Vishweshwar Bhat Column: ಜೈಲ್ ಸಿಂಗ್ ಸಣ್ಣತನ
ಅಂಥ ಮನುಷ್ಯ ಜೈಲು ಸೇರಿದ ಬಳಿಕ ಈಗ ನೆಮ್ಮದಿ ಸಿಕ್ಕಂತಾಗಿದೆ’ ಎಂದು ಜೈಲ್ ಸಿಂಗ್ ತಮ್ಮ ಅಸಹನೆ ಮತ್ತು ಸಿಟ್ಟನ್ನು ತೋಡಿಕೊಂಡರಂತೆ. ಗುರ್ಬಚನ್ ಜಗತ್ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಇಷ್ಟು ಸಣ್ಣದಾಗಿ ಯೋಚಿಸುತ್ತಾರಲ್ಲ ಎಂದು ಅನಿಸಿತಂತೆ. ಅಷ್ಟಕ್ಕೂ ಜೈಲ್ ಸಿಂಗ್ ಅವರು ಗುರ್ಬಚನ್ ಜಗತ್ ಅವರನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಳ್ಳಲೂ ಕಾರಣ ವಿತ್ತು.

-

ಸಂಪಾದಕರ ಸದ್ಯಶೋಧನೆ
ಇದು ಕೆಲ ತಿಂಗಳ ಹಿಂದಿನ ವಿಷಯ. 1966ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಗುರ್ಬಚನ್ ಜಗತ್ ಅವರು ಬರೆದ ಅಂಕಣ ಬರಹವೊಂದನ್ನು ಓದುತ್ತಿದ್ದೆ. ಅವರು ಪಟಿಯಾಲದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ನಡೆದ ಒಂದು ಪ್ರಸಂಗವನ್ನು ಮೆಲುಕು ಹಾಕಿದ್ದಾರೆ. ಆ ದಿನಗಳಲ್ಲಿ ಪತ್ರಿಕೆಗಳೆಂದರೆ, ಅಧಿಕಾರದಲ್ಲಿದ್ದವರು ಎಷ್ಟು ಹೆದರುತ್ತಿದ್ದರು ಎಂಬುದನ್ನು ಪ್ರತಿಪಾದಿಸಲು ಅವರು ಆ ಪ್ರಸಂಗವನ್ನು ಪ್ರಸ್ತಾಪಿಸಿದ್ದರು.
ಆಗ ಗ್ಯಾನಿ ಜೈಲ್ ಸಿಂಗ್ ಅವರು ಪಂಜಾಬಿನ ಮುಖ್ಯಮಂತ್ರಿಯಾಗಿದ್ದರು. 1975ರ ಒಂದು ದಿನ, ಜೈಲ್ ಸಿಂಗ್ ಅವರು ತಮ್ಮ ಕಾರಿನಲ್ಲಿ ವಿಹಾರ ಹೊರಟಿದ್ದರು. ತಮ್ಮ ಕಾರಿನಲ್ಲಿ ಕುಳಿತುಕೊಳ್ಳು ವಂತೆ ಗುರ್ಬಚನ್ ಜಗತ್‌ಗೆ ಹೇಳಿದರಂತೆ. ಮುಖ್ಯಮಂತ್ರಿಯವರ ಆದೇಶವನ್ನು ಮೀರಲು ಸಾಧ್ಯವೇ? ಗುರ್ಬಚನ್ ಜಗತ್ ಮುಖ್ಯಮಂತ್ರಿಯವರ ಕಾರಿನಲ್ಲಿ ಕುಳಿತರಂತೆ. ಕಾರು ಪಟಿಯಾಲ ಜೈಲಿನ ಮುಂದೆ ಹೋಗುತ್ತಿದ್ದಾಗ ಜೈಲ್ ಸಿಂಗ್, ‘ಈಗ ಜೈಲಿನಲ್ಲಿರುವ ಖೈದಿಗಳಿಗೆ ಸುದ್ದಿಯ ಕೊರತೆ ಇಲ್ಲ ಬಿಡಿ’ ಎಂದು ಹೇಳಿದರಂತೆ.
ಗುರ್ಬಚನ್ ಜಗತ್‌ಗೆ ಮುಖ್ಯಮಂತ್ರಿಗಳ ವ್ಯಂಗ್ಯ ಅರ್ಥವಾಯಿತಂತೆ. ಕಾರಣ ಆ ದಿನಗಳಲ್ಲಿ ‘ಹಿಂದ್ ಸಮಾಚಾರ್’ ಸಮೂಹದ ಮಾಲೀಕ ಲಾಲಾ ಜಗತ್ ನಾರಾಯಣ ಅವರನ್ನು ಬಂಧಿಸಿ ಪಟಿಯಾಲ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಕಾರಿನಲ್ಲಿ ಮುಖ್ಯಮಂತ್ರಿ ಜತೆಗಿದ್ದ ಐಎಎಸ್ ಅಧಿಕಾರಿಗೆ ಮುಖ್ಯಮಂತ್ರಿ ಹೇಳಿದ್ದು ಗೊತ್ತಾಗಲಿಲ್ಲ.
ಇದನ್ನೂ ಓದಿ: Vishweshwar Bhat Column: ಅಂದು ಜತ್ತಿ ಹಾಗೆ ಯೋಚಿಸಿದ್ದರಾ ?
ಅವರು, ‘ಸಿಎಂ ಸಾಬ್, ಖೈದಿಗಳಿಗೇಕೆ ಸುದ್ದಿಯ ಕೊರತೆ ಇಲ್ಲ?’ ಎಂದು ಕೇಳಿದರಂತೆ. ಅದಕ್ಕೆ ಜೈಲ್ ಸಿಂಗ್, ‘ಪತ್ರಕರ್ತರನ್ನು ಜೈಲಿನಲ್ಲಿಟ್ಟರೆ, ಖೈದಿಗಳಿಗೆ ಪತ್ರಿಕೋದ್ಯಮ ಗೊತ್ತಾಗುತ್ತದೆ ಅಲ್ಲವೇ? ಪತ್ರಿಕಾ ಮಾಲೀಕರೇ ಈಗ ಜೈಲಿನಲ್ಲಿದ್ದಾರಲ್ಲ?’ ಎಂದು ಹೇಳಿ ನಕ್ಕರಂತೆ. ‘ಗುರ್ಬಚನ್ ಜಗತ್ ಜೀ, ಲಾಲಾ ಜಗತ್ ನಾರಾಯಣ ಅವರ ಅರೋಗ್ಯ ಹೇಗಿದೆಯಂತೆ?’ ಎಂದು ಕೇಳಿದರಂತೆ. ಅದಕ್ಕೆ ಗುರ್ಬಚನ್ ಜಗತ್, ‘ಜೈಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ಹೇಳಿದರಂತೆ.
‘ನೋಡಿ, ಈಗ ನಾವು ನಮ್ಮ ಅಧಿಕಾರವನ್ನು ಚೆನ್ನಾಗಿ ಚಲಾಯಿಸಬೇಕು. ಖುಷಿಯಿಂದ ರಾಜ್ಯ ವನ್ನಾಳಬೇಕು. (ಜೈಲಿನ ಕಡೆ ತೋರಿಸುತ್ತ) ಅಲ್ಲಿರುವವರು ಏನು ಬರೆಯುತ್ತಾರೆಂಬ ಬಗ್ಗೆ ಜಾಸ್ತಿ ತಲೆಬಿಸಿ ಮಾಡಿಕೊಳ್ಳಬಾರದು’ ಎಂದರಂತೆ. ಲಾಲಾ ಜಗತ್ ನಾರಾಯಣ ಅವರು ಜೈಲು ಸೇರಿದ್ದ ರಿಂದ ಜೈಲ್ ಸಿಂಗ್ ನಿರಾಳರಾಗಿದ್ದರು.
ಅದಕ್ಕೂ ಒಂದು ವಾರ ಮೊದಲು, ಜೈಲ್ ಸಿಂಗ್ ಪಟಿಯಾಲ ಜೈಲಿಗೆ ಭೇಟಿ ನೀಡಿ, ಲಾಲಾ ಜಗತ್ ನಾರಾಯಣರ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದರು. ಆದರೆ ಅವರು ಜೈಲು ಸೇರು ತ್ತಿದ್ದಂತೆ ಜೈಲ್ ಸಿಂಗ್ ವರಸೆಯೇ ಬದಲಾಗಿತ್ತು. ‘ಆ ಮಹಾಶಯ (ಲಾಲಾ ಜಗತ್ ನಾರಾಯಣ) ನನ್ನನ್ನು ಪ್ರತಿದಿನ ಕಾಡಿದ. ಈ ದಿನ ಬೆಳಗ್ಗೆ ಏನು ಕಾದಿದೆಯೋ ಎಂಬ ಅಂಜಿಕೆಯಲ್ಲೇ ನಾನು ಪ್ರತಿ ಬೆಳಗನ್ನು ಸ್ವಾಗತಿಸಿದ್ದಾಯಿತು.
ಅಂಥ ಮನುಷ್ಯ ಜೈಲು ಸೇರಿದ ಬಳಿಕ ಈಗ ನೆಮ್ಮದಿ ಸಿಕ್ಕಂತಾಗಿದೆ’ ಎಂದು ಜೈಲ್ ಸಿಂಗ್ ತಮ್ಮ ಅಸಹನೆ ಮತ್ತು ಸಿಟ್ಟನ್ನು ತೋಡಿಕೊಂಡರಂತೆ. ಗುರ್ಬಚನ್ ಜಗತ್ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಇಷ್ಟು ಸಣ್ಣದಾಗಿ ಯೋಚಿಸುತ್ತಾರಲ್ಲ ಎಂದು ಅನಿಸಿತಂತೆ. ಅಷ್ಟಕ್ಕೂ ಜೈಲ್ ಸಿಂಗ್ ಅವರು ಗುರ್ಬಚನ್ ಜಗತ್ ಅವರನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಳ್ಳಲೂ ಕಾರಣ ವಿತ್ತು. ಅವರು ಲಾಲಾ ಜಗತ್ ನಾರಾಯಣ ಅವರಿಗೆ ಆತ್ಮೀಯರಾಗಿದ್ದರು.
ಅವರು ಜೈಲಿನಲ್ಲಿರುವುದನ್ನು ಕಂಡು ಮುಖ್ಯಮಂತ್ರಿಗಳು ಸಂತಸಪಟ್ಟ ಸಂಗತಿಯನ್ನು ನೇರವಾಗಿ ನಾರಾಯಣರಿಗೆ ತಿಳಿಸಲಿ ಎಂಬುದೂ ಉದ್ದೇಶವಾಗಿತ್ತು. ಕಾರಣ ಎಂದೂ ಕಾರನ್ನೇರಿ ಎಂದು ಹೇಳದ ಜೈಲ್ ಸಿಂಗ್, ಆ ದಿನ ಗುರ್ಬಚನ್ ಜಗತ್ ಅವರನ್ನು ಮಾತ್ರ ತಮ್ಮ ವಾಹನದಲ್ಲಿ ಕುಳ್ಳಿರಿಸಿ ಕೊಂಡಿದ್ದರು.
ಅದನ್ನು ಬಿಟ್ಟರೆ ಅವರಿಗೆ ಬೇರೆ ಕಾರಣಗಳೇ ಇರಲಿಲ್ಲ. ಅದಾದ ಬಳಿಕ ಲಾಲಾ ಜಗತ್ ನಾರಾಯಣ ರನ್ನು ಹಲವು ಸಲ ಭೇಟಿ ಮಾಡಿದರೂ, ಈ ವಿಷಯವನ್ನು ಮಾತ್ರ ಗುರ್ಬಚನ್ ಜಗತ್ ಬೇರೆಯ ವರಿಗೆ ಹೇಳಲಿಲ್ಲ. ಇಬ್ಬರೂ ನಿಧನರಾದ ಬಳಿಕ ಆ ಅಂಕಣದಲ್ಲಿ ಪ್ರಸ್ತಾಪಿಸಿದ್ದರು.