Roopa Gururaj Column: ಬುದ್ಧನ ಜಾತಕ ಕಥೆಗಳಲ್ಲಿ ಸಿಗುವ ಜೀವನ ಪಾಠ
ಇಲಿಯ ಮಾತಿನಿಂದ ಪ್ರೇರಿತನಾದ ಬಾಲಕನು ತನ್ನ ಹಣೆಬರಹವನ್ನು ಬದಲಿಸಿಕೊಳ್ಳುವ ಆಸೆಯಿಂದ ಬುದ್ಧರನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಅವನಿಗೆ ಮೂರು ವಿಭಿನ್ನ ಪಾತ್ರಗಳು ಮತ್ತು ಅವರ ಸಮಸ್ಯೆಗಳು ಎದುರಾದವು. ಮೊದಲ ರಾತ್ರಿ ತಂಗಲು ಆಶ್ರಯ ನೀಡಿದ ಶ್ರೀಮಂತ ಯಜಮಾನ ನು, ತನಗಿರುವ 16 ವರ್ಷದ ನೀವೂ ಬರೆಯಬಹುದು ಮೂಕ ಮಗಳಿಗೆ ಯಾವಾಗ ಮಾತು ಬರುತ್ತದೆ ಎಂದು ಬುದ್ಧರಲ್ಲಿ ಕೇಳಲು ವಿನಂತಿಸಿದನು.
-
ಒಂದೊಳ್ಳೆ ಮಾತು
ಬುದ್ಧನ ಜಾತಕ ಕಥೆಗಳಲ್ಲಿ ಬರುವ ಈ ಪ್ರಸಂಗವು ಮನುಷ್ಯನ ಸ್ವಾರ್ಥ, ತ್ಯಾಗ, ಮತ್ತು ಕರ್ಮ ಸಿದ್ಧಾಂತವನ್ನು ಮನಮುಟ್ಟುವಂತೆ ವಿವರಿಸುತ್ತದೆ. ಬಡತನದ ಬೇಗೆಯಲ್ಲಿ ಬೆಂದ ಬಾಲಕನೊಬ್ಬ ದಿನವಿಡೀ ಕಷ್ಟಪಟ್ಟು ಅಲ್ಪ ಆಹಾರ ಸಂಗ್ರಹಿಸುತ್ತಿದ್ದ. ಆದರೆ, ಪ್ರತಿದಿನ ಆ ಆಹಾರದಲ್ಲಿ ಒಂದಷ್ಟು ಭಾಗ ಮಾಯವಾಗುತ್ತಿತ್ತು. ಇದನ್ನು ಪತ್ತೆಹಚ್ಚಲು ಕಾಯ್ದು ಕುಳಿತಾಗ, ಇಲಿಯೊಂದು ಅದನ್ನು ತಿನ್ನುತ್ತಿರು ವುದು ಕಂಡುಬಂದಿತು.
ಸಿಟ್ಟಿನಿಂದ ಬಾಲಕನು ಇಲಿಯನ್ನು ಪ್ರಶ್ನಿಸಿದಾಗ, ಇಲಿಯು ಮಾರ್ಮಿಕವಾಗಿ ಉತ್ತರಿಸಿತು: ‘ಬಾಲಕನೇ, ನಿನ್ನ ಹಣೆಬರಹದಲ್ಲಿ ಏನಿದೆಯೋ ಅಷ್ಟೇ ನಿನಗೆ ಸಿಗುತ್ತದೆ. ಪ್ರತಿಯೊಂದು ಅನ್ನದ ಅಗುಳಿನ ಮೇಲೆಯೂ ಅದನ್ನು ತಿನ್ನುವವನ ಹೆಸರು ಬರೆದಿರುತ್ತದೆ. ನಿನಗೆ ಇದು ಅರ್ಥವಾಗ ದಿದ್ದರೆ ಹಿಮಾಲಯ ದಲ್ಲಿರುವ ಗೌತಮ ಬುದ್ಧರನ್ನು ಕೇಳು.’
ಇಲಿಯ ಮಾತಿನಿಂದ ಪ್ರೇರಿತನಾದ ಬಾಲಕನು ತನ್ನ ಹಣೆಬರಹವನ್ನು ಬದಲಿಸಿಕೊಳ್ಳುವ ಆಸೆಯಿಂದ ಬುದ್ಧರನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಅವನಿಗೆ ಮೂರು ವಿಭಿನ್ನ ಪಾತ್ರಗಳು ಮತ್ತು ಅವರ ಸಮಸ್ಯೆಗಳು ಎದುರಾದವು. ಮೊದಲ ರಾತ್ರಿ ತಂಗಲು ಆಶ್ರಯ ನೀಡಿದ ಶ್ರೀಮಂತ ಯಜಮಾನನು, ತನಗಿರುವ 16 ವರ್ಷದ ನೀವೂ ಬರೆಯಬಹುದು ಮೂಕ ಮಗಳಿಗೆ ಯಾವಾಗ ಮಾತು ಬರುತ್ತದೆ ಎಂದು ಬುದ್ಧರಲ್ಲಿ ಕೇಳಲು ವಿನಂತಿಸಿದನು.
ಇದನ್ನೂ ಓದಿ: Roopa Gururaj Column: ನೆಸ್ಲೆ ಕಂಪನಿಯ ಕೋಟಿ ರೂಪಾಯಿಗಳ ಸೋಲು
ಬೆಟ್ಟವನ್ನು ದಾಟಲು ಸಹಾಯ ಮಾಡಿದ ಜಾದೂಗಾರನು, ತಾನು ಜ್ಞಾನಿಯಾಗಿದ್ದರೂ ಏಕೆ ಸ್ವರ್ಗ ಕ್ಕೆ ಹೋಗಲು ಸಾಧ್ಯವಾ ಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ತರಲು ಕೋರಿದನು. ಅವನಿಗೆ ವಿಶಾಲ ವಾದ ನದಿಯನ್ನು ದಾಟಿಸಿದ ಮುನ್ನೂರು ವರ್ಷ ಹಳೆಯ ಆಮೆಯು, ತಾನು ಡ್ರ್ಯಾಗನ್ ಆಗಿ ಆಕಾಶದಲ್ಲಿ ಹಾರಲು ಏನು ಮಾಡಬೇಕು ಎಂದು ಕೇಳಲು ವಿನಂತಿಸಿತು.
ಬುದ್ಧರ ಆಶ್ರಮ ತಲುಪಿದಾಗ, ಅಲ್ಲಿ ಒಂದು ಕಠಿಣ ನಿಯಮವಿತ್ತು. ಒಬ್ಬ ವ್ಯಕ್ತಿ ಕೇವಲ ಮೂರು ಪ್ರಶ್ನೆಗಳನ್ನು ಮಾತ್ರ ಕೇಳಬಹುದಿತ್ತು. ಆದರೆ ಬಾಲಕನ ಬಳಿ ತನ್ನ ಪ್ರಶ್ನೆಯೂ ಸೇರಿದಂತೆ ಒಟ್ಟು ನಾಲ್ಕು ಪ್ರಶ್ನೆಗಳಿದ್ದವು. ಬಾಲಕನು ತೀವ್ರ ಧರ್ಮಸಂಕಟಕ್ಕೆ ಒಳಗಾದನು. ತನಗಿಂತಲೂ ಇತರರ ಕಷ್ಟಗಳು ದೊಡ್ಡವೆಂದು ಭಾವಿಸಿದ ಆತ, ತನ್ನ ಸ್ವಂತ ಹಣೆಬರಹದ ಪ್ರಶ್ನೆಯನ್ನು ತ್ಯಜಿಸಲು ನಿರ್ಧರಿಸಿದನು. ತನಗೆ ಮೂರು ಹೊತ್ತಿನ ಬದಲು ಒಂದು ಹೊತ್ತಿನ ಊಟ ಸಿಕ್ಕರೂ ಸಾಕು, ಆದರೆ ಇತರರ ಕಷ್ಟಗಳು ದೂರಾಗಲಿ ಎಂದು ಯೋಚಿಸಿ,
ಆಮೆ, ಜಾದೂಗಾರ ಮತ್ತು ಮೂಕ ಹುಡುಗಿಯ ಪ್ರಶ್ನೆಗಳನ್ನು ಮಾತ್ರ ಬುದ್ಧರ ಮುಂದೆ ಇಟ್ಟನು. ಬುದ್ಧರು ಮೂರಕ್ಕೂ ಸೂಕ್ತ ಪರಿಹಾರಗಳನ್ನು ನೀಡಿದರು. ಹಿಂತಿರುಗುವಾಗ ಬಾಲಕನು ಎಲ್ಲರಿಗೂ ಬುದ್ಧರು ನೀಡಿದ ಉತ್ತರದಂತೆ ಮಾರ್ಗದರ್ಶನ ಮಾಡಿದನು: ಆಮೆಗೆ ತನ್ನ ಬೆಲೆಬಾಳುವ ಕವಚ ವನ್ನು ತ್ಯಜಿಸಲು ಹೇಳಿ ದಾಗ, ಆಮೆ ಕವಚ ಬಿಟ್ಟಿತು. ಆಗ ಅದಕ್ಕೆ ಡ್ರ್ಯಾಗನ್ ಆಗಿ ಹಾರಲು ಸಾಧ್ಯ ವಾಯಿತು. ಕವಚದೊಳಗಿದ್ದ ಜಾದೂಗಾರನಿಗೆ ತನ್ನ ಅಹಂಕಾರದ ಸಂಕೇತವಾಗಿದ್ದ ಮಂತ್ರದಂಡ ವನ್ನು ತ್ಯಜಿಸಲು ಹೇಳಿದ. ಆತ ಅದನ್ನು ಬಾಲಕನಿಗೆ ನೀಡಿ ಸ್ವರ್ಗ ಸೇರಿದನು.
ಮಹಲಿನ ಯಜಮಾನನ ಬಳಿ ಬಂದಾಗ, ಜಾದೂಗಾರನ ಮಂತ್ರದಂಡದ ಪ್ರಭಾವ ಹಾಗೂ ಬಾಲಕನ ಸತ್ಯಸಂಧತೆಯಿಂದ ಹುಡುಗಿಗೆ ಮಾತು ಬಂದಿತ್ತು. ಯಜಮಾನನು ಸಂತೋಷದಿಂದ ತನ್ನ ಮಗಳನ್ನು ಬಾಲಕನಿಗೇ ಕೊಟ್ಟು ವಿವಾಹ ಮಾಡಿ, ಆಸ್ತಿಯನ್ನೆ ನೀಡಿದನು. ಯಾರು ಎಲ್ಲವನ್ನೂ ತನಗೇ ಬೇಕೆಂದು ಬಯಸುತ್ತಾರೋ ಅವರಿಗೆ ಏನೂ ಸಿಗುವುದಿಲ್ಲ. ಆದರೆ, ಇತರರ ಒಳಿತಿಗಾಗಿ ತನ್ನ ಸ್ವಾರ್ಥವನ್ನು ತ್ಯಜಿಸುವವನಿಗೆ ಪ್ರಕೃತಿ ಅಥವಾ ಭಗವಂತನು ಕೇಳದೆಯೇ ಎಲ್ಲವನ್ನೂ ಕರುಣಿಸುತ್ತಾನೆ.
ಯದೃಚ್ಚಾ ಲಾಭ ಸಂತುಷ್ಟ: ದ್ವಂದ್ವತೀತೋ ವಿಮತ್ಸರಃ! ಸಮಹ ಸಿದ್ಧಾ ವಸಿದ್ಧೌ ಚಿ ಕೃತ್ವಾಪಿ ನ ನಿಬಧ್ಯಯತೇ! ಭಗವದ್ಗೀತೆಯ ಈ ಶ್ಲೋಕದಂತೆ, ತಾನಾಗಿ ಬಂದುದರಲ್ಲಿ ತೃಪ್ತಿಪಟ್ಟು, ಅಸೂಯೆ ಯಿಲ್ಲದೆ, ಸುಖ-ದುಃಖಗಳಲ್ಲಿ ಸಮಚಿತ್ತ ಕಾಯ್ದುಕೊಳ್ಳುವವನೇ ನಿಜವಾದ ಮುಕ್ತ ಪುರುಷ. ಇಂತಹ ಲೋಭವಿಲ್ಲದ, ಅಸೂಯೆಯನ್ನು ಗೆದ್ದ ಇತರರ ಕಷ್ಟಗಳಿಗೆ ಮಿಡಿಯುವ ಜೀವನ ನಮ್ಮದಾಗಲಿ.