Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

ನಿಷೇಧದ ನಂತರ ಹಂಚಿಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಮತ್ತು ಸೇರಿದ ಕೆಲವೇ ತಿಂಗಳಲ್ಲಿ ಅದರಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ

image-f23c2cf9-4f66-4910-a288-77cebc56fc46.jpg
Profile Ashok Nayak January 11, 2025
ವೀಕೆಂಡ್‌ ವಿತ್‌ ಮೋಹನ್‌
ಮೋಹನ್‌ ವಿಶ್ವ
ಕಾಡಿನಲ್ಲಿ ಬಂದೂಕು ಹಿಡಿದ ನಕ್ಸಲರಿಗಿಂತಲೂ, ನಗರ ಪ್ರದೇಶದಲ್ಲಿದ್ದುಕೊಂಡು ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ಪರವಾಗಿ ನಿಲ್ಲುವ ನಗರ ನಕ್ಸಲರು ಅತ್ಯಂತ ಅಪಾಯಕಾರಿ. ಇವರುಸುಳ್ಳು ನಿರೂಪಣೆಗಳ ಮೂಲಕ ದೇಶವಿರೋಧಿ ಕೃತ್ಯಕ್ಕೆ ಕೈಹಾಕುತ್ತಾರೆ, ಜಾರ್ಜ್ ಸೊರೋಸ್‌ನಂಥವರು ಸಮಾಜದಲ್ಲಿ ಭಾರತ-ವಿರೋಽ ನಿರೂಪಣೆಗಳನ್ನು ಬಿತ್ತುವುದಕ್ಕೆ ಸಹಾಯ ಮಾಡುತ್ತಾರೆ.
ಖಿಲಾಫತ್ ಚಳವಳಿಯ ಬೆಂಬಲಿಗರಾಗಿದ್ದ ಮುಸಲ್ಮಾನರನ್ನು ಒಳಗೊಂಡಂಥ ಭಾರತೀಯ ಕಮ್ಯುನಿಸ್ಟ್ ಪಕ್ಷವು ರಷ್ಯಾದಲ್ಲಿ ಹುಟ್ಟುವ ಮೂಲಕ ಕಮ್ಯುನಿಸ್ಟ್ ಸಿದ್ಧಾಂತವು ಭಾರತಕ್ಕೆ 1920ರ ದಶಕದಲ್ಲಿ ಕಾಲಿಟ್ಟಿತು. ಆದರೆ ಭಾರತೀಯರಿಗೆ ಅಂದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟ ಮಾತ್ರ ಕಣ್ಣ ಮುಂದಿತ್ತು. ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಬೇಕಾಗಿದ್ದುದು ರಾಷ್ಟ್ರೀಯತೆಯ ಮಹಾಪ್ರವಾಹವೇ ಹೊರತು, ರಷ್ಯಾದ ಕಮ್ಯುನಿಸಂ ಎಂಬ ತೊರೆಯಲ್ಲ. ನಂತರ ಬ್ರಿಟಿಷರು 1939ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದರು.
ನಿಷೇಧದ ನಂತರ ಹಂಚಿಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಮತ್ತು ಸೇರಿದ ಕೆಲವೇ ತಿಂಗಳಲ್ಲಿ ಅದರಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ ಕಾಂಗ್ರೆಸ್ ಸೋಷ ಲಿಸ್ಟ್ ಪಾರ್ಟಿಯು ಸಂಪೂರ್ಣವಾಗಿ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಎಡಚರರ ಕೈಸೇರಿತ್ತು. ನಂತರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯನ್ನರಿಗೆ ಬ್ರಿಟಿಷರ ವಿರುದ್ಧ ಸೆಣಸಬೇಕಿತ್ತು. ಭಾರತ ದಲ್ಲಿದ್ದಂಥ ಎಡಚರರನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕೆಂಬ ಆಜ್ಞೆಯು ರಷ್ಯಾದಿಂದ ಎಡಚರರಿಗೆ ಬಂದಿತ್ತು. ಭಾರತದಿಂದ ಬ್ರಿಟಿಷರು ತೊಲಗಿದ ಮೇಲೆ ರಷ್ಯಾ ತನ್ನ ಎಡಚರ ನೀತಿಯನ್ನು ಭಾರತದಲ್ಲಿ ವಿಸ್ತಾರಗೊಳಿಸಲು ಸಜ್ಜಾಗಿತ್ತು.
ಭಾರತದಲ್ಲಿದ್ದಂಥ ಎಡಚರರು ಕಮ್ಯುನಿಸ್ಟ್ ನೀತಿಯನ್ನು ರಷ್ಯಾ ಮೂಲಕ ಹೇರಲು ಬ್ರಿಟಿಷರ ವಿರುದ್ಧ ನಿಂತರೇಹೊರತು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಲ್ಲವೇ ಅಲ್ಲ. ಈ ಸಂಗತಿಯನ್ನು ತಿರುಚಿದ ನಗರ ನಕ್ಸಲರು, ಕಮ್ಯುನಿಸ್ಟ್ಪಕ್ಷವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿತ್ತೆಂಬ ಸುಳ್ಳನ್ನು ಜನರ ತಲೆಗೆ ತುಂಬಿದರು.ಅಷ್ಟರಲ್ಲಿ ಸುಭಾಷ್‌ಚಂದ್ರ ಬೋಸರ ಗೆಲುವಿನ ಕಹಳೆ ದೇಶದಾದ್ಯಂತ ಅಲೆಯಾಗಿ ಅಪ್ಪಳಿಸಿತ್ತು.
ಸುಭಾಷರ ಗೆಲುವನ್ನು ಕಂಡು ಬ್ರಿಟಿಷರು ಬೆದರಿದ್ದರು. ನಂತರ ‘ಕ್ವಿಟ್ ಇಂಡಿಯಾ’ ಘೋಷಣೆಯಾಯಿತು. ಅಷ್ಟರೊಳಗೆ, ರಷ್ಯಾ ದೇಶದಿಂದ ಎಡಚರರಿಗೆ ಬಂದಿದ್ದ ಆಜ್ಞೆ ಬದಲಾಗಿತ್ತು. ಆಗ ಎಡಚರರು ಬ್ರಿಟಿಷರ ಪರವಾಗಿ ನಿಂತರು. ಈ ವಿಷಯವನ್ನು ಎಡಚರ ಬೆಂಬಲಿತ ನಗರ ನಕ್ಸಲರು ಹೇಳುವುದಿಲ್ಲ, ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮೇಲೆ ಆರೋಪ ಹೊರಿಸಿ ಸುಳ್ಳುಸುದ್ದಿ ಹಬ್ಬಿಸುತ್ತಾರೆ. ಎಡಚರರು ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ವಿರೋಧಿಸಿದ್ದರು. ಎಡಚರರ ಯೋಗ್ಯತೆಯನ್ನು ಅಷ್ಟು ಹೊತ್ತಿಗಾಗಲೇ ಭಾರತೀಯರು ಅಳೆದಾಗಿತ್ತು. ಅವರನ್ನು ದೇಶವಿರೋಧಿಗಳೆಂದು ಜನರು ಅಷ್ಟರಲ್ಲಿ ತೀರ್ಮಾನಿಸಿ ಆಗಿತ್ತು.
ಲೆನಿನ್‌ನ ಕಾರ್ಮಿಕವಾದವು ರಾಷ್ಟ್ರೀಯತೆಗಿಂತಲೂ ಮಹತ್ವದ್ದು ಎಂಬ ತತ್ವವನ್ನು ಎಡಚರರು ನಂಬಿದ್ದರು. ಇದೇ ತತ್ವದ ಬೆನ್ನತ್ತಿದ್ದ ಎಡಚರರು ಪಾಕಿಸ್ತಾನದ ರಚನೆಗೂ ಕುಮ್ಮಕ್ಕು ನೀಡಿದರು. ತಮ್ಮ ಆಲೋಚನೆಗಳಿಗಾಗಿ ಭಾರತವನ್ನು ಚೂರಾಗಿಸುವುದೇ ಸರಿಯಾದ ಮಾರ್ಗವೆಂದರು. ಜೆಎನ್‌ಯುನಲ್ಲಿ ನಡೆದ ಘಟನೆಗಳನ್ನು ನೆನಪಿಸಿ ಕೊಳ್ಳಿ. ಕಾಶ್ಮೀರ ಪ್ರತ್ಯೇಕತೆಯ ಬಗ್ಗೆ ಉಮರ್ ಖಾಲೀದ್ ಮಾತನಾಡಿ, ಭಾರತವನ್ನು ಟುಕ್ಡೆ ಟುಕ್ಡೆ ಮಾಡಬೇಕೆಂದು ಘೋಷಣೆ ಕೂಗಿದಾಕ್ಷಣ ಎಡಚರನಾಗಿದ್ದ ಕನ್ನಯ್ಯ ಕುಮಾರ್ ಆತನ ಬೆಂಬಲಕ್ಕೆ ನಿಂತ. ಅಂದು ಇವರ ಪರವಾಗಿ ನಿಂತವರು ನಗರ ನಕ್ಸಲರು. ಈಶಾನ್ಯ ಭಾರತಕ್ಕೆ ಸಂಪರ್ಕ ಕಲ್ಪಿಸುವ ‘ಚಿಕನ್ ನೆಕ್’ ಭಾಗವನ್ನು ಬಂದ್ ಮಾಡುವು ದಾಗಿ ಶಾರ್ಜೀಲ್ ಇಮಾಮ್ ಹೇಳಿದ. ಹಾಗೆ ಹೇಳುವಾಗ ಅವನ ಪಕ್ಕದಲ್ಲಿ ನಿಂತಿದ್ದವರೆಲ್ಲರೂ ಎಡಚರ ಬೆಂಬಲಿ ಗರು. ನಂತರ ಅವನನ್ನು ಸಮರ್ಥಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುವರು, ಆತನ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ ಹಾಕುವವರು ಎಡಚರ ಬೆಂಬಲಿಗರು.
ಮೊದಲೆಲ್ಲ ರಷ್ಯಾದಿಂದ ಹೊರಡುತ್ತಿದ್ದ ಆಜ್ಞೆಗಳು, ಈಗ ಚೀನಾದಿಂದ ಹೊರಡುತ್ತಿವೆ. ನಗರ ನಕ್ಸಲರ ಮನಸ್ಥಿತಿ ಹೇಗಿತ್ತೆಂದರೆ, ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡವನ್ನು ಖಂಡಿಸುವ ಬದಲು ಅಲ್ಲಿನ ಪ್ರತ್ಯೇಕತಾವಾದಿ ಗಳ ಪರವಾಗಿ ನಿಂತು, ಅವರನ್ನು ಹೋರಾಟಗಾರರೆಂದು ಕರೆದರು. ‘ಕಾಶ್ಮೀರವು ಎಂದೂ ಭಾರತಕ್ಕೆ ಸೇರಿದ್ದಲ್ಲ’ ಎಂದು ಎಡಚರ ಪತ್ರಕರ್ತೆ ಅರುಂಧತಿ ರಾಯ್ ಹೇಳುತ್ತಾರೆ. ಈಕೆ, ಯಾಸಿನ್ ಮಲಿಕ್ ನಡೆಸುತ್ತಿದ್ದಂಥ ಹತ್ಯಾ ಕಾಂಡವನ್ನು ಬೆಂಬಲಿಸಿದ್ದ ಮಹಿಳೆ. ಕಾಶ್ಮೀರದಲ್ಲಿ ಸೈನಿಕರ ಗಾಡಿಗಳ ಮೇಲೆ ಕಲ್ಲು ತೂರುವವರನ್ನು ಸಮರ್ಥಿಸಿಕೊಂಡು ಮಾನವ ಹಕ್ಕುಗಳನ್ನು ಮುನ್ನೆಲೆಗೆ ತಂದು, ಕಲ್ಲು ತೂರುವವರ ಪರವಾಗಿ ನಿಲ್ಲುತ್ತಾರೆನಗರ ನಕ್ಸಲರು. ಇವರು ದೇಶ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಕರೆದರು. ದಾಂತೇವಾಡದಲ್ಲಿ ನಡೆದನಕ್ಸಲರ ದಾಳಿಯಲ್ಲಿ ಸೈನಿಕರು ಹುತಾತ್ಮರಾದರೆ ಎಡಚರ ಪತ್ರಕರ್ತೆ ಬರ್ಖಾ ದತ್ ನಕ್ಸಲರ ಪರವಾಗಿಮಾತನಾಡುತ್ತಾರೆ.
ರಾಷ್ಟ್ರೀಯತೆ, ಅಭಿವೃದ್ಧಿ, ಸೈನ್ಯದ ವಿಷಯಗಳಲ್ಲಿ ಎಡಚರರು ಇಂದಿಗೂ ಭಾರತ-ವಿರೋಧಿಗಳಾಗಿಯೇ ಗುರುತಿಸಿ ಕೊಂಡಿದ್ದಾರೆ. ಕಾಡಿನಲ್ಲಿ ಬಂದೂಕು ಹಿಡಿದ ನಕ್ಸಲರಿಗಿಂತಲೂ, ನಗರ ಪ್ರದೇಶದಲ್ಲಿದ್ದುಕೊಂಡು ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ಪರವಾಗಿ ನಿಲ್ಲುವ ನಗರ ನಕ್ಸಲರು ಅತ್ಯಂತ ಅಪಾಯಕಾರಿ.ಇವರು ಸುಳ್ಳು ನಿರೂಪಣೆಗಳ ಮೂಲಕ ದೇಶವಿರೋಧಿ ಕೃತ್ಯಕ್ಕೆ ಕೈಹಾಕುತ್ತಾರೆ, ಜಾರ್ಜ್ ಸೊರೋಸ್‌ನಂಥವರುಸಮಾಜದಲ್ಲಿ ಭಾರತ-ವಿರೋಧಿ ನಿರೂಪಣೆಗಳನ್ನು ಬಿತ್ತುವುದಕ್ಕೆ ಸಹಾಯ ಮಾಡುತ್ತಾರೆ. ಇವರು ಸಾಲುಸಾಲುಸುಳ್ಳುಗಳ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇವರು ಬಾಬಾಸಾಹೇಬರಆಶಯಗಳ ವಿರುದ್ಧ ನಡೆದುಕೊಂಡು ಬಾಬಾಸಾಹೇಬರ ಹೆಸರನ್ನೇ ಮುನ್ನೆಲೆಗೆ ತರುತ್ತಾರೆ, ತಮ್ಮ ಭಾಷಣಗಳಲ್ಲಿವಿಶೇಷ ಪದಪುಂಜಗಳನ್ನು ಬಳಸುತ್ತಾರೆ, ಸಾಮರಸ್ಯದ ವಿರುದ್ಧ ಬ್ರಾಹ್ಮಣ್ಯದ ಪದಬಳಕೆ ಮಾಡುತ್ತಾರೆ,ರಾಷ್ಟ್ರೀ ಯತೆಯ ವಿರುದ್ಧ ಕೋಮುವಾದವೆಂಬ ಪದಬಳಕೆ ಮಾಡುತ್ತಾರೆ, ಭಯೋತ್ಪಾದಕರ ಪರವಾಗಿ ನಿಂತು ಮಾನವ ಹಕ್ಕುಗಳ ಪದಪ್ರಯೋಗ ಮಾಡುತ್ತಾರೆ.
ರಷ್ಯಾದ ಕಮ್ಯುನಿಸ್ಟ್ ಸೌಧ ಕುಸಿದುಬಿದ್ದ ನಂತರ ಚೀನಾ ದೇಶದ ಕಡೆಗೆ ಮುಖಮಾಡಿದ ಎಡಚರರು, ಭಾರತ ಮತ್ತು ಚೀನಾ ನಡುವಿನ ಯುದ್ಧದಲ್ಲಿ ಮಡಿದ ಚೀನಿ ಸೈನಿಕರ ಬೆಂಬಲಕ್ಕೆ ನಿಂತು, ಭಾರತ ಸೋತರೆ ಕಾರ್ಮಿಕರ ರಾಷ್ಟ್ರ ಮಾಡಬಹುದೆಂಬ ದೇಶವಿರೋಧಿ ಸಮರ್ಥನೆ ಕೊಟ್ಟಿದ್ದರು.
ಎಡಚರರ ಸಲಹೆಯ ಮೇರೆಗೆ ನೆಹರು ‘ಇಂಡಿಯಾ-ಚೀನಾ ಭಾಯಿ ಭಾಯಿ’ ಎಂದು ಹೇಳಿ ಸೈನ್ಯದ ನಿಶ್ಶಕ್ತೀಕರಣಮಾಡಿದ್ದರು. ಪರಿಣಾಮ, ಭಾರತದ ಬಹುದೊಡ್ಡ ಭೂಭಾಗ ಚೀನಿಯರ ಪಾಲಾಯಿತು. 1962ರ ಚೀನಾ ಯುದ್ಧದಸಂದರ್ಭದಲ್ಲಿ, ಯುದ್ಧ ಸಾಮಗ್ರಿಗಳಿದ್ದ ವಿಮಾನವನ್ನು ಅಮೆರಿಕದ ಅಧ್ಯಕ್ಷರು ಭಾರತದ ಕೋಲ್ಕತ್ತಾಕ್ಕೆ ಕಳುಹಿಸಿ ದ್ದರು. ಆದರೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದ ಎಡಚರರು ಕೂಲಿಯಾಳುಗಳ ಮುಷ್ಕರಕ್ಕೆ ಕರೆನೀಡಿ, ವಿಮಾನದಲ್ಲಿದ್ದಂಥ ಯುದ್ಧಸಾಮಗ್ರಿಗಳು ಹೊರಬರದಂತೆ ಸುಮಾರು ಒಂದು ವಾರಗಳ ಕಾಲ ನೋಡಿಕೊಂಡರು. ಅತ್ತ ಗಡಿಯಲ್ಲಿ ಸೈನಿಕರು ಯುದ್ಧಸಾಮಗ್ರಿಗಳಿಲ್ಲದೆ ಹುತಾತ್ಮರಾಗಬೇಕಾಯಿತು. ತಮ್ಮ ವ್ಯವಸ್ಥೆಯನ್ನು ಬಳಸಿಕೊಂಡು ಚೀನಿಯರ ಪರವಾಗಿ ನಿಂತು, ‘ಭಾರತ-ವಿರೋಧಿ’ ಕೆಲಸ ನಡೆಸುವ ಎಡಚರರ ಚಾಳಿ ಹೊಸತೇನಲ್ಲ. ಹಾಗಂತ ಚೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿ ಉಳಿದಿಲ್ಲ. ಚೀನಾ ದೇಶದಲ್ಲಿ ಸಾವಿರಾರು ಮಂದಿ ಬಿಲಿಯನೇರ್‌ಗಳಿದ್ದಾರೆ. ಅಲ್ಲಿನ ಆಡಳಿತ ಪಕ್ಷ ಮಾತ್ರ ‘ಕಮ್ಯುನಿಸ್ಟ್’ ಹೆಸರಿನಲ್ಲಿರುವುದು ಬಿಟ್ಟರೆ, ಇಡೀ ದೇಶದ ಸಂಪತ್ತು ಬಂಡವಾಳಶಾಹಿಗಳ ಬಳಿಯಲ್ಲಿದೆ.
ಒಂದಲ್ಲ, ಎರಡಲ್ಲ ಹಲವು ಬಾರಿ ಭಾರತವನ್ನು ಚೂರುಚೂರು ಮಾಡುವ, ಭಾರತದ ಸಾರ್ವಭೌಮತ್ವವನ್ನುನಾಶಮಾಡುವ ಕೆಲಸವನ್ನು ವಿದೇಶಿ ಶಕ್ತಿಗಳ ಆಜ್ಞೆಯಿಂದ ನಗರ ನಕ್ಸಲರು ಮಾಡುತ್ತಲೇ ಬಂದಿದ್ದಾರೆ. ಭಾರತದಮೇಲಿನ ಬ್ರಿಟಿಷರ ಆಕ್ರಮಣವನ್ನು ಸಮರ್ಥಿಸಲು ಬಳಸಿದ್ದ ‘ಆರ್ಯ’ ಮತ್ತು ‘ದ್ರಾವಿಡ’ ಎಂಬ ಸುಳ್ಳುವಾದವನ್ನುಹೆಚ್ಚಾಗಿ ಮಾಡುವವರು ಎಡಚರರು. ಭಾರತವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತವಾಗಿ ಒಡೆಯುವ ಬ್ರಿಟಿಷರ ಈ ಸಿದ್ಧಾಂತವನ್ನು ಎಡಚರರು ಇಂದಿಗೂ ಹೇಳುತ್ತಲೇ ಇರುತ್ತಾರೆ. ‘ಭಾರತಕ್ಕೆ ಬಂದಂಥ ಮೊದಲ ಆರ್ಯ ದೊರೆಯ ಹೆಸರೇನು?’ ಎಂದು ಎಡಚರ ಪ್ರಾಧ್ಯಾಪಕರನ್ನು ಕೇಳಿದರೆ ಅವರ ಬಳಿ ಉತ್ತರವಿಲ್ಲ.
‘ಆರ್ಯರ ವಾಸ್ತುಶಿಲ್ಪ ಯಾವುದು? ಅವರು ಯಾವ ಸಂಸ್ಥೆಗಳನ್ನು ಕಟ್ಟಿದ್ದರು? ಆರ್ಯರ ಕೊನೆಯ ರಾಜನ ಹೆಸರೇನು? ಆರ್ಯರು ಮಾಡಿದ ಯುದ್ಧಗಳು ಯಾವುವು? ಕ್ರಿಸ್ತಪೂರ್ವ ಯಾವ ಇಸವಿಯಲ್ಲಿ ಆರ್ಯರು ಭಾರತಕ್ಕೆ ಬಂದರು ಅಥವಾ ನಾಶವಾದರು?’ ಎಂದು ಪ್ರಶ್ನಿಸಿದರೆ ಇವರ ಬಳಿ ಉತ್ತರವಿಲ್ಲ. ಯಾವುದಕ್ಕೂ ಉತ್ತರಿಸದೆ ಆರ್ಯ ಮತ್ತು ದ್ರಾವಿಡ ಎಂಬ ಸುಳ್ಳನ್ನು ಹೇಳುವ ಮೂಲಕ ಭಾರತವನ್ನು ವಿಭಜಿಸುವ ಕೆಲಸವನ್ನು ಇವರು ಮಾಡುತ್ತಲೇ ಬಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು, 2026ರ ಹೊತ್ತಿಗೆ ದೇಶದಲ್ಲಿನ ನಕ್ಸಲ್ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದು, ಶರಣಾಗುವ ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಅತಿಹೆಚ್ಚು ನಕ್ಸಲ್‌ಪೀಡಿತ ರಾಜ್ಯವಾಗಿರುವ ಛತ್ತೀಸ್‌ಗಢದ ಬಸ್ತರ್ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳು ಹತೋಟಿಗೆ ಬಂದಿದ್ದರೂ, ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಬಸ್ತರ್ ಜಿಲ್ಲೆಯಲ್ಲಿ 80 ಕಿ.ಮೀ. ರಸ್ತೆ ನಿರ್ಮಿಸಲು ೩೦ ವರ್ಷಗಳ ಸಮಯ ಹಿಡಿಯಿತು. ನಕ್ಸಲರು ಆ ಮಟ್ಟದ ಭಯದ ವಾತಾವರಣವನ್ನು ನಿರ್ಮಿಸಿದ್ದರು.
ನಕ್ಸಲ್ ನಿಗ್ರಹಪಡೆಗಳಿಗೆ ಸಿಗದ ನಕ್ಸಲರು, ‘ನಗರ ನಕ್ಸಲರ’ ಕೈಗೆ ಸುಲಭವಾಗಿ ಸಿಗುತ್ತಿದ್ದರು. ನಗರ ನಕ್ಸಲರ ಬೆಂಬಲವಿಲ್ಲದೆ, ಕಾಡಿನಲ್ಲಿದ್ದುಕೊಂಡು ಸರಕಾರದ ವಿರುದ್ಧ ನಿಲ್ಲಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಗಳ ಮುಂದೆ ಶರಣಾದ ನಕ್ಸಲರ ಹಿಂದಿನ ಕಾಣದ ಕೈಗಳು ಯಾರೆಂಬ ವಿಷಯದ ತನಿಖೆಯಾಗಬೇಕಿದೆ. ನಗರ ನಕ್ಸಲರ ಬೆಂಬಲವಿಲ್ಲದೆ ಕಾಡುಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಮುಂದೆ ಶರಣಾದ ನಕ್ಸಲರ ಬಳಿ ಇದ್ದಂಥ ಅಪಾಯಕಾರಿ ಆಯುಧಗಳು ಏನಾದವು? ವಿಕ್ರಂ ಗೌಡ ಎನ್‌ಕೌಂಟರ್ ನಡೆದ ಎರಡೇ ತಿಂಗಳಲ್ಲಿ ಉಳಿದ ನಕ್ಸಲರು ಅಷ್ಟು ಸುಲಭವಾಗಿ ಹೇಗೆ ಶರಣಾದರು? ಅವರ ಹಿಂದಿರುವ ನಗರ ನಕ್ಸಲರು ಯಾರು? ಈ ಪ್ರಶ್ನೆಗಳಿಗೆ ಸರಕಾರ ಉತ್ತರಿಸಲೇಬೇಕಿದೆ. ಕಾಡಿನಲ್ಲಿ ಬಂದೂಕು ಹಿಡಿಯುವ ನಕ್ಸಲರಿಗಿಂತಲೂ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗು ವವರ ಪರ ನಿಲ್ಲುವ ನಗರ ನಕ್ಸಲರು ಅತ್ಯಂತ ಅಪಾಯಕಾರಿ ಎಂಬುದನ್ನು ಇತಿಹಾಸದ ಘಟನೆಗಳು ಹೇಳಿವೆ. ಕಮ್ಯುನಿಸ್ಟ್ ಪಕ್ಷವು 30 ವರ್ಷಗಳ ಕಾಲ ಅಧಿಕಾರದಲ್ಲಿದ್ದಂಥ ಪಶ್ಚಿಮ ಬಂಗಾಳ ಅಭಿವೃದ್ಧಿಯನ್ನೇ ಕಾಣಲಿಲ್ಲ.
ರಷ್ಯಾ ದೇಶವಂತೂ ಆರ್ಥಿಕತೆಯ ವಿಷಯದಲ್ಲಿ ಜಗತ್ತಿನ ‘ಟಾಪ್-5’ ದೇಶಗಳಲ್ಲಿಯೂ ಇಲ್ಲ. ವೆನಿಜುವೆಲಾದೇಶವಂತೂ ದಿವಾಳಿಯಾಗಿಹೋಯಿತು. ಕಮ್ಯುನಿಸ್ಟ್ ಸಿದ್ಧಾಂತವನ್ನು ನಂಬಿ ಅಭಿವೃದ್ಧಿ ಹೊಂದಿದ ಜಗತ್ತಿನ ಒಂದೇ ಒಂದು ದೇಶವಿಲ್ಲ. ಚೀನಾದ ಕಮ್ಯುನಿಸಂ ಕೇವಲ ರಾಜಕೀಯಕ್ಕಷ್ಟೇ ಸೀಮಿತ. ದೆಹಲಿಯ ಸಂಸತ್ತಿನ ಒಳನುಗ್ಗಿದ್ದ ಮೈಸೂರಿನ ಮನೋರಂಜನ್ ಎಂಬ ಯುವಕನ ಮನೆಯಲ್ಲಿ ಸಿಕ್ಕ ಹಲವು ಪುಸ್ತಕಗಳು ಎಡಚರ ತತ್ವಗಳದ್ದೇ ಆಗಿವೆ.
ಚೇಗುವೇರಾ ಬರೆದ ‘ಗೊರಿಲ್ಲಾ ವಾರ್ ಫೇರ್’, ಚೀನಾ ದೇಶದ ಹಳೆಯ ಮಿಲಿಟರಿ ಆಧರಿತ ಪುಸ್ತಕ ‘ಆರ್ಟ್-ವಾರ್’,ಎಡಚರರು ವಿರೋಧಿಸುವ ‘ಅಂಬಾನಿ ಆಂಡ್ ಸನ್ಸ್’ ಪುಸ್ತಕ, ಭೂಗತ ಪಾತಕಿ ಮತ್ತು ಉಗ್ರ ದಾವೂದ್ ಇಬ್ರಾಹಿಂಕುರಿತಾದ ಪುಸ್ತಕಗಳು ಅವು. ನಗರ ನಕ್ಸಲರ ದೇಶವಿರೋಧಿ ಧೋರಣೆಗಳು, ಶತ್ರುರಾಷ್ಟ್ರಗಳ ಜತೆ ಕೈಜೋಡಿಸಿ ಭಾರತದಲ್ಲಿ ಷಡ್ಯಂತ್ರ ನಡೆಸಿ ಭಯದ ವಾತಾವರಣ ಸೃಷ್ಟಿಸುವ ತಂತ್ರಗಾರಿಕೆಗಳು ಹೊಸದೇನಲ್ಲ. ಇಡೀ ಜಗತ್ತೇ ಹೊಸಕಿಹಾಕಿರುವ ಕಮ್ಯುನಿಸ್ಟ್ ಸಿದ್ಧಾಂತವನ್ನು ಮುನ್ನೆಲೆಗೆ ತರುವ ವ್ಯರ್ಥ ಪ್ರಯತ್ನಗಳು ಅವರಿಂದ ಆಗಾಗ ನಡೆಯುತ್ತಲೇ ಇರುತ್ತವೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ, ನೆಹರು ಕಾಲದಿಂದಲೂ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವ ಕಾರಣ, ಕಾಡಿನ ನಕ್ಸಲರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ ನಂತರವೂ ನಗರ ನಕ್ಸಲರು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ.
ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್‌ ಹಿಟ್‌ ಮ್ಯಾನ್‌ʼ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ