ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Hunj Column: ಗಣಾಚಾರ ಎಂದರೆ ಪಂಚಾಚಾರ್ಯ ದ್ವೇಷವೇ ?

ಎರಡು ದಶಕಗಳ ಹಿಂದೆ ಶಿವಯೋಗಮಂದಿರದ ಅಧ್ಯಕ್ಷರಾಗಿದ್ದ ಹೊಸಪೇಟೆ ಸಂಗನ ಬಸವ ಸ್ವಾಮಿ ಗಳು ಅಖಿಲಭಾರತ ಮಹಾಸಭಾ ಮತ್ತು ಶಿವಯೋಗಮಂದಿರ ಎರಡರ ಜಂಟಿ ಆಶ್ರಯದಲ್ಲಿ ಎರಡೂ ಸಂಸ್ಥೆಗಳ ಶತಮಾನೋತ್ಸವವನ್ನು ಶಿವಯೋಗ ಮಂದಿರದಲ್ಲಿ ಅದ್ಧೂರಿಯಾಗಿ ಏರ್ಪಡಿಸಿದಾಗ ಅದಕ್ಕೆ ವಿರಕ್ತಸ್ವಾಮಿಗಳನ್ನಲ್ಲದೆ ಪಂಚಾಚಾರ್ಯರನ್ನೂ ಅಧಿಕೃತವಾಗಿ ಆಹ್ವಾನಿಸಿದ್ದರು. ಇದಕ್ಕೆ ಭೀಮಣ್ಣ ಖಂಡ್ರೆ ಮುಂತಾದ ಮಹಾ ಸಭಾದ ಎಲ್ಲರ ಒಪ್ಪಿಗೆಯೂ ಇತ್ತು.

Ravi Hunj Column: ಗಣಾಚಾರ ಎಂದರೆ ಪಂಚಾಚಾರ್ಯ ದ್ವೇಷವೇ ?

-

Profile
Ashok Nayak Jun 7, 2026 11:16 AM

ವಚನಾಮೃತ‌ (ಭಾಗ-೨)

ರವಿ ಹಂಜ್

ಇತ್ತೀಚೆಗೆ ಪೂಜ್ಯ ಜಗದ್ಗುರು ಸಿದ್ಧರಾಮ ಶ್ರೀಗಳು ರಾಷ್ಟ್ರೀಯ ಗಣಾಚಾರ ಸಂಘ ಎಂಬ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ಗಣಾಚಾರದ ಬಗ್ಗೆ ಅರಿಯುವ ಮುನ್ನ ಗಣಾಚಾರ ಕೃತ್ಯ ಮಾಡುತ್ತಿದ್ದೇವೆ ಎಂದು ಬೀಗುತ್ತಿರುವ ಕೆಲವರ ಕಾರ್ಯಗಳನ್ನು ಮತ್ತು ಜಗದ್ಗುರುಗಳ ಮೇಲೇರುವ ಆರೋಪಗಳ ಸಹಿತವಾಗಿ ಅವಲೋಕಿಸೋಣ, ಪೂಜ್ಯ ಸಿದ್ಧರಾಮ ಶ್ರೀಗಳು ತಮಗೆ ಪಂಚಾಚಾರ್ಯರಲ್ಲಿ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ. ಈ ಬಗ್ಗೆ ಶ್ರೀಗಳ ಮೇಲೆ ಆರೋಪ ಬಂದಿದ್ದ ದ್ವೇಷಾಧಾರಿತ ಘಟನೆಯೊಂದನ್ನು ಅವರಿಗೆ ಜ್ಞಾಪಿಸೋಣ.

ಎರಡು ದಶಕಗಳ ಹಿಂದೆ ಶಿವಯೋಗಮಂದಿರದ ಅಧ್ಯಕ್ಷರಾಗಿದ್ದ ಹೊಸಪೇಟೆ ಸಂಗನ ಬಸವ ಸ್ವಾಮಿಗಳು ಅಖಿಲಭಾರತ ಮಹಾಸಭಾ ಮತ್ತು ಶಿವಯೋಗಮಂದಿರ ಎರಡರ ಜಂಟಿ ಆಶ್ರಯದಲ್ಲಿ ಎರಡೂ ಸಂಸ್ಥೆಗಳ ಶತಮಾನೋತ್ಸವವನ್ನು ಶಿವಯೋಗ ಮಂದಿರದಲ್ಲಿ ಅದ್ಧೂರಿಯಾಗಿ ಏರ್ಪಡಿಸಿದಾಗ ಅದಕ್ಕೆ ವಿರಕ್ತಸ್ವಾಮಿಗಳನ್ನಲ್ಲದೆ ಪಂಚಾಚಾರ್ಯರನ್ನೂ ಅಧಿಕೃತವಾಗಿ ಆಹ್ವಾನಿಸಿದ್ದರು. ಇದಕ್ಕೆ ಭೀಮಣ್ಣ ಖಂಡ್ರೆ ಮುಂತಾದ ಮಹಾ ಸಭಾದ ಎಲ್ಲರ ಒಪ್ಪಿಗೆಯೂ ಇತ್ತು.

ಇದೇ ಸಿದ್ಧರಾಮ ಶ್ರೀಗಳು (ಅಂದು ನಾಗನೂರು ಮಠದಲ್ಲಿದ್ದರು) ಮತ್ತು ಧರ್ಮಭಂಜಕ ಪಿತಾಮಹ ಎಂ. ಎಂ. ಕಲಬುರ್ಗಿ ಮುಂತಾದವರು ಸೇರಿಕೊಂಡು ಪಂಚಾಚಾರ್ಯರನ್ನು ವಿರೋಧಿಸುತ್ತ ಗೂಂಡಾಗಳನ್ನು ಬಿಟ್ಟು ಪಂಚಾಚಾರ್ಯರ ಕಾರುಗಳಿಗೆ ಕಲ್ಲು ಎಸೆದು ಗಲಾಟೆ ಮಾಡಿಸಿ ಪಂಚಾಚಾರ್ಯರು ಬಾರದಂತೆ ಮಾಡಿದ್ದಲ್ಲದೆ ವೇದಿಕೆ ಮೇಲೆ ಆಚಾರ್ಯರಿಗೆ ಇರಿಸಿದ್ದ ಆಸನಗಳನ್ನು ಕಿತ್ತೊಗೆಯುವಂತೆ ಮಾಡಿಸಿದರು ಎಂಬ ಆರೋಪ ಆಗ ಎಲ್ಲೂ ಜನಜನಿತವಾಗಿತ್ತು. ಸಿದ್ಧರಾಮ ಶ್ರೀಗಳು ತಮ್ಮ ಮೇಲಿನ ಆರೋಪ ಸುಳ್ಳೆಂದು ಅಂದೂ ಯಾವುದೇ ಸ್ಪಷ್ಟನೆ ನೀಡಿರ ಲಿಲ್ಲ!

ಇದನ್ನೂ ಓದಿ: Ravi Hunj Column: ಹಳಕಟ್ಟಿಯವರ ವಚನ ತತ್ವಕ್ಕೆ ಅವಮಾನವಿದು !

ಇನ್ನು ಧರ್ಮ ಮತ್ತು ಸಮಾಜವನ್ನು ಮುನ್ನಡೆಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಅವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸಬೇಕೇ ಹೊರತು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎನ್ನುವ ಪೂಜ್ಯ ಸಿದ್ಧರಾಮ ಶ್ರೀಗಳು ತಮ್ಮದೇ ಲಿಂಗಾಹತ ಗುಂಪಿನ ಪ್ರಮುಖರು ಪಂಚಾಚಾರ್ಯರನ್ನೂ ಸೇರಿಸಿ ಅನೇಕರನ್ನು ಅವ್ಯಾಹತವಾಗಿ ವೈಯಕ್ತಿಕ ನೆಲೆಯಲ್ಲಿ ಅವಹೇಳನ ಮಾಡುತ್ತಿದ್ದರೆ ಅದೇ ವೇದಿಕೆಯಲ್ಲಿದ್ದರೂ ಅದನ್ನೆಲ್ಲಾ ಆನಂದಿಸಿದ್ದರು.

ಕಳೆದ ವರ್ಷ ಪೂಜ್ಯ ಸಿದ್ಧರಾಮ ಶ್ರೀಗಳ ಧಾರ್ಮಿಕ ಪಾಲುದಾರಿಕೆಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಕಲ್ಬುರ್ಗಿ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯರು ಜಂಗಮರು ಅವಿವೇಕಿಗಳು ಎಂದು ಜನಾಂಗೀಯ ದ್ವೇಷದ ಕರೆ ನೀಡಿದಾಗ ಅದೇ ವೇದಿಕೆಯಲ್ಲಿ ಪೂಜ್ಯ ಸಿದ್ಧರಾಮ ಶ್ರೀಗಳು ಮಂದಸ್ಮಿತರಾಗಿ ಆಸೀನರಾಗಿದ್ದರು.

ಚಾಮರಾಜನಗರದ ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿಯವರು ಪಂಚಾಚಾರ್ಯರನ್ನು ಅವಹೇಳಿಸಿದಾಗ ಅದೇ ವೇದಿಕೆಯಲ್ಲಿ ಪೂಜ್ಯ ಸಿದ್ಧರಾಮ ಶ್ರೀಗಳು ಮಂದಸ್ಮಿತರಾಗಿ ಆಸೀನರಾಗಿದ್ದರು. ಇದೇ ಅಭಿಯಾನದ ಮುಕ್ತಾಯ ಸಮಾರಂಭದಲ್ಲಿ ಜಾಮದಾರರು ವೀರಶೈವರಿಗೆ ಮುಖಕ್ಕೆ ಮಸಿ ಬಳಿಯಬೇಕು ಎಂದಾಗ ಸಹ ಅದೇ ವೇದಿಕೆಯಲ್ಲಿ ಪೂಜ್ಯ ಸಿದ್ಧರಾಮ ಶ್ರೀಗಳು ಮಂದಸ್ಮಿತರಾಗಿ ಆಸೀನರಾಗಿದ್ದರು.

ಹಿಂದೂ ಸಂಸ್ಕೃತಿಯನ್ನು ಮೌಢ್ಯವೆಂದು ಭಾಷಣ ಮಾಡಿ ತಾವು ಅಭಿಯಾನದ ನಡುವೆ ಆಯುಧ ಪೂಜೆಯ ದಿನದಂದು ತಮ್ಮ ಮಹಾಸಂಸ್ಥಾನದ ಆವರಣದಲ್ಲಿ ಖುದ್ದು ಮೌಢ್ಯವೆಂದ ಅದೇ ಹಿಂದೂ ಸಂಪ್ರದಾಯದನ್ವಯ ಮಂದಸ್ಮಿತರಾಗಿ ಮರ್ಸಿಡಿಸ್ ಬೆಂಜ್ ವಾಹನದ ಪೂಜೆ ಮಾಡಿದ್ದರು.

77

ಅಲ್ಲದೇ ಪೂಜ್ಯ ಸಿದ್ಧರಾಮ ಶ್ರೀಗಳ ಸುಪರ್ದಿಯಲ್ಲಿರುವ ನಾಗನೂರು ರುದ್ರಾಕ್ಷಿ ಮಠದ ವಾಣಿಜ್ಯ ಮಳಿಗೆಯಲ್ಲಿರುವ ಜಾಗತಿಕ ಲಿಂಗಾಯತ ಮಹಾಸಭಾದ ಕಚೇರಿಯಲ್ಲಿ ಪಂಚಾಚಾರ್ಯರನ್ನು ಅವಹೇಳಿಸುವ ವೀರಶೈವ ಪಂಚಾಚಾರ್ಯರು ಸತ್ಯ vs ಮಿಥ್ಯ ಎಂಬ ಜಾಮದಾರರ ಇಂಗ್ಲಿಷ್ ಪುಸ್ತಕ ಮತ್ತದನ್ನು ಕನ್ನಡಕ್ಕೆ ಅನುವಾದಿಸಿರುವ ಗೊರುಚ ಅವರ ಪುಸ್ತಕವನ್ನು ಶ್ರೀಗಳು ಗಮನಿಸಿದರೆ ಅವಹೇಳನದ ಪರಮಾವಧಿ ಕಾಣುತ್ತದೆ. ಆದರೆ, ಇದೆಲ್ಲವೂ ತಿಳಿದಿದ್ದೂ ಕೃತಿಯ ಮಾರಾಟಕ್ಕೆ ತಮ್ಮಲ್ಲಿ ಅವಕಾಶ ಕಲ್ಪಿಸಿರುವುದು ಶ್ರೀಗಳ ಪರೋಕ್ಷ ಪಂಚಾಚಾರ್ಯ ದ್ವೇಷವನ್ನೇ ಹೇಳುತ್ತದಲ್ಲವೇ? ಇತರರ ಅವಹೇಳನವನ್ನು ಬಿಡಿ, ಧರ್ಮಭಂಜಕ ಜಾಮದಾರರು ಬೆಳಗಾವಿ ರುದ್ರಾಕ್ಷಿ ಮಠ ವಾಣಿಜ್ಯ ಸಂಕೀರ್ಣದಲ್ಲಿರುವ ವಚನ ಟಿವಿ ಕಚೇರಿಯಲ್ಲಿ ಕುಳಿತು ಮಾಡಿದ ಸಂದರ್ಶನದಲ್ಲಿ, ಯಡೆಯೂರು ಸಿದ್ಧಲಿಂಗೇಶ್ವರರು ವಚನಗಳಲ್ಲಿ ವೀರಶೈವ ಪದ ಬಳಸಿದ ಭ್ರಷ್ಟ ಎಂದರೂ ಯಡೆಯೂರು ಸಿದ್ಧಲಿಂಗೇಶ್ವರರ ಪೀಠದ ಮೇಲೆಯೇ ಕುಳಿತ ಪೂಜ್ಯ ಸಿದ್ಧರಾಮ ಶ್ರೀಗಳಿಗೆ ಯಾವುದೇ ನೋವು ಬಾಧಿಸಲಿಲ್ಲ. ಈಗಲೂ ಶ್ರೀಗಳು ಜಾಮದಾರರೊಟ್ಟಿಗೆ ಧರ್ಮ ಕಾಯಕ ಸಲ್ಲಿಸುತ್ತಿದ್ದಾರೆ, ಏಕೆ? ಆಗೆಲ್ಲ ಶ್ರೀಗಳಿಗೆ ತಾತ್ವಿಕ ನೆಲೆಯಲ್ಲಿ ವಿರೋಧಿಸಬೇಕೇ ಹೊರತು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎನ್ನುವ ಅರಿವು ಮೂಡಿಸುವ ಆಲೋಚನೆ ಏಕೆ ಮೂಡಲಿಲ್ಲ?

ಇದೆಲ್ಲಕ್ಕೂ ಮುಕುಟಮಣಿಯಂತೆ ಇದೇ ಸರಣಿಯಲ್ಲಿ ಜಾಮದಾರ ಮತ್ತು ಯಾಪಲಪರವಿ ಇಬ್ಬರೂ ಜಂಟಿಯಾಗಿ ಸಾಂಸ್ಥೀಕರಣದ ಅಧ್ವಾನ ಮಾಡಿದ ಯಡೆಯೂರು ಸಿದ್ಧಲಿಂಗೇಶ್ವರ ಎಂದರು. ಪೂಜ್ಯ ಸಿದ್ಧರಾಮ ಶ್ರೀಗಳ ಸುಪರ್ದಿಯಲ್ಲಿರುವ ಕಟ್ಟಡದಲ್ಲಿ ಕುಳಿತು ಮತ್ತು ಪೂಜ್ಯ ಸಿದ್ಧರಾಮ ಶ್ರೀಗಳ ಸಹಯೋಗವನ್ನು ಹೊಂದಿರುವ ವ್ಯಕ್ತಿಗಳು ದೂಷಿಸುವಂತೆ ಸಾಂಸ್ಥೀಕರಿಸಿ ಮಹಾಸಂಸ್ಥಾನ ಎನ್ನುವ ಪೀಠದ ಮೇಲೆ ಈಗಲೂ ಶ್ರೀಗಳು ಏಕೆ ಕುಳಿತಿದ್ದಾರೆ? ಇದು ಪೂಜ್ಯ ಸಿದ್ಧರಾಮ ಶ್ರೀಗಳ ಧಾರ್ಮಿಕ ಆಧ್ಯಾತ್ಮಿಕ ಭಾವನೆಯನ್ನು ಬಿಡಿ, ಮಾನವ ಸಹಜ ನೈತಿಕತೆಯನ್ನೂ ಬಾಧಿಸದೆ? ಹೀಗೆ ಪೂಜ್ಯ ಸಿದ್ಧರಾಮ ಶ್ರೀಗಳು ಖುದ್ದು ತಾವು ಕುಳಿತ ಘನ ಸಂಸ್ಥಾನದ ಪೀಠದ ಘನತೆಯನ್ನು ಅವರ ಬಳಗದವರು ಅವಹೇಳಿಸುತ್ತಿದ್ದರೂ ಮಂದಸ್ಮಿತರಾಗಿ ಅವರೊಟ್ಟಿಗೆ ವೇದಿಕೆ ಯನ್ನು ಹಂಚಿಕೊಂಡಿರುವಾಗ ಅವರಲ್ಲಿ ಶ್ರೀ ಫ.ಗು.ಹಳಕಟ್ಟಿಯವರ ಬಗ್ಗೆ ವಿಶೇಷ ಗೌರವವಿರಲು ಸಾಧ್ಯವೇ? ವಿಪರ್ಯಾಸವೆಂದರೆ ಪೂಜ್ಯರು ಮೊನ್ನೆಯಷ್ಟೇ ರಾಷ್ಟ್ರೀಯ ವೀರ ಗಣಾಚಾರ ಸಂಘದ ವತಿಯಿಂದ ಎರಡು ದಿನಗಳ ಬಸವ ಕಾರ್ಯಕರ್ತರ ತರಬೇತಿ ಶಿಬಿರವನ್ನು ಏರ್ಪಡಿಸಿ ಪಾಲ್ಗೊಂ ಡಿದ್ದರು.

ತಾವೇ ಆಯೋಜಿಸಿ ಪ್ರಾಯೋಜಕತ್ವ ನೀಡಿದ್ದ ಶಿಬಿರದಲ್ಲಿ ಪೂಜ್ಯ ಡಾ. ಸಿದ್ಧರಾಮ ಸ್ವಾಮೀಜಿ ಆಸಕ್ತ ವಿದ್ಯಾರ್ಥಿಯಂತೆ ಸಂಪೂರ್ಣ ಅವಧಿ ಕುಳಿತು ತರಬೇತಿ ಆಲಿಸಿದ್ದು ಶಿಬಿರದ ವಿಶೇಷ ಆಕರ್ಷಣೆಯಾಯಿತು ಎಂದು ಭಕ್ತರು ಜಯಕಾರ ಹಾಕಿದ್ದಾರೆ. ಅಂದ ಹಾಗೆ ಈ ಶಿಬಿರದ ನೇತೃತ್ವವನ್ನು ವಹಿಸಿದವರಲ್ಲಿ ಶರಣತತ್ವ(?) ಚಿಂತಕ ಡಾ.ಜೆ.ಎಸ್.ಪಾಟೀಲ ಒಬ್ಬರು.

ಈ ಜೆ.ಎಸ್. ಪಾಟೀಲರ ಒಂದೇ ಒಂದು ಬರಹ, ಭಾಷಣ, ಬದುಕಿನಲ್ಲಿ ಇವನಾರವ ಇವನಾರವ ಇವನಾರವ ಎಂಬ ವಿತ್ತಂಡ ಜನಾಂಗೀಯ ದ್ವೇಷ, ವೈಯಕ್ತಿಕ ಅವಹೇಳನದ ಸರಕಿದೆಯೇ ಹೊರತು ಇವ ನಮ್ಮವನೆಂಬ ತೃಣಮಾತ್ರ ಲವಲೇಶವೂ ಇಲ್ಲ. ನನ್ನನ್ನೇ ಈ ಚಿಂತಕರು ವಿವಾಹ ವಿಚ್ಛೇದಿತ ಎಂದು ರಾಜಾರೋಷವಾಗಿ ಸುಳ್ಳು ಪ್ರಚಾರ ಮಾಡಿದ್ದರು.

ವರ್ತಮಾನದ ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ಓರ್ವ ವ್ಯಕ್ತಿಯ ಮಾಹಿತಿಯನ್ನೇ ಅರಿಯಲಾಗದ ಈ ಪಾಟೀಲರು ಹನ್ನೆರಡನೇ ಶತಮಾನದ ಶರಣರನ್ನಾಗಲಿ, ವಚನಗಳನ್ನಾಗಲಿ ಅರಿಯುವ ಬದ್ಧಿ ಮತ್ತೆ ಇರಲು ಸಾಧ್ಯವೇ! ಇಂಥವರಿಂದ ವಿಧೇಯ ವಿದ್ಯಾರ್ಥಿಯಂತೆ ಗಣಾಚಾರ ಪಾಠ ಮಾಡಿಸಿಕೊಂಡ ಪೂಜ್ಯ ಸಿದ್ಧರಾಮ ಶ್ರೀಗಳು ಇನ್ಯಾವ ಗಣಾಚಾರ ಮಾಡಲು ಸಾಧ್ಯ?ಗಣಾಚಾರವೆಂದರೆ ಏನು? ಗಣ ಎಂದರೆ ಗುಂಪು ಸಮೂಹ ಎಂಬ ಅರ್ಥವಿದೆ. ಆದರೆ, ವೀರಶೈವ ಲಿಂಗಾಯತದಪಂಚಾಚಾರ ಆಚರಣೆಗಳಲ್ಲಿ ಒಂದಾದ ಗಣಾಚಾರದ ಹಿನ್ನೆಲೆಯಲ್ಲಿ ಗಣ ಎಂದರೆ ಶಿವನ ಪ್ರಮಥ ಗಣಂಗಳ ಗುಂಪು ಎಂದರ್ಥ. ಈ ಗಣಂಗಳ ಆಚಾರವೆಂದರೆ ಶುದ್ಧ ಧಾರ್ಮಿಕ ಆಚರಣೆಯನ್ನು ಸ್ವಯಂ ಆಚರಿಸಿ ಎತ್ತಿಹಿಡಿಯುವುದು.

ಆತ್ಮಶುದ್ಧಿಯ ಈ ಆಚಾರವು ಗಣಾಚಾರರ ಆದ್ಯ ಕರ್ತವ್ಯವಾಗಿದೆ. ಈ ಆದ್ಯ ಕರ್ತವ್ಯವನ್ನೇ ಬಸವಣ್ಣನು, ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದಡೆ ಸನು ನಿಮ್ಮ ಗಣಾಚಾರಕ್ಕಯ್ಯಾ. ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡಡೆ ಬಲ್ಲೆ, ಮುಂದೆ ಭವ ಘೋರ ನರಕವೆಂಬುದ. ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು. ಅಳವರಿಯದೆ ನುಡಿದೆನು. ಕಡೆ ಮುಟ್ಟಿ ಸಲೆಸದಿದ್ದಡೆ ತಲೆದಂಡ, ತಲೆದಂಡ, ಕೂಡಲಸಂಗಮದೇವಾ ಎಂದಿದ್ದಾನೆ. ಅಂದರೆ ಖುದ್ದು ಕಠಿಣಾಚರಣೆಗೆ ಒಳಗಾದವ ಮಾತ್ರ ಗಣಾಚಾರಕ್ಕೆ ಅನುವಾಗಬಲ್ಲನು. ಅದನ್ನೇ ಜನಪದರು ಮನೆ ಗೆದ್ದು ಮಾರು ಗೆಲ್ಲು ಎಂದಿದ್ದಾರೆ.

ಹುದೆ ಗಣಾಚಾರ ಎಂದಿದ್ದಾನೆ. ಹಾಗೆಯೇ, ಅಷ್ಟಾವರಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸ ಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂ ಬೆನಯ್ಯಾ ಎಂದಿದ್ದಾನೆ.

ಖುದ್ದು ಶುದ್ಧಾಚಾರಣೆ ಆಚರಿಸದೆ ಬರಿದೆ ಬಡಿವಾರ ಮಾಡುವ ನಡೆನುಡಿ ಒಂದಾಗಿರದವರು ಗಣಾಚಾರಕ್ಕೆ ಸಲ್ಲರು. ಹಾಗಾಗಿಯೇ ಅಕ್ಕಮಹಾದೇವಿಯು, ಇತಿ ಪಂಚಸ್ವರೂಪೋ ಯಹಂ ಗಣಾಚಾರಃ ಪ್ರಕೀರ್ತಿತಃ ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದುಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿ ಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ ಎಂದಿದ್ದಾಳೆ.

ಈಗ ಪೂಜ್ಯ ತೋಂಟದ ಸಿದ್ಧರಾಮ ಜಗದ್ಗುರುಗಳ ಹಿಂದೆ ಮುಂದೆ ಸುತ್ತೆಲ್ಲ ಇರುವ ಜಾಮದಾರ, ಜೆ.ಎಸ್. ಪಾಟೀಲ್, ಯಾಪಲಪರವಿ, ಸಾಣೇಹಳ್ಳಿ ಶ್ರೀ ಮುಂತಾದ ಚಪ್ಪನ್ನೈವತ್ತಾರು ಬಣಂಗಳೆ ಲ್ಲರೂ ಬಸವಣ್ಣನ ಇವನಾರವ ಇವನಾರವ ಎಂಬ ಒಂದೇ ಒಂದು ಶಿಶುವಿಹಾರದ ವಚನವನ್ನೂ ಪಾಲಿಸಿದ್ದಾರೆ.

ಶಿವನಿಂದೆ ಗುರುನಿಂದೆ, ಆಚಾರನಿಂದೆ, ಜಂಗಮನಿಂದೆಯನ್ನು ಅವ್ಯಾಹತವಾಗಿ ಮಾಡುತ್ತಿದ್ದಾರೆ. ಅಕ್ಕಮಹಾದೇವಿಯ ವಚನದ ಸಾಕಾರರೂಪಿಗಳಾಗಿದ್ದಾರೆ. ಹೀಗಿದ್ದೂ ಈ ಬಣಂಗಳು ಖುದ್ದು ತಮ್ಮನ್ನು ತಾವು ಗಣಾಚಾರರು ಎಂದು ಘೋಷಿಸಿಕೊಂಡು ಬಾಣಂಗಳ ಬಿಡುತ್ತಿದ್ದಾರೆ. ಇಂತಹ ವರಿಗೆ ಪೂಜ್ಯ ಸಿದ್ಧರಾಮ ಶ್ರೀಗಳು ಪ್ರಾಯೋಜಕತ್ವದ ಬಿಲ್ಲು ಮತ್ತು ಬಿಲ್ ಅನ್ನು ನೀಡಿದ್ದಾರೆ!

ಇಂದು ನಿಜದ ಗಣಾಚಾರವನ್ನು ವಿಶ್ವವಾಣಿ ಪತ್ರಿಕೆ ಮಾಡುತ್ತಿದೆ. ಸುಳ್ಳನ್ನು ಸುಳ್ಳೆಂದು, ಅನಾಚಾರವನ್ನು ಅನಾಚಾರವೆಂದು ಅನಾಚಾರಿಗಳನ್ನು ಹೆಸರಿಸಿ ಸಾಕ್ಷ್ಯ ಸಮೇತವಾಗಿ ನೇರಾ ನೇರವಾಗಿ ದೃಢತೆಯಿಂದ ಬಸವಣ್ಣ, ಚೆನ್ನಬಸವಣ್ಣರ ಗಣಾಚಾರವನ್ನು ಪಾಲಿಸುತ್ತಿದೆ. ಈ ಗಣಾಚಾರ ನೀತಿಯನ್ನೇ ಈ ಲೇಖನ ಸಹ ಪಾಲಿಸುತ್ತಿದೆ. ಆದರೆ, ಶ್ರೀಗಳು ಮತ್ತವರ ಹಿಂಬಾಲಕರು? ಹೀಗೆ ಶ್ರೀಗಳ ಮತ್ತವರ ಹಿಂಬಾಲಕರ ನಡೆನುಡಿಗಳು ಬಸವಣ್ಣನೇ ಹೇಳಿದಂತೆ, ಅವರ ನಡೆಯೊಂದು ನುಡಿಯೊಂದಾದಡೆ ಶಿವಾಚಾರಕ್ಕವರು ಸಲ್ಲರಯ್ಯಾ!

ಬಲ್ಲನು, ಸಾತ್ವಿಕರಲ್ಲದವರನೊಲ್ಲನು. ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು. ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮ ದೇವನು ಎಂದಂತಲ್ಲವೇ? ಈಗ ಅದನ್ನೇ ಇಂದು ಎಚ್ಚೆತ್ತ ನನ್ನಂತಹ ಯುವಜನತೆ ಪ್ರಶ್ನಿಸುತ್ತಿದೆ. ಹೀಗಿರುವಾಗ ಪೂಜ್ಯ ಸಿದ್ಧರಾಮ ಶ್ರೀಗಳು ಮಂದಸ್ಮಿತ ರಾಗದೆ ‘ನಾನಲ್ಲ ನಾನಲ್ಲ, ಪತ್ರದ ಮಾಲೀಕ ನಾನಲ್ಲ’ ಎನ್ನುವುದು ಎಷ್ಟು ಸರಿ? ಮೂಲತಃ ಸೌಮ್ಯ, ಸಾತ್ವಿಕ ವ್ಯಕ್ತಿತ್ವದ, ತಮ್ಮ ಆಧ್ಯಾತ್ಮಿಕ ಪಥವನ್ನು ಶಿವಾಚಾರ್ಯರಾಗಿಯೇ ಆರಂಭಿಸಿದ್ದ ಪೂಜ್ಯರು ಗುರುವಿರಕ್ತ ಸಮನ್ವಯದ ಹರಿಕಾರ ರಾಗಬೇಕಿತ್ತು.

ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿ ಬಣಂಗಳ ಮನ್ಮಂದ ಬಾಣಕ್ಕೆ ಸಿಲುಕಿ ಇಂದು ಮಂದಸ್ಮಿತ ರಾಗಿದ್ದಾರೆ. ಈಗಲಾದರೂ ಪೂಜ್ಯ ಸಿದ್ಧರಾಮ ಶ್ರೀಗಳು ತಮ್ಮ ಆತ್ಮಲಿಂಗದ ಆತ್ಮಸಾಕ್ಷಿಯಾಗಿ ಆತ್ಮಾವಲೋಕನ ಮಾಡಿಕೊಂಡು ವೀರ ಗಣಾಚಾರದನ್ವಯ ಅಖಂಡ ವೀರಶೈವ ಲಿಂಗಾಯತ ಧರ್ಮದ ಧರ್ಮಜ್ಯೋತಿಯಾಗಬೇಕು. ಅದಕ್ಕೆ ಮೊದಲ ಹೆಜ್ಜೆಯಾಗಿ ಈ ಪ್ರಶಂಸನಾ ಪತ್ರದ ಖೊಟ್ಟಿತನದ ಬಗ್ಗೆ ಮಂಗಳ ಹಾಡಿ ಶ್ರೀ ಪೀಠದ ಘನತೆಯನ್ನು ಎತ್ತಿ ಹಿಡಿದು ಪಟ್ಟಭದ್ರ ಹಿತಾಸಕ್ತಿ ಬಣಂಗಳ ಕಪಿಮುಷ್ಟಿಯಿಂದ ಬಿಡುಗಡೆ ಪಡೆಯಬೇಕು. ಏಕೆಂದರೆ ಈ ಪತ್ರದಲ್ಲಿ ಫ.ಗು. ಹಳಕಟ್ಟಿಯವರನ್ನು ಓರ್ವ ಮೌಢ್ಯದ ಪ್ರತಿ ರೂಪದ ಯಕಶ್ಚಿತ ವ್ಯಕ್ತಿಗೆ ಸಮೀಕರಿಸಿದ ಪರೋಕ್ಷ ಅವಹೇಳನವಿದೆ.

ನಂತರ ಬಣಂಗಳ ಭಟರು ಮಾಡಿರುವ ತೋಂಟದ ಸಿದ್ಧಲಿಂಗೇಶ್ವರರ ಪರಂಪರೆಯ ಅಧಃಪತನ ವಿದೆ. ಶಿವಾಚಾರದ ಅವಹೇಳನವಿದೆ. ಶಿವನಿಂದೆಯಿದೆ, ಗುರುಲಿಂಗ ಜಂಗಮ ನಿಂದೆಯಿದೆ. ಇದೆಲ್ಲವೂ ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನದ ಘನತೆಗೆ ತಕ್ಕುದಲ್ಲ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದಡೆ ನಿಲಲುಬಾರದು.

ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,

ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲುನಂಜಾಗಿ ಕೊಲುವಡೆ,

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!