Narada Sanchara Column: ಅಪಾರ್ಥ ಮಾಡ್ಕೋಬೇಡಿ
ಅದು ಹೀಗಿದೆ ನೋಡಿ: “ನಮ್ಮ ಸಂಸ್ಥೆಯ ಅಧ್ಯಕ್ಷರು ವಾರದಲ್ಲಿ 90 ಗಂಟೆಗಳ ಕೆಲಸವನ್ನು ಎಂದಿಗೂ ಕಡ್ಡಾಯಗೊಳಿಸಿಲ್ಲ, ಏಕೆಂದರೆ ಉದ್ಯೋಗಿಗಳ ಬಗ್ಗೆ ಅತೀವ ಕಾಳಜಿಯುಳ್ಳ ಬಾಸ್ ಅವರು. ಸಂಸ್ಥೆಯ ಆಂತರಿಕ ಸಭೆಯೊಂದರಲ್ಲಿ ಉಲ್ಲೇಖಿಸ ಲ್ಪಟ್ಟ ಈ ಹೇಳಿಕೆ ಪ್ರಾಸಂಗಿಕವಾಗಿತ್ತಷ್ಟೇ, ಆದರೆ ಅದು ತಪ್ಪಾಗಿ ಅರ್ಥೈಸಲ್ಪಟ್ಟಿತು
Source : Vishwavani Daily News Paper
ನಾರದ ಸಂಚಾರ
ಕಾಯಕವೇ ಕೈಲಾಸ’ ಎಂದ ಮಹಾನುಭಾವರು ಹುಟ್ಟಿದ ನಾಡಲ್ಲಿ, ಕಾಯಕದ ಬಗೆಗಿನ ಒಂದೆರಡು ಹೇಳಿಕೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದುಂಟು, ಸಾಮಾಜಿಕ ಮಾಧ್ಯಮಗಳಲ್ಲಂತೂ ಇನ್ನಿಲ್ಲ ದಂತೆ ವೈರಲ್ ಆಗಿದ್ದುಂಟು. ‘ಕಾರ್ಯಾವಧಿ’ ಕುರಿತು ಲಾರ್ಸನ್ ಆಂಡ್ ಟೂಬ್ರೋ (ಎಲ್ ಆಂಡ್ ಟಿ) ಕಂಪನಿಯ ಅಧ್ಯಕ್ಷರು ಆಡಿದರೆನ್ನಲಾದ ಕೆಲ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿ ದ್ದು ನಿಮಗೆ ಈಗಾಗಲೇ ಗೊತ್ತು.
‘ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು’ ಎಂದು ತಾವು ಸೂಚ್ಯವಾಗಿ ಹೇಳಿದ್ದ (ದಿನಾಂಕವಿಲ್ಲದ) ವಿಡಿಯೋವೊಂದರ ಕಾರಣ ಎಲ್ ಆಂಡ್ ಟಿ ಸಂಸ್ಥೆಯ ಅಧ್ಯಕ್ಷರು ‘ನೆಗೆಟಿವ್ ಪಬ್ಲಿಸಿಟಿ’ಗೆ ಸಿಲುಕಿಬಿಟ್ಟರೇ? ಎಂದು ಕೂಡ ಕೆಲವರು ಈ ಸಂದರ್ಭದಲ್ಲಿ ಬಾಯಾಡಿಸಿದ್ದುಂಟು. ಇದಕ್ಕೂ ಮುನ್ನ, ಇನ್ಫೋಸಿಸ್‌ನ ಸಹ-ಸಂಸ್ಥಾಪಕರು, “ವಾರದಲ್ಲಿ 70-ಗಂಟೆಗಳ ಅವಧಿಗೆ ಕೆಲಸ ಮಾಡುವ ಪರಿಪಾಠದ ಅನುಸರಣೆಯಾಗಬೇಕು" ಎಂಬರ್ಥದ ಸಲಹೆಯನ್ನು ಭಾರತೀಯ ಯುವ ಸಮು ದಾಯಕ್ಕೆ ನೀಡಿದಾಗಲೂ ಇಂಥದೇ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದುಂಟು.
ಆದರೆ, ಇಲ್ಲೊಂದು ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಹಂಚಿಕೊಂಡಿರುವುದು ‘ಎಲ್ ಆಂಟ್ ಟಿ’ ಕಂಪನಿಯ ಒಬ್ಬ ಮಹಿಳಾಧಿಕಾರಿ. ಅದು ಹೀಗಿದೆ ನೋಡಿ: “ನಮ್ಮ ಸಂಸ್ಥೆಯ ಅಧ್ಯಕ್ಷರು ವಾರದಲ್ಲಿ 90 ಗಂಟೆಗಳ ಕೆಲಸವನ್ನು ಎಂದಿಗೂ ಕಡ್ಡಾಯಗೊಳಿಸಿಲ್ಲ, ಏಕೆಂದರೆ ಉದ್ಯೋಗಿಗಳ ಬಗ್ಗೆ ಅತೀವ ಕಾಳಜಿಯುಳ್ಳ ಬಾಸ್ ಅವರು. ಸಂಸ್ಥೆಯ ಆಂತರಿಕ ಸಭೆಯೊಂದರಲ್ಲಿ ಉಲ್ಲೇಖಿಸ ಲ್ಪಟ್ಟ ಈ ಹೇಳಿಕೆ ಪ್ರಾಸಂಗಿಕವಾಗಿತ್ತಷ್ಟೇ, ಆದರೆ ಅದು ತಪ್ಪಾಗಿ ಅರ್ಥೈಸಲ್ಪಟ್ಟಿತು".
ಎಲ್ ಆಂಟ್ ಟಿ ಸಂಸ್ಥೆಯ ಅಧ್ಯಕ್ಷರು ಆಂತರಿಕ ಸಭೆಯಲ್ಲಿ, ಕಠಿಣ ಪರಿಶ್ರಮಕ್ಕೆ ಇರುವ ಮೌಲ್ಯ ವನ್ನೋ ಅಥವಾ ಅಂಥ ಸದ್ಗುಣವನ್ನೋ ಹಾಗೆ ಒತ್ತಿ ಹೇಳಿ ಶ್ಲಾಸಿದ್ದಿರಬಹುದು; ಆದರೆ “ಭಾನು ವಾರದಂದು ಒಬ್ಬ ಗಂಡ ಅಥವಾ ಹೆಂಡತಿ ಎಷ್ಟು ಕಾಲ ಪರಸ್ಪರರನ್ನು ದಿಟ್ಟಿಸಿಕೊಂಡು ಕೂತಿ ರಲು ಸಾಧ್ಯ?" ಎಂಬರ್ಥದ ಅವರ ಮಾತು, ಇಂದಿನ ಪೀಳಿಗೆಯವರಿಗೆ ಅಷ್ಟಾಗಿ ರುಚಿಸಿಲ್ಲ ಎಂಬು ದು ‘ಕಲಹಪ್ರಿಯ’ ನಾರದರ ‘ತಕರಾರಿಗೆ ಆಸ್ಪದವಿಲ್ಲದ’ ಅಭಿಪ್ರಾಯ.
ಏಕೆಂದರೆ, ಗೆಳೆಯರ ಬಳಗದೊಂದಿಗೆ ಮತ್ತು ಕುಟುಂಬಿಕರೊಂದಿಗೆ ಹೆಚ್ಚೆಚ್ಚು ಸಮಯವನ್ನು ‘ಗುಣಾತ್ಮಕವಾಗಿ’ ಕಳೆಯಲು ಬಯಸುವ ಇಂದಿನ ಯುವ ಉದ್ಯೋಗಿಗಳು, ಇಂಥ ಅನುಪಮ ಕ್ಷಣ ಗಳಲ್ಲಿ ಗೈರುಹಾಜರಾಗುವುದನ್ನು ಬಯಸುವುದಿಲ್ಲ. ಹೀಗಾಗಿ ಇಂಥವರಿಗೆ, “ಕಷ್ಟಪಟ್ಟು ಕೆಲಸ ಮಾಡ್ರಪ್ಪಾ/ಮಾಡ್ರಮ್ಮಾ" ಎಂದು ಸಂಸ್ಥೆಯ ಅಧ್ಯಕ್ಷರು ಸೂಚಿಸಬಹುದಿತ್ತೇ ಹೊರತು, “ಗಂಡ-ಹೆಂಡತಿ ತುಂಬಾ ಹೊತ್ತು ಪರಸ್ಪರರ ಮುಖ ಮತ್ತೊಂದು ನೋಡ್ಕೊತಾ ಕೂತ್ಕೋಬೇಡಿ" ಅಂತ ತಮಾಷೆಗೂ/ಪ್ರಾಸಂಗಿಕವಾಗೂ ಹೇಳಬಾರದಿತ್ತೇನೋ?! ನಾರದರ ಈ ‘ಗ್ರಹಿಕೆ’ಯನ್ನು ಯಾರೂ ‘ಅಪಾರ್ಥ’ ಮಾಡ್ಕೋಬಾರದಾಗಿ ವಿನಂತಿ!
ತಾರೆ ಜಮೀನ್ ಪರ್!
ದೆಹಲಿ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿದ್ದಂತೆ, ಪ್ರಚಾರಕ್ಕೆಂದು ಬಿಜೆಪಿಯ ‘ತಾರಾ ನಾಯಕ’ರ ಬಳಗವೇ ಅಲ್ಲಿ ಇಳಿಯಲು ಸಜ್ಜಾಗಿದೆ. ಈ ಪಟ್ಟಿಯಲ್ಲಿ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಂಥ ಮಹಾರಥಿಗಳು ಮಾತ್ರವಲ್ಲದೆ, ದಕ್ಷಿಣ ಭಾರತದ ಕೆಲ ಘಟಾನುಘಟಿಗಳೂ ಸೇರಿರುವುದು ವಿಶೇಷ.
ಚುನಾವಣಾ ಕ್ಷೇತ್ರದ ಕೆಲ ಭಾಗಗಳಲ್ಲಿ ದಕ್ಷಿಣ ಭಾರತೀಯರ ‘ದಟ್ಟಣೆ’ ಇರುವುದೂ ಇದಕ್ಕೆ ಕಾರಣವಂತೆ. ಅದರಲ್ಲೂ ವಿಶೇಷವಾಗಿ, ತೆಲುಗು ಸಮುದಾಯದವರನ್ನು ಸೆಳೆಯಲೆಂದು ಬಿಜೆಪಿ ಯು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿನ ತನ್ನ ಶಾಸಕರನ್ನು ನೆಚ್ಚಿದೆಯಂತೆ. ಮಾತ್ರ ವಲ್ಲದೆ, ಕಳೆದ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪಕ್ಷದ ವರ್ಚ ಸ್ಸನ್ನು ಮತ್ತಷ್ಟು ಹೆಚ್ಚಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಮಹಾ ರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಈ ‘ತಾರಾ ಪ್ರಚಾರಕರ ಪಟ್ಟಿ’ಯಲ್ಲಿ ಸೇರಿದ್ದಾರಂತೆ. ದೆಹಲಿ ಮತದಾರರ ಸೌಭಾಗ್ಯಕ್ಕೆ ಎಣೆಯುಂಟೇ?!
ಇದನ್ನೂ ಓದಿ: Narada Sanchara: ಗೂಗ್ಲಿಗೆ ಇಮ್ರಾನ್ ಔಟ್!