'ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕುʼ; ಸೋಲಿನ ಬಳಿಕ ಪಾಂಡ್ಯ ಹೇಳಿಕೆ
RR vs MI: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ತಮ್ಮ ತಂಡದ ಪ್ರದರ್ಶನದಿಂದ ಸಂತೋಷಪಟ್ಟರು. ಪರಾಗ್ ತಮ್ಮ ಆರಂಭಿಕ ಆಟಗಾರರ ಬಲವಾದ ಆರಂಭಕ್ಕಾಗಿ ಮತ್ತು ಅವರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಕ್ಕಾಗಿ ಬೌಲರ್‌ಗಳನ್ನು ಶ್ಲಾಘಿಸಿದರು.
hardik pandya post match -
ಗುವಾಹಟಿ, ಎ.8: ಗುವಾಹಟಿಯಲ್ಲಿ ಮಂಗಳವಾರ ರಾತ್ರಿ ನಡೆದ ಮಳೆಯಿಂದಾಗಿ ಮೊಟಕುಗೊಂಡ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals vs Mumbai Indians) ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿತು. ಸೋಲಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya), ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕು ಎಂದಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಮ್ಮ ತಂಡದ ಬ್ಯಾಟಿಂಗ್ ಬಗ್ಗೆ ನಿರಾಶೆಗೊಂಡಿರುವುದಾಗಿ ಒಪ್ಪಿಕೊಂಡರು ಮತ್ತು 5 ಬಾರಿಯ ಚಾಂಪಿಯನ್ ತಂಡವು ಸತತ ಎರಡು ಸೋಲುಗಳಿಂದ ಚೇತರಿಸಿಕೊಳ್ಳಬಹುದೆಂದು ಆಶಿಸಿದರು.
"ನಾವು ಮಾಡಬೇಕಾಗಿದ್ದ ಎಸೆತಗಳನ್ನು ನಾವು ನಿರ್ವಹಿಸಲಿಲ್ಲ. ಅವರು ಚೆನ್ನಾಗಿ ಆಡಿದರು. ಬೌಲಿಂಗ್ ಗುಂಪಾಗಿ, ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ನಾನು ಈ ಪಂದ್ಯದಲ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡುವುದಿಲ್ಲ. ಬೌಲಿಂಗ್ ತುಂಬಾ ಕಳಪೆಯಾಗಿತ್ತು. ನಾವು ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ" ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ತಮ್ಮ ತಂಡದ ಪ್ರದರ್ಶನದಿಂದ ಸಂತೋಷಪಟ್ಟರು. ಪರಾಗ್ ತಮ್ಮ ಆರಂಭಿಕ ಆಟಗಾರರ ಬಲವಾದ ಆರಂಭಕ್ಕಾಗಿ ಮತ್ತು ಅವರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಕ್ಕಾಗಿ ಬೌಲರ್‌ಗಳನ್ನು ಶ್ಲಾಘಿಸಿದರು.
"ನಮ್ಮ ಹುಡುಗರು ತೋರಿದ ಅತ್ಯುತ್ತಮ ಪ್ರದರ್ಶನ ಕಂಡು ಸಂತಸವಾಗಿದೆ. ಅವರಿಗೆ ಧನ್ಯವಾದಗಳು. ಹರಾಜಿನಲ್ಲೂ ಸಹ ಈ ತಂಡವು ಬಲವಾದ ತಂಡವಾಗಿತ್ತು ಎಂದು ನನಗೆ ಯಾವಾಗಲೂ ತಿಳಿದಿತ್ತು. ವೈಭವ್ ಮತ್ತು ಜೈಸ್ವಾಲ್ ಆಟವನ್ನು ವರ್ಣಿಸಲು ಪದಗಳಿಲ್ಲ. ಈ ಸಂಯೋಜನೆಯಲ್ಲಿ ನಂ. 1 ಆರಂಭಿಕ ಜೋಡಿ" ಎಂದು ಪರಾಗ್ ಹೇಳಿದರು.
ರಾಜಸ್ಥಾನ್ ಸತತ ಮೂರು ಪಂದ್ಯಗಳನ್ನು ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಳೆಯಿಂದಾಗಿ ಸುಮಾರು ಎರಡೂವರೆ ಗಂಟೆ ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರಿಸಿದರು.
MI vs RR: ಯಶಸ್ವಿ ಜೈಸ್ವಾಲ್ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿದ ರಾಜಸ್ಥಾನ್ ರಾಯಲ್ಸ್!
ಈ ಜೋಡಿಯ ಮಿಂಚಿನ ಆಟದ ಬಲದಿಂದ ರಾಜಸ್ಥಾನ್ 11 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡದ ಆಟಗಾರರು ಒತ್ತಡಕ್ಕೆ ಸಿಲುಕಿದರು. ಸತತ ವಿಕೆಟ್ ಕಳೆದುಕೊಂಡು 9 ವಿಕೆಟ್‌ಗಳಿಗೆ 123 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮ ಹಂತದಲ್ಲಿ ನಮನ್ ಧೀರ್ (25; 13ಎ) ಹಾಗೂ ಶೆರ್ಫೇನ್ ರುದರ್‌ಫೋರ್ಡ್ (25; 8ಎ) ಹೋರಾಟ ತೋರಿದರಾದರೂ, ಗೆಲುವು ಒಲಿಯಲಿಲ್ಲ.
ರಾಜಸ್ಥಾನ್ ಪರ ಅಬ್ಬರಿಸಿದ ಜೈಸ್ವಾಲ್ 32 ಎಸೆತಗಳಲ್ಲಿ ಅಜೇಯ 77 ರನ್ ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ ಹತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಇದ್ದವು. ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ ಒಂದು ಬೌಂಡರಿ, 5 ಸಿಕ್ಸರ್ ಸಹಿತ 39 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 80 ರನ್ ಗಳಿಸಿ, ಭದ್ರ ಅಡಿಪಾಯ ಹಾಕಿಕೊಟ್ಟಿತು.