ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಆಲ್ಬರ್ಟ್‌ ಕಾಮು ಸತ್ತಿದ್ದು ಹೇಗೆ ?

ಆಲ್ಬರ್ಟ್ ಕಾಮು ಅವರ ಸಾವು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ ರೂಪಿಸಿದ ಹತ್ಯಾ ಸಂಚೇ ಅಥವಾ ಆಕಸ್ಮಿಕ ಅಪಘಾತವೇ ಎಂಬ ಪ್ರಶ್ನೆ ಇಂದಿಗೂ ಚರ್ಚಿತ ವಿಷಯವೇ. ‘ದಿ ಔಟ್ಸ್ಡರ್’, ‘ದಿ ಪ್ಲೇಗ್’ ಹಾಗೂ ‘ದಿ ಮಿಥ್ ಆಫ್ ಸಿಸಿಫಸ್’ ಮುಂತಾದ ಕೃತಿಗಳ ಮೂಲಕ ಅಸ್ತಿತ್ವವಾದಿ ಮತ್ತು ಅಸಂಗತತೆಯ ತತ್ವ ಪ್ರತಿಪಾದಿಸಿದ ಮಹಾನ್ ಚಿಂತಕ 1960ರ ಜನವರಿ 4ರಂದು ಕಾರು ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ. ‌

Vishweshwar Bhat Column: ಆಲ್ಬರ್ಟ್‌ ಕಾಮು ಸತ್ತಿದ್ದು ಹೇಗೆ ?

-

ಸಂಪಾದಕರ ಸದ್ಯಶೋಧನೆ

ಆಲ್ಬರ್ಟ್ ಕಾಮು ಅವರ ಸಾವು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ ರೂಪಿಸಿದ ಹತ್ಯಾ ಸಂಚೇ ಅಥವಾ ಆಕಸ್ಮಿಕ ಅಪಘಾತವೇ ಎಂಬ ಪ್ರಶ್ನೆ ಇಂದಿಗೂ ಚರ್ಚಿತ ವಿಷಯವೇ. ‘ದಿ ಔಟ್ಸ್ಡರ್’, ‘ದಿ ಪ್ಲೇಗ್’ ಹಾಗೂ ‘ದಿ ಮಿಥ್ ಆಫ್ ಸಿಸಿಫಸ್’ ಮುಂತಾದ ಕೃತಿಗಳ ಮೂಲಕ ಅಸ್ತಿತ್ವವಾದಿ ಮತ್ತು ಅಸಂಗತತೆಯ ತತ್ವ ಪ್ರತಿಪಾದಿಸಿದ ಮಹಾನ್ ಚಿಂತಕ 1960ರ ಜನವರಿ 4ರಂದು ಕಾರು ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ. ‌

ದಶಕಗಳ ಕಾಲ ಇದನ್ನು ರಸ್ತೆ ಅಪಘಾತವೆಂದೇ ಜಗತ್ತು ನಂಬಿತ್ತು. ಆದರೆ ಇಟಾಲಿಯನ್ ಸಂಶೋಧಕ ಹಾಗೂ ಲೇಖಕ ಜಿಯೋವಾನ್ನಿ ಕ್ಯಾಟೆಲ್ಲಿ ತನ್ನ 2019ರ ಕೃತಿ ‘ದಿ ಡೆತ್ ಆಫ್ ಕಾಮು’ ಮೂಲಕ ಮಂಡಿಸಿದ ಆಘಾತಕಾರಿ ಸಿದ್ಧಾಂತವು ಈ ಸಾವಿನ ಹಿಂದಿನ ಅಧಿಕೃತ ತೀರ್ಪನ್ನು ಬಲವಾಗಿ ಪ್ರಶ್ನಿಸಿತು. 1960ರ ಜನವರಿ 4ರಂದು ಫ್ರಾನ್ಸ್‌ನ ವಿಬ್ಲೆವಿನ್ ಸಮೀಪದ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿತು.

ಕಾಮು ತನ್ನ ಪ್ರಕಾಶಕ ಹಾಗೂ ಆಪ್ತ ಮಿತ್ರ ಮಿಶೆಲ್ ಗಲ್ಲಿಮಾರ್ಡ್‌ರೊಂದಿಗೆ ಪ್ಯಾರಿಸ್ ಕಡೆಗೆ ಪ್ರಯಾಣಿಸುತ್ತಿದ್ದ. ಅವರಿದ್ದ ವಾಹನ ಫೇಸೆಲ್ ವೆಗಾ ಎಂಬ ಅತಿವೇಗದ ಐಷಾರಾಮಿ ಕ್ರೀಡಾ ಕಾರು. ನೇರವಾದ, ಆದರೆ ತೇವ ಮತ್ತು ಹಿಮದಿಂದ ಕೂಡಿದ್ದ ರಸ್ತೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಎರಡು ಮರಗಳಿಗೆ ಅಪ್ಪಳಿಸಿತು. 46 ವರ್ಷದ ಕಾಮು ಸ್ಥಳದ ಅಸು ನೀಗಿದರೆ, ಗಲ್ಲಿಮಾರ್ಡ್ ಕೆಲ ದಿನಗಳ ನಂತರ ಕೊನೆಯುಸಿರೆಳೆದ. ತನಿಖಾಧಿಕಾರಿಗಳು ರಸ್ತೆ ಜಾರುತ್ತಿದ್ದ ಕಾರಣ ಅತಿವೇಗದಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತೀರ್ಮಾನಿಸಿ, ತನಿಖೆಯನ್ನು ಅಲ್ಲಿಗೇ ಮುಕ್ತಾಯ ಗೊಳಿಸಿದರು.

ಇದನ್ನೂ ಓದಿ: Vishweshwar Bhat Column: ಗಣಿತ ಮತ್ತು ಹಾಸ್ಯ

ವರ್ಷಗಳ ನಂತರ ಈ ತೀರ್ಪಿನ ವಿರುದ್ಧ ಸಂಶೋಧನೆ ಆರಂಭಿಸಿದ ಜಿಯೋವಾನ್ನಿ ಕ್ಯಾಟೆಲ್ಲಿ, ಇದು ಅಪಘಾತವಲ್ಲ, ಬದಲಿಗೆ ಅತ್ಯಂತ ನಿಖರವಾಗಿ ಹೆಣೆದ ಹತ್ಯೆ ಎಂದು ವಾದಿಸಿದ. 2011ರಲ್ಲಿ ಇಟಾಲಿಯನ್ ಪತ್ರಿಕೆಯೊಂದರಲ್ಲಿ ಈ ಕುರಿತು ಪ್ರಬಂಧ ಬರೆದಿದ್ದ ಕ್ಯಾಟೆಲ್ಲಿ, ನಂತರ 2019ರಲ್ಲಿ ಪೂರ್ಣ ಪ್ರಮಾಣದ ಪುಸ್ತಕ ಪ್ರಕಟಿಸಿದ. ಕ್ಯಾಟೆಲ್ಲಿ ಸಿದ್ಧಾಂತದ ಪ್ರಕಾರ, ಸೋವಿಯತ್ ಒಕ್ಕೂಟದ ಗುಪ್ತಚರ ದಳ ಕೆಜಿಬಿ ಕಾಮು ವಾಹನವನ್ನು ಗುರಿಯಾಗಿಸಿಕೊಂಡಿತ್ತು.

ಕಾರು ನಿಂತಿದ್ದ ಸಮಯದಲ್ಲಿ ಅದರ ಟೈರ್ ಅನ್ನು ಕೆಜಿಬಿ ಏಜೆಂಟರು ವಿಶೇಷ ತಾಂತ್ರಿಕ ಉಪಕರಣದಿಂದ ಹಾನಿಗೊಳಿಸಿದ್ದರು. ವಾಹನ ಹೆದ್ದಾರಿಯಲ್ಲಿ ಗರಿಷ್ಠ ವೇಗ ತಲುಪಿದಾಗ ಟೈರ್ ಏಕಾಏಕಿ ಸಿಡಿದು ಅಪಘಾತ ಸಂಭವಿಸುವಂತೆ ತಂತ್ರ ರೂಪಿಸಲಾಗಿತ್ತು ಎಂಬುದು ಅವನ ವಾದ. ಕ್ಯಾಟೆಲ್ಲಿ ತನ್ನ ಈ ಊಹೆಗೆ ಪ್ರಮುಖ ಆಧಾರವಾಗಿ ಮುಂದಿಡುವುದು ಜೆಕ್ ಕವಿ ಹಾಗೂ ಅನುವಾದಕ ಜಾನ್ ಜಬ್ರೋನಾಸ್ಕಿ ಡೈರಿಯನ್ನು. 1980ರ ದಶಕದ ಆರಂಭದಲ್ಲಿ ಜಬ್ರೋನಾಸ್ಕಿ ತನ್ನ ಖಾಸಗಿ ದಿನಚರಿಯಲ್ಲಿ ಒಂದು ಆಘಾತಕಾರಿ ಸಂಗತಿ ಯನ್ನು ದಾಖಲಿಸಿದ್ದ.

ಸೋವಿಯತ್ ರಹಸ್ಯ ವ್ಯವಹಾರಗಳ ಅರಿವಿದ್ದ ವಿಶ್ವಾಸಾರ್ಹ ವ್ಯಕ್ತಿಯೊಬ್ಬರು ತನಗೆ ನೀಡಿದ ಮಾಹಿತಿ ಯ ಪ್ರಕಾರ, ಕಾಮು ಸಾವಿನ ಕಾರ್ಯಾಚರಣೆಯನ್ನು ಕೆಜಿಬಿ ಯಶಸ್ವಿಯಾಗಿ ಮುಗಿಸಿತ್ತು ಎಂದು ಜಬ್ರೋ ನಾಸ್ಕಿ ಬರೆದಿದ್ದ. ಈ ದಿನಚರಿಯ ಆಯ್ದ ಭಾಗಗಳು ನಂತರ ಪ್ರಕಟವಾದಾಗ, ಅದರಲ್ಲಿ ಉಲ್ಲೇಖವಾಗಿದ್ದ ವಿವರಗಳು ಕಾಮು ಕಾರಿನ ಟೈರ್ ಹಾನಿಗೊಳಿಸಿದ ತಂತ್ರಜ್ಞಾನದ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದವು.

ಡೈರಿಯ ಪ್ರಕಾರ, ಈ ಹತ್ಯೆಗೆ ಆದೇಶ ನೀಡಿದ್ದು ಸೋವಿಯತ್ ಒಕ್ಕೂಟದ ವಿದೇಶಾಂಗ ಸಚಿವ ರಾಗಿದ್ದ ಡಿಮಿಟ್ರಿ ಶೆಪಿಲೋವ್. 1957ರ ಮಾರ್ಚ್‌ನಲ್ಲಿ ಫ್ರೆಂಚ್ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದ ಕಾಮು, ಶೆಪಿಲೋವ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದ. ಹಂಗೇರಿಯ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿದ ಶೆಪಿಲೋವ್ ಕ್ರಮಗಳನ್ನು ‘ಶೆಪಿಲೋವ್ ಹತ್ಯಾಕಾಂಡ’ ಎಂದು ಕಾಮು ನೇರವಾಗಿ ಜರೆದಿದ್ದ. ಸೋವಿಯತ್ ನಾಯಕತ್ವದ ಅತ್ಯುನ್ನತ ಸ್ತರದಲ್ಲಿದ್ದ ಅಧಿಕಾರಿ ಯೊಬ್ಬರಿಗೆ ಸಾರ್ವಜನಿಕವಾಗಿ ಇಂಥ ಅಪಮಾನ ಮಾಡಿದ್ದು ಕ್ರೆಮ್ಲಿನ್ ಕೆಂಗಣ್ಣಿಗೆ ಕಾರಣವಾಗಿತ್ತು ಮತ್ತು ಈ ವೈಯಕ್ತಿಕ- ರಾಜಕೀಯ ಸೇಡೇ ಹತ್ಯೆಯ ಸಂಚಿಗೆ ಚಾಲನೆ ನೀಡಿತು ಎಂದು ಕ್ಯಾಟೆಲ್ಲಿ ಅಭಿಪ್ರಾಯಪಡುತ್ತಾನೆ.

ರಾಜಕೀಯ ಸಿದ್ಧಾಂತಗಳ ನೆಲೆಯಲ್ಲಿ ಕಾಮು ಸೋವಿಯತ್ ಸಾಮ್ರಾ ಜ್ಯಶಾಹಿಯ ಅತಿ ದೊಡ್ಡ ವಿರೋಧಿಯಾಗಿದ್ದ. 1956ರ ಹಂಗೇರಿಯ ಕ್ರಾಂತಿ ಯನ್ನು ಸೋವಿಯತ್ ಟ್ಯಾಂಕ್‌ಗಳು ನಿರ್ದಯ ವಾಗಿ ಹತ್ತಿಕ್ಕಿದಾಗ, ಪ್ಯಾರಿಸ್‌ನ ಬಹುತೇಕ ಎಡಪಂಥೀಯ ಬುದ್ಧಿಜೀವಿಗಳು (ಜೀನ್-ಪಾಲ್ ಸಾರ್ತ್ರೆ ಸೇರಿದಂತೆ) ಸೋವಿಯತ್ ನಿಲುವಿಗೆ ಪರೋಕ್ಷ ಸಮ್ಮತಿ ಸೂಚಿಸಿದ್ದರು ಅಥವಾ ಮೌನ ವಹಿಸಿದ್ದರು. ಆದರೆ ಕಾಮು ಸೋವಿಯತ್ ದಬ್ಬಾಳಿಕೆ ಯನ್ನು ಮುಕ್ತವಾಗಿ ಖಂಡಿಸಿ, ಸಾರ್ವಜನಿಕ ಸಭೆಗಳಲ್ಲಿ ಸೋವಿಯತ್ ಕಮ್ಯುನಿಸಂನ ಹಿಂಸಾತ್ಮಕ ಮುಖವನ್ನು ಬಯಲುಮಾಡಿದ.

ಮಾರ್ಕ್ಸ್‌ವಾದದ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಹಕ್ಕುಗಳ ದಮನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಭಟಿಸಿದ ಅವನ ನಿರ್ಭೀತ ನಿಲುವು ಸೋವಿಯತ್ ಆಡಳಿತಕ್ಕೆ ಸದಾ ತಲೆನೋವಾಗಿತ್ತು