆದರು. ಒಳಗೆ ಹೋಗಿ ಕೂತ ಸೋಮುವನ್ನು ಸಂದರ್ಶಕರು ಪ್ರಶ್ನಿಸಲು ಶುರುಮಾಡಿದರು. ಎಲ್ಲಾ ವೈಯಕ್ತಿಕ ವಿವರಗಳನ್ನು ಕೇಳಿದ ಮೇಲೆ ‘ನಾಲೆಡ್ಜ್ ಬೇ’ ಪ್ರಶ್ನೆಗಳ ಸರದಿ ಆರಂಭವಾಯಿತು...
ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಅದರ ಕಂಪಾರ್ಟ್‌ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ?" “ನಾನಿರುವ ಕಂಪಾರ್ಟ್ ಮೆಂಟ್‌ನ ಕಿಟಕಿ ತೆಗೀತೀನಿ"
“ಸರಿ, ಈಗ ಕಿಟಕಿಯ ವಿಸ್ತೀರ್ಣ 1.5 ಚದರ ಮೀಟರ್ ಅಂದುಕೊಳ್ಳೋಣ. ಕಂಪಾರ್ಟ್‌ಮೆಂಟ್‌ನ ವಾಲ್ಯೂಮ್ 12 ಮೀಟರ್ ಕ್ಯೂಬ್ ಇದೆ, ಟ್ರೈನ್ ಗಂಟೆಗೆ 80 ಕಿ.ಮೀ. ವೇಗದಲ್ಲಿ ಉತ್ತರಮುಖವಾಗಿ ಚಲಿಸುತ್ತಿದೆ. ಗಾಳಿ ದಕ್ಷಿಣದ ಕಡೆಯಿಂದ 5 ಕಿ.ಮೀ. ವೇಗ ದಲ್ಲಿ ಬೀಸುತ್ತಿದೆ. ಹಾಗಾದ್ರೆ, ನೀವು ಕಿಟಕಿ ತೆಗೆದ ಮೇಲೆ ಕಂಪಾರ್ಟ್‌ಮೆಂಟ್ ಕೂಲ್ ಆಗೋಕೆ ಎಷ್ಟು ಹೊತ್ತು ಬೇಕು?"
ಸೋಮುಗೆ ಪಿತ್ತ ನೆತ್ತಿಗೇರಿ, “ಇದಕ್ಕಿಂತ ಕೆಲಸ ಕೊಡಲ್ಲ ಅಂತ ನೇರವಾಗಿ ಹೇಳಿ" ಅಂತ ಬಯ್ದು ಎದ್ದು ಬಂದ. ಹೊರಗೆ ಬಂದ ಸೋಮು ಮುಖ ನೋಡಿದ ಖೇಮುಗೆ ಗಾಬರಿ ಆಯ್ತು. ಆದ್ರೂ “ಏನ್ ಪ್ರಶ್ನೆ ಕೇಳಿದ್ರು?" ಅಂದಿದ್ದಕ್ಕೆ ಸೋಮು, ಅವರು ಕೇಳಿದ ಪ್ರಶ್ನೆ ಹೇಳಿದ. ಖೇಮು ಅದಕ್ಕೆ ಉತ್ತರ ಏನು ಅಂತ ಹುಡುಕಿಕೊಳ್ಳುವಷ್ಟರಲ್ಲಿ ಒಳಗಿನಿಂದ ಅವನಿಗೆ ಕರೆ ಬಂತು. ಒಲ್ಲದ ಮನಸ್ಸಿನಿಂದಲೇ ಖೇಮು ಒಳಗೆ ಹೋದ. ಮಾಮೂಲಿ ಪ್ರಶ್ನೆಗಳ ಸರದಿ ಮುಗಿಯಿತು. ಆಕ್ಚುವಲ್ ಪ್ರಶ್ನೆಗಳು ಶುರುವಾದ್ವು.
“ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಅದರ ಕಂಪಾರ್ಟ್‌ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತ್ತೀರಿ?"
“ನಾನು, ನನ್ನ ಕೋಟ್ ಬಿಚ್ತೀನಿ"
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?"
“ನನ್ನ ಶರ್ಟ್ ಬಿಚ್ತೀನಿ"
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?"
“ಪ್ಯಾಂಟ್ ಬಿಚ್ತೀನಿ"
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?"
“ಅವ್ನಜ್ಜಿ, ಅದೇನಾರಾ ಆಗ್ಲಿ, ಬೇಕಿದ್ರೆ ಚಡ್ಡಿನೂ ಬಿಚ್ತೀನಿ. ಆದ್ರೆ ಆ ಕಿಟಕಿ ಮಾತ್ರ
ತೆಗೆಯಲ್ಲ".
ಲೈನ್ ಮ್ಯಾನ್
ಟೈಮ್ ಸೆನ್ಸ್
-ಸಮಯ ನಮ್ ಕೈಲಿ ಇರಲ್ಲ. ನಮ್ ಕೈಲಿ ಇರೋದು ಬರೀ ವಾಚು ಅಷ್ಟೇ.
ಬೊಜ್ಜಿನ ವಿರುದ್ಧದ ಮೋದಿ ಅಭಿಯಾನಕ್ಕೆ ಏನಂತ ಹೆಸರು
- ‘ಫಿಟ್ ಇಂಡಿಯಾ’ ಚಳವಳಿ
ದುಡ್ ಸಮಾಚಾರ
- “ಹತ್ ರುಪಾಯಿ ‘ಚೇಂಜ್’ ಇದ್ರೆ ಕೊಡೋ" ಅಂತ ಸ್ನೇಹಿತರನ್ನ ಕೇಳುವಾಗ, ಜೇಬಲ್ಲಿ ಮಿನಿಮಮ್ 20 ರುಪಾಯಿ ನೋಟ್ ಆದ್ರೂ ಇರಬೇಕು. ಇಲ್ಲ ಅಂದ್ರೆ “10 ರುಪಾಯಿ ‘ದುಡ್’ ಕೊಡೋ" ಅಂತ ಕೇಳ್ಬೇಕು. ಎರಡಕ್ಕೂ ವ್ಯತ್ಯಾಸ ಇದೆ.
ನಾನು ಹೈದರಾಬಾದಿನವಳು ಅಂದ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕನ್ನಡಿಗರ ಪ್ರತಿಕ್ರಿಯೆ
- ರೇಷ್ಮಾ ಆಂಟಿನ ಬೇಕಾದ್ರೂ ಹೀರೋಯಿನ್ ಮಾಡಿ. ಆದ್ರೆ ಈ ರಶ್ಮಿಕಾ ಮಂದಣ್ಣನ್ನ ಮತ್ತೆ ಯಾವ್ ಕನ್ನಡ ಸಿನಿಮಾದಲ್ಲೂ ಆಕ್ಟ್ ಮಾಡಿ ಅಂತ ಕೇಳ್ಬೇಡ್ರಪ್ಪ..
ಜಗತ್ತಿನ 5 ಅತಿ ಬೋರಿಂಗ್ ವಿಷಯಗಳು
- ನಾಲ್ಕು ಗೋಡೆ ಮತ್ತು ಚಾವಣಿ
ಸೌಂಡ್ ಪಾರ್ಟಿ ಸ್ವಗತ
- ಸೈರನ್ ಹಾಕಿಲ್ಲ ಅಂದ್ರೆ ambulance ಗೇ ಬೆಲೆ ಸಿಗಲ್ಲ.. ಹಂಗೇನೆ... ಸೌಂಡ್ ಮಾಡದೇ
ಇದ್ರೆ ಮನುಷ್ಯರಿಗೆ ಬೆಲೆ ಸಿಗಲ್ಲ..
ಗಾಂಧಿನಗರದ ಕೆಲವು ಹೀರೋಗಳ ವ್ಯಥೆ
- ನಾನೇ ಇಲ್ಲಿ ನಂಬರು ಒನ್ ಅಂತ ಹೇಳ್ತಾ ಇದ್ರೂ ನಂಬೋರು ಮಾತ್ರ ಯಾರೂ ಇಲ್ಲ
ಇದೀಗ ತಾನೆ ಹೊಳೆದ ಸುದ್ದಿ:
- ಬಂಗಾರದ ವಿಷಯದಲ್ಲಷ್ಟೇ ಅಲ್ಲ, ಐಡಿಯಾಗಳ ವಿಷಯದಲ್ಲೂ ಅಷ್ಟೇ.. ‘ಹೊಳೆಯುವುದೆ’ ಬಂಗಾರ ಅಲ್ಲ.
ಐಪೋನ್ ಪ್ರಿಯರ ಪ್ರಕಾರ
- ‘ಎ’ -ರ್ ಆಪಲ್ ಅಲ್ಲ, ‘ಐ’ ಫಾರ್ ಆಪಲ್
ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ
- ಯಾಕಂದ್ರೆ ಜ್ಯೋತಿಷಿಗಳು ‘ಕೈ’ ನೋಡಿ ಭವಿಷ್ಯ ಹೇಳ್ತಾರೆ.