ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಹನುಮರ ಭೇಟಿ

ನನ್ನನ್ನು ಸುಗ್ರೀವನ ಮಂತ್ರಿ ಎಂದು ತಿಳಿಯಿರಿ". ಹನುಮಂತನ ಸಂಸ್ಕಾರಯುತವಾದ ಮಾತುಗಳನ್ನು ಕೇಳಿದ ರಾಮನು ಲಕ್ಷ್ಮಣನ ಕಡೆ ತಿರುಗಿ, “ಲಕ್ಷ್ಮಣಾ, ಈತನ ಮಾತುಗಳನ್ನು ಕೇಳಿದೆಯಾ? ವೇದಗಳನ್ನು ಪೂರ್ಣವಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ಇಂಥ ಶುದ್ಧವಾದ ಮತ್ತು ಸ್ಪಷ್ಟವಾದ ಭಾಷೆ ಸಿದ್ಧಿಸಲು ಸಾಧ್ಯ. ಈತನ ಮಾತುಗಳಲ್ಲಿ ಅಹಂಕಾರವಿಲ್ಲ, ಕೇವಲ ವಿನಯವಿದೆ" ಎಂದು ಪ್ರಶಂಸಿಸಿದನು.

ರಾಮಚರಿತ ಮಾನಸ: ರಾಮ ಮತ್ತು ಹನುಮರ ಭೇಟಿ

-

ಒಂದೊಳ್ಳೆ ಮಾತು

ನಮ್ಮ ಬದುಕಿನಲ್ಲಿ ನಾವು ಯಾರನ್ನಾದರೂ ಹುಡುಕುತ್ತಾ ಹೊರಟಾಗ, ಆ ದಾರಿಯಲ್ಲಿ ನಮಗೆ ಸಿಗುವ ವ್ಯಕ್ತಿಗಳು ನಮ್ಮ ಗುರಿಯನ್ನು ನಿರ್ಧರಿಸುತ್ತಾರೆ. ರಾಮಚರಿತ ಮಾನಸದಲ್ಲಿ ಕಾಣಬರುವ ಶ್ರೀರಾಮ ಮತ್ತು ಹನುಮಂತನ ಭೇಟಿಯು ಕೇವಲ ಇಬ್ಬರು ವ್ಯಕ್ತಿಗಳ ಭೇಟಿಯಲ್ಲ; ಅದು ಪರಮಾತ್ಮ ಮತ್ತು ಭಕ್ತನ ಮಿಲನ.

ಮೂಲ ಶ್ಲೋಕ (ಚೌಪಾಯಿ):

ಸೋಇ ಜಾನು ಜೇಹಿ ದೇಹು ಜನಾಯಿ | ಜಾನತ

ತುಮಹಿ ತುಮಹಿ ಹೋಯಿ ಜಾಯಿ ||

ತುಮರಿ ಕೃಪಾ ತುಮಹಿ ರಘುನಂದನ | ಜಾನಹಿಂ

ಭಗತ ಭಗತಿ ಭಯ ಭಂಜನ ||

ಅಂದರೆ, ಹೇ ರಘುನಂದನ, ನೀನು ಯಾರಿಗೆ ನಿನ್ನ ಅರಿವನ್ನು ಮಾಡಿಕೊಡುತ್ತೀಯೋ ಅವರು ಮಾತ್ರ ನಿನ್ನನ್ನು ತಿಳಿಯಬಲ್ಲರು. ನಿನ್ನನ್ನು ಅರಿತವರು ನಿನ್ನವರೇ ಆಗಿ ಹೋಗುತ್ತಾರೆ. ಭಕ್ತರ ಭಯ ವನ್ನು ಹೋಗಲಾಡಿಸುವವನೇ, ನಿನ್ನ ಕೃಪೆಯಿದ್ದರೆ ಮಾತ್ರ ಭಕ್ತರು ನಿನ್ನ ಭಕ್ತಿಯನ್ನು ತಿಳಿಯಲು ಸಾಧ್ಯ ಎಂದರ್ಥ.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ ವಿವರಿಸುವ ಕಾಕಭುಶುಂಡಿ-ಗರುಡ ಸಂವಾದ

ಸೀತೆಯನ್ನು ಹುಡುಕುತ್ತಾ ರಾಮ ಮತ್ತು ಲಕ್ಷ್ಮಣರು ಪಂಪಾ ಸರೋವರದ ತೀರವನ್ನು ದಾಟಿ ಋಷ್ಯಮೂಕ ಪರ್ವತದ ತಪ್ಪಲಿಗೆ ಬಂದರು. ಕೈಯಲ್ಲಿ ಧನುಸ್ಸು, ಮುಖದಲ್ಲಿ ಸೂರ್ಯನಂಥ ತೇಜಸ್ಸು ಹೊಂದಿದ್ದ ಆ ಇಬ್ಬರು ಅಜಾನುಬಾಹುಗಳನ್ನು ಕಂಡ ಸುಗ್ರೀವನಿಗೆ ಎಲ್ಲಿಲ್ಲದ ಭಯ ಕಾಡಿತು.

ಅಣ್ಣ ವಾಲಿಯು ತನ್ನನ್ನು ಕೊಲ್ಲಲು ಕಳುಹಿಸಿದ ಗೂಢಚಾರಿಗಳೇ ಇವರು ಎಂದು ಶಂಕಿಸಿ, ಸತ್ಯವೇನೆಂದು ಅರಿತು ಬರಲು ಸುಗ್ರೀವ ತನ್ನ ನಂಬಿಕಸ್ಥ ಸಚಿವ ಹನುಮಂತನನ್ನು ಕಳುಹಿಸಿದ. ಹನುಮಂತನು ಚತುರ. ನೇರವಾಗಿ ಹೋಗದೆ ಒಬ್ಬ ಸನ್ಯಾಸಿಯ ವೇಷ ಧರಿಸಿ ರಾಮ-ಲಕ್ಷ್ಮಣರ ಮುಂದೆ ಬಂದು ನಿಂತನು. ಅತ್ಯಂತ ವಿನಯದಿಂದ ಕೈಮುಗಿದು, ಮಧುರವಾದ ಧ್ವನಿಯಲ್ಲಿ ಕೇಳಿದನು: “ಎಲೈ ವೀರರೇ, ದೇವತೆಗಳಂತೆ ಕಂಗೊಳಿಸುತ್ತಿರುವ ನೀವು ಯಾರು? ಈ ಕಠಿಣ ಕಾಡಿನಲ್ಲಿ ಸನ್ಯಾಸಿಗಳಂತೆ ಜಟೆಯನ್ನು ಧರಿಸಿದ್ದೀರಿ, ಆದರೆ ರಾಜಕುಮಾರರಂತೆ ಆಯುಧ ಗಳನ್ನು ಹಿಡಿದಿದ್ದೀರಿ. ನಿಮ್ಮನ್ನು ನೋಡಿದರೆ ಈ ಸೃಷ್ಟಿಯನ್ನೇ ಆಳುವ ಶಕ್ತಿ ನಿಮ್ಮಲ್ಲಿದೆ ಎನಿಸುತ್ತಿದೆ.

ನನ್ನನ್ನು ಸುಗ್ರೀವನ ಮಂತ್ರಿ ಎಂದು ತಿಳಿಯಿರಿ". ಹನುಮಂತನ ಸಂಸ್ಕಾರಯುತವಾದ ಮಾತು ಗಳನ್ನು ಕೇಳಿದ ರಾಮನು ಲಕ್ಷ್ಮಣನ ಕಡೆ ತಿರುಗಿ, “ಲಕ್ಷ್ಮಣಾ, ಈತನ ಮಾತುಗಳನ್ನು ಕೇಳಿದೆಯಾ? ವೇದಗಳನ್ನು ಪೂರ್ಣವಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ಇಂಥ ಶುದ್ಧವಾದ ಮತ್ತು ಸ್ಪಷ್ಟವಾದ ಭಾಷೆ ಸಿದ್ಧಿಸಲು ಸಾಧ್ಯ. ಈತನ ಮಾತುಗಳಲ್ಲಿ ಅಹಂಕಾರವಿಲ್ಲ, ಕೇವಲ ವಿನಯವಿದೆ" ಎಂದು ಪ್ರಶಂಸಿಸಿದನು.

ತನ್ನ ಎದುರಿಗಿರುವವರು ಅಯೋಧ್ಯೆಯ ರಾಜಕುಮಾರ ಶ್ರೀರಾಮಚಂದ್ರ ಎಂದು ತಿಳಿಯು ತ್ತಿದ್ದಂತೆಯೇ ಹನುಮಂತನಿಗೆ ರೋಮಾಂಚನವಾಯಿತು. ತಾನು ಯಾವುದಕ್ಕಾಗಿ ಕಾಯುತ್ತಿದ್ದ ನೋ ಆ ದೈವವೇ ತನ್ನೆದುರು ನಿಂತಿತ್ತು!

ಕೂಡಲೇ ಸನ್ಯಾಸಿ ವೇಷವನ್ನು ಕಳಚಿ ತನ್ನ ನಿಜರೂಪಕ್ಕೆ ಬಂದ ಹನುಮಂತನು, ಭಕ್ತಿಯಿಂದ ಶ್ರೀರಾಮನ ಪಾದಗಳಿಗೆ ನಮಸ್ಕರಿಸಿದನು. ಕಣ್ಣೀರು ತುಂಬಿದ ದನಿಯಲ್ಲಿ ಹನುಮಂತ “ಸ್ವಾಮೀ, ಜಗತ್ತಿನ ಒಡೆಯನಾದ ನೀನೇ ನನ್ನನ್ನು ಗುರುತಿಸಿ ಪ್ರಶಂಸಿಸಿದೆಯ? ನಿನ್ನನ್ನು ನೋಡದೆ ದೂರ ವಿದ್ದ ಈ ಭಕ್ತನನ್ನು ಕ್ಷಮಿಸು" ಎಂದನು.

ಆಗ ರಾಮನು ಪ್ರೀತಿಯಿಂದ ಹನುಮಂತನನ್ನು ತಬ್ಬಿ ಎತ್ತಿಕೊಂಡನು. ಅಂದು ಋಷ್ಯಮೂಕ ಪರ್ವತದ ತಪ್ಪಲಿನಲ್ಲಿ ಪ್ರಾರಂಭವಾದ ಆ ಸ್ನೇಹ ಮತ್ತು ಭಕ್ತಿಯ ಬಂಧ, ಇಂದಿಗೂ ಜಗತ್ತಿಗೆ ಆದರ್ಶವಾಗಿದೆ.

ಮಾತು ಎಂಬುದು ಮನುಷ್ಯನ ಸಂಸ್ಕಾರದ ಕನ್ನಡಿ. ಹನುಮಂತನ ವಿನಯಶೀಲ ಮಾತುಗಳೇ ಅವನನ್ನು ಶ್ರೀರಾಮನಿಗೆ ಹತ್ತಿರವಾಗುವಂತೆ ಮಾಡಿದವು. ನಮ್ಮ ಬದುಕಿನಲ್ಲಿ ನಾವು ಏನೇನೋ ಆಗಲು ಬಯಸುತ್ತೇವೆ, ಆದರೆ ಎಲ್ಲಕ್ಕಿಂತ ಮಿಗಿಲಾಗಿ ‘ಪ್ರಾಮಾಣಿಕ ವ್ಯಕ್ತಿ’ಯಾಗುವುದು ದೊಡ್ಡ ಸಾಧನೆ. ಹನುಮಂತನಂತೆ ನಾವು ಮಾಡುವ ಕೆಲಸದಲ್ಲಿ ಸಮರ್ಪಣಾ ಭಾವವಿದ್ದರೆ, ನಾವು ಹುಡುಕುತ್ತಿರುವ ಗುರಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ.

ಅನೇಕರು ಹಲವಾರು ಡಿಗ್ರಿಗಳನ್ನು ಪಡೆದು ಜ್ಞಾನವಂತರಾದರೂ, ಅವರಲ್ಲಿ ವಿನಯಶೀಲತೆ ಇಲ್ಲದೆ ಇರುವುದರಿಂದ ತಮ್ಮದೇ ದುಡುಕಿನಿಂದ ಜೀವನದಲ್ಲಿ ಬರುವ ದೊಡ್ಡ ದೊಡ್ಡ ಅವಕಾಶ ಗಳನ್ನು ಉಳಿಸಿಕೊಳ್ಳದೆ ಹೋಗುತ್ತಾರೆ. ಕೆಲವರು ಹುಟ್ಟಿನಿಂದ ಜಾಣರಲ್ಲದಿದ್ದರೂ ತಮ್ಮ ವಿಧೇಯತೆಯಿಂದ, ಪ್ರಾಮಾ ಣಿಕತೆಯಿಂದ, ಶ್ರಮದಿಂದ ಜೀವನದಲ್ಲಿ ಬಹಳ ಮೇಲೆ ಏರುತ್ತಾರೆ. ಇದು ನಮ್ಮೆಲ್ಲರಿಗೂ ದೊಡ್ಡ ಪಾಠ ಅಲ್ಲವೇ?