ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ನಾಯಿಗೆ ತತ್ವಶಾಸ್ತ್ರ ಹೇಳುವುದು ಹೇಗೆ ?

ನಾಯಿಗೆ ತತ್ವಶಾಸ್ತ್ರ ಕಲಿಸುವುದು ಎಂದರೆ ಓದುಗರಿಗೆ ಅತ್ಯಂತ ಸುಲಭವಾಗಿ ವಿಷಯವನ್ನು ಮನವರಿಕೆ ಮಾಡಿಕೊಡುವುದು ಎಂದರ್ಥ. ಪುಸ್ತಕವು ಜೀವನದ ಮೂಲಭೂತ ಪ್ರಶ್ನೆಗಳನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಂಗಡಿಸಿದೆ. ಮೊದಲನೆಯದು, ನೈತಿಕತೆ. ’ಒಳ್ಳೆಯದು ಎಂದರೆ ಏನು?’, ’ನಾವು ಏಕೆ ಧರ್ಮವಾಗಿ ಬದುಕಬೇಕು?’ ಎಂಬ ಪ್ರಶ್ನೆಗಳನ್ನು ಮಾಂಟಿ ತನ್ನ ನಾಯಿ ಜಗತ್ತಿನ ಉದಾಹರಣೆಗಳ ಮೂಲಕ (ಉದಾಹರಣೆಗೆ, ಇನ್ನೊಂದು ನಾಯಿಯ ಆಹಾರ ಕದಿಯುವುದು ಸರಿಯೇ?) ಚರ್ಚಿಸುತ್ತದೆ.

Vishweshwar Bhat Column: ನಾಯಿಗೆ ತತ್ವಶಾಸ್ತ್ರ ಹೇಳುವುದು ಹೇಗೆ ?

-

ಸಂಪಾದಕೀಯ ಸದ್ಯಶೋಧನೆ

ಇತ್ತೀಚೆಗೆ ನಾನು ಆಂಥೋನಿ ಮೆಕ್‌ಗೋವನ್ ಬರೆದ How to Teach Philosophy to Your Dog: A Quirky Introduction to the Big Questions ಎಂಬ ಪುಸ್ತಕವನ್ನು ಓದುತ್ತಿದ್ದೆ. ಇದು ತತ್ವಶಾಸ್ತ್ರ ದಂಥ ಗಂಭೀರ ವಿಷಯವನ್ನು ಅತ್ಯಂತ ಸರಳವಾಗಿ ಮತ್ತು ಹಾಸ್ಯಭರಿತವಾಗಿ ಅರ್ಥೈಸುವ ವಿಶಿಷ್ಟ ಕೃತಿ.

ತತ್ವಶಾಸ್ತ್ರ ಎಂದರೆ ಸಾಮಾನ್ಯವಾಗಿ ಎಲ್ಲರೂ ಕಷ್ಟದ ವಿಷಯ, ಕೇವಲ ವಿದ್ವಾಂಸರಿಗೆ ಮಾತ್ರ ಅರ್ಥವಾಗುವಂಥದ್ದು ಎಂದು ಭಾವಿಸುತ್ತಾರೆ. ಆದರೆ ಮೆಕ್‌ಗೋವನ್ ಈ ಕಲ್ಪನೆಯನ್ನು ಸುಳ್ಳು ಮಾಡುತ್ತಾನೆ. ಅವನು ತನ್ನ ಸಾಕುನಾಯಿ ’ಮಾಂಟಿ’ ಜತೆಗೆ ಲಂಡನ್‌ನ ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡುವಾಗ ನಡೆಸುವ ಕಾಲ್ಪನಿಕ ಸಂಭಾಷಣೆಗಳ ಮೂಲಕ ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳ ವಿಚಾರಗಳನ್ನು ಹಂಚಿಕೊಳ್ಳುತ್ತಾನೆ.

ನಾಯಿಗೆ ತತ್ವಶಾಸ್ತ್ರ ಕಲಿಸುವುದು ಎಂದರೆ ಓದುಗರಿಗೆ ಅತ್ಯಂತ ಸುಲಭವಾಗಿ ವಿಷಯವನ್ನು ಮನವರಿಕೆ ಮಾಡಿಕೊಡುವುದು ಎಂದರ್ಥ. ಪುಸ್ತಕವು ಜೀವನದ ಮೂಲಭೂತ ಪ್ರಶ್ನೆಗಳನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಂಗಡಿಸಿದೆ. ಮೊದಲನೆಯದು, ನೈತಿಕತೆ. ’ಒಳ್ಳೆಯದು ಎಂದರೆ ಏನು?’, ’ನಾವು ಏಕೆ ಧರ್ಮವಾಗಿ ಬದುಕಬೇಕು?’ ಎಂಬ ಪ್ರಶ್ನೆಗಳನ್ನು ಮಾಂಟಿ ತನ್ನ ನಾಯಿ ಜಗತ್ತಿನ ಉದಾಹರಣೆಗಳ ಮೂಲಕ (ಉದಾಹರಣೆಗೆ, ಇನ್ನೊಂದು ನಾಯಿಯ ಆಹಾರ ಕದಿಯು ವುದು ಸರಿಯೇ?) ಚರ್ಚಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಅಂಬಾಸಿಡರ್‌ ಕಾರಿನ ಮೂಲಕ ಭಾರತ

ಎರಡನೆಯದು, ಅಸ್ತಿತ್ವವಾದ. ಬದುಕಿನ ಅರ್ಥವೇನು? ಸಾವು ಎಂದರೇನು? ಎಂಬ ಗಹನವಾದ ವಿಷಯಗಳನ್ನು ಸಾಕ್ರಟೀಸ್, ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ದೃಷ್ಟಿಕೋನದಲ್ಲಿ ವಿವರಿಸ ಲಾಗಿದೆ. ಮೂರನೆಯದು, ರಾಜಕೀಯ ತತ್ವಶಾಸ್ತ್ರ. ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಹೇಗಿರಬೇಕು ಎಂಬುದನ್ನು ನಾಯಿಗಳ ಹಿಂಡಿನ ನಡೆವಳಿಕೆಗೆ ಹೋಲಿಸಿ ಸರಳವಾಗಿ ವಿವರಿಸ ಲಾಗಿದೆ.

ನಾಲ್ಕನೆಯದು, ದೇವರು ಮತ್ತು ಧರ್ಮ. ಬ್ರಹ್ಮಾಂಡದ ಸೃಷ್ಟಿ ಮತ್ತು ನಂಬಿಕೆಗಳ ಬಗ್ಗೆ ವೈಜ್ಞಾನಿಕ ಹಾಗೂ ತಾರ್ಕಿಕ ಚರ್ಚೆಗಳು ಇಲ್ಲಿವೆ. ಈ ಪುಸ್ತಕದಲ್ಲಿ ಲೇಖಕರು ಪಾಶ್ಚಾತ್ಯ ತತ್ವಶಾಸ್ತ್ರದ ದಿಗ್ಗಜ ರಾದ ಸಾಕ್ರಟೀಸ್, ಇಮ್ಯಾನ್ಯುಯೆಲ್ ಕಾಂಟ್, ಜಾನ್ ಸ್ಟುವರ್ಟ್ ಮಿಲ, ಜಾನ್ ಸ್ಟುವರ್ಟ್ ಮಿಲ್, ಶೋಪೆನ್ಹೌರ್ ಮತ್ತು ನೀತ್ಸೆ ಪರಿಚಯಿಸುತ್ತಾರೆ. ಈ ಪುಸ್ತಕದ ವೈಶಿಷ್ಟ್ಯ ಅಂದ್ರೆ ಇದರಲ್ಲಿರುವ ವಿನೋದ. ‌

ಮಾಂಟಿ ಎಂಬ ನಾಯಿ ಕೇವಲ ಕೇಳುಗನಲ್ಲ, ಅದು ತನ್ನದೇ ಆದ ’ತರ್ಕ’ವನ್ನು ಮಂಡಿಸುತ್ತದೆ. ಉದಾಹರಣೆಗೆ, ಲೇಖಕರು ’ತ್ಯಾಗ’ದ ಬಗ್ಗೆ ಮಾತನಾಡುತ್ತಿದ್ದರೆ, ಮಾಂಟಿ ’ಒಂದು ಬಿಸ್ಕತ್ತು ತ್ಯಾಗ ಮಾಡುವುದು ಎಷ್ಟು ಕಷ್ಟ’ ಎಂಬ ನೆಲೆಯಲ್ಲಿ ಯೋಚಿಸುತ್ತದೆ. ಈ ಹಾಸ್ಯವು ಓದುಗರಿಗೆ ವಿಷಯದ ಗಹನತೆ ತಿಳಿಯದಂತೆ ಜ್ಞಾನವನ್ನು ಹಂಚುತ್ತದೆ. ಈ ಪುಸ್ತಕದ ಯಶಸ್ಸು ಇರುವುದು ಅದರ ಕಥನ ಶೈಲಿಯಲ್ಲಿ. ಆಂಥೋನಿ ಒಬ್ಬ ಜ್ಞಾನಿ ಗುರುವಿನಂತೆ ಕಂಡರೆ, ಮಾಂಟಿ ಒಬ್ಬ ತುಂಟ ಮತ್ತು ವಾಸ್ತವವಾದಿ ಶಿಷ್ಯನಂತೆ ವರ್ತಿಸುತ್ತದೆ.

ಮಾಂಟಿಗೆ ಅಮೂರ್ತ ಆಲೋಚನೆಗಳಿಗಿಂತ ’ಬಿಸ್ಕತ್ತು’, ’ಪಾರ್ಕ್’ ಮತ್ತು ’ನಿz’ಯಂಥ ಪ್ರತ್ಯಕ್ಷ ವಿಷಯಗಳ ಆಸಕ್ತಿ ಹೆಚ್ಚು. ಈ ಸಂಘರ್ಷದ ಮೂಲಕವೇ ಲೇಖಕರು ’ಮಾನವನ ತರ್ಕ’ ಮತ್ತು ’ಜೈವಿಕ ಪ್ರೇರಣೆ’ಗಳ ನಡುವಿನ ವ್ಯತ್ಯಾಸವನ್ನು ಚರ್ಚಿಸುತ್ತಾರೆ. ನಾವು ನಿಯಂತ್ರಿಸಲಾಗದ ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು, ನಮ್ಮ ಪ್ರತಿಕ್ರಿಯೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಲೇಖಕ ವಿವರಿಸುತ್ತಾನೆ.

ಮಾಂಟಿ ಮಳೆಯಲ್ಲಿ ನೆನೆಯುವಾಗ ಅಥವಾ ಬೇರೆ ನಾಯಿ ತನಗಿಂತ ಬಲಶಾಲಿಯಾಗಿರುವಾಗ ತೋರುವ ಅನಿವಾರ್ಯ ಒಪ್ಪಿಗೆಯನ್ನು ಇದಕ್ಕೆ ಹೋಲಿಸಲಾಗಿದೆ. ಒಂದು ಪ್ರಸಿದ್ಧ ತತ್ವವಾದ ’ಟ್ರಾಲಿ ಸಮಸ್ಯೆ’ಯನ್ನು ನಾಯಿಗಳ ಪ್ರಪಂಚಕ್ಕೆ ಅನ್ವಯಿಸಿ ವಿವರಿಸಲಾಗಿದೆ. ಅಂದರೆ, ಒಬ್ಬ ಮನುಷ್ಯನನ್ನು ಉಳಿಸಲು ಒಂದು ನಾಯಿಯನ್ನು ಬಲಿ ಕೊಡಬೇಕೆ? ಇಂಥ ಪ್ರಶ್ನೆಗಳ ಮೂಲಕ ನೈತಿಕತೆಯ ಆಳವನ್ನು ಅಳೆಯಲಾಗುತ್ತದೆ.

ಈ ಕೃತಿ ಬದುಕಿನ ಬಗ್ಗೆ ಕುತೂಹಲವಿರುವ ಪ್ರತಿಯೊಬ್ಬರಿಗೂ ಒಂದು ಮಾರ್ಗದರ್ಶಿ. ಇದು ನಮಗೆ ಕಲಿಸುವುದು ಏನೆಂದರೆ, ’ತತ್ವಶಾಸ್ತ್ರ ಎಂದರೆ ಕೇವಲ ಗ್ರಂಥಾಲಯಗಳಲ್ಲಿ ಧೂಳು ಹಿಡಿಯು ತ್ತಿರುವ ಪುಸ್ತಕಗಳಲ್ಲ, ಅದು ನಮ್ಮ ದೈನಂದಿನ ನಡೆವಳಿಕೆ ಮತ್ತು ಆಲೋಚನೆಗಳಲ್ಲಿ ಅಡಗಿರುವ ಸತ್ಯ.’

ನಾಯಿಗಳು ಮನುಷ್ಯನ ಭಾಷೆಯನ್ನು ಬಳಸದಿದ್ದರೂ, ಭಾವನೆಗಳ ಮೂಲಕ ಸಂವಹನ ನಡೆಸುವ ರೀತಿ ಮನುಷ್ಯನ ಮಾತುಗಳಿಗಿಂತ ಎಷ್ಟು ಪ್ರಭಾವಶಾಲಿ ಎಂಬುದು ಇಲ್ಲಿನ ಪ್ರಮುಖ ಚರ್ಚೆ. ’ಸಾವು ಎಂದರೆ ಕೇವಲ ಅಂತ್ಯವಲ್ಲ, ಅದು ಜೀವನದ ಮೌಲ್ಯವನ್ನು ಹೆಚ್ಚಿಸುವ ಒಂದು ಕ್ಷಣ’ ಎಂಬ ತತ್ವವನ್ನು ಲೇಖಕ ಮಾರ್ಮಿಕವಾಗಿ ವಿವರಿಸಿದ್ದಾನೆ.