ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mohan Vishwa Column: ಕಿಬುಟ್ಜ್: ಇಸ್ರೇಲ್‌ʼನ ಸಹಕಾರಿ ಪ್ರಯೋಗ

ಆರಂಭಿಕ ಕಿಬುಟ್ಜ್‌ನ ಮೂಲ ತತ್ವ ಸರಳವಾಗಿತ್ತು. ‘ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು.’ ಕೃಷಿ ಉತ್ಪಾದನೆ ಸಾಮೂಹಿಕವಾಗಿತ್ತು, ಊಟ, ಮಕ್ಕಳ ಆರೈಕೆ, ಶಿಕ್ಷಣ, ಕೆಲಸ ಮತ್ತು ಹಲವು ಸಾಮಾಜಿಕ ಸೇವೆಗಳನ್ನು ಸಮುದಾಯದ ಮಟ್ಟದಲ್ಲಿ ನಿರ್ವಹಿಸಲಾಗುತ್ತಿತ್ತು. ಇಸ್ರೇಲ್ ದೇಶ ಸ್ಥಾಪನೆಯ ಮೊದಲು ಕಿಬುಟ್ಜ್‌ಗಳು ಕೇವಲ ಕೃಷಿ ಕೇಂದ್ರಗಳಾಗಿರಲಿಲ್ಲ; ಅವು ಹೊಸ ವಸತಿ ಪ್ರದೇಶಗಳನ್ನು ನಿರ್ಮಿಸುವ ಸಾಧನಗಳಾಗಿದ್ದವು.

Mohan Vishwa Column: ಕಿಬುಟ್ಜ್: ಇಸ್ರೇಲ್‌ʼನ ಸಹಕಾರಿ ಪ್ರಯೋಗ

-

ವೀಕೆಂಡ್‌ ವಿತ್ ಮೋಹನ್

ಇಸ್ರೇಲ್ ದೇಶವನ್ನು ಅರ್ಥ ಮಾಡಿಕೊಳ್ಳುವಾಗ ‘ಕಿಬುಟ್ಜ್’ ಎಂಬ ಪದವನ್ನು ಅರ್ಥ ಮಾಡಿಕೊಳ್ಳು‌ ವುದು ಅತ್ಯಂತ ಮುಖ್ಯ. ಇಸ್ರೇಲ್‌ನ ಕೃಷಿ ಅಭಿವೃದ್ಧಿ, ಗ್ರಾಮೀಣ ವಸತಿ, ಗಡಿ ಪ್ರದೇಶಗಳ ಅಭಿವೃದ್ಧಿ, ಕೈಗಾರಿಕೆ, ಸಮುದಾಯ ಜೀವನ ಮತ್ತು ಸಾಮಾಜಿಕ ಭದ್ರತೆಯ ಇತಿಹಾಸದಲ್ಲಿ ಕಿಬುಟ್ಜ್‌ಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ.

ಕಿಬುಟ್ಜ್, ಸ್ವಯಂಪ್ರೇರಿತ ಸದಸ್ಯತ್ವದ ಆಧಾರದ ಮೇಲೆ ರೂಪುಗೊಂಡ ಸಹಕಾರಿ ಸಮುದಾಯ. ಅದರ ಸ್ವರೂಪವೂ ಕಳೆದ ಒಂದು ಶತಮಾನದಲ್ಲಿ ಬಹಳ ಬದಲಾಗಿದೆ. ಇಂದಿನ ಅನೇಕ ಕಿಬುಟ್ಜ್‌ ಗಳು ಮಾರುಕಟ್ಟೆ ಆರ್ಥಿಕತೆಯೊಂದಿಗೆ ಕೆಲಸ ಮಾಡುತ್ತಿವೆ; ಸದಸ್ಯರಿಗೆ ವೈಯಕ್ತಿಕ ವೇತನವಿದೆ, ಖಾಸಗಿ ಜೀವನವಿದೆ ಮತ್ತು ಕಿಬುಟ್ಜ್‌ಗಳೇ ವಿವಿಧ ಕೈಗಾರಿಕಾ ಹಾಗೂ ವಾಣಿಜ್ಯ ಉದ್ಯಮಗಳನ್ನು ನಡೆಸುತ್ತಿವೆ. ಆ ಕಾಲದ ಪರಿಸ್ಥಿತಿ ಇಂದಿನ ಇಸ್ರೇಲ್‌ನಿಂದ ಸಂಪೂರ್ಣ ಭಿನ್ನವಾಗಿತ್ತು. ‌

ನೀರಿನ ಕೊರತೆ, ಕೃಷಿಗೆ ಕಷ್ಟಕರವಾದ ಭೂಮಿ, ಬಂಡವಾಳದ ಕೊರತೆ, ಮಲೇರಿಯಾ ರೋಗಗಳ ಸಮಸ್ಯೆ ಮತ್ತು ಭದ್ರತಾ ಸವಾಲುಗಳು ಇದ್ದವು. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಇಂತಹ ಪರಿಸ್ಥಿತಿಯಲ್ಲಿ ಹೊಸ ಕೃಷಿ ನೆಲೆ ನಿರ್ಮಿಸುವುದು ಸುಲಭವಾಗಿರಲಿಲ್ಲ. ಆದ್ದರಿಂದ ಹಲವರು ತಮ್ಮ ಶ್ರಮ, ಭೂಮಿ, ಕೃಷಿ ಉಪಕರಣಗಳು ಮತ್ತು ಆದಾಯವನ್ನು ಒಟ್ಟುಗೂಡಿಸಿ ಸಾಮೂಹಿಕ ವ್ಯವಸ್ಥೆ ರೂಪಿಸಿದರು.

ಇದನ್ನೂ ಓದಿ: Mohan Vishwa Column: ಗುಜರಾತ್‌ʼನಿಂದ ದೆಹಲಿ: ಮೋದಿ ಪಯಣ

ಆರಂಭಿಕ ಕಿಬುಟ್ಜ್‌ನ ಮೂಲ ತತ್ವ ಸರಳವಾಗಿತ್ತು. ‘ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು.’ ಕೃಷಿ ಉತ್ಪಾದನೆ ಸಾಮೂಹಿಕವಾಗಿತ್ತು, ಊಟ, ಮಕ್ಕಳ ಆರೈಕೆ, ಶಿಕ್ಷಣ, ಕೆಲಸ ಮತ್ತು ಹಲವು ಸಾಮಾಜಿಕ ಸೇವೆಗಳನ್ನು ಸಮುದಾಯದ ಮಟ್ಟದಲ್ಲಿ ನಿರ್ವಹಿಸಲಾಗುತ್ತಿತ್ತು. ಇಸ್ರೇಲ್ ದೇಶ ಸ್ಥಾಪನೆಯ ಮೊದಲು ಕಿಬುಟ್ಜ್‌ಗಳು ಕೇವಲ ಕೃಷಿ ಕೇಂದ್ರಗಳಾಗಿರಲಿಲ್ಲ; ಅವು ಹೊಸ ವಸತಿ ಪ್ರದೇಶಗಳನ್ನು ನಿರ್ಮಿಸುವ ಸಾಧನಗಳಾಗಿದ್ದವು.

ವಿಶೇಷವಾಗಿ ಗಡಿ ಮತ್ತು ತಂತ್ರಾತ್ಮಕ ಪ್ರದೇಶಗಳಲ್ಲಿ ಜನವಸತಿ ನಿರ್ಮಿಸುವಲ್ಲಿ ಅವುಗಳ ಪಾತ್ರ ಇತ್ತು. 1948ರಲ್ಲಿ ಇಸ್ರೇಲ್ ಸ್ವಾತಂತ್ರ್ಯ ಪಡೆದಾಗ ದೇಶದ ಭದ್ರತೆ ಮತ್ತು ಭೌಗೋಳಿಕ ವಿಸ್ತರಣೆಯ ಪ್ರಶ್ನೆಗಳು ಅತ್ಯಂತ ಪ್ರಮುಖವಾಗಿದ್ದವು. ಈ ಸಂದರ್ಭದಲ್ಲಿ ಈಗಾಗಲೇ ನಿರ್ಮಾಣಗೊಂಡಿದ್ದ ಅನೇಕ ಕಿಬುಟ್ಜ್‌ಗಳು ಗ್ರಾಮೀಣ ಆರ್ಥಿಕತೆ ಮತ್ತು ಗಡಿ ಪ್ರದೇಶದ ಸಾಮಾಜಿಕ ಮೂಲಸೌಕರ್ಯದ ಭಾಗವಾಗಿದ್ದವು. ಆರಂಭಿಕ ಕಿಬುಟ್ಜ ಚಳವಳಿಯು ಭೂಮಿಯಲ್ಲಿ ನೆಲೆಸುವುದು ಮತ್ತು ಸ್ವಾವ ಲಂಬಿ ಉತ್ಪಾದನೆ, ಎಂಬ ಎರಡು ವಿಚಾರಗಳನ್ನು ರಾಷ್ಟ್ರ ನಿರ್ಮಾಣದೊಂದಿಗೆ ಜೋಡಿಸಿತು.

ಕೃಷಿ ಕಿಬುಟ್ಜ್‌ನ ಹೃದಯವಾಗಿತ್ತು, ಆರಂಭಿಕ ವರ್ಷಗಳಲ್ಲಿ ಧಾನ್ಯ, ಹತ್ತಿ, ಹಣ್ಣು, ತರಕಾರಿ, ಹಾಲು, ಕುರಿ ಮತ್ತು ಕೋಳಿ ಸಾಕಣೆ ಮುಂತಾದ ಚಟುವಟಿಕೆಗಳು ಪ್ರಮುಖವಾಗಿದ್ದವು. ಆದರೆ ಇಸ್ರೇಲ್ ಎದುರಿಸುತ್ತಿದ್ದ ದೊಡ್ಡ ಸಮಸ್ಯೆ ನೀರಿನ ಕೊರತೆ, ಮಳೆ ಕಡಿಮೆ, ಮರುಭೂಮಿ ಪ್ರದೇಶ ಮತ್ತು ಕೃಷಿಗೆ ನೀರು ಅತ್ಯಗತ್ಯ ವಾಗಿತ್ತು. ಈ ಪರಿಸ್ಥಿತಿಯಲ್ಲಿ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಕಿಬುಟ್ಜ್‌ಗಳ ಬದುಕಿನ ಪ್ರಶ್ನೆಯಾಗಿತ್ತು.

61 ಒಕ

ಕಾಲಕ್ರಮೇಣ ನೀರಾವರಿ ತಂತ್ರಜ್ಞಾನ, ಯಾಂತ್ರೀಕರಣ, ಉತ್ಪಾದನಾ ಯೋಜನೆ ಮತ್ತು ಕೃಷಿ ಸಂಶೋಧನೆಗಳೊಂದಿಗೆ ಕಿಬುಟ್ಜ್ ಕೃಷಿ ಹೆಚ್ಚು ಉತ್ಪಾದಕವಾಯಿತು. ಕಿಬುಟ್ಜ್‌ಗಳ ಅನುಭವ ಇಸ್ರೇಲ್‌ನ ಕೃಷಿ ವ್ಯವಸ್ಥೆಯ ಒಟ್ಟು ಅಭಿವೃದ್ಧಿಯ ಒಂದು ಭಾಗವಾಗಿತ್ತು. ಇಸ್ರೇಲ್‌ನ 2017ರ ಕೃಷಿ ಗಣತಿಯ ಪ್ರಕಾರ ಕಿಬುಟ್ಜ್‌ಗಳು ಮತ್ತು ಸಾಮೂಹಿಕ ಮೊಶವ್‌ಗಳನ್ನು ಒಳಗೊಂಡ 285 ಕೃಷಿ ಸಮುದಾಯಗಳಲ್ಲಿ ಹಣ್ಣು ಮತ್ತು ತರಕಾರಿ ಉತ್ಪಾದನೆಗೆ ಸಂಬಂಧಿಸಿದ ಮಾರುಕಟ್ಟೆ ವ್ಯವಸ್ಥೆ ಯಲ್ಲಿ ಶೇಕಡಾ 55% ಘಟಕಗಳು ಸಗಟು ವ್ಯಾಪಾರಿಗಳ ಮೂಲಕ ಮತ್ತು ಶೇಕಡಾ 45% ಸಹಕಾರಿ ವ್ಯವಸ್ಥೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದವು.

2017ರಲ್ಲಿ ಕಿಬುಟ್ಜ್‌ಗಳ ಕೃಷಿ ಆದಾಯದ ಸರಾಸರಿ ಪಾಲು ಸುಮಾರು ಶೇಕಡಾ 60% ಆಗಿತ್ತು. ಆರಂಭದಲ್ಲಿ ಕೃಷಿಯೇ ಮುಖ್ಯವಾಗಿದ್ದರೂ, ಕಾಲಕ್ರಮೇಣ ಕೆಲವು ಕಿಬುಟ್ಜ್‌ಗಳು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿದವು. ಆಹಾರ ಸಂಸ್ಕರಣೆ, ಪ್ಲಾಸ್ಟಿಕ್, ನೀರಿನ ತಂತ್ರಜ್ಞಾನ, ಉತ್ಪಾದನಾ ಉಪಕರಣಗಳು, ಲೋಹ, ಕೃಷಿ ಸಂಬಂಧಿತ ಕೈಗಾರಿಕೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯಮಗಳು ಹುಟ್ಟಿಕೊಂಡವು.

ಉದಾಹರಣೆಗೆ ‘ರಮೋತ್ ಮೆನಶೆ’ ಕಿಬುಟ್ಜ್‌ ಆರಂಭದಲ್ಲಿ ಕೃಷಿಯ ಮೇಲೆ ಅವಲಂಬಿತ ವಾಗಿದ್ದರೂ, 1954ರಲ್ಲಿ ’ARAD’ ಎಂಬ ನೀರಿನ ಮೀಟರ್ ತಯಾರಿಕಾ ಕಂಪನಿಯಲ್ಲಿ ಪಾಲುದಾರ ನಾಯಿತು. ನಂತರ ಆ ಕಂಪನಿಯಲ್ಲಿ ಕಿಬುಟ್ಜ್‌ ಪ್ರಮುಖ ಷೇರುದಾರನಾಯಿತು. ಇದು ಕಿಬುಟ್ಜ್‌ ಕೃಷಿಯಿಂದ ಕೈಗಾರಿಕಾ ಮತ್ತು ವಾಣಿಜ್ಯ ಆರ್ಥಿಕತೆಯತ್ತ ಹೇಗೆ ಸಾಗಿತು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ. ಆದರೆ ಕಿಬುಟ್ಜ್‌ಗಳ ಪ್ರಯಾಣ ಯಾವಾಗಲೂ ಸುಗಮವಾಗಿರಲಿಲ್ಲ. 1980ರ ದಶಕದಲ್ಲಿ ಅನೇಕ ಕಿಬುಟ್ಜ್‌ ಗಳು ಆರ್ಥಿಕ ಸಂಕಷ್ಟ ಎದುರಿಸಿದವು. ಸಾಲದ ಸಮಸ್ಯೆ, ಹಣದುಬ್ಬರ, ಕೃಷಿ ಕ್ಷೇತ್ರದಲ್ಲಿನ ಬದಲಾವಣೆ, ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆಯ ಸ್ಪರ್ಧೆ ಇವುಗಳೆ ಹಳೆಯ ಸಾಮೂಹಿಕ ಆರ್ಥಿಕ ಮಾದರಿಗೆ ಒತ್ತಡ ತಂದವು.

ಕೆಲವು ಕಿಬುಟ್ಜ್‌ಗಳು ನಷ್ಟದಲ್ಲಿದ್ದ ಉದ್ಯಮಗಳನ್ನು ಮುಚ್ಚ ಬೇಕಾಯಿತು. ಬ್ಯಾಂಕ್ ಸಾಲಗಳನ್ನು ಪುನರ್ವ್ಯವಸ್ಥೆ ಗೊಳಿಸಬೇಕಾಯಿತು. 1980ರ ದಶಕದ ಕೊನೆಯ ಭಾಗದಿಂದ ಮತ್ತು 1990ರ ದಶಕದಲ್ಲಿ ದೊಡ್ಡ ಬದಲಾವಣೆ ಆರಂಭವಾಯಿತು. ಎಲ್ಲ ಸದಸ್ಯರಿಗೂ ಒಂದೇ ರೀತಿಯ ಆದಾಯ ನೀಡುವ ವ್ಯವಸ್ಥೆಯ ಬದಲು ವಿಭಿನ್ನ ವೇತನ ವ್ಯವಸ್ಥೆಗಳನ್ನು ಪರಿಚಯಿಸಲಾಯಿತು.

ವ್ಯಕ್ತಿಯ ಉದ್ಯೋಗ, ಕೌಶಲ್ಯ ಮತ್ತು ಕೆಲಸದ ಆಧಾರದ ಮೇಲೆ ವೇತನದ ವ್ಯತ್ಯಾಸಕ್ಕೆ ಅವಕಾಶ ದೊರೆಯಿತು. ಅದೇ ಸಮಯದಲ್ಲಿ ಕಿಬುಟ್ಜ ತನ್ನ ಸದಸ್ಯರಿಗೆ ಸಾಮಾಜಿಕ ಭದ್ರತೆ, ಸಮುದಾಯ ಸೇವೆ ಮತ್ತು ಕೆಲವು ಸಾಮೂಹಿಕ ಸೌಲಭ್ಯಗಳನ್ನು ಮುಂದುವರಿಸಿತು. 1996ರಲ್ಲಿ ಇಸ್ರೇಲ್‌ನ ಭೂ ನಿರ್ವಹಣಾ ನೀತಿಯಲ್ಲಿ ಕಿಬುಟ್ಜ್‌ ಮನೆಗಳ ಹಕ್ಕುಗಳಿಗೆ ಸಂಬಂಧಿಸಿದ ಮಹತ್ವದ ಬದಲಾವಣೆ ಸಂಭವಿಸಿತು.

ರೆಸೊಲ್ಯೂಷನ್- 751 ಮೂಲಕ ಕೆಲವು ಕಿಬುಟ್ಜ್‌ಗಳಲ್ಲಿ ಮನೆಗಳ ಹಕ್ಕುಗಳನ್ನು ಸದಸ್ಯರಿಗೆ ವೈಯಕ್ತಿಕ ವಾಗಿ ಹಂಚುವ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಯಿತು. ಕಿಬುಟ್ಜ್‌ನಲ್ಲಿದ್ದ ಪ್ರತಿಯೊಬ್ಬ ಸದಸ್ಯನೂ ಇನ್ನು ಮುಂದೆ ಸಂಪೂರ್ಣ ಸಾಮೂಹಿಕ ಆಸ್ತಿಯ ಭಾಗವಾಗಿಯೇ ಇರಬೇಕು ಎಂಬ ಹಳೆಯ ಮಾದರಿಯಿಂದ ಹೊರಬಂದು ವೈಯಕ್ತಿಕ ಆಸ್ತಿ ಹಕ್ಕುಗಳತ್ತ ಸಾಗಲು ಸಾಧ್ಯವಾಯಿತು.

ಕೆಲವು ಕಿಬುಟ್ಜ್‌ಗಳು ಸಮುದಾಯ ಮಟ್ಟದಲ್ಲಿ ಮಕ್ಕಳ ಶಿಕ್ಷಣ, ಹಿರಿಯರ ಆರೈಕೆ, ಸಾರ್ವಜನಿಕ ಸೌಲಭ್ಯ ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೆಲವು ಸಾಮಾಜಿಕ ಸೇವೆಗಳನ್ನು ಇನ್ನೂ ಒಟ್ಟಾಗಿ ನಿರ್ವಹಿಸುವ ವ್ಯವಸ್ಥೆ ಕಂಡುಬರುತ್ತದೆ. ಕಿಬುಟ್ಜ್‌ಗಳು ಕೃಷಿಯ ಹೊರತಾಗಿಯೂ ಪ್ರವಾಸೋದ್ಯಮದತ್ತ ಹೆಜ್ಜೆ ಇಟ್ಟಿವೆ.

ಗ್ರಾಮೀಣ ಪ್ರವಾಸೋದ್ಯಮ, ಅತಿಥಿಗೃಹಗಳು, ಕೃಷಿ ಪ್ರವಾಸ, ಪ್ರಕೃತಿ ಆಧಾರಿತ ಪ್ರವಾಸ ಮತ್ತು ಕುಟುಂಬ ಪ್ರವಾಸಗಳು ಕೆಲವು ಕಿಬುಟ್ಜ್‌ಗಳಿಗೆ ಹೆಚ್ಚುವರಿ ಆದಾಯದ ಮೂಲಗಳಾಗಿವೆ. ಇಸ್ರೇಲ್‌ನ ಕೇಂದ್ರ ಅಂಕಿ ಅಂಶಗಳ ಕಚೇರಿಯ 2023ರ ಅಂಕಿಅಂಶಗಳಲ್ಲಿ ಕಿಬುಟ್ಜ್‌ಗಳು ಮತ್ತು ಸಾಮೂಹಿಕ ಮೊಶವ್ ಗಳ ಗ್ರಾಮೀಣ ಪ್ರವಾಸೋದ್ಯಮದಲ್ಲಿ 67 ಟೂರ್ ಆಪರೇಟರ್ ಗಳು, ಸುಮಾರು 2900 ಕೊಠಡಿಗಳು ಮತ್ತು 10000ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯ ದಾಖಲಾಗಿತ್ತು.

2023ರ ಮೂರನೇ ತ್ರೈಮಾಸಿಕದಲ್ಲಿ ಈ ಕ್ಷೇತ್ರದಲ್ಲಿ ಸುಮಾರು 335000 Person- Nights ದಾಖಲಾ ಗಿದ್ದವು. ಕಿಬುಟ್ಜ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಸಮುದಾಯದ ಜವಾಬ್ದಾರಿ. ಮಾರುಕಟ್ಟೆ ಆರ್ಥಿಕತೆ ಯೊಂದಿಗೆ ಹೊಂದಿಕೊಂಡ ನಂತರವೂ ‘ನಾನು ಮಾತ್ರ’ ಎನ್ನುವ ವೈಯಕ್ತಿಕತೆಯ ಬದಲು ‘ಸಮುದಾಯಕ್ಕೂ ಜವಾಬ್ದಾರಿ’ ಎನ್ನುವ ಕಲ್ಪನೆ ಸಂಪೂರ್ಣವಾಗಿ ಮಾಯವಾಗಿಲ್ಲ.

ಇದೇ ಕಾರಣದಿಂದ ಕೆಲವು ಕಿಬುಟ್ಜ್‌ಗಳಲ್ಲಿ ಸದಸ್ಯರಿಗೆ ಸಾಮಾಜಿಕ ಭದ್ರತಾ ಜಾಲಗಳು, ಹಿರಿಯರ ನೆರವು, ಸಮುದಾಯ ಕಾರ್ಯಕ್ರಮಗಳು ಮತ್ತು ಹಂಚಿಕೆಯ ಸೌಲಭ್ಯಗಳು ಮುಂದುವರೆದಿವೆ. ಆರ್ಥಿಕ ವ್ಯವಸ್ಥೆ ಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಾದರೂ, ಸಾಮಾಜಿಕ ವ್ಯವಸ್ಥೆಯಲ್ಲಿ ಸಹಕಾರದ ಅಂಶ ಉಳಿದಿದೆ. 1980ರ ದಶಕದ ಆರ್ಥಿಕ ಸಂಕಷ್ಟದ ನಂತರ ಕಿಬುಟ್ಜ್‌ಗಳು ಹಳೆಯ ಮಾದರಿಯನ್ನು ಕಾಪಾಡುವುದೇ ಏಕೈಕ ಮಾರ್ಗ ಎಂದುಕೊಳ್ಳಲಿಲ್ಲ.

ಕೆಲವು ಉದ್ಯಮಗಳನ್ನು ಮುಚ್ಚಿದವು, ಕೆಲವು ಖಾಸಗಿ ನಿರ್ವಹಣೆಗೆ ನೀಡಿದವು, ವೇತನ ವ್ಯವಸ್ಥೆ ಬದಲಿಸಿದವು, ಹೊಸ ಕೈಗಾರಿಕೆಗಳಿಗೆ ಪ್ರವೇಶಿಸಿದವು ಮತ್ತು ಆಸ್ತಿ ಹಕ್ಕುಗಳಲ್ಲಿಯೂ ಬದಲಾವಣೆ ಮಾಡಿಕೊಂಡವು. ಹೀಗಾಗಿ ಕಿಬುಟ್ಜ ಉಳಿದಿರುವುದಕ್ಕೆ ಒಂದು ಕಾರಣ ಅದರ ಮೂಲ ತತ್ವಗಳನ್ನು ಅಕ್ಷರಶಃ ಹಾಗೆಯೇ ಉಳಿಸಿಕೊಂಡಿರುವುದು ಅಲ್ಲ; ಬದಲಾಗಿ ಕಾಲದ ಆರ್ಥಿಕ ವಾಸ್ತವಿಕತೆಗೆ ಅನುಗುಣವಾಗಿ ತನ್ನ ವ್ಯವಸ್ಥೆಯನ್ನು ಬದಲಿಸಿಕೊಂಡಿರುವುದು.

ಇಸ್ರೇಲ್‌ನ ಇತಿಹಾಸದಲ್ಲಿ ಕಿಬುಟ್ಜ್‌ಗಳ ಪಾತ್ರವನ್ನು ಕೇವಲ ಕೃಷಿ ಗ್ರಾಮ ಎಂದು ಸೀಮಿತಗೊಳಿಸ ಲಾಗುವುದಿಲ್ಲ. ಸ್ವಾತಂತ್ರ್ಯಕ್ಕೂ ಮುನ್ನ ಹೊಸ ವಸತಿಗಳನ್ನು ನಿರ್ಮಿಸುವುದು, ಕೃಷಿ ಭೂಮಿ ಯನ್ನು ಉತ್ಪಾದಕವಾಗಿಸುವುದು, ಗಡಿ ಪ್ರದೇಶಗಳಲ್ಲಿ ಜನವಸತಿ ಬೆಳೆಸುವುದು, ಕೃಷಿ ಉತ್ಪಾದನೆ ಯನ್ನು ಮಾರುಕಟ್ಟೆಗೆ ಸಂಪರ್ಕಿಸುವುದು, ಕೈಗಾರಿಕೆಗಳನ್ನು ಸ್ಥಾಪಿಸುವುದು ಮತ್ತು ನಂತರ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಹೊಂದಿಕೊಳ್ಳುವುದು. ಈ ಎಲ್ಲ ಹಂತಗಳಲ್ಲೂ ಕಿಬುಟ್ಜ್‌ಗಳು ತಮ್ಮ ಪಾತ್ರವನ್ನು ಬದಲಾಯಿಸಿಕೊಂಡಿವೆ