ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Dr S Somanath Column: ದೇಶದ ಬಾಹ್ಯಾಕಾಶ ಯೋಜನೆಗೆ ನಾಯಕತ್ವ ಬಲ

ಭಾರತದ ಬಾಹ್ಯಾಕಾಶ ಕಾರ್ಯಕ್ರಮದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದ ನನಗೆ, ಚಂದ್ರ ಯಾನ-3 ಒಂದು ಪ್ರತ್ಯೇಕ ಸಾಧನೆಯಾಗಿ ಕಾಣುವುದಿಲ್ಲ. ಬದಲಿಗೆ, ದಶಕಗಳ ಕಾಲ ನಡೆದ ಸಂಸ್ಥೆಗಳ ನಿರ್ಮಾಣ, ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸತತ ಪ್ರಯತ್ನಗಳ ಫಲವಾಗಿ ಕಾಣುತ್ತದೆ. ವಿಶೇಷವಾಗಿ ಬೃಹತ್ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಾಯಕತ್ವದ ಬಗ್ಗೆ ಇದು ಅಮೂಲ್ಯ ಪಾಠಗಳನ್ನು ನೀಡುತ್ತದೆ.

ದೇಶದ ಬಾಹ್ಯಾಕಾಶ ಯೋಜನೆಗೆ ನಾಯಕತ್ವ ಬಲ

-

Profile
Ashok Nayak Nov 17, 2026 11:23 AM

ಗಗನದಾಚೆ

ಡಾ.ಎಸ್.ಸೋಮನಾಥ್

ಭಾರತದ ಚಂದ್ರಯಾನ, ಅಮೃತ ಕಾಲಕ್ಕಾಗಿ ರೂಪಿಸಿರುವ ಬಾಹ್ಯಾಕಾಶ ದೃಷ್ಟಿಕೋನ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿರುವ ಕ್ರಮಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸರ್ಕಾರದ ದೂರದೃಷ್ಟಿಯ ನಾಯಕತ್ವ, ಸಾಂಸ್ಥಿಕ ದೃಢತೆ ಹಾಗೂ ಸಾಮೂಹಿಕ ಹೊಣೆಗಾರಿಕೆಗಳು ಹೇಗೆ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗುರಿಗಳನ್ನು ಅಸಾಧಾರಣ ಸಾಧನೆಗಳಾಗಿ ಪರಿವರ್ತಿಸಬಲ್ಲವು ಎಂಬುದನ್ನು ತೋರಿಸಿಕೊಟ್ಟಿವೆ.

2023ರ ಆಗ 23ರಂದು ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿಯಾಗಿ ಇಳಿದದ್ದು ಕೇವಲ ತಾಂತ್ರಿಕ ಸಾಧನೆಯಾಗಿರಲಿಲ್ಲ. ಅದು ರಾಷ್ಟ್ರೀಯ ದೂರದೃಷ್ಟಿ, ರಾಜಕೀಯ ನಾಯಕತ್ವ, ಸಂಸ್ಥೆಗಳ ಬದ್ಧತೆ, ವಿeನಿಗಳ ದೃಢಸಂಕಲ್ಪ ಮತ್ತು ಸಾವಿರಾರು ಜನರ ಸಾಮೂಹಿಕ ಪ್ರಯತ್ನಗಳ ಸಮ್ಮಿಲನವನ್ನು ಪ್ರತಿನಿಽಸಿತು. ವ್ಯಕ್ತಿಗತ ಆಶಯಗಳು ಸಾಮೂಹಿಕ ರಾಷ್ಟ್ರೀಯ ಅಭಿಯಾನವಾಗಿ ರೂಪುಗೊಂಡಾಗ ಮಾತ್ರ ಅಸಾಧಾರಣ ಸಾಧನೆಗಳು ಸಾಧ್ಯವಾಗುತ್ತವೆ ಎಂಬ ರಾಷ್ಟ್ರ ನಿರ್ಮಾಣದ ಒಂದು ಮಹತ್ವದ ತತ್ವವನ್ನು ಇದು ಸಾಬೀತುಪಡಿಸಿತು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದ ನನಗೆ, ಚಂದ್ರಯಾನ-3 ಒಂದು ಪ್ರತ್ಯೇಕ ಸಾಧನೆಯಾಗಿ ಕಾಣುವುದಿಲ್ಲ. ಬದಲಿಗೆ, ದಶಕಗಳ ಕಾಲ ನಡೆದ ಸಂಸ್ಥೆಗಳ ನಿರ್ಮಾಣ, ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸತತ ಪ್ರಯತ್ನಗಳ ಫಲವಾಗಿ ಕಾಣುತ್ತದೆ. ವಿಶೇಷವಾಗಿ ಬೃಹತ್ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಾಯಕತ್ವದ ಬಗ್ಗೆ ಇದು ಅಮೂಲ್ಯ ಪಾಠಗಳನ್ನು ನೀಡುತ್ತದೆ.

ಇದನ್ನೂ ಓದಿ: Prakash Shesharaghavachar Column: ಸಚಿವ ಖರ್ಗೆಯವರು ಆರೆಸ್ಸೆಸ್‌ ಬ್ರ್ಯಾಂಡ್‌ ಅಂಬಾಸಿಡರೇ ?

ಭಾರತದ ಬಾಹ್ಯಾಕಾಶ ಕಾರ್ಯಕ್ರಮವು 1960ರ ದಶಕದ ಆರಂಭದಲ್ಲಿ ಅತ್ಯಂತ ಸೀಮಿತ ಸಂಪನ್ಮೂಲ ಗಳೊಂದಿಗೆ ಆರಂಭವಾಯಿತು. 1962ರಲ್ಲಿ ಇನ್ಕೋಸ್ಪಾರ್ (INCOSPAR), 1969ರಲ್ಲಿ ಇಸ್ರೋ ಮತ್ತು 1972ರಲ್ಲಿ ಬಾಹ್ಯಾಕಾಶ ಇಲಾಖೆಯ ಸ್ಥಾಪನೆಯು ದೇಶದ ಬಾಹ್ಯಾಕಾಶ ಸಾಮರ್ಥ್ಯ ಕ್ಕೆ ಭದ್ರ ಬುನಾದಿ ಹಾಕಿದವು. ತುಂಬಾದಲ್ಲಿ ಸೌಂಡಿಂಗ್ ರಾಕೆಟ್‌ಗಳ ಉಡಾವಣೆಯಿಂದ ಹಿಡಿದು ಅತ್ಯಾಧುನಿಕ ಉಡಾವಣಾ ವಾಹನಗಳು, ಉಪಗ್ರಹಗಳು ಮತ್ತು ಗ್ರಹಗಳ ಅನ್ವೇಷಣಾ ಯೋಜನೆ ಗಳವರೆಗೆ ಭಾರತವು ನಿರಂತರ ಬದ್ಧತೆಯ ಮೂಲಕ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ.

ಇಂತಹ ಪಯಣಕ್ಕೆ ವೈಜ್ಞಾನಿಕ ಶ್ರೇಷ್ಠತೆಯೊಂದೇ ಸಾಲದು. ದೀರ್ಘಕಾಲೀನ ದೂರದೃಷ್ಟಿಯನ್ನು ರೂಪಿಸಿ, ಬದಲಾಗುವ ಸನ್ನಿವೇಶಗಳ ನಡುವೆಯೂ ಸಂಸ್ಥೆಗಳ ಆತ್ಮವಿಶ್ವಾಸವನ್ನು ಉಳಿಸಿ ಕೊಳ್ಳುವ ನಾಯಕತ್ವವೂ ಅಗತ್ಯವಿರುತ್ತದೆ. ಪ್ರಧಾನಮಂತ್ರಿಯವರು ಅಮೃತ ಕಾಲದ ಮಹತ್ವಾ ಕಾಂಕ್ಷೆಯ ಗುರಿಯಾಗಿ ಅನುಮೋದಿಸಿದ ‘ಭಾರತದ ಬಾಹ್ಯಾಕಾಶ ದೃಷ್ಟಿಕೋನ 2047’ರ ಘೋಷಣೆಯು ನಾಯಕತ್ವದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿತ್ತು.

ಮಾನವ ಸಹಿತ ಬಾಹ್ಯಾಕಾಶ ಯಾನ, ಭಾರತೀಯ ಅಂತರಿಕ್ಷ ನಿಲ್ದಾಣ, ಸುಧಾರಿತ ಭಾರೀ ಸಾಮರ್ಥ್ಯವನ್ನು ಹೊತ್ತೊಯ್ಯಬಲ್ಲ ಮತ್ತು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳು, ಬಾಹ್ಯಾಕಾಶ ದಲ್ಲಿ ನಿರಂತರ ಮಾನವ ಉಪಸ್ಥಿತಿ ಹಾಗೂ ಭಾರತೀಯರು ಚಂದ್ರನ ಮೇಲೆ ಇಳಿಯುವುದೂ ಸೇರಿದಂತೆ ಚಂದ್ರನ ಅನ್ವೇಷಣೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಗಳಿಗೆ ಇದು ದೀರ್ಘಕಾಲೀನ ಚೌಕಟ್ಟನ್ನು ಒದಗಿಸಿತು.

isro ok

ಆರಂಭಿಕ ಕಾರ್ಯಕ್ರಮಗಳಿಗೆ ಆರ್ಥಿಕ ಅನುಮೋದನೆ ನೀಡಿರುವುದೂ ಅಷ್ಟೇ ಮಹತ್ವದ್ದಾಗಿದೆ. ಒಂದು ದೂರದೃಷ್ಟಿಯು ಅರ್ಥಪೂರ್ಣ ಆಗಬೇಕಾದರೆ ಅದು ಅನುದಾನ ಸಹಿತ ಕಾರ್ಯಕ್ರಮ ಗಳು, ಸಂಸ್ಥೆಗಳ ಜವಾಬ್ದಾರಿಗಳು ಮತ್ತು ಅಳೆಯಬಹುದಾದ ಗುರಿಗಳಾಗಿ ಪರಿವರ್ತನೆಗೊಳ್ಳಬೇಕು. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಿದ್ದು, ನಂತರ ಭಾರತೀಯ ಬಾಹ್ಯಾಕಾಶ ನೀತಿ 2023 ಅನ್ನು ಜಾರಿಗೆ ತಂದದ್ದು ಮತ್ತೊಂದು ಮಹತ್ವದ ನಾಯಕತ್ವದ ನಿರ್ಧಾರವಾಗಿತ್ತು.

ಇಸ್ರೋ ಯಶಸ್ವಿ ರಾಷ್ಟ್ರೀಯ ಸಂಸ್ಥೆಯಾಗಿ ಸ್ಥಾಪಿತವಾದ ಬೆನ್ನ ಯುವ ಉದ್ಯಮಿಗಳು ಮತ್ತು ನವೋದ್ಯಮಿಗಳು ಈ ಕ್ಷೇತ್ರವನ್ನು ಪ್ರವೇಶಿಸಲು ಆಸಕ್ತಿ ತೋರಿದರು. ಬಾಹ್ಯಾಕಾಶ ಚಟುವಟಿಕೆಗಳ ಭವಿಷ್ಯದ ವಿಸ್ತಾರ ಮತ್ತು ಆರ್ಥಿಕ ಪರಿಣಾಮಕ್ಕೆ ಸರ್ಕಾರಿ ಸಂಸ್ಥೆಯೊಂದರ ಸಾಮರ್ಥ್ಯವಷ್ಟೇ ಸಾಕಾಗುವುದಿಲ್ಲ ಎಂಬುದನ್ನು ಮನಗಂಡು, ಈ ಸುಧಾರಣೆಗಳ ಮೂಲಕ ಖಾಸಗಿ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಯಿತು. ಇದರ ಉದ್ದೇಶ ಇಸ್ರೋದ ಪಾತ್ರವನ್ನು ಕಡಿಮೆ ಮಾಡುವುದಾಗಿರಲಿಲ್ಲ.

ಬದಲಿಗೆ, ಉದ್ಯಮಗಳು, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು ಕೊಡುಗೆ ನೀಡಲು ಅವಕಾಶ ಕಲ್ಪಿಸುವ ಮೂಲಕ ಒಟ್ಟಾರೆ ಸಾಮರ್ಥ್ಯವನ್ನು ವಿಸ್ತರಿಸುವುದಾಗಿತ್ತು. 2026ರ ಆಗ ವೇಳೆಗೆ ನೋಂದಾಯಿತ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮಗಳ ಸಂಖ್ಯೆ ಸುಮಾರು 440ಕ್ಕೆ ತಲುಪಿರುವುದು ಈ ಕ್ಷೇತ್ರದಲ್ಲಿನ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

ಸ್ಕೈರೂಟ್‌ನ ಮೊದಲ ಕಕ್ಷೀಯ ಉಡಾವಣೆ ಮತ್ತು ಗ್ಯಾಲಕ್ಸಿಐನ ಆಪ್ಟೋಸ್ಯಾರ್ (OptoSAR) ಉಪಗ್ರಹವು ಉಡಾವಣಾ ವಾಹನಗಳಿಂದ ಹಿಡಿದು ಭೂಮಿಯ ವೀಕ್ಷಣೆಯವರೆಗೆ ಭಾರತದ ಬಾಹ್ಯಾಕಾಶ ಉದ್ಯಮದ ವೈವಿಧ್ಯತೆಯನ್ನು ತೋರಿಸಿಕೊಟ್ಟಿವೆ. ಚಂದ್ರಯಾನ-2 ಮತ್ತೊಂದು ಮಹತ್ವದ ನಾಯಕತ್ವದ ಪಾಠವನ್ನು ನೀಡುತ್ತದೆ. 2019ರ ಸೆಪ್ಟೆಂಬರ್‌ನಲ್ಲಿ ಅದರ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಯತ್ನವು ಉದ್ದೇಶಿತ ರೀತಿಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಈ ವೈಫಲ್ಯದಿಂದಾಗಿ ನಮ್ಮ ಗುರಿಯನ್ನು ಕೈಬಿಡಲಿಲ್ಲ. ಕಾರ್ಯಾಚರಣೆಯನ್ನು ಸಮಗ್ರವಾಗಿ ಪರಿಶೀಲಿಸಿ, ನ್ಯೂನತೆಗಳನ್ನು ವಿಶ್ಲೇಷಿಸಿ, ಅವುಗಳಿಂದ ಕಲಿತ ಪಾಠಗಳನ್ನು ಚಂದ್ರಯಾನ-3ರಲ್ಲಿ ಅಳವಡಿಸಿಕೊಳ್ಳಲಾಯಿತು.

ವಿಶೇಷವಾಗಿ ಲ್ಯಾಂಡಿಂಗ್ ವ್ಯವಸ್ಥೆಯ ದೃಢತೆ ಮತ್ತು ಅನಿಶ್ಚಿತತೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಗಮನ ನೀಡಲಾಯಿತು. ರಾಷ್ಟ್ರೀಯ ಬದ್ಧತೆಯು ವೈಜ್ಞಾನಿಕ ಆತ್ಮವಿಶ್ವಾಸವನ್ನು ಉಳಿಸಿತು. ಮುಕ್ತ ಮನಸ್ಸಿನಿಂದ ಮತ್ತು ವೈಜ್ಞಾನಿಕ ಶಿಸ್ತಿನಿಂದ ವೈಫಲ್ಯವನ್ನು ಎದುರಿಸಿದಾಗ ಅದು ಸಂಸ್ಥೆಯ ಕಲಿಕೆಗೆ ಮೂಲವಾಗುತ್ತದೆ ಎಂಬುದನ್ನು ಚಂದ್ರಯಾನ-3 ತೋರಿಸಿಕೊಟ್ಟಿತು.

ಹಿನ್ನಡೆಯಿಂದ ಚೇತರಿಸಿಕೊಳ್ಳುವುದಷ್ಟೇ ಸಾಮರ್ಥ್ಯವಲ್ಲ; ಅದಕ್ಕಿಂತಲೂ ಹೆಚ್ಚು ಬಲಿಷ್ಠವಾಗಿ ಮತ್ತು ಉತ್ತಮ ಸಿದ್ಧತೆಯೊಂದಿಗೆ ಹೊರಹೊಮ್ಮುವುದೇ ನಿಜವಾದ ಸಾಮರ್ಥ್ಯ. ಚಂದ್ರಯಾನ-೩ರ ಲ್ಯಾಂಡಿಂಗ್ ದಿನದಂದು ಪ್ರಧಾನಮಂತ್ರಿಯವರು ಭಾಗವಹಿಸಿ, ಯೋಜನಾ ತಂಡದೊಂದಿಗೆ ಸಂವಾದ ನಡೆಸಿದ್ದು ಈ ಸಾಧನೆಗೆ ದೇಶಾದ್ಯಂತ ಹೆಚ್ಚಿನ ಮಹತ್ವ ತಂದುಕೊಟ್ಟಿತು. ಮಹಿಳಾ ವಿeನಿಗಳು ಮತ್ತು ಯೋಜನಾ ಮುಖ್ಯಸ್ಥರು ಸೇರಿದಂತೆ ವಿಜ್ಞಾನಿಗಳು ಹಾಗೂ ಎಂಜಿನಿಯರ್ ಗಳನ್ನು ಗುರುತಿಸಿ ಗೌರವಿಸಿದ್ದು, ರಾಷ್ಟ್ರೀಯ ಸಾಧನೆಗಳ ಹಿಂದೆ ಪ್ರತಿಯೊಂದು ಸಾಂಸ್ಥಿಕ ಹಂತದಲ್ಲೂ ಸಾಮೂಹಿಕ ಪ್ರಯತ್ನವಿರುತ್ತದೆ ಎಂಬುದನ್ನು ಬಲವಾಗಿ ಸಾರಿತು.

ಚಂದ್ರಯಾನ-3ರ ಹಿಂದೆ ಬೃಹತ್ ಸಾಂಸ್ಥಿಕ ಪ್ರಯತ್ನವಿತ್ತು. ಯಾವುದೇ ಒಂದು ಕೇಂದ್ರ ಅಥವಾ ತಂಡವು ಸ್ವತಂತ್ರವಾಗಿ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿರಲಿಲ್ಲ. ಪ್ರತಿಯೊಂದು ಉಪವ್ಯವಸ್ಥೆಯೂ ಒಂದೇ ಸಾಮಾನ್ಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಿಖರ ವಾಗಿ ಕಾರ್ಯನಿರ್ವಹಿಸಬೇಕಿತ್ತು. ಇಂತಹ ಸಂದರ್ಭದಲ್ಲಿ ಸಾಂಸ್ಥಿಕ ನಾಯಕತ್ವದ ಪಾತ್ರ ನಿರ್ಣಾಯಕ ವಾಗುತ್ತದೆ. ನಾಯಕನ ಕೆಲಸವು ಪ್ರತಿಯೊಂದು ತಾಂತ್ರಿಕ ಪ್ರಶ್ನೆಗೂ ಉತ್ತರ ನೀಡುವುದಲ್ಲ; ಬದಲಿಗೆ, ಸರಿಯಾದ ಪ್ರಶ್ನೆಗಳನ್ನು ಕೇಳುವ, ತಾಂತ್ರಿಕ ಭಿನ್ನಾಭಿಪ್ರಾಯಗಳಿಗೆ ಮುಕ್ತ ಅವಕಾಶ ನೀಡುವ, ಸಾಕ್ಷ್ಯಾಧಾರಗಳ ಮೇಲೆ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಸಮರ್ಥ ತಂಡಗಳಿಗೆ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಲು ಅಧಿಕಾರ ನೀಡುವ ವಾತಾವರಣ ವನ್ನು ಸೃಷ್ಟಿಸುವುದೇ ನಾಯಕನ ಕೆಲಸವಾಗಿದೆ.

ಯಾವುದೇ ಭಯವಿಲ್ಲದೆ ಸಮಸ್ಯೆಗಳನ್ನು ವರದಿ ಮಾಡುವ ಅವಕಾಶವಿರಬೇಕು ಮತ್ತು ಪ್ರತಿ ಯೊಂದು ಹಂತದಲ್ಲೂ ಹೊಣೆಗಾರಿಕೆ ಇರಬೇಕು. ಎಲ್ಲ ನಿರ್ಧಾರಗಳನ್ನೂ ಕೇಂದ್ರೀಕೃತ ಗೊಳಿಸುವುದರಿಂದ ವಿಳಂಬ ಉಂಟಾಗಬಹುದು. ಅದೇ ರೀತಿ, ಹೊಣೆಗಾರಿಕೆಯಿಲ್ಲದ ವಿಕೇಂದ್ರೀ ಕರಣವು ಪ್ರಯತ್ನಗಳನ್ನು ವಿಭಜಿಸಬಹುದು. ಯಶಸ್ವಿ ಯೋಜನಾ ನಾಯಕತ್ವಕ್ಕೆ ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ.

ಕಾರ್ಯಾಚರಣೆಯ ಹಂತದ ನಾಯಕತ್ವವೂ ಅಷ್ಟೇ ಮಹತ್ವದ್ದಾಗಿದೆ. ಎಂಜಿನಿಯರ್‌ಗಳು, ತಂತ್ರಜ್ಞರು, ವಿಜ್ಞಾನಿಗಳು, ಗುಣಮಟ್ಟ ಖಾತರಿ ಸಿಬ್ಬಂದಿ, ಉದ್ಯಮ ಪಾಲುದಾರರು ಮತ್ತು ನೆಲಮಟ್ಟದ ತಂಡಗಳು ಅಭಿಯಾನದ ವಿಶ್ವಾಸಾರ್ಹತೆಯನ್ನು ನಿರ್ಧರಿಸುತ್ತಾರೆ. ಯುವ ವೃತ್ತಿಪರರು ಹೊಸ ಆಲೋಚನೆಗಳನ್ನು ತರುತ್ತಾರೆ; ಅನುಭವಿ ಸಹೋದ್ಯೋಗಿಗಳು ಸಂಸ್ಥೆಯ ಅನುಭವ ಮತ್ತು ಜ್ಞಾನವನ್ನು ಒದಗಿಸುತ್ತಾರೆ. ಈ ಎರಡೂ ಸಾಮರ್ಥ್ಯಗಳನ್ನು ಸಮನ್ವಯ ಗೊಳಿಸುವುದು ಅತ್ಯಗತ್ಯ. ಈ ಪಾಠ ಬಾಹ್ಯಾಕಾಶ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ.

ಬೃಹತ್ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸ್ಪಷ್ಟ ಗುರಿಗಳು, ನಿರಂತರತೆ, ಸಮನ್ವಯ, ಸಾಮೂಹಿಕ ಹೊಣೆಗಾರಿಕೆ ಮತ್ತು ಕಲಿಕೆಯ ಸಂಸ್ಕೃತಿ ಅಗತ್ಯ. ಗಗನಯಾನ, ಭಾರತೀಯ ಅಂತರಿಕ್ಷ ನಿಲ್ದಾಣ, ಸುಧಾರಿತ ಉಡಾವಣಾ ವಾಹನಗಳು ಮತ್ತು ಭವಿಷ್ಯದ ಚಂದ್ರಯಾನ ಯೋಜನೆಗಳಿಗೆ ಇನ್ನೂ ಹೆಚ್ಚಿನ ಮಟ್ಟದ ಸಾಮರ್ಥ್ಯ ಹಾಗೂ ಸರ್ಕಾರ, ಸಾರ್ವಜನಿಕ ಸಂಸ್ಥೆಗಳು, ಉದ್ಯಮಗಳು, ವಿಶ್ವವಿದ್ಯಾಲಯಗಳು ಮತ್ತು ನವೋದ್ಯಮಗಳ ನಡುವಿನ ಪಾಲುದಾರಿಕೆ ಅಗತ್ಯವಾಗಿವೆ.

ತುಂಬಾದಿಂದ ಚಂದ್ರಯಾನ-೩ರವರೆಗೆ, ಬಾಹ್ಯಾಕಾಶ ದೃಷ್ಟಿಕೋನ 2047ರಿಂದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವವರೆಗೆ ಭಾರತದ ಪಯಣವು ನಿರಂತರ ಬದ್ಧತೆ ಮತ್ತು ದೃಢ ನಾಯಕತ್ವದಿಂದ ಏನೆಲ್ಲ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಪ್ರಗತಿಯು ತಂತ್ರಜ್ಞಾನವನ್ನಷ್ಟೇ ಅವಲಂಬಿಸಿಲ್ಲ; ನಾವು ನಿರ್ಮಿಸುವ ಸಂಸ್ಥೆಗಳು, ನಾವು ಸಬಲಗೊಳಿಸುವ ಜನರು ಮತ್ತು ಅವರ ಸಾಮೂಹಿಕ ಪ್ರಯತ್ನಗಳಿಗೆ ಸೂಕ್ತ ದಿಕ್ಕು ನೀಡುವ ನಾಯಕತ್ವವೂ ಅಷ್ಟೇ ಮುಖ್ಯ.

ಅಂತಿಮವಾಗಿ, ಒಂದು ಆಶಯವನ್ನು ಸಾಮೂಹಿಕ ಅಭಿಯಾನವಾಗಿ, ಸಾಮೂಹಿಕ ಅಭಿಯಾನವನ್ನು ಶಾಶ್ವತ ರಾಷ್ಟ್ರೀಯ ಸಾಮರ್ಥ್ಯವಾಗಿ ಪರಿವರ್ತಿಸುವುದೇ ನಿಜವಾದ ನಾಯಕತ್ವದ ಸಾಮರ್ಥ್ಯವಾಗಿದೆ.

(ಲೇಖಕರು ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ.)