ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

ಮ್ಯಾರಾಥಾನ್ ಇತಿಹಾಸದಲ್ಲಿ ‘ಸಬ್-2 ಅವರ್’ (2 ಗಂಟೆಗಳಿಗಿಂತ ಕಡಿಮೆ ಅವಧಿ) ಎಂಬುದು ಕೇವಲ ಒಂದು ಅಂಕಿ-ಅಂಶವಾಗಿಲ್ಲ. ಅದು ಮಾನವ ದೇಹಕ್ಕೆ ಪ್ರಕೃತಿ ವಿಧಿಸಿದ ಅಂತಿಮ ಗೆರೆ ಎಂದು ಭಾವಿಸಲಾಗಿದೆ. ಆದರೆ, ಸಾವೆ ಅವರು 1 ಗಂಟೆ 59 ನಿಮಿಷ 30 ಸೆಕೆಂಡುಗಳಲ್ಲಿ ಹಾಗೂ ಕೆಜೆಲ್ಚಾ ಅವರು 1 ಗಂಟೆ 59 ನಿಮಿಷ 41 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ‘ಅಸಾಧ್ಯ’ ಎಂಬ ಗೋಡೆಯನ್ನು ಪುಡಿಪುಡಿ ಮಾಡಿದ್ದಾರೆ.

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

-

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಒಂದು ಟ್ವೀಟ್ ಮಾಡಿದ್ದರು. ಲಂಡನ್ ಮ್ಯಾರಾಥಾನ್ ಇತಿಹಾಸದಲ್ಲಿ ಎಂದೂ ಮರೆಯ ಲಾಗದ ಸುವರ್ಣಾಕ್ಷರಗಳ ಪುಟವೊಂದು ತೆರೆದುಕೊಂಡಿದ್ದರ ಬಗ್ಗೆ ಅವರು ಪ್ರಸ್ತಾಪಿಸಿ ದ್ದರು.

ಮಾನವನ ದೈಹಿಕ ಸಾಮರ್ಥ್ಯದ ಬಗ್ಗೆ ನಮಗಿದ್ದ ಎಲ್ಲ ಸೀಮಿತ ಕಲ್ಪನೆಗಳನ್ನು ಅಳಿಸಿ ಹಾಕುತ್ತಾ, ಕೀನ್ಯಾದ ಸೆಬಾಸ್ಟಿಯನ್ ಸಾವೆ ಮತ್ತು ಇಥಿಯೋಪಿಯಾದ ಯೋಮಿಫ್ ಕೆಜೆಲ್ಚಾ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದರ ಬಗ್ಗೆ ಅವರು ಗಮನ ಸೆಳೆದಿದ್ದರು. ‌

ಮ್ಯಾರಾಥಾನ್ ಇತಿಹಾಸದಲ್ಲಿ ‘ಸಬ್-2 ಅವರ್’ (2 ಗಂಟೆಗಳಿಗಿಂತ ಕಡಿಮೆ ಅವಧಿ) ಎಂಬು ದು ಕೇವಲ ಒಂದು ಅಂಕಿ-ಅಂಶವಾಗಿಲ್ಲ. ಅದು ಮಾನವ ದೇಹಕ್ಕೆ ಪ್ರಕೃತಿ ವಿಧಿಸಿದ ಅಂತಿಮ ಗೆರೆ ಎಂದು ಭಾವಿಸಲಾಗಿದೆ. ಆದರೆ, ಸಾವೆ ಅವರು 1 ಗಂಟೆ 59 ನಿಮಿಷ 30 ಸೆಕೆಂಡುಗಳಲ್ಲಿ ಹಾಗೂ ಕೆಜೆಲ್ಚಾ ಅವರು 1 ಗಂಟೆ 59 ನಿಮಿಷ 41 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ‘ಅಸಾಧ್ಯ’ ಎಂಬ ಗೋಡೆಯನ್ನು ಪುಡಿಪುಡಿ ಮಾಡಿದ್ದಾರೆ.

ಇದನ್ನೂ ಓದಿ: Vishweshwar Bhat Column: ನೆಟ್ ವರ್ಕಿಂಗ್ ಅಂದ್ರೆ ಏನು ?

ದಶಕಗಳ ಕಾಲ ಕ್ರೀಡಾ ವಿಜ್ಞಾನಿಗಳು ಮತ್ತು ಶರೀರಶಾಸ್ತ್ರಜ್ಞರು ಮಾನವ ದೇಹಕ್ಕೆ ಒಂದು ಮಿತಿ ಇದೆ ಎಂದು ವಾದಿಸುತ್ತಿದ್ದರು. 42.195 ಕಿಮೀ ದೂರವನ್ನು ಎರಡು ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಓಡುವುದು ಶ್ವಾಸಕೋಶ ಮತ್ತು ಹೃದಯದ ಸಾಮರ್ಥ್ಯಕ್ಕೆ ಮೀರಿದ ವಿಚಾರ ಎಂಬುದು ಅನೇಕರ ನಂಬಿಕೆಯಾಗಿತ್ತು. ಆದರೆ, ಲಂಡನ್ ರಸ್ತೆಗಳಲ್ಲಿ ಅಂದು ನಡೆದದ್ದು ಕೇವಲ ಓಟವಲ್ಲ. ಅದು ವಿಜ್ಞಾನ ಮತ್ತು ಮಾನವ ಛಲದ ನಡುವಿನ ಹೋರಾಟದಲ್ಲಿ ಛಲಕ್ಕೆ ಸಂದ ಜಯ. ಸೆಬಾಸ್ಟಿಯನ್ ಸಾವೆ ಕೀನ್ಯಾದ ದೀರ್ಘಾವಧಿಯ ಓಟಗಾರರ ಶ್ರೇಷ್ಠ ಪರಂಪರೆಯಿಂದ ಬಂದವರು. ಅವರ ಈ ಓಟವು ಕೇವಲ ಸ್ನಾಯುಗಳ ಬಲದಿಂದ ಬಂದಿದ್ದಲ್ಲ, ಅದು ಅತ್ಯಂತ ನಿಖರವಾದ ಯೋಜನೆ ಮತ್ತು ಅಚಲವಾದ ಮಾನಸಿಕ ಸ್ಥಿರತೆಯ ಫಲ. ಪ್ರತಿ ಕಿಮೀ ಅನ್ನು ಅಂದಾಜು 2 ನಿಮಿಷ 50 ಸೆಕೆಂಡುಗಳ ಆಸುಪಾಸಿನಲ್ಲಿ ಓಡುವುದು ಎಂದರೆ ಅದು ಅಂತಿಂಥ ಮಾತಲ್ಲ.

ಓಟದ ಆರಂಭದಿಂದ ಅಂತ್ಯದವರೆಗೂ ತಮ್ಮ ಶಕ್ತಿಯನ್ನು ಸಮತೋಲನದಲ್ಲಿಟ್ಟು ಕೊಂಡು, ಕೊನೆಯ ಹಂತದಲ್ಲಿ ಮಿಂಚಿನ ವೇಗ ಪ್ರದರ್ಶಿಸಿದ್ದು ಅದ್ಭುತ. ಸಾವೆ ಅವರಿಗಿಂತ ಕೇವಲ 11 ಸೆಕೆಂಡುಗಳ ಹಿಂದೆ ಗುರಿ ಮುಟ್ಟಿದ ಕೆಜೆಲ್ಚಾ ಸಾಧನೆಯೂ ಅಷ್ಟೇ ದೊಡ್ಡದು. ಇಬ್ಬರು ಕ್ರೀಡಾಪಟುಗಳು ಒಂದೇ ದಿನ ಈ ಮೈಲಿಗಲ್ಲನ್ನು ದಾಟಿದ್ದು, ಈ ಸಾಧನೆ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಲ್ಲ, ಬದಲಿಗೆ ಕ್ರೀಡಾ ಜಗತ್ತಿನ ಒಟ್ಟಾರೆ ಪ್ರಗತಿಯ ಸಂಕೇತ ಎಂಬುದನ್ನು ಸಾಬೀತುಪಡಿಸಿದೆ.

Limits are often self-imposed (ಮಿತಿಗಳು ನಮ್ಮಿಂದಲೇ ಹೇರಲ್ಪಟ್ಟವು) ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. 1954ರಲ್ಲಿ ರೋಜರ್ ಬ್ಯಾನಿಸ್ಟರ್ ಅವರು ಒಂದು ಮೈಲಿ ದೂರವನ್ನು 4 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಓಡುವವರೆಗೂ, ಅದು ಅಸಾಧ್ಯ ವೆಂದೇ ಬಿಂಬಿಸಲಾಗಿತ್ತು. ಆದರೆ ಒಮ್ಮೆ ಆ ಮಿತಿ ಮೀರಿದ ನಂತರ, ಹತ್ತಾರು ಜನರು ಅದನ್ನು ಸಾಧಿಸಿದರು. ಈಗ ಮ್ಯಾರಾಥಾನ್ ವಿಷಯದಲ್ಲೂ ಅದೇ ಆಗಿದೆ. ಎರಡು ಗಂಟೆಯ ಈ ಮಾನಸಿಕ ತಡೆಗೋಡೆ ಬಿದ್ದಿರುವುದು ಜಗತ್ತಿನ ಸಾವಿರಾರು ಓಟಗಾರರಿಗೆ ಹೊಸ ಸೂರ್ತಿ ನೀಡಿದೆ. ಈ ಸಾಧನೆಯ ಹಿಂದೆ ಕ್ರೀಡಾಪಟುಗಳ ಕಠಿಣ ತರಬೇತಿಯ ಜತೆಗೆ ಆಧುನಿಕ ಕ್ರೀಡಾ ತಂತ್ರಜ್ಞಾನವೂ ಇದೆ.

ಕಾರ್ಬನ್ ಪ್ಲೇಟ್ ಇರುವ ವಿಶೇಷ ಶೂಗಳು ಓಟಗಾರರಿಗೆ ಹೆಚ್ಚಿನ ವೇಗ ಮತ್ತು ಆರಾಮ ವನ್ನು ನೀಡುತ್ತಿವೆ. ಓಟದ ಮಧ್ಯೆ ದೇಹದ ಶಕ್ತಿ ಕುಂದದಂತೆ ನೀಡಲಾಗುವ ವಿಶೇಷ ದ್ರವಾಹಾರಗಳು ಈ ಮೈಲಿಗಲ್ಲು ಸ್ಥಾಪಿಸಲು ಸಹಕಾರಿಯಾಗಿವೆ. ಇಂದು ಅಥ್ಲೀಟ್‌ಗಳು ತಮ್ಮ ಹೃದಯಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಎಲ್ಲವನ್ನೂ ಸೆಕೆಂಡ್-ಸೆಕೆಂಡಿಗೆ ಗಮನಿಸುತ್ತಾ ತರಬೇತಿ ಪಡೆಯುತ್ತಾರೆ.

ಆದಿಕಾಲದಲ್ಲಿ ಮಾನವನು ಆಹಾರಕ್ಕಾಗಿ ಅಥವಾ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಓಡುತ್ತಿದ್ದ. ಆದರೆ ಇಂದು ಆ ಓಟವು ಕೇವಲ ಬದುಕುಳಿಯುವ ಸಾಧನವಾಗಿ ಉಳಿದಿಲ್ಲ. ಅದು ಶ್ರೇಷ್ಠತೆಯ ಶೋಧವಾಗಿದೆ. ಪ್ರತಿಯೊಂದು ಯುಗದಲ್ಲೂ ಒಬ್ಬ ಸಾಧಕ ಹುಟ್ಟುತ್ತಾನೆ, ಅವನು ಅಂದಿನ ಕಾಲದ ಗರಿಷ್ಠ ಮಿತಿಯನ್ನು ಮೀರುತ್ತಾನೆ. ಸಾವೆ ಮತ್ತು ಕೆಜೆಲ್ಚಾ ಇಂದು ಅದೇ ಕೆಲಸ ಮಾಡಿದ್ದಾರೆ.

ಇದು ಕೇವಲ ಕ್ರೀಡೆಗೆ ಸೀಮಿತವಾದ ವಿಚಾರವಲ್ಲ. ಜೀವನದ ಪ್ರತಿ ಕ್ಷೇತ್ರದಲ್ಲೂ ನಮಗೆ ‘ಅಸಾಧ್ಯ’ ಎಂದು ತೋರುವ ಅನೇಕ ವಿಷಯಗಳಿರುತ್ತವೆ. ನಮ್ಮ ಬಡತನ ಇರಬಹುದು, ಶಿಕ್ಷಣದ ಕೊರತೆ ಇರಬಹುದು ಅಥವಾ ದೈಹಿಕ ಸವಾಲುಗಳಿರಬಹುದು. ಆದರೆ ಲಂಡನ್ ಮ್ಯಾರಾಥಾನ್ ನೀಡುವ ಸಂದೇಶ ಒಂದೇ- ‘ಸತತ ಪ್ರಯತ್ನ ಮತ್ತು ನಂಬಿಕೆಯಿದ್ದರೆ, ಕಾಲವನ್ನೂ ಸೋಲಿಸಬಹುದು.’